ಚಿನ್ನದ ನಾಡಿನಲ್ಲಿ ಕಾವೇರಿದ ಚುನಾವಣಾ ಅಖಾಡ, ತ್ರಿಕೋಣ ಸ್ಪರ್ಧೆಯಲ್ಲಿ ಗೆಲ್ಲುವವರು ಯಾರು?

 ಚಿನ್ನದ ನಾಡು ಕೋಲಾರದಲ್ಲಿ ಚುನಾವಣಾ ಕಾವು ದಿನೇ‌ ದಿನೇ ಏರತೊಡಗಿದೆ.ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಮೂರೂ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ.

Written by - Zee Kannada News Desk | Last Updated : Apr 21, 2023, 10:47 AM IST
  • ಇದರಲ್ಲಿ ಜೆಡಿಎಸ್ ನಿಂದ 19 ನಾಮಪತ್ರಗಳು, ಕಾಂಗ್ರೆಸ್ ನಿಂದ 18 ಮತ್ತು ಬಿಜೆಪಿಯಿಂದ 16 ನಾಮಪತ್ರಗಳು ಸಲ್ಲಿಕೆಯಾಗಿವೆ.
  • ಇನ್ನುಳಿದಂತೆ ಆಮ್‌ ಆದ್ಮಿ ಯಿಂದ 7, ಬಿಎಸ್ ಪಿ ಯಿಂದ 4 ಮತ್ತು ಸಿಪಿಐ ಎಂ ನಿಂದ ಒಂದು‌ ನಾಮಪತ್ರ ಸಲ್ಲಿಕೆಯಾಗಿದೆ
  • ಪಕ್ಷೇತರ ಅಭ್ಯರ್ಥಿ ಗಳಾಗಿ 84 ಮಂದಿ ನಾಮಪತ್ರ ಸಲ್ಲಿಕೆಯಾಗಿದೆ
ಚಿನ್ನದ ನಾಡಿನಲ್ಲಿ ಕಾವೇರಿದ ಚುನಾವಣಾ ಅಖಾಡ, ತ್ರಿಕೋಣ ಸ್ಪರ್ಧೆಯಲ್ಲಿ ಗೆಲ್ಲುವವರು ಯಾರು? title=
file photo

ಕೋಲಾರ: ಚಿನ್ನದ ನಾಡು ಕೋಲಾರದಲ್ಲಿ ಚುನಾವಣಾ ಕಾವು ದಿನೇ‌ ದಿನೇ ಏರತೊಡಗಿದೆ.ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಮೂರೂ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ.

ಬಿಸಿಲ ತಾಪದೊಂದಿಗೆ ಚುನಾವಣಾ ತಾಪದಲ್ಲಿ ಅಭ್ಯರ್ಥಿಗಳೂ ಸಹ ಮೇಲಿಂದ ಮೇಲೆ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.ಕೋಲಾರದ ಆರೂ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಗಳ ಆಯ್ಕೆಗೆ ತೊಡೆ ತಟ್ಟಿರುವ ಪ್ರಮುಖ ಮೂರೂ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಕೊನೆ ದಿನದಲ್ಲಿ ಸಹ ಕೊನೇ ಕ್ಷಣದ ವರೆಗೂ ಉಮೇದುವಾರಿಕೆ ಸಲ್ಲಿಸಿದ್ದಾರೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಿಂದ ಒಟ್ಟು 151 ನಾಮಪತ್ರಗಳು ಸಲ್ಲಿಕೆಯಾಗಿವೆ.

ಇದನ್ನೂ ಓದಿ: ವರುಣ ಬಳಿಕ ಚಾಮರಾಜನಗರದಲ್ಲಿ 2ನೇ ಸುತ್ತಿನ ಮತಬೇಟೆ

ಇದರಲ್ಲಿ ಜೆಡಿಎಸ್ ನಿಂದ 19 ನಾಮಪತ್ರಗಳು, ಕಾಂಗ್ರೆಸ್ ನಿಂದ 18 ಮತ್ತು ಬಿಜೆಪಿಯಿಂದ 16 ನಾಮಪತ್ರಗಳು ಸಲ್ಲಿಕೆಯಾಗಿವೆ. ಇನ್ನುಳಿದಂತೆ ಆಮ್‌ ಆದ್ಮಿ ಯಿಂದ 7, ಬಿಎಸ್ ಪಿ ಯಿಂದ 4 ಮತ್ತು ಸಿಪಿಐ ಎಂ ನಿಂದ ಒಂದು‌ ನಾಮಪತ್ರ ಸಲ್ಲಿಕೆಯಾಗಿದೆ. ಪಕ್ಷೇತರ ಅಭ್ಯರ್ಥಿ ಗಳಾಗಿ 84 ಮಂದಿ ನಾಮಪತ್ರ ಸಲ್ಲಿಕೆಯಾಗಿದೆ. ಇನ್ನೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ದೆ ವಿಚಾರದಿಂದ ಗಮನಸೆಳೆದಿದ್ದ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೊನೆಗೂ ಇಂದು ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ನಾಮಪತ್ರ ಸಲ್ಲಿಸಿದ್ದಾರೆ. 

ಈವರೆಗೆ ಮುಳಬಾಗಿಲು ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಕೊತ್ತೂರು ಈಗ ಕೋಲಾರಕ್ಕೆ ವಲಸೆಯಾಗುವ ಅನಿವಾರ್ಯತೆ ಎಧುರಾಗಿದ್ದು ತಮ್ಮ ಸ್ವಸ್ಥಾನ ಮುಳಬಾಗಿಲು ತೊರೆಯುವ ಕುರಿತು ತಮ್ಮ ಅಳಲು ತೋಡಿಕೊಂಡಿದ್ದಾರೆ.ಮುಳಬಾಗಿಲು ಕ್ಷೇತ್ರದ ನಾಯಕರು ಕಾರ್ಯಕರ್ತರ ಜೊತೆ ಕಣ್ಣೀರು ಹಾಕುವ ಮೂಲಕ ಕ್ಷೇತ್ರದಿಂದ ಕಾಲ್ತೆಗೆದು ಕೋಲಾರಕ್ಕೆ ಬಂದಿದ್ದಾರೆ.ಇನ್ನೂ ಕೋಲಾರ ಅಭ್ಯರ್ಥಿ ಯಾಗಿರುವ ಜೆಡಿಎಸ್ ನ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಇಂದು 25 ಸಾವಿರಕ್ಕೂ ಹೆಚ್ಚು ಬೆಂಬಲಿಗರ ಜೊತೆ ಮೆರವಣಿಗೆಯಲ್ಲಿ ನಾಮಪತ್ರ ಸಲ್ಲಿಸಿದರು.

ಇದನ್ನೂ ಓದಿ-ʼಲಿಂಗಾಯತ ಸಿಎಂʼ ಘೋಷಣೆ ಬಗ್ಗೆ ಯಾವುದೇ ನಿರ್ಣಯ ಆಗಿಲ್ಲ : ಸಿಎಂ ಸ್ಪಷ್ಟನೆ

ಕೋಲಾರ ನಗರದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಸಿದ ಶ್ರೀನಾಥ್ ಆತ್ಮವಿಶ್ವಾಸ ದಲ್ಲಿಯೇ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.ಮತ್ತು ಈ ಭಾರಿ ಎದುರಾಳಿ ಯಾರೇ ಆಗಲಿ ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಏನೇ ಇರಲಿ ಮೇ.10 ರಂದು ನಡೆಯುವ ಚುನಾವಣೆಗೆ 6 ಕ್ಷೇತ್ರದಿಂದ ಅಭ್ಯರ್ಥಿಗಳ ಸಂಖ್ಯೆ ನೂರಂಕಿಗಿಂತಲೂ ಮುಂದಕ್ಕೆ ಹೋಗಿದ್ದು ಇದೀಗ ನಾಮಪತ್ರ ಪರಿಶೀಲನೆ ಸರದಿ.ನಾಮಪತ್ರ ತಿರಸ್ಕೃತ ವಾಗಿ ಇನ್ನೆಷ್ಟು ಮಂದಿ ಕಣದಲ್ಲಿ ಉಳಿಯುತ್ತಾರೆ ಎನ್ನುವುದು ಮುಂದಿನ ಸರದಿ.ಮೂರೂ ಮೀಸಲು ಕ್ಷೇತ್ರಗಳೂ ಸೇರಿದಂತೆ ಒಟ್ಟು 6 ಕ್ಷೇತ್ರಗಳಲ್ಲಿ ಯಾರಿಗೆಷ್ಟು ಪಾಲು ಎನ್ನುವುದು ಮತದಾರ ಪ್ರಭು ನಿರ್ಧರಿಸಲಿದ್ದು ಅಭ್ಯರ್ಥಿ ಗಳ ಎದೆ ಬಡಿತ ಏರತೊಡಗಿರೋದು ಸುಳ್ಳಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News