ಹಾಸನ ಕುರುಕ್ಷೇತ್ರ
ಹಾಸನ ಜಿಲ್ಲೆಯ ಒಟ್ಟು ಮತದಾರರು: 14,83,594
7,42,279 ಪುರುಷ, 7,41,275 ಮಹಿಳೆಯರು
ಹಾಸನ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಈ ಭಾರಿಯೂ ಜೆಡಿಎಸ್ ಗೆ ಹೆಚ್ಚಿನ ಸ್ಥಾನಗಳು ಬರುವ ನಿರೀಕ್ಷೆಯಿದ್ದು, ಎರಡನೇ ಸ್ಥಾನಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಪೈಪೋಟಿ ನಡೆಯುತ್ತಿವೆ. ಅರಸೀಕೆರೆ ಹಾಗೂ ಅರಕಲಗೂಡು ಕ್ಷೇತ್ರದಲ್ಲಿ ಪ್ರಬಲ ನಾಯಕರು ಪಕ್ಷಾಂತರ ಮಾಡಿದ್ದು, ಈ ಕ್ಷೇತ್ರಗಳಲ್ಲಿಯೂ ಕದನ ಕುತೂಹಲ ಹೆಚ್ಚಿಸಿದೆ.
ಹಾಸನ ಜಿಲ್ಲಾ ಕುರುಕ್ಷೇತ್ರ
2018ರ ಶಾಸಕರು-ಪಕ್ಷ
ಕ್ಷೇತ್ರ ಅಭ್ಯರ್ಥಿ ಪಕ್ಷ 2018ರ ಮತ
ಹಾಸನ ಪ್ರೀತಂಗೌಡ ಬಿಜೆಪಿ 63348
ಹೊಳೆನರಸೀಪುರ ಹೆಚ್.ಡಿ.ರೇವಣ್ಣ ಜೆಡಿಎಸ್ 108541
ಶ್ರವಣಬೆಳಗೊಳ ಸಿ.ಎನ್.ಬಾಲಕೃಷ್ಣ ಜೆಡಿಎಸ್ 105516
ಅರಸೀಕೆರೆ ಕೆ.ಎಂ.ಶಿವಲಿಂಗೇಗೌಡ ಜೆಡಿಎಸ್ 93986
ಅರಕಲಗೂಡು ಎ.ಟಿ.ರಾಮಸ್ವಾಮಿ ಜೆಡಿಎಸ್ 85064
ಬೇಲೂರು ಕೆ.ಎಸ್. ಲಿಂಗೇಶ್ ಜೆಡಿಎಸ್ 64368
ಸಕಲೇಶಪುರ ಹೆಚ್.ಕೆ.ಕುಮಾರಸ್ವಾಮಿ ಜೆಡಿಎಸ್ 62262
ಹಾಸನ ಜಿಲ್ಲಾ ಕುರುಕ್ಷೇತ್ರ
2023ರ ಅಖಾಡ
ಜೆಡಿಎಸ್ - ಸ್ವರೂಪ್ ಪ್ರಕಾಶ್
ಬಿಜೆಪಿ - ಪ್ರೀತಂಗೌಡ
ಕಾಂಗ್ರೆಸ್ - ಬನವಾಸೆ ರಂಗಸ್ವಾಮಿ
ಆಪ್ - ಅಗಿಲೆ ಯೋಗೇಶ್
ರಾಜ್ಯದ ಗಮನ ಸೆಳೆದಿರೋ ಹಾಸನ ವಿಧಾನಸಭಾ ಕ್ಷೇತ್ರವು ಸಾಕಷ್ಟು ಕುತೂಹಲ ಹಾಗೂ ಜಿದ್ದಾಜಿದ್ದಿಯ ಕ್ಷೇತ್ರವಾಗಿದ್ದು, ಈ ಕ್ಷೇತ್ರವನ್ನು ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ನಾಯಕರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಜೆಡಿಎಸ್ ನಲ್ಲಿ ಟಿಕೆಟ್ ಗುದ್ದಾಟ ನಡೆಸಿದ್ರೂ, ಅಂತಿಮವಾಗಿ ಯಾವುದೇ ಗೊಂದಲಗಳಿಲ್ಲದೇ ಟಿಕೆಟ್ ಪಡೆದಿರೋ ಸ್ವರೂಪ್ ಪರವಾಗಿ ಹೆಚ್.ಡಿ.ರೇವಣ್ಣ ಫ್ಯಾಮಿಲಿಯಾದಿಯಾಗಿ ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದಾರೆ. ಭವಾನಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನಸಭಾ ಪರಿಷತ್ ಸದಸ್ಯ ಸೂರಜ್ ರೇವಣ್ಣ ಸೇರಿದಂತೆ ಹಲವರು ಸ್ವರೂಪ್ ಬೆನ್ನಿಗೆ ನಿಂತು ಹಾಲಿ ಶಾಸಕ ಪ್ರೀತಂಗೌಡಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಇತ್ತ ಶಾಸಕ ಪ್ರೀತಂಗೌಡ ಒಂಟಿಯಾಗಿ ಎಲ್ಲರನ್ನೂ ಎದುರಿಸುತ್ತಾ, ಬಂದಿದ್ದರಿಂದ ಹಳ್ಳಿ ಹಳ್ಳಿ ಸುತ್ತುತ್ತಾ ಮತಬೇಟೆ ಮಾಡ್ತಿದ್ದಾರೆ. ಇತ್ತ ಕಾಂಗ್ರೆಸ್ ನಿಂದ ಬನವಾಸೆ ರಂಗಸ್ವಾಮಿ ಸ್ಪರ್ಧೆಗಿಳಿದಿದ್ದಾರೆ.
ಅಭ್ಯರ್ಥಿಗಳ ಮಾಹಿತಿ :-
ಜೆಡಿಎಸ್ - ಸ್ವರೂಪ್ ಪ್ರಕಾಶ್
ಬಿಜೆಪಿ - ಪ್ರೀತಂಗೌಡ
ಕಾಂಗ್ರೆಸ್ - ಬನವಾಸೆ ರಂಗಸ್ವಾಮಿ
ಆಪ್ - ಅಗಿಲೆ ಯೋಗೇಶ್
ಕಳೆದ ಭಾರಿಯ ಫಲಿತಾಂಶದ ವಿವರ :-
ಬಿಜೆಪಿ - ಪ್ರೀತಂಗೌಡ - 63348
ಜೆಡಿಎಸ್ - ಎಚ್.ಎಸ್.ಪ್ರಕಾಶ್ - 50342
ಕಾಂಗ್ರೆಸ್ - ಹೆಚ್.ಕೆ.ಮಹೇಶ್ - 38101))
ಮತ-ಜಾತಿವಾರು ಲೆಕ್ಕ
ಒಟ್ಟು ಮತದಾರರು- 2,35,262
ಪುರುಷ ಮತದಾರರು-1,18,324
ಮಹಿಳಾ ಮತದಾರರು-1,16,938
ಒಕ್ಕಲಿಗರು- 1,25,000
ಲಿಂಗಾಯತ- 25,000
ಎಸ್ಸಿ- 20,000
ಎಸ್ಟಿ- 10,000
ಮುಸ್ಲಿಂ- 30,000
ಕುರುಬ- 3000
ವಿಶ್ವಕರ್ಮ-3000
ಬೆಸ್ತ-3000
ಉಪ್ಪಾರ- 2000
ಈಡಿಗ- 1000
ಬ್ರಾಹ್ಮಣ-1000
ಇತರೆ : 12000
-------
-----------
ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ :-
2023ರ ಅಖಾಡ
ಜೆಡಿಎಸ್ - ಹೆಚ್.ಡಿ.ರೇವಣ್ಣ
ಕಾಂಗ್ರೆಸ್ - ಶ್ರೇಯಸ್ ಪಟೇಲ್
ಬಿಜೆಪಿ - ದೇವರಾಜೇಗೌಡ
ಮತ-ಜಾತಿವಾರು ಲೆಕ್ಕ
ಒಟ್ಟು ಮತದಾರರು- 2,18,968
ಪುರುಷ ಮತದಾರರು-1,10,945
ಮಹಿಳಾ ಮತದಾರರು-1,08,045
ಒಕ್ಕಲಿಗರು- 93,000
ಲಿಂಗಾಯತ- 17,000
ಎಸ್ಸಿ- 24000
ಎಸ್ಟಿ- 13,000
ಮುಸ್ಲಿಂ- 13,000
ಕುರುಬ- 21,000
ಬ್ರಾಹ್ಮಣ-8000
ವಿಶ್ವಕರ್ಮ-3000
ಕ್ರೈಸ್ತ-3000
ಬೆಸ್ತ-4000
ಉಪ್ಪಾರ- 3000
ಮಡಿವಾಳ-2000
ಕುಂಬಾರ-3000
ಇತರೆ-9000
ಕಳೆದ 25 ವರ್ಷಗಳಿಂದ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿರೋದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ್ರು ಪುತ್ರ, ಮಾಜಿ ಸಚಿವ ಹೆಚ್.ಡಿ.ರೇವಣ್ಣ. ಈ ಭಾರಿಯೂ ಅವರೇ ಸ್ಪರ್ಧೆ ಮಾಡ್ತಿದ್ದು, ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಕಳೆದ ಹಲವು ವರ್ಷಗಳ ಹೊಳೆನರಸೀಪುರ ಕ್ಷೇತ್ರದಲ್ಲಿ ದೇವೇಗೌಡ್ರು ಕುಟುಂಬದ ಪರ ಹಾಗೂ ವಿರೋಧದ ಚುನಾವಣೆ. ವಿರೋಧವಾಗಿ ಕಾಂಗ್ರೆಸ್ ನಿಂದ ಯಾರೇ ನಿಂತರೂ 50 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದೇ ಪಡೆದುಕೊಳ್ತಾರೆ. ಈ ಭಾರಿ ಕಾಂಗ್ರೆಸ್ ನಿಂದ ಶ್ರೇಯಸ್ ಪಟೇಲ್ ರನ್ನ ಕಣಕ್ಕಳಿಸಿದ್ದಾರೆ. ಕ್ಷೇತ್ರದಾದ್ಯಂತ ಭರ್ಜರಿ ಪ್ರಚಾರ ಮಾಡ್ತಿದ್ದು, ರೇವಣ್ಣ ಫ್ಯಾಮಿಲಿಗೆ ಪ್ರಬಲ ಪೈಟೋಟಿ ನೀಡ್ತಿದ್ದಾರೆ. ಬಿಜೆಪಿಯಿಂದ ದೇವರಾಜೇಗೌಡ ಕಣ್ಣಕ್ಕಿಳಿದಿದ್ದಾರೆ.
ಅಭ್ಯರ್ಥಿಗಳ ಮಾಹಿತಿ :-
ಕಳೆದ ಭಾರಿಯ ಫಲಿತಾಂಶದ ವಿವರ :-
ಜೆಡಿಎಸ್ - ಹೆಚ್.ಡಿ.ರೇವಣ್ಣ - 108541
ಕಾಂಗ್ರೆಸ್ - ಬಾಗೂರು ಮಂಜೇಗೌಡ - 64709
ಬಿಜೆಪಿ - ಎಂ.ಎನ್.ರಾಜು - 3667))
-------
--------------
ಶ್ರವಣಬೆಳಗೊಳ ಕುರುಕ್ಷೇತ್ರ
2023ರ ಅಖಾಡ
ಜೆಡಿಎಸ್ - ಸಿ.ಎನ್.ಬಾಲಕೃಷ್ಣ
ಕಾಂಗ್ರೆಸ್ - ಎಂ.ಎ.ಗೋಪಾಲಸ್ವಾಮಿ
ಬಿಜೆಪಿ - ಚಿದಾನಂದ್
ಮತ-ಜಾತಿ ಲೆಕ್ಕಾಚಾರ
ಒಟ್ಟು ಮತದಾರರು- 2,12,070
ಪುರುಷ ಮತದಾರರು-1,06,029
ಮಹಿಳಾ ಮತದಾರರು-1,06,041
ಒಕ್ಕಲಿಗ-1,34,000
ಎಸ್ಸಿ- 21,000
ಎಸ್ಟಿ- 10,000
ಕುರುಬ- 7000
ಲಿಂಗಾಯತ-7000
ಮುಸ್ಲಿಂ- 6,000
ವಿಶ್ವಕರ್ಮ-4000
ಜೈನ-4000
ಬೆಸ್ತ-3000
ಸವಿತ ಸಮಾಜ-3000
ಕ್ರೈಸ್ತ-2000
ಇತರೆ-8000
ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ :-
ಕಳೆದ 25 ವರ್ಷಗಳಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯೇ ಗೆಲ್ಲುತ್ತಾ ಇದ್ದಾರೆ. ಸಿ.ಎಸ್.ಪುಟ್ಟೇಗೌಡ್ರು ಜೆಡಿಎಸ್ ನಿಂದ ಸ್ಪರ್ಧಿಸಿ ಮೂರು ಭಾರಿ ಹ್ಯಾಟ್ರಿಲ್ ಗೆಲುವು ಕಂಡಿದ್ದರು. ಬಳಿಕ ಎರಡು ಭಾರಿ ಸಿ.ಎನ್.ಬಾಲಕೃಷ್ಣ ಗೆಲುವು ಕಂಡಿದ್ದಾರೆ. ಮೂರನೇ ಭಾರಿಗೆ ಸ್ಪರ್ಧೆಗಿಳಿದಿರೋ ಬಾಲಕೃಷ್ಣ ಹ್ಯಾಟ್ರಿಲ್ ಗೆಲುವಿಗಾಗಿ ಕಾಲಿಗೆ ಚಕ್ರಕಟ್ಟಿಕೊಂಡಂತೆ ಕ್ಷೇತ್ರ ಸುತ್ತುತ್ತಿದ್ದಾರೆ. ಇತ್ತ ಮಾಜಿ ವಿಧಾನಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಕೈ ಅಭ್ಯರ್ಥಿಯಾಗಿದ್ದು, ಕ್ಷೇತ್ರವನ್ನ ಗೆಲ್ಲೋದಕ್ಕೆ ಇನ್ನಿಲ್ಲದ ಪ್ರಯತ್ನವನ್ನು ಮಾಡ್ತಿದ್ದಾರೆ. ಲೆಕ್ಕಕ್ಕೆ ಅಂತಾ ಬಿಜೆಪಿಯಿಂದ ಚಿದಾನಂದ್ ಗೆ ಟಿಕೆಟ್ ನೀಡಿದ್ದಾರೆ.
ಕಳೆದ ಭಾರಿ ಚುನಾವಣೆಯ ಫಲಿತಾಂಶ : -
ಜೆಡಿಎಸ್ - ಸಿ.ಎನ್.ಬಾಲಕೃಷ್ಣ - 105516
ಕಾಂಗ್ರೆಸ್ - ಸಿ.ಎಸ್. ಪುಟ್ಟೇಗೌಡ - 52504
ಬಿಜೆಪಿ - ಶಿವನಂಜೇಗೌಡ - 7506))
-------
--------------
ಅರಸೀಕೆರೆ ಕುರುಕ್ಷೇತ್ರ
2023ರ ಅಖಾಡ
ಜೆಡಿಎಸ್ - ಎನ್.ಆರ್. ಸಂತೋಷ್
ಕಾಂಗ್ರೆಸ್ - ಕೆ.ಎಂ.ಶಿವಲಿಂಗೇಗೌಡ
ಬಿಜೆಪಿ - ಜಿವಿಟಿ ಬಸವರಾಜ್
ಮತ-ಜಾತಿ ಲೆಕ್ಕಾಚಾರ
ಒಟ್ಟು ಮತದಾರರ ಸಂಖ್ಯೆ 214763
ಪುರುಷ ಮತದಾರರ ಸಂಖ್ಯೆ - 108152
ಮಹಿಳಾ ಮತದಾರರ ಸಂಖ್ಯೆ - 105604
ಲಿಂಗಾಯಿತ - 67000
ಮುಸ್ಲಿಂ- 17000
ಎಸ್ಸಿ - 26000
ಎಸ್ ಟಿ - 18000
ಕುರುಬರು- 26000
ಮರಾಠ- 3000
ಬ್ರಾಹ್ಮಣ- 2000
ಈತರೆ-8 ಸಾವಿರ
ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಹ್ಯಾಟ್ರಿಲ್ ಗೆಲುವು ಗಳಿಸಿದ್ದ ಕೆ.ಎಂ.ಶಿವಲಿಂಗೇಗೌಡ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಎನ್.ಆರ್.ಸಂತೋಷ್ ಬಿಜೆಪಿಯಿಂದ ಜೆಡಿಎಸ್ ಗೆ ಪಕ್ಷಾಂತರ ಮಾಡಿದ್ದಾರೆ. ಪಕ್ಷದ ಮೇಲಿನ ವರ್ಚಸ್ಸಿಗಿಂತ ವ್ಯಕ್ತಿ ಮೇಲೆ ನಡೆಯುತ್ತಿರುವ ಚುನಾವಣೆ ಇದಾಗಿದೆ. ಕೆ.ಎಂ.ಶಿವಲಿಂಗೇಗೌಡ್ರು ವೈಯಕ್ತಿಕ ಮತಗಳ ಜೊತೆಗೆ ಕಾಂಗ್ರೆಸ್ ನ ಸಾಂಪ್ರದಾಯಿಕ ಮತಗಳಮೇಲೆ ಕಣ್ಣಿಟ್ಟು ಚುನಾವಣೆಗೆ ಧುಮುಕಿದ್ದಾರೆ. ಇತ್ತ ಎನ್.ಆರ್.ಸಂತೋಷ್, ವೈಯಕ್ತಿಕ ಮತಗಳ ಜೊತೆಗೆ ಜೆಡಿಎಸ್ ಮತಗಳನ್ನ ನಂಬಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇತ್ತ ಲಿಂತಾಯುತರೇ ನಿರ್ಣಾಯಕರಾಗಿರೋ ಕ್ಷೇತ್ರದಲ್ಲಿ ಜಿವಿಟಿ ಬಸವರಾಜ್ ರವರನ್ನ ಕಣಕ್ಕಿಳಿಸಿದೆ.
ಅಭ್ಯರ್ಥಿಗಳು -
ಕಳೆದ ಭಾರಿಯ ಫಲಿತಾಂಶದ ವಿವರ :-
ಜೆಡಿಎಸ್ - ಕೆ.ಎಂ.ಶಿವಲಿಂಗೇಗೌಡ - 93986
ಕಾಂಗ್ರೆಸ್ - ಜಿ.ಬಿ.ಶಶಿಧರ - 50297
ಬಿಜೆಪಿ - 25258
----------
--------------
ಅರಕಲಗೂಡು ಕುರುಕ್ಷೇತ್ರ
2023ರ ಅಖಾಡ
ಜೆಡಿಎಸ್ - ಎ.ಮಂಜು
ಕಾಂಗ್ರೆಸ್ - ಶ್ರೀಧರ್ ಗೌಡ
ಬಿಜೆಪಿ - ಯೋಗಾರಮೇಶ್
ಪಕ್ಷೇತರ - ಕೃಷ್ಣೇಗೌಡ
ಕಳೆದ ಇಪ್ಪತ್ತು ವರ್ಷದಿಂದ ಅರಕಲಗೂಡು ಕ್ಷೇತ್ರದ ಅಧಿಕಾರದ ಎ.ಮಂಜು ಹಾಗೂ ಎ.ಟಿ.ರಾಮಸ್ವಾಮಿ ಅವರ ಕೈಯಲ್ಲಿದೆ. ಇಬ್ಬರೂ ಎರಡೆರಡು ಭಾರಿ ಶಾಸಕರಾಗಿದ್ದಾರೆ. ಕಾಂಗ್ರೆಸ್ ನಿಂದ ಬಿಜೆಪಿಗೆ ಹೋಗಿದ್ದ ಎ.ಮಂಜು ಟಿಕೆಟ್ ಸಿಗದೇ ಅಂತಿಮ ಕ್ಷಣದಲ್ಲಿ ಜೆಡಿಎಸ್ ನಿಂದ ಕಣಕ್ಕಿಳಿದಿದ್ದಾರೆ. ಇತ್ತ ಜೆಡಿಎಸ್ ನಿಂದ ಟಿಕೆಟ್ ಬಿಜೆಪಿ ಸೇರ್ಪಡೆಯಾಗಿದ್ದಾರೆ, ಆದ್ರೆ ಈ ಭಾರಿ ಸ್ಪರ್ಧೆಗಳಿದಿಲ್ಲ. ಬಿಜೆಪಿ ಅಭ್ಯರ್ಥಿ ಯೋಗಾರಮೇಶ್ ಬೆನ್ನಿಗೆ ನಿಂತಿದ್ದಾರೆ. ಇತ್ತ ಕಾಂಗ್ರೆಸ್ ನಿಂದ ಮಾಜಿ ಪೊಲೀಸ್ ಅಧಿಕಾರಿ ಶ್ರೀಧರ್ ಗೌಡ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಕಾಂಗ್ರೆಸ್ ನಿಂದ ಟಿಕೆಟ್ ವಂಚಿತ ಕೃಷ್ಣೇಗೌಡ ಪಕ್ಷೇತರವಾಗಿ ಸ್ಪರ್ಧೆಗಿಳಿದಿದ್ದಾರೆ. ಪಕ್ಷೇತರ ಅಭ್ಯರ್ಥಿಯೂ ಸೇರಿ ನಾಲ್ವರು ಅಭ್ಯರ್ಥಿಗಳ ನಡುವೆ ಫೈಟ್ ಏರ್ಪಡೋ ಸಾಧ್ಯತೆ ಹೆಚ್ಚಾಗಿದೆ.
ಅಭ್ಯರ್ಥಿಗಳ ವಿವರ :-
ಜೆಡಿಎಸ್ - ಎ.ಮಂಜು
ಕಾಂಗ್ರೆಸ್ - ಶ್ರೀಧರ್ ಗೌಡ
ಬಿಜೆಪಿ - ಯೋಗಾರಮೇಶ್
ಪಕ್ಷೇತರ - ಕೃಷ್ಣೇಗೌಡ
ಕಳೆದಭಾರಿ ಚುನಾವಣಾ ಫಲಿತಾಂಶದ ವಿವರ :-
ಜೆಡಿಎಸ್ - ಎ.ಟಿ.ರಾಮಸ್ವಾಮಿ - 85064
ಕಾಂಗ್ರೆಸ್ - ಎ.ಮಂಜು - 74411
ಬಿಜೆಪಿ - ಯೋಗಾರಮೇಶ್ - 22679))
ಮತ-ಜಾತಿವಾರು ಲೆಕ್ಕ
ಒಟ್ಟು ಮತದಾರರು- 2,20,014
ಪುರುಷ ಮತದಾರರು-1,08,779
ಮಹಿಳಾ ಮತದಾರರು-1,01,235
ಒಕ್ಕಲಿಗ-66,000
ಲಿಂಗಾಯತ-19,000
ಕುರುಬ-48,000
ಎಸ್ಸಿ- 18,000
ಎಸ್ಟಿ- 17,000
ಮುಸ್ಲಿಂ- 7,000
ಬ್ರಾಹ್ಮಣ-1000
ವಿಶ್ವಕರ್ಮ-3000
ಮಡಿವಾಳ-3000
ಕುಂಬಾರ-3000
ಸವಿತ ಸಮಾಜ-3000
ಜೈನ-2000
ಇತರೆ-11000
------
------------
ಬೇಲೂರು ಕುರುಕ್ಷೇತ್ರ
2023ರ ಅಖಾಡ
ಜೆಡಿಎಸ್ - ಕೆ.ಎಸ್.ಲಿಂಗೇಶ್
ಬಿಜೆಪಿ - ಹೆಚ್.ಕೆ.ಸುರೇಶ್
ಕಾಂಗ್ರೆಸ್ - ಬಿ.ಶಿವರಾಮ್
ಬೇಲೂರು ವಿಧಾನಸಭಾ ಕ್ಷೇತ್ರ :-
ಜೆಡಿಎಸ್ ನಿಂದ ಸ್ಪರ್ಧಿಸಿ ಮೊದಲ ಭಾರಿಗೆ ಶಾಸಕರಾಗಿದ್ದ ಕೆ.ಎಸ್.ಲಿಂಗೇಶ್, ಎರಡನೇ ಭಾರಿಗೂ ಸ್ಪರ್ಧೆಗಿಳಿದಿದ್ದಾರೆ. ಲಿಂಗಾಯುತರೇ ನಿರ್ಣಾಯಕರಾಗಿರೋ ಕ್ಷೇತ್ರದಲ್ಲಿ ಜೆಡಿಎಸ್ ಮಾತ್ರ ಲಿಂಗಾಯುತ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಲಿಂಗಾಯುತ ಮತಗಳು ಹಾಗೂ ಜೆಡಿಎಸ್ ನ ಸಾಂಪ್ರದಾಯಿಕ ಮತಗಳನ್ನೇ ಕೆ.ಎಸ್.ಲಿಂಗೇಶ್ ನೆಚ್ಚಿಕೊಂಡಿದ್ದಾರೆ. ಕಳೆದ ಭಾರಿ ಕಡಿಮೆ ಅಂತರದಿಂದ ಸೋಲಿ ಕಂಡಿದ್ದ ಬಿಜೆಪಿ ಅಭ್ಯರ್ಥಿ ಹೆಚ್.ಕೆ.ಸುರೇಶ್ ಗೆ ಎರಡನೇ ಭಾರಿಯೂ ಕಮಲ ನಾಯಕರು ಟಿಕೆಟ್ ನೀಡಿದ್ದಾರೆ. ಕಳೆದ ಭಾರಿಯ ಅನುಕಂಪ ಹಾಗೂ ಬಿಜೆಪಿ ಮತಗಳನ್ನೇ ಸುರೇಶ್ ನೆಚ್ಚಿಕೊಂಡಿದ್ದಾರೆ. ಇತ್ತ ಮಾಜಿ ಸಚಿವ ಬಿ.ಶಿವರಾಮ್ ಕಾಂಗ್ರೆಸ್ ಟಿಕೆಟ್ ಅನ್ನ ಮೊದಲಪಟ್ಟಿಯಲ್ಲಿಯೇ ಪಡೆದುಕೊಂಡು ಕ್ಷೇತ್ರವನ್ನ ಸುತ್ತುತ್ತಿದ್ದಾರೆ. ಲಿಂಗೇಶ್ ಗಲ್ಲೋದಕ್ಕೂ ಮುನ್ನ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆ ಕೋಟೆಯನ್ನು ಪುನಃ ಕಟ್ಟೋದಕ್ಕೆ ಶಿವರಾಮ್ ಪಣ ತೊಟ್ಟಿದ್ದಾರೆ.
ಅಭ್ಯರ್ಥಿಗಳ ವಿವರ :-
ಜೆಡಿಎಸ್ - ಕೆ.ಎಸ್.ಲಿಂಗೇಶ್
ಬಿಜೆಪಿ - ಹೆಚ್.ಕೆ.ಸುರೇಶ್
ಕಾಂಗ್ರೆಸ್ - ಬಿ.ಶಿವರಾಮ್
ಕಳೆದ ಭಾರಿಯ ಚುನಾವಣಾ ಫಲಿತಾಂಶದ ವಿವರ :-
ಜೆಡಿಎಸ್ - ಕೆ.ಎಸ್. ಲಿಂಗೇಶ್ - 64368
ಬಿಜೆಪಿ - ಹೆಚ್.ಕೆ.ಸುರೇಶ್ - 44578
ಕಾಂಗ್ರೆಸ್ - ಕೀರ್ತನಾ ರುದ್ರೇಶ್ ಗೌಡ - 39519
ಮತ-ಜಾತಿವಾರು ಲೆಕ್ಕ
ಒಟ್ಟು ಮತದಾರರು- 1,79,330
ಪುರುಷ ಮತದಾರರು-91,236
ಮಹಿಳಾ ಮತದಾರರು-88,094
ಲಿಂಗಾಯತ- 54,000
ಒಕ್ಕಲಿಗ-30,000
ಎಸ್ಸಿ- 28,000
ಎಸ್ಟಿ- 17,000
ಕುರುಬ- 15000
ಮುಸ್ಲಿಂ- 10,000
ಕ್ರೈಸ್ತ-3000
ಸವಿತ ಸಮಾಜ-3000
ಬ್ರಾಹ್ಮಣ-2000
ಜೈನ-2000
ಇತರೆ-14000
---------
------------
ಆಲೂರು-ಸಕಲೇಶಪುರ ಕುರುಕ್ಷೇತ್ರ
2023ರ ಅಖಾಡ
ಜೆಡಿಎಸ್ -ಹೆಚ್.ಕೆ.ಕುಮಾರಸ್ವಾಮಿ
ಬಿಜೆಪಿ - ಸಿಮೆಂಟ್ ಮಂಜು
ಕಾಂಗ್ರೆಸ್ - ಮುರುಳಿ ಮೋಹನ್
ಸತತ ಆರು ಗೆಲುವನ್ನು ಸಾಧಿಸಿದವರು ಜೆಡಿಎಸ್ ನ ಹೆಚ್.ಕೆ.ಕುಮಾರಸ್ವಾಮಿ, ಇದೇ ಕ್ಷೇತ್ರದಲ್ಲಿ ಮೂರು ಹಾಗೂ ಪಕ್ಕದ ಬೇಲೂರಿನಲ್ಲಿ ಮೂರು ಭಾರಿ ಗೆಲುವುನ್ನ ಸಾಧಿಸಿದ್ದಾರೆ. ಇದೀಗ ಸಕಲೇಶಪುರ ಕ್ಷೇತ್ರದಲ್ಲಿ ನಾಲ್ಕನೇ ಭಾರಿಗೆ ಸ್ಪರ್ಧೆಗಿಳಿದಿದ್ದಾರೆ. ಯಾವುದೇ ಕಾಂಟ್ರುವರ್ಸಿಗಳಿಲ್ಲದೇ ಸರಳತೆ ಹಾಗೂ ಸಜ್ಜನ ರಾಜಕಾರಣಿ ಅನ್ನೋ ಹೆಸರು ಪಡೆದಿರೋದೇ ಕುಮಾರಸ್ವಾಮಿಯವರ ಪ್ರಮುಖ ಚುನಾವಣಾ ಅಸ್ತ್ರ. ಇತ್ತ ಕಳೆದ ಬಾರಿ ಕಡಿಮೆ ಅಂತರದಿಂದ ಸೋಲನ್ನ ಕಂಡಿದ್ದ ನಾರ್ವೇ ಸೋಮಶೇಖರ್ ಗೆ ಟಿಕೆಟ್ ನೀಡದೇ, ಹೊಸ ಮುಖ ಸಿಮೆಂಟ್ ಮಂಜುಗೆ ಬಿಜೆಪಿ ಟಿಕೆಟ್ ನೀಡಿದೆ. ಇತ್ತ ಕಳೆದ ಎರಡುಮೂರು ವರ್ಷದಿಂದ ಕ್ಷೇತ್ರದಲ್ಲಿ ಓಡಾಡಿಕೊಂಡು ಕೆಲಸ ಮಾಡ್ತಿದ್ದ ಮುರುಳಿ ಮೋಹನ್ ಗೆ ಕಾಂಗ್ರೆಸ್ ಟಿಕೆಟ್ ನೀಡಿದೆ..
ಅಭ್ಯರ್ಥಿಗಳ ವಿವರ :-
ಜೆಡಿಎಸ್ -ಹೆಚ್.ಕೆ.ಕುಮಾರಸ್ವಾಮಿ
ಬಿಜೆಪಿ - ಸಿಮೆಂಟ್ ಮಂಜು
ಕಾಂಗ್ರೆಸ್ - ಮುರುಳಿ ಮೋಹನ್
ಕಳೆದ ಭಾರಿಯ ಫಲಿತಾಂಶದ ವಿವರ :-
ಜೆಡಿಎಸ್- ಹೆಚ್.ಕೆ.ಕುಮಾರಸ್ವಾಮಿ - 62262
ಬಿಜೆಪಿ - ನಾರ್ವೇ ಸೋಮಶೇಖರ್ - 57320
ಕಾಂಗ್ರೆಸ್ - ಸಿದ್ದಯ್ಯ - 37002
ಮತ-ಜಾತಿವಾರು ಲೆಕ್ಕ
ಒಟ್ಟು ಮತದಾರರು- 2,00,649
ಪುರುಷ ಮತದಾರರು-1,00,449
ಮಹಿಳಾ ಮತದಾರರು-1,00,197
ಒಕ್ಕಲಿಗ-55,000
ಲಿಂಗಾಯತ- 45,000
ಎಸ್ಸಿ- 50,000
ಎಸ್ಟಿ- 18,000
ಮುಸ್ಲಿಂ- 18,000
ಕ್ರೈಸ್ತ-8000
ಕುರುಬ- 5000
ಜೈನ- 2000
ಬ್ರಾಹ್ಮಣ-1000
ಇತರೆ-6000
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.