Karnataka Elections Results 2023: ಕಾಂಗ್ರೆಸ್ 6, ಬಿಜೆಪಿ-ಜೆಡಿಎಸ್ ತಲಾ ಒಂದೊಂದು, ಇಲ್ಲಿದೆ ವಿಜಯಪುರ ಜಿಲ್ಲೆಯ ಫೈನಲ್ ರಿಸಲ್ಟ್

Vijayapura District Assemby Election Results 2023: ಮೇ 10, 2023ರಂದು ಕರ್ನಾಟಕದ ವಿಧಾನಸಭೆಗೆ ನಡೆದ ಚುನಾವಣೆಗಳ ಫಲಿತಾಂಶ ಬಹುತೇಕ ಪ್ರಕಟಗೊಂಡಿದೆ. ಈ ಫಲಿತಾಂಶಗಳಲ್ಲಿ ಒಟ್ಟು ಎಂಟು  ವಿಧಾನಸಭೆ ಚುನಾವಣೆ ಕ್ಷೇತ್ರಗಳನ್ನು ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿ ಜಾತಿ ರಾಜಕಾರಣವೇ ಪ್ರಬಲ.  ವಿಜಯಪುರ ಜಿಲ್ಲೆಯಲ್ಲಿ ಪಕ್ಷ ರಾಜಕಾರಣಕ್ಕೆ ಸ್ವಲ್ಪ ಜಾಗ ಕಮ್ಮಿ ಎಂದರೆ ತಪ್ಪಾಗಲಾರದು. ಈ ಬಾರಿಯ ಚುನಾವಣೆಯಲ್ಲಿ ಈ ಜಿಲ್ಲೆಯ 8 ಸ್ಥಾನಗಳ ಪೈಕಿ 6 ಸ್ಥಾನಗಳಲಿ ಕಾಂಗ್ರೆಸ್ ಪಕ್ಷ ಗೆಲುವು ದಾಖಲಿಸಿದ್ದರೆ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ತಲಾ ಒಂದೊಂದು ಸ್ಥಾನವನ್ನು ಗೆದ್ದುಕೊಂಡಿವೆ.   

Written by - Nitin Tabib | Last Updated : May 13, 2023, 08:11 PM IST
  • ಈ ಬಾರಿ ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಒಟ್ಟು 6 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
  • ಇನ್ನೊಂದೆಡೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ತಲಾ ಒಂದೊಂದು ಸ್ಥಾನಗಳಲ್ಲಿ ತೃಪ್ತಿಪಟ್ಟುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ.
  • ಬನ್ನಿ ಈ ಬಾರಿ ಈ ಜಿಲ್ಲೆಯಲ್ಲಿ ಮತದಾರ ಪ್ರಭುಗಳು ಯಾವ ಯಾವ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದಾರೆ ಎಂಬುದನ್ನೂ ವಿವರವಾಗಿ ತಿಳಿದುಕೊಳ್ಳೋಣ.
Karnataka Elections Results 2023: ಕಾಂಗ್ರೆಸ್ 6, ಬಿಜೆಪಿ-ಜೆಡಿಎಸ್ ತಲಾ ಒಂದೊಂದು, ಇಲ್ಲಿದೆ ವಿಜಯಪುರ ಜಿಲ್ಲೆಯ ಫೈನಲ್ ರಿಸಲ್ಟ್ title=
ವಿಜಯಪುರ ಜಿಲ್ಲೆ ವಿಧಾನಸಭೆ ಚುನಾವಣೆ 2023 ಫಲಿತಾಂಶ

Karnataka Assemby Election Results 2023: ಒಟ್ಟು ಎಂಟು ವಿಧಾನಸಭೆ ಚುನಾವಣೆ ಕ್ಷೇತ್ರಗಳನ್ನು ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿ ಜಾತಿ ರಾಜಕಾರಣವೇ ಪ್ರಬಲ.  ವಿಜಯಪುರ ಜಿಲ್ಲೆಯಲ್ಲಿ ಪಕ್ಷ ರಾಜಕಾರಣಕ್ಕೆ ಸ್ವಲ್ಪ ಜಾಗ ಕಮ್ಮಿ ಎಂದರೆ ತಪ್ಪಾಗಲಾರದು. ಕಳೆದ ಚುನಾವಣೆ ಅಂದರೆ 2018 ರ ಚುನಾವಣೆಯಲ್ಲಿ ಈ ಜಿಲ್ಲೆಯ ಒಟ್ಟು 8 ಸ್ಥಾನಗಳ ಪೈಕಿ 3 ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡಿತ್ತು. ಕಾಂಗ್ರೆಸ್ 3 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಗೌಡ-ಪಾಟೀಲರ ವರ್ಚಸ್ಸಿನ ಈ ಜಿಲ್ಲೆಯಲ್ಲಿ ಜೆಡಿಎಸ್ ಗೂ ಕೂಡ 2 ಸ್ಥಾನಗಳು ಲಭಿಸಿದ್ದವು. ಇನ್ನೂ ಈ ಬಾರಿಯ ವಿಧಾನಸಭೆ ಚುನಾವಣೆಗಳ ಫಲಿತಾಂಶದ ಕುರಿತು ಹೇಳುವುದಾದರೆ. ಈ ಬಾರಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಒಟ್ಟು 6 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇನ್ನೊಂದೆಡೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ತಲಾ ಒಂದೊಂದು ಸ್ಥಾನಗಳಲ್ಲಿ ತೃಪ್ತಿಪಟ್ಟುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ಬನ್ನಿ ಈ ಬಾರಿ ಈ ಜಿಲ್ಲೆಯಲ್ಲಿ ಮತದಾರ ಪ್ರಭುಗಳು ಯಾವ ಯಾವ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದಾರೆ ಎಂಬುದನ್ನೂ ವಿವರವಾಗಿ ತಿಳಿದುಕೊಳ್ಳೋಣ. 

ವಿಜಯಪುರ ಜಿಲ್ಲೆಯ ಕುರುಕ್ಷೇತ್ರ
ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು-95
ಒಟ್ಟು ಮತದಾರರು - 1878303 
ಪುರುಷರು-959132 
ಮಹಿಳೆಯರು-918953
ಲೈಂಗಿಕ ಅಲ್ಪಸಂಖ್ಯಾತರು- 218 

ಜಿಲ್ಲೆಯಲ್ಲಿ ಬರುವ ವಿವಿಧ ಕ್ಷೇತ್ರಗಳ ಸಂಕ್ಷಿಪ್ತ ಮಾಹಿತಿ
1. ಮುದ್ದೆಬೀಹಾಳ 
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,01,058
ಪುರುಷ ಮತದಾರರ ಸಂಖ್ಯೆ-1,03,210
ಮಹಿಳಾ ಮತದಾರರ ಸಂಖ್ಯೆ-97,813

ಮುದ್ದೆಬೀಹಾಳ ಕ್ಷೇತ್ರದ ಕುರಿತು ಹೇಳುವುದಾದರೆ, ಈ ಬಾರಿ ಈ ಕ್ಷೇತ್ರದ ಜನತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಪ್ಪಾಜಿ ಅಲಿಯಾಸ್ ಚನ್ನಬಸವರಾಜ್ ನಾಡಗೌಡಾ ಅವರನ್ನು 7637 ಮತಗಳ ಅಂತರದಿಂದ ಗೆಲ್ಲಿಸಿದೆ. ನಾದಗೌಡಾ ಅವರ ಹತ್ತಿರದ ಪ್ರತಿಸ್ಪರ್ಧಿಯಾಗಿರುವ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎ. ಎಸ್ ಪಾಟೀಲ್ (ನಡಹಳ್ಳಿ) ಅವರಿಗೆ ಈ ಬಾರಿಯ ಚುನಾವಣೆಯಲ್ಲಿ 71846 (46.35%) ಮತಗಳು ಬಂದರೆ, ಗೆಲುವಿನ ಅಭ್ಯರ್ಥಿಯಾಗಿ ಹೊರಹೊಮ್ಮಿದ ನಾದಗೌಡ ಅವರಿಗೆ 79483 (51.27%) ಮತಗಳು ಬಂದಿವೆ

2018ರ ವಿಧಾನಸಭೆ ಚುನಾವಣಾ ಫಲಿತಾಂಶ
BJP- ಅಮೀನಪ್ಪ ಗೌಡ ಎಸ್ ಪಾಟೀಲ್ (ನಡಹಳ್ಳಿ)- 63,512 - ಅಂತರ: 8633(45.76%)
INC- ಅಪ್ಪಾಜಿ ಊರ್ಫ್ ಚನ್ನಬಸವರಾಜ ಶಂಕರರಾವ ನಾಡಗೌಡ- 54,879 (39.54%)
JDS- ಮಂಗಳಾದೇವಿ ಬಿರಾದಾರ್ 9,845 (7.09%)

2023ರ ವಿಧಾನಸಭೆ ಚುನಾವಣೆಯ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ಎ. ಎಸ್ ಪಾಟೀಲ್ (ನಂದಹಳ್ಳಿ)
ಕಾಂಗ್ರೆಸ್- ಅಪ್ಪಾಜಿ ಅಲಿಯಾಸ್ ಚನ್ನಬಸವರಾಜ್ ನಾದಗೌಡ 
ಜೆಡಿಎಸ್- ಬಸವರಾಜ್ ಭೀಮಣ್ಣ ಬಜಂತ್ರಿ
ಆಪ್- ಮೆಹಬೂಬ್ ಶಬ್ಬೀರ ಅಹ್ಮದ್ ಹಡಲಗೇರಿ
ಬಿಎಸ್ಪಿ- ಕೆ.ಬಿ. ದೊಡಮನಿ ವಕೀಲರು

2. ದೇವರ ಹಿಪ್ಪರಗಿ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,07,225
ಪುರುಷ ಮತದಾರರ ಸಂಖ್ಯೆ-1,07,451
ಮಹಿಳಾ ಮತದಾರರ ಸಂಖ್ಯೆ-99,755

ದೇವರ ಹಿಪ್ಪರಗಿ ಕ್ಷೇತ್ರದಲ್ಲಿ ಜಾತ್ಯಾತೀತ ಜನತಾದಳದ ಅಭ್ಯರ್ಥಿಯಾಗಿರುವ ಭೀಮನಗೌಡಾ ಅಲಿಯಾಸ್ ರಾಜುಗೌಡಾ ಬಸನಗೌಡಾ ಪಾಟೀಲ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಭಾರತೀಯ ಜನತಾಪಕ್ಷದ ಅಭ್ಯರ್ಥಿ ಸೋಮನಗೌಡ ಬಿ ಪಾಟೀಲ್ ಅವರನ್ನು 20175 ಮತಗಳ ಅಂತರದಿಂದ ಸೊಲ್ಲಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಭೀಮನಗೌಡಾ ಪಾಟೀಲ್ ಅವರಿಗೆ ಒಟ್ಟು 65952 (43.39%) ಮತಗಳು ದೊರೆತಿದ್ದರೆ, ಬಿಜೆಪಿ ಅಭ್ಯರ್ಥಿ ಸೋಮನಗೌಡಾ ಪಾಟೀಲ್ ಅವರಿಗೆ ಒಟ್ಟು 45777 (30.12%) ಮತಗಳು ಲಭಿಸಿವೆ. 

2018ರ ವಿಧಾನಸಭೆ ಚುನಾವಣಾ ಫಲಿತಾಂಶ
BJP- ಸೋಮನಗೌಡ ಬಿ ಪಾಟೀಲ್ (ಸಾಸನೂರ)- 48,245 ಅಂತರ: 3353 (34.69%)
JDS- ಭೀಮನಗೌಡ (ರಾಜುಗೌಡ) ಬಿ ಪಾಟೀಲ್- 44,892    (32.28%)    
INC- ಬಿ ಎಸ್ ಪಾಟೀಲ್ (ಯಾಳಗಿ)-  38,038    (27.35%)    

2023ರ ವಿಧಾನಸಭೆ ಚುನಾವಣೆಯ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿ‌ಜೆ‌ಪಿ- ಸೋಮನಗೌಡ ಪಾಟೀಲ್ (ಸಾಸನೂರು)
ಕಾಂಗ್ರೆಸ್- ಸುಣಗಾರ್ ಶರಣಪ್ಪ ತಿಪ್ಪಣ್ಣ
ಜೆಡಿಎಸ್-ಭೀಮನಗೊಂಡಾ ಬಸನಗೊಂಡಾ ಪಾಟೀಲ್ 
ಆಪ್- ಬಸಲಿಂಗಪ್ಪಾ ಇಂಗಳಗಿ
ಬಿಎಸ್ಪಿ- ರಾಜು ಮಾದರ್ (ಗುಬ್ಬೆವಾಡ್)

3. ಬಸವನ ಬಾಗೆವಾಡಿ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ- 1,96,571
ಪುರುಷ ಮತದಾರರ ಸಂಖ್ಯೆ- 1,01,526
ಮಹಿಳಾ ಮತದಾರರ ಸಂಖ್ಯೆ- 95,027

ಬಸವನ ಬಾಗೆವಾಡಿ ಕ್ಷೇತ್ರದ ಕುರಿತು ಹೇಳುವುದಾದರೆ, ಇಲ್ಲಿನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಶಿವಾನಂದ್ ಪಾಟೀಲ್ ಅವರು ತಮ್ಮ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿಯ ಬೆಳ್ಳುಬ್ಬಿ ಸಂಗಪ್ಪ ಕಲ್ಲಪ್ಪ ಅವರನ್ನು 24863 ಮತಗಳ ದೊಡ್ಡ ಅಂತರದಿಂದ ಸೋಲಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಶಿವಾನಂದ್ ಪಾಟೀಲ್ ಅವರಿಗೆ ಒಟ್ಟು 68126 (43%) ಮತಗಳು ದೊರೆತಿದ್ದರೆ, ಬಿಜೆಪಿಯ ಬೆಳ್ಳುಬ್ಬಿ ಅವರಿಗೆ 43263(27.3%) ಮತಗಳು ಲಭಿಸಿವೆ. 

2018ರ ವಿಧಾನಸಭೆ ಚುನಾವಣಾ ಫಲಿತಾಂಶ
INC- ಶಿವಾನಂದ ಪಾಟೀಲ- 58,647 ಅಂತರ: 3186 (39.79%)
JDS- ಸೋಮನಗೌಡ(ಅಪ್ಪುಗೌಡ) ಬಿ ಪಾಟೀಲ್(ಮನಗೂಳಿ) -55,461 (37.63%)    
BJP- ಸಂಗರಾಜ್ ದೇಸಾಯಿ - 25,501 (17.30%)

2023ರ ವಿಧಾನಸಭೆ ಚುನಾವಣೆಯ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ಬೆಳ್ಳುಬ್ಬಿ ಸಂಗಪ್ಪ ಕಲ್ಲಪ್ಪ
ಕಾಂಗ್ರೆಸ್- ಶಿವಾನಂದ್ ಪಾಟೀಲ್
ಜೆಡಿಎಸ್- ಅಲಗೌಡಾ ಉರ್ಫ್  ಸೋಮನಗೌಡಾ ಬಸಗೌಡಾ ಪಾಟೀಲ್
ಬಿಎಸ್ಪಿ- ಗುರುಪಾದಪ್ಪ ಬಸಪ್ಪ ಧವಳಗಿ    

4. ಬಬಲೇಶ್ವರ್
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,09,117
ಪುರುಷ ಮತದಾರರ ಸಂಖ್ಯೆ-1,06,470
ಮಹಿಳಾ ಮತದಾರರ ಸಂಖ್ಯೆ- 1,02,636

ಬಿಜಾಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಎಂಬಿ ಪಾಟೀಲ್ ಅವರು ಭಾರತೀಯ ಜನತಾ ಪಕ್ಷದ ವಿಜಯಕುಮಾರ್ ಉರ್ಫ್ ವಿಜಯಗೌಡಾ ಪಾಟೀಲ್ ಅವರನ್ನು ಒಟ್ಟು 15216 ಮತಗಳ ಅಂತರದಿಂದ ಸೋಲಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಎಂ.ಬಿ ಪಾಟೀಲ್ ಅವರಿಗೆ 93923(52.42%) ಮತಗಳು ದೊರೆತಿದ್ದರೆ, ವಿಜಯಗೌಡಾ ಪಾಟೀಲ್ ಅವರಿಗೆ 78707 (43.92%) ದೊರೆತಿವೆ.

2018ರ ವಿಧಾನಸಭೆ ಚುನಾವಣಾ ಫಲಿತಾಂಶ
INC- ಮಲ್ಲನಗೌಡ ಬಸನಗೌಡ ಪಾಟೀಲ - 98,339- ಅಂತರ: 29715(57.29%)
BJP- ವಿಜಯಕುಮಾರ ಸಿದ್ರಾಮಗೌಡ ಪಾಟೀಲ- 68,624 (39.98%)    

2023ರ ವಿಧಾನಸಭೆ ಚುನಾವಣೆಯ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ವಿಜಯ್ ಕುಮಾರ್ ಉರ್ಫ್ ವಿಜಯಗೌಡಾ ಪಾಟೀಲ್
ಕಾಂಗ್ರೆಸ್- ಎಂಬಿ ಪಾಟೀಲ್
ಜೆಡಿಎಸ್- ಬಸವರಾಜ್ ಹೊನವಾಡ್
ಆಪ್-ಗಂಗನಲ್ಲಿ ಕಾಮಣ್ಣ ಸಿದ್ಧಪ್ಪ
ಬಿಎಸ್ಪಿ- ವಿಜಯಕುಮಾರ್ ಉರ್ಫ್ ವಿಜಯಗೌಡಾ ಪಾಟೀಲ್

5. ವಿಜಯಪುರ ನಗರ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,41,682
ಪುರುಷ ಮತದಾರರ ಸಂಖ್ಯೆ-1,21,799
ಮಹಿಳಾ ಮತದಾರರ ಸಂಖ್ಯೆ-1,19,829

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಕುರಿತು ಹೇಳುವುದಾದರೆ, ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಬಸನಗೌಡ ಆರ್ ಪಾಟೀಲ್ ಯತ್ನಾಳ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಖಾಜಾಸಾಬ್ ಮುಶ್ರೀಫ್ ಅವರನ್ನು 8233 ಮತಗಳ ಅಂತರದಿಂದ ಸೋಲಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಬಸನಗೌಡಾ ಪಾಟೀಲ್ ಯತ್ನಾಳ್ ಅವರಿಗೆ ಒಟ್ಟು 94211 (51.47%) ಮತಗಳು ಲಭಿಸಿದರೆ, ಅಬ್ದುಲ್ ಹಮೀದ್ ಮುಶ್ರಿಫ್ ಅವರಿಗೆ 85978 (46.97%) ಮತಗಳು ಲಭಿಸಿವೆ.

2018ರ ವಿಧಾನಸಭೆ ಚುನಾವಣಾ ಫಲಿತಾಂಶ
BJP- ಬಸನಗೌಡ ಪಾಟೀಲ್ (ಯತ್ನಾಳ್) - 76,308- ಅಂತರ: 6413(50.30%)
INC- ಅಬ್ದುಲ್ ಹಮೀದ್ ಮುಶ್ರೀಫ್ 69,895 (46.07%)    
JDS- ಬೆಳ್ಳುಬ್ಬಿ ಸಂಗಪ್ಪ ಕಲ್ಲಪ್ಪ- 2,083 (1.37%)    

2023ರ ವಿಧಾನಸಭೆ ಚುನಾವಣೆಯ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ಬಸನಗೌಡಾ ಪಾಟೀಲ್ ಯತ್ನಾಳ್
ಕಾಂಗ್ರೆಸ್- ಅಬ್ದುಲ್ ಹಮೀದ್ ಖಾಜಾಸಾಬ್ ಮುಶ್ರಿಫ್
ಜೆಡಿಎಸ್- ಬಂದೆನವಾಜ್ ಹುಸೇನ್ ಸಾಬ್ ಮಹಾಬರಿ
ಆಪ್-ಹಾಸೀಮ್ ಪೀರ್ ವಾಲಿಕಾರ್
ಬಿಎಸ್ಪಿ- ಕೆಂಗನಾಳ್ ಮಲ್ಲಿಕಾರ್ಜುನ್ ಭೀಮಪ್ಪಾ

6. ನಾಗಠಾಣಾ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,56,881
ಪುರುಷ ಮತದಾರರ ಸಂಖ್ಯೆ-1,32,596
ಮಹಿಳಾ ಮತದಾರರ ಸಂಖ್ಯೆ-1,24,258

ನಾಗಠಾಣಾ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಕಟಕದೊಂಡಾ ವಿಠ್ಠಲ ದೊಂಡಿಬಾ ಅವರು ತಮ್ಮ ಎದುರಾಳಿ ಬಿಜೆಪಿ ಅಭ್ಯರ್ಥಿಯಾಗಿರುವ ಸಂಜೀವ್ ಮಲಸಿದ್ದಪ್ಪ ಐಹೊಳೆ ಅವರನ್ನು 30815 ಮತಗಳ ಅಂತರದಿಂದ ಸೊಲ್ಲಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕಟಕದೊಂಡಾ ವಿಠ್ಠಲ ದೊಂಡಿಬಾ ಅವರಿಗೆ 78990 (43.75 %)ಮತಗಳು ಬಂದಿದ್ದರೆ, ಬಿಜೆಪಿ ಅಭ್ಯರ್ಥಿ ಸಂಜೀವ್ ಐಹೊಳೆ ಅವರಿಗೆ 48175 (26.68 %) ಮತಗಳು ದೊರೆತಿವೆ. 

2018ರ ವಿಧಾನಸಭೆ ಚುನಾವಣಾ ಫಲಿತಾಂಶ
JDS- ದೇವಾನಂದ್ ಫುಲಾಸಿಂಗ್ ಚವಾಣ್- 59,709 ಅಂತರ: 5601(34.00%)
INC- ಕಟಕದೊಂಡ್ ವಿಟ್ಟಲ್ ದೊಂಡಿಬಾ - 54,108(30.81%)
BJP- ಗೋಪಾಲ್ ಗೋವಿಂದ್ ಕಾರಜೋಳ- 53,562(30.50%)

2023ರ ವಿಧಾನಸಭೆ ಚುನಾವಣೆಯ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ-ಸಂಜೀವ್ ಮಲಸಿದ್ದಪ್ಪ ಐಹೊಳೆ
ಕಾಂಗ್ರೆಸ್- ಕಟಕಧೋಂಡ್ ವಿಠ್ಠಲ ದೊಂಡಿಬಾ
ಜೆಡಿಎಸ್- ದೇವಾನಂದ್ ಫುಲ್ಸಿಂಗ್ ಚೌಹಾಣ್
ಆಪ್- ಗುರು ಮುನ್ನು ಚವಾಣ್ 
ಬಿಎಸ್ಪಿ- ಕಲ್ಲಪ್ಪ ತೊರವಿ    

ಇದನ್ನೂ ಓದಿ-Karnataka Election Results 2023: 5 ಸ್ಥಾನಗಳಲ್ಲಿ ಕಾಂಗ್ರೆಸ್, 2 ಸ್ಥಾನಗಳಲ್ಲಿ ಬಿಜೆಪಿ, ಇಲ್ಲಿದೆ ಬಾಗಲಕೋಟೆ ಫೈನಲ್ ರಿಸಲ್ಟ್

7. ಇಂಡಿ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,28,742
ಪುರುಷ ಮತದಾರರ ಸಂಖ್ಯೆ-1,18,922
ಮಹಿಳಾ ಮತದಾರರ ಸಂಖ್ಯೆ-1,09,796

ಇಂಡಿ ವಿಧಾನಸಭಾ ಕ್ಷೇತ್ರದ ಕುರಿತು ಹೇಳುವುದಾದರೆ, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಯಶವಂತರಾಯಗೌಡಾ ವಿಠ್ಠಲಗೌಡಾ ಪಾಟೀಲ್ ಅವರು ತಮ್ಮ ಹತ್ತಿರದ ಪ್ರತಿಸ್ಪರ್ಧಿ ಜಾತ್ಯಾತೀತ ಜನತಾದಳದ ಅಭ್ಯರ್ಥಿ ಬಿ ಡಿ  ಪಾಟೀಲ್ ಅವರನ್ನು 10329 ಮತಗಳ ಅಂತರದಿಂದ ಸೋಲಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿ.ಡಿ ಪಾಟೀಲ್ ಅವರಿಗೆ 61456     (33.98%) ಮತಗಳು ಬಂದಿದ್ದರೆ, ಕಾಂಗ್ರೆಸ್ ಪಕ್ಷದ ಯಶವಂತರಾಯಗೌಡ ಪಾಟೀಲ್ ಅವರಿಗೆ 71785 (39.69%) ಮತಗಳು ಲಭಿಸಿವೆ. 

2018ರ ವಿಧಾನಸಭೆ ಚುನಾವಣಾ ಫಲಿತಾಂಶ
INC- ಯಶವಂತರಾಯಗೌಡ ವಿಟ್ಟಲಗೌಡ ಪಾಟೀಲ- 50,401- ಅಂತರ: 9938(29.98%)
JDS- ಬಿ ಡಿ ಪಾಟೀಲ್ (ಹಂಜಗಿ)- 40,463(24.07%)    
BJP- ದಯಾಸಾಗರ ಬಾಪುರಯ್ಯ ಪಾಟೀಲ್- 38,941(23.16%)
IND- ರವಿಕಾಂತ ಶಂಕ್ರೆಪ್ಪ ಪಾಟೀಲ್- 31,425 (18.69%)    

2023ರ ವಿಧಾನಸಭೆ ಚುನಾವಣೆಯ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ಕಸುಗೌಡಾ ಈರಪ್ಪಾಗೌಡಾ ಬಿರಾದಾರ್ 
ಕಾಂಗ್ರೆಸ್-ಯಶವಂತರಾಯಗೌಡಾ ವಿಠ್ಠಲಗೌಡಾ ಪಾಟೀಲ್
ಜೆಡಿಎಸ್- ಬಿ.ಡಿ ಪಾಟೀಲ್ (ಹಂಜಗಿ)
ಆಪ್- ಗೋಪಾಲ್ ಆರ್. ಪಾಟೀಲ್
ಬಿಎಸ್ಪಿ- ನಾಗೇಶ್ ಶಿವಶರಣ್

ಇದನ್ನೂ ಓದಿ-Karnataka Election Results 2023: ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ, 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಜಯ, ಇಲ್ಲಿದೆ ಬೀದರ್ ಜಿಲ್ಲೆಯ ಫೈನಲ್ ರಿಸಲ್ಟ್

8. ಸಿಂಧಗಿ
ಕ್ಷೇತ್ರದ ಮಾಹಿತಿ
ಮೀಸಲಾತಿ-ಪರಿಶಿಷ್ಟ ಜಾತಿ
ಮತದಾರರ ಸಂಖ್ಯೆ-2,23,160
ಪುರುಷ ಮತದಾರರ ಸಂಖ್ಯೆ-1,15,556
ಮಹಿಳಾ ಮತದಾರರ ಸಂಖ್ಯೆ-1,07,576

ಸಿಂಧಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಅಶೋಕ್ ಮಲ್ಲಪ್ಪ ಮನಗೂಳಿ ಅವರು ತಮ್ಮ ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಭೂಸನೂರು ರಮೇಶ್ ಬಾಳಪ್ಪ ಅವರನ್ನು 7808 ಮತಗಳ ಅಂತರದಿಂದ ಸೋಲಿಸಿದ್ದಾರೆ ಈ ಬಾರಿಯ ಚುನಾವಣೆಯಲ್ಲಿ ಅಶೋಕ್ ಮನಗೂಳಿ ಅವರಿಗೆ 87621 (50.53%) ಮತಗಳು ಬಂದಿದ್ದರೆ, ಭೂಸನೂರು ರಮೇಶ್ ಬಾಳಪ್ಪ ಅವರಿಗೆ 79813 (46.03%) ಮತಗಳು ದೊರೆತಿವೆ. 

2018ರ ವಿಧಾನಸಭಾ ಚುನಾವಣಾ ಫಲಿತಾಂಶ
JDS- ಮನಗೂಳಿ ಮಲ್ಲಪ್ಪ ಚನ್ನವೀರಪ್ಪ- 70,865- ಅಂತರ : 9305 (44.15%)
BJP- ಭೂಸನೂರು ರಮೇಶ್ ಬಾಳಪ್ಪ- 61,560    (38.36%)    
INC-ಸಾಲಿ ಮಲ್ಲಣ್ಣ ನಿಂಗಪ್ಪ - 22,818    (14.22%)    

2023ರ ವಿಧಾನಸಭೆ ಚುನಾವಣೆಯ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ಭೂಸುನೂರ್ ರಮೇಶ್ ಮಲ್ಲಪ್ಪ
ಕಾಂಗ್ರೆಸ್- ಅಶೋಕ್ ಮಲ್ಲಪ್ಪ ಮನಗೂಳಿ
ಜೆಡಿಎಸ್- ವಿಶಾಲಾಕ್ಷಿ ಶಿವಾನಂದ್ ಪಾಟೀಲ್
ಆಪ್- ಮುರುಗೆಪ್ಪಗೌಡಾ ಎಸ್ ರಡ್ಡೆವಾಡಗಿ
ಬಿಎಸ್ಪಿ-ಡಾ. ದಸ್ತಗೀರ್ ಮುಲ್ಲಾ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News