Karantaka Election Results 2023: ಕಾಂಗ್ರೆಸ್ ಮುಖಂಡರಿಂದ ಗದಾಧಾರಿ ರಾಹುಲ್ ಚಿತ್ರ ಹಂಚಿಕೆ, ಬಜರಂಗಬಳಿ ನಮ್ ಜೊತೆಗೆ ಎಂದ ಛತ್ತೀಸ್ಗಡ್ ಮುಖ್ಯಮಂತ್ರಿ

Karnataka Assembly Elections 2023: ಕರ್ನಾಟಕ ವಿಧಾನಸಭೆ ಚುನಾವಣೆ 2023 ರ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುವ ಕುರಿತು ಕಾಂಗ್ರೆಸ್ ನೀಡಿದ ಭರವಸೆಯ ತಂತರ, ಬಿಜೆಪಿ ಈ ಭರವಸೆಯನ್ನು ಭಜರಂಗಬಲಿ ಭಗವಂತನೊಂದಿಗೆ ಸಂಯೋಜಿಸುವ ಮೂಲಕ ದೊಡ್ಡ ಪ್ರಚಾರವನ್ನೆ ಗಿಟ್ಟಿಸಿಕೊಂಡಿತು. ಪ್ರಧಾನಿ ಮೋದಿ ಕೂಡ ತಮ್ಮ ರ್ಯಾಲಿಗಳಲ್ಲಿ ಬಜರಂಗಬಲಿಯ ಬಗ್ಗೆ ಹಲವು ಹಲವು ಬಾರಿ ಪ್ರಸ್ತಾಪಿಸಿದ್ದಾರೆ.

Written by - Nitin Tabib | Last Updated : May 13, 2023, 03:32 PM IST
  • ಸಿಎಂ ಬಘೇಲ್, 'ಕರ್ನಾಟಕದ ಫಲಿತಾಂಶಗಳು ನಿರೀಕ್ಷಿತ ಮಟ್ಟದಲ್ಲಿವೆ.
  • ಮೋದಿ ಜೀ ಅವರನ್ನೇ ಮುಂದಿಟ್ಟುಕೊಂಡು ಮತ ಯಾಚಿಸಿದ್ರು, ಹಾಗಾಗಿ ಇದು ಮೋದಿ ಜೀ ಸೋಲು...
  • ಭ್ರಷ್ಟರ ತಲೆ ಮೇಲೆ ಬಜರಂಗಯ ಗದಾಡೇಟು ಬಿದ್ದಿದ್ದು ಇದೀಗ ಕರ್ನಾಟಕದಿಂದಲೇ ಬಿಜೆಪಿ ಸರ್ಕಾರ ತೊಲಗಿದೆ' ಎಂದು ಅವರು ಹೇಳಿದ್ದಾರೆ.
Karantaka Election Results 2023: ಕಾಂಗ್ರೆಸ್ ಮುಖಂಡರಿಂದ ಗದಾಧಾರಿ ರಾಹುಲ್ ಚಿತ್ರ ಹಂಚಿಕೆ, ಬಜರಂಗಬಳಿ ನಮ್ ಜೊತೆಗೆ ಎಂದ ಛತ್ತೀಸ್ಗಡ್ ಮುಖ್ಯಮಂತ್ರಿ title=
ರಾಹುಲ್ ಗಾಂಧಿ

Karantaka Vidhan Sabha Election Results 2023: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸಿಕ್ಕ ಭರ್ಜರಿ ಗೆಲುವಿನ ಬಳಿಕ ಛತ್ತೀಸ್ಗಡ್ ಮುಖ್ಯಮಂತ್ರಿ ಭೂಪೇಷ್ ಬಘೆಲ್ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು ಕರ್ನಾಟಕದ ಜನತೆ ನೀಡಿರುವ ತೀರ್ಪಿನಿಂದ ಬಜರಂಗಬಲಿ ಯಾರ ಜೊತೆಗೆ ಇದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಅವರು ರಾಜ್ಯ ನಾಯಕತ್ವ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಏತನ್ಮಧ್ಯೆ, ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ್ ಸೇರಿದಂತೆ ಅನೇಕ ಕಾಂಗ್ರೆಸ್ ಬೆಂಬಲಿಗರು ರಾಹುಲ್ ಗಾಂಧಿ ಹನುಮಂತನ ಗಡೆಯನ್ನು ಹಿಡಿದ ವೀಡಿಯೊಗಳು/ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸುವ ಭರವಸೆ ನೀಡಿದ ಬಳಿಕ ಬಿಜೆಪಿಯು ಭಜರಂಗದಳವನ್ನು ಶ್ರೀಆಂಜನೇಯನಿಗೆ ಜೋಡಿಸುವ ಮೂಲಕ ಅದನ್ನು ಚುನಾವಣೆಯ ಅತಿ ದೊಡ್ಡ ವಿಷವಾಗಿ ಬಿಂಬಿಸಿತ್ತು. ಪ್ರಧಾನಿ ಮೋದಿ ಅವರೇ ತಮ್ಮ ಹಲವು ರ್ಯಾಲಿಗಳಲ್ಲಿ ಬಜರಂಗಬಲಿಯ ಬಗ್ಗೆ ಹಲವು ಬಾರಿ ಪ್ರಸ್ತಾಪಿಸಿದ್ದಾರೆ.

ಸಿಎಂ ಬಘೇಲ್, 'ಕರ್ನಾಟಕದ ಫಲಿತಾಂಶಗಳು ನಿರೀಕ್ಷಿತ ಮಟ್ಟದಲ್ಲಿವೆ. ಮೋದಿ ಜೀ ಅವರನ್ನೇ ಮುಂದಿಟ್ಟುಕೊಂಡು ಮತ ಯಾಚಿಸಿದ್ರು, ಹಾಗಾಗಿ ಇದು ಮೋದಿ ಜೀ ಸೋಲು... ಭ್ರಷ್ಟರ ತಲೆ ಮೇಲೆ ಬಜರಂಗಯ ಗದಾಡೇಟು ಬಿದ್ದಿದ್ದು ಇದೀಗ ಕರ್ನಾಟಕದಿಂದಲೇ ಬಿಜೆಪಿ ಸರ್ಕಾರ ತೊಲಗಿದೆ' ಎಂದು ಅವರು ಹೇಳಿದ್ದಾರೆ.

ಫಲಿತಾಂಶದ ಕುರಿತು ಗೆಹ್ಲೋಟ್, ಕಮಲ್ ನಾಥ್ ಪ್ರತಿಕ್ರಿಯೆ ಏನು?
ಮತ್ತೊಂದೆಡೆ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕ ಭರ್ಜರಿ ಗೆಲುವಿನ ಬಳಿಕ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಕೂಡ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದು, ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ವೇಳೆ ಕರ್ನಾಟಕದಲ್ಲಿ ಕಂಡುಬಂದ ವಾತಾವರಣದ ಫಲಿತಾಂಶ ಕರ್ನಾಟಕದ ಚುನಾವಣಾ ಫಲಿತಾಂಶದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಗೆಹ್ಲೋಟ್, 'ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಕರ್ನಾಟಕವು ಕೋಮು ರಾಜಕಾರಣವನ್ನು ತಿರಸ್ಕರಿಸಿ ಅಭಿವೃದ್ಧಿಯ ರಾಜಕಾರಣವನ್ನು ಆರಿಸಿಕೊಂಡಿದೆ. ಮುಂಬರುವ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲೂ ಇದು ಪುನರಾವರ್ತನೆಯಾಗಲಿದೆ' ಎಂದಿದ್ದಾರೆ.

ಇದನ್ನೂ ಓದಿ-Karnataka Election Result 2023: 38 ವರ್ಷಗಳ ಹಳೆ ಸಂಪ್ರದಾಯವನ್ನು ಮುರಿಯಲು ವಿಫಲವಾದ ಬಿಜೆಪಿ

ಮತ್ತೊಂದೆಡೆ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಕಮಲ್ ನಾಥ್ ಕೂಡ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದು, 'ಇದುವರೆಗಿನ ಸುದ್ದಿ ಕಾಂಗ್ರೆಸ್‌ನ ಉತ್ತಮ ಪ್ರದರ್ಶನವಾಗಿದೆ. ಕರ್ನಾಟಕದಲ್ಲಿ ಖಂಡಿತಾ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ. ಇತರ ಪಕ್ಷಗಳೊಂದಿಗೆ ಕುದುರೆ ವ್ಯಾಪಾರದಲ್ಲಿ ತೊಡಗುವುದು ಬಿಜೆಪಿಯ ಜಾಯಮಾನ' ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Karnataka Election Results 2023: ಟ್ರೆಂಡ್ ಗಳಲ್ಲಿ ಭಾರಿ ಮುನ್ನಡೆಯ ಬಳಿಕ ಫುಲ್ ಜೋಶ್ ನಲ್ಲಿ ಕಾಂಗ್ರೆಸ್, ನಾಳೆ ಶಾಸಕಾಂಗ ಪಕ್ಷದ ಸಭೆ!

ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ
ಇದುವರೆಗೆ ಪ್ರಕಟಗೊಂಡ ಟ್ರೆಂಡ್‌ಗಳ ಪ್ರಕಾರ  ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಸಿಕ್ಕಿರುವುದು ನಿಚ್ಚಳವಾಗಿದೆ. ಈ ಸುದ್ದಿ ಬರೆಯುವ ತನಕ ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ, ಪಕ್ಷವು 118 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಆಡಳಿತಾರೂಢ ಬಿಜೆಪಿ ಕೇವಲ 75 ಸ್ಥಾನಗಳನ್ನು ತಲುಪಲು ಮಾತ್ರ ಸಾಧ್ಯವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಭಾರೀ ನಿರೀಕ್ಷೆ ಹೊಂದಿದ್ದರೂ, ಅದರ ಸಾಧನೆ ತೀರಾ ಕಳಪೆಯಾಗಿದ್ದು, ಕೇವಲ 24 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News