Karnataka Assembly Election Results: ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 18 ವಿಧಾನಸಭಾ ಕ್ಷೇತ್ರಗಳಿವೆ, ಇವುಗಳಲ್ಲಿ 8 ವಿಧಾನಸಭೆ ಕ್ಷೇತ್ರಗಳು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಗೆ ಬರುತ್ತವೆ. ಉಳಿದ 10 ವಿಧಾನಸಭೆ ಕ್ಷೇತ್ರಗಳು ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬೀಳುತ್ತವೆ. ಕಳೆದ ಬಾರಿಯ ಅಂದರೆ 2018ರ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಒಟ್ಟು 10 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಐದು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ತಮ್ಮ ಪ್ರಾಬಲ್ಯವನ್ನು ಮೆರೆದಿದ್ದವು. ಮತ್ತೊಂದೆಡೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವಿಷಯಕ್ಕೆ ಬಂದರೆ ಕಳೆದ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ತಲಾ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು.
ಅಂದರೆ ಒಟ್ಟಾರೆಯಾಗಿ ಬೆಳಗಾವಿ ಜಿಲ್ಲೆಯ ಒಟ್ಟು 18 ವಿಧಾನಸಭೆ ಕ್ಷೇತ್ರಗಳ ಕುರಿತು ಹೇಳುವುದಾದರೆ, 10 ಕ್ಷೇತ್ರಗಳಲ್ಲಿ ಬಿಜೆಪಿ ಜಯ ದಾಖಲಿಸಿದ್ದರೆ, ಕಾಂಗ್ರೆಸ್ ಪಕ್ಷ ಒಟ್ಟು 8 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. ಏಕೆಂದರೆ ಆಪರೇಷನ್ ಕಮಲದ ಪರಿಣಾಮವಶಾತ್ 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಗೋಕಾಕ್, ಅಥಣಿ ಹಾಗೂ ಕಾಗವಾಡ ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದವು. ಬೆಳಗಾವಿ ಜಿಲ್ಲೆಯ ಕುರಿತು ಹೇಳುವುದಾದರೆ, ಇಲ್ಲಿ ಪಕ್ಷಗಳಿಗಿಂತ ವೈಯಕ್ತಿಕ ಹಾಗೂ ಕುಟುಂಬ ವರ್ಚಸ್ಸೇ ದೊಡ್ಡದು ಎಂದು ಹೇಳಿದರೆ ತಪ್ಪಾಗಲಾರದು, ಏಕೆಂದರೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ 8 ವಿಧಾನ ಸಭೆ ಕ್ಷೇತ್ರಗಳ ಕುರಿತು ಹೇಳುವುದಾದರೆ. ಇಲ್ಲಿ ಸವದಿ ಕುಟುಂಬ, ಜಾರಕಿಹೊಳಿ ಕುಟುಂಬ, ಜೊಲ್ಲೆ ಕುಟುಂಬ, ಕತ್ತಿ ಕುಟುಂಬಗಳ ವರ್ಚಸ್ಸೇ ದೊಡ್ಡದಾಗಿದೆ.
ಇನ್ನೊಂದೆಡೆ ಬೆಳಗಾವಿ ಲೋಕಸಭೆ ವ್ಯಾಪ್ತಿಗೆ ಬರುವ 10 ವಿಧಾನಸಭೆ ಕ್ಷೇತ್ರಗಳ ಕುರಿತು ಮಾತನಾಡುವುದಾದರೆ ಲಕ್ಷ್ಮಿ ಹೆಬ್ಬಾಳ್ಕರ್, ಡಾ.ಮಹಾಂತೇಶ್ ಕಾಡಾಡಿ, ಸತೀಶ್ ಜಾರಕಿಹೊಳಿ, ವಿ.ಎಸ್ ಕೌಜಲಗಿ. ಅರವಿಂದ್ ದಳವಾಯಿ, ಅಶೋಕ್ ಪಟ್ಟನ್ ಗಳಂತಹ ಹಲವಾರು ಬಾರಿ ಚುನಾವಣೆಗಳಲ್ಲಿ ಗೆದ್ದು ತಮ್ಮ ವೈಯಕ್ತಿಕ ವರ್ಚ್ಚಸ್ಸನ್ನು ಹೆಚ್ಚಿಸಿಕೊಂಡಂತಹ ಘಟಾನುಘಟಿಗಳು ಈ ಬಾರಿಯೂ ಕೂಡ ಚುನಾವಣಾ ಕಣದಲ್ಲಿದ್ದಾರೆ.
ಜಾತಿವಾರು ಲೆಕ್ಕಾಚಾರದ ಕುರಿತು ಹೇಳುವುದಾದರೆ, ಜಿಲ್ಲೆಯಲ್ಲಿ ಲಿಂಗಾಯತ ಮತದಾರರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಪಕ್ಷದ ಲಿಂಗಾಯತ ಮತ್ತು ಸಾಕಷ್ಟು ವರ್ಚಸ್ಸು ಹೊಂದಿದ್ದ ನಾಯಕರ ಅಗಲಿಕೆಯ ಕಾಡುತ್ತಿದೆ. ಏಕೆಂದರೆ ಕೇಂದ್ರದಲ್ಲಿ ಸಚಿವರಾಗಿದ್ದ ಸುರೇಶ್ ಅಂಗಡಿ, ಸಚಿವರಾಗಿದ್ದ ಉಮೇಶ್ ಕತ್ತಿ ಹಾಗೂ ಆನಂದ್ ಮಾಮನಿಯಂತಹ ಘಟಾನುಘಟಿ ನಾಯಕರ ಅಗಲಿಕೆ ಬಿಜೆಪಿಯ ಹುಮ್ಮಸ್ಸನ್ನು ತುಸು ಕುಗ್ಗಿಸಿದೆ ಎಂದರೆ ತಪ್ಪಾಗಲಾರದು. ಆದರೂ ಕೂಡ ಪಕ್ಷ ಲಿಂಗಾಯತ ಮತದಾರರು ಹಂಚಿಹೋಗಬಾರದು ಎಂಬ ಉದ್ದೇಶದಿಂದ ಒಂದೆಡೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಜಿಲ್ಲೆಯಲ್ಲಿ ಪ್ರಚಾರಕ್ಕೆ ಇಳಿಸಿದರೆ ಇನ್ನೊಂದೆಡೆ ಬಸವರಾಜ್ ಪಾಟೀಲ್ ಯತ್ನಾಳ್ ಅವರನ್ನು ಕೂಡ ಜಿಲ್ಲೆಗೆ ಕಳುಹಿಸಿದೆ. ಪಕ್ಷ ತೊರೆದು ಹೋದ ಲಕ್ಷ್ಮಣ್ ಸವದಿ ಅವರಂತಹ ನಾಯಕರುಗಳ ಪರಿಣಾಮ ಇತರೆ ಕ್ಷೇತ್ರಗಳ ಮೇಲೆ ಉಂಟಾಗದಂತೆ ತಡೆಯುವ ಜವಾಬ್ದಾರಿ ಇವರಿಗೆ ನೀಡಲಾಗಿತ್ತು. ಬನ್ನಿ ಬೆಳಗಾವಿ ಜಿಲ್ಲೆಯಲ್ಲಿ ಬರುವ ಒಟ್ಟು 18 ವಿಧಾನಸಭೆ ಕ್ಷೇತ್ರಗಳಲ್ಲಿ ಪಕ್ಷಗಳ ಬಲಾಬಲ ಕಳೆದ ಅಂದರೆ 2018 ಚುನಾವಣೆಯಲ್ಲಿ ಹೇಗಿತ್ತು ಮತ್ತು ಈ ಬಾರಿ ಈ ಜಿಲ್ಲೆಯಲ್ಲಿ ಯಾರು ಯಾರು ಚುನಾವಣಾ ಅಖಾಡದಲ್ಲಿರಲಿದ್ದಾರೆ ನೋಡೋಣ
ಬೆಳಗಾವಿ ಜಿಲ್ಲೆಯ ಕುರುಕ್ಷೇತ್ರ
ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು -185
ಒಟ್ಟು ಮತದಾರರ ಸಂಖ್ಯೆ - 19,07,485
ಒಟ್ಟು ಪುರುಷ ಮತದಾರರು- 19, 71,642
ಒಟ್ಟು ಮಹಿಳಾ ಮತದಾರರು- 19, 35, 701,
ಲೈಂಗಿಕ ಅಲ್ಪಸಂಖ್ಯಾತರು- 142
ಜಿಲ್ಲೆಯಲ್ಲಿ ಬರುವ ವಿವಿಧ ಕ್ಷೇತ್ರಗಳ ವಿಸ್ತ್ರತ ಮಾಹಿತಿ
1.ನಿಪ್ಪಾಣಿ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,09,099
ಪುರುಷ ಮತದಾರರ ಸಂಖ್ಯೆ-1,06,749
ಮಹಿಳಾ ಮತದಾರರ ಸಂಖ್ಯೆ-1,02,346
ವಿಧಾನಸಭೆ ಚುನಾವಣೆ 2018ರ ಫಲಿತಾಂಶ
BJP- ಶಶಿಕಲಾ ಜೊಲ್ಲೆ ಅಣ್ಣಾಸಾಹೇಬ್ - 87,006 ಮತಗಳು - ಅಂತರ: 8506(ಮತದಾನದ %-50.51)
INC- ಕೆ ಪಾಂಡುರಂಗ ಪಾಟೀಲ್- 78,500 ಮತಗಳು (ಮತದಾನದ %-45.57)
BSP- ರಮೇಶ್ ಈಶ್ವರ್ ಕಾಮತ್- 2,476(1.44%)
2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಕಾಂಗ್ರೆಸ್- ಕಾಕಾಸಾಹೇಬ್ ಪಾಟೀಲ್
ಜೆಡಿಎಸ್-ರಾಜಾರಾಂ ಅಲಿಯಾಸ್ ರಾಜು ಪವಾರ್
ಬಿಜೆಪಿ-ಜೊಲ್ಲೆ ಶಶಿಕಲಾ ಅಣ್ಣಾಸಾಹೇಬ್,
ಆಪ್-ರಾಜೇಶ್ ಬಸವಣ್ಣ
ಎನ್ಸಿಪಿ-ಉತ್ತಮ್ ರಾವೋಸಾಹೇಬ್ ಪಾಟೀಲ್,
2. ಚಿಕ್ಕೋಡಿ ಸದಲಗಾ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,06,262
ಪುರುಷ ಮತದಾರರ ಸಂಖ್ಯೆ-1,04,951
ಮಹಿಳಾ ಮತದಾರರ ಸಂಖ್ಯೆ-1,01,299
ವಿಧಾನಸಭೆ ಚುನಾವಣೆ 2018ರ ಫಲಿತಾಂಶ
INC- ಗಣೇಶ್ ಪ್ರಕಾಶ್ ಹುಕ್ಕೇರಿ- 91,467- ಅಂತರ: 10569(51.04%)
BJP- ಅಣ್ಣಾಸಾಹೇಬ್ ಶಂಕರ್ ಜೊಲ್ಲೆ- 80,898 (45.14%)
BSP- ಸದಾಶಿವಪ್ಪ ಮಾರುತಿ ವಾಲ್ಕೆ- 2,935 (1.64%)
2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ-ಕತ್ತಿ ರಮೇಶ್ ವಿಶ್ವನಾಥ್,
ಕಾಂಗ್ರೆಸ್- ಗಣೇಶ್ ಪ್ರಕಾಶ್ ಹುಕ್ಕೇರಿ
ಜೆಡಿಎಸ್-ಸುಹಾಸ್ ಸದಾಶಿವಪ್ಪ ವಲ್ಕೆ
ಬಿಎಸ್ಪಿ- ಅರ್ಜುನ್ ಬಂಡು ಮಾನೆ
ಆಪ್- ಶ್ರೀಕಾಂತ್ ಮೂದಗೌಡ್ ಪಾಟೀಲ್,
3. ಅಥಣಿ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,10,031
ಪುರುಷ ಮತದಾರರ ಸಂಖ್ಯೆ-1,08,709
ಮಹಿಳಾ ಮತದಾರರ ಸಂಖ್ಯೆ-1,01,312
ವಿಧಾನಸಭೆ ಚುನಾವಣೆ 2018ರ ಫಲಿತಾಂಶ
INC- ಮಹೇಶ್ ಈರನಗೌಡ ಕುಮಟಳ್ಳಿ - 82,094 - ಅಂತರ: 2331(48.13%)
BJP-ಲಕ್ಷ್ಮಣ ಸಂಗಪ್ಪ ಸವದಿ- 79,763
JD(S)- ಗಿರೀಶ್ ಕೇದಾರಪ್ಪ ಬೂಟಾಳಿ-3,381 (1.98%)
2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ-ಮಹೇಶ್ ಈರನಗೌಡಾ ಕುಮಠಳ್ಳಿ,
ಕಾಂಗ್ರೆಸ್- ಲಕ್ಷ್ಮಣ ಸಂಗಪ್ಪ ಸೌದಿ
ಜೆಡಿಎಸ್-ಶಶಿಕಾಂತ್ ಪಡಸಲಗಿ
ಆಪ್- ಸಂಪತ್ ಕುಮಾರ್ ಶೆಟ್ಟಿ,
4.ಕಾಗವಾಡ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-1,78,735
ಪುರುಷ ಮತದಾರರ ಸಂಖ್ಯೆ-92,902
ಮಹಿಳಾ ಮತದಾರರ ಸಂಖ್ಯೆ-85,820
ವಿಧಾನಸಭೆ ಚುನಾವಣೆ 2018ರ ಫಲಿತಾಂಶ
INC- ಶ್ರೀಮಂತ ಬಾಳಾಸಾಹೇಬ್ ಪಾಟೀಲ್ - 83,060- ಅಂತರ: 32942(56.99%)
BJP- ಭರಮಗೌಡ ಅಲಗೌಡ ಕಾಗೆ- 50,118 (34.39%)
JD(S)- ಮಲ್ಲಪ್ಪ ಪ್ಯಾರಿಸ್ ಮಗೆನ್ನವರ- 7,337
2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ-ಶ್ರೀಮಂತ್ ಬಾಲಾಸಾಹೇಬ್ ಪಾಟೀಲ್
ಕಾಂಗ್ರೆಸ್- ಭರಮಗೊಂಡ ಅಲಗೊಂಡ ಕಾಗೆ
ಜೆಡಿಎಸ್-ಮಲ್ಲಿಕಾರ್ಜುನ್ ಶ್ರೀಶೈಲ್ ಗುಂಜಿಗಾವಿ
ಆಪ್- ರಜಾಕ್ ದಸ್ತಗೀರ್ ಮುಲ್ಲಾ,
5. ಕುಡಚಿ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-1,76,708
ಪುರುಷ ಮತದಾರರ ಸಂಖ್ಯೆ-91,118
ಮಹಿಳಾ ಮತದಾರರ ಸಂಖ್ಯೆ-85,568
ವಿಧಾನಸಭೆ ಚುನಾವಣೆ 2018ರ ಫಲಿತಾಂಶ
BJP- ಪಿ. ರಾಜೀವ್- 67,781 - ಅಂತರ: 15008(49.60%)
INC- ಅಮಿತ್ ಶಾಮಾ ಘಾಟಗೆ- 52,773(38.62 %)
IND- ಸುರೇಶ್ ಗುರಪ್ಪ ತಳವಾರ್- 6,731(4.93 %)
2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ-ಪಿ. ರಾಜೀವ್
ಕಾಂಗ್ರೆಸ್- ಮಹೇಂದ್ರ ಕಲ್ಲಪ್ಪ ತಮ್ಮಣ್ಣವರ್
ಜೆಡಿಎಸ್-ಆನಂದ್ ವಿ ಮಾಳಗಿ
ಬಿಎಸ್ಪಿ - ಕಡರೊಳ್ಳಿ ಚಂದ್ರಕಾಂತ,
6. ರಾಯಬಾಗ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-1,91,690
ಪುರುಷ ಮತದಾರರ ಸಂಖ್ಯೆ-99,687
ಮಹಿಳಾ ಮತದಾರರ ಸಂಖ್ಯೆ-91,988
ವಿಧಾನಸಭೆ ಚುನಾವಣೆ 2018ರ ಫಲಿತಾಂಶ
BJP-ಐಹೊಳೆ ದುರ್ಯೋಧನ ಮಹಾಲಿಂಗಪ್ಪ-67,502 ಅಂತರ: 16548(44.88%)
INC- ಪ್ರದೀಪ್‌ಕುಮಾರ್ ರಾಮು ಮಳಗೆ- 50,954(33.88 %)
IND- ಮಹಾವೀರ್ ಮೋಹಿತೆ-24,627 (16.37%)
2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ-ಐಹೊಳೆ ದುರ್ಯೋಧನ್ ಮಹಾಲಿಂಗಪ್ಪ
ಕಾಂಗ್ರೆಸ್- ಮಹಾವೀರ್ ಲಕ್ಷ್ಮಣ ಮೋಹಿತೆ
ಜೆಡಿಎಸ್-ಪ್ರದೀಪ್ ಕುಮಾರ್ ಆರ್. ಮಾಳಗಿ
ಆಪ್ - ಶಂಕರ್ ಸುಬ್ರಾವ್ ಖಾತೆದಾರ್
7. ಹುಕ್ಕೇರಿ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-1,92,032
ಪುರುಷ ಮತದಾರರ ಸಂಖ್ಯೆ-97,035
ಮಹಿಳಾ ಮತದಾರರ ಸಂಖ್ಯೆ-94,988
ವಿಧಾನಸಭೆ ಚುನಾವಣೆ 2018ರ ಫಲಿತಾಂಶ
BJP- ಉಮೇಶ್ ವಿಶ್ವನಾಥ್ ಕತ್ತಿ- 83,588- ಅಂತರ: 15385(52.94%)
INC-ಅಪ್ಪಯ್ಯಗೌಡ ಬಸಗೌಡ ಪಾಟೀಲ್-68,203 (43.20%)
JD(S)- ಮಲ್ಲಿಕಾರ್ಜುನ್ ಬಾಬುಗೌಡ ಪಾಟೀಲ್ - 1,426 (0.90%)
2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ-ಕತ್ತಿ ನಿಖಿಲ್ ಉಮೇಶ್
ಕಾಂಗ್ರೆಸ್- ಎ. ಬಿ ಪಾಟೀಲ್
ಜೆಡಿಎಸ್- ಬಸವರಾಜ್ ಮಾಲಗೋಂಡಾ ಪಾಟೀಲ್
ಬಿ ಎಸ್ಪಿ - ಕಾಂಬಳೆ ಬಾವರಾಜ್ ಕಡಪ್ಪ
ಆಪ್- ಮಂಜುನಾಥ್ ಬಿ ಗಡೆನ್ನವರ್
8. ಆರಭಾವಿ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,28,322
ಪುರುಷ ಮತದಾರರ ಸಂಖ್ಯೆ-1,14,245
ಮಹಿಳಾ ಮತದಾರರ ಸಂಖ್ಯೆ-1,14,061
ವಿಧಾನಸಭೆ ಚುನಾವಣೆ 2018ರ ಫಲಿತಾಂಶ
BJP- ಬಾಲಚಂದ್ರ ಲಕ್ಷ್ಮಣರಾವ್ ಜಾರಕಿಹೊಳಿ- 96,144 - ಅಂತರ: 47328(54.34%)
JD(S)- 48,816(27.59%)
INC- ಅರವಿಂದ ಮಹಾದೇವರಾವ್ ದಳ್ವಾಯಿ -23,253 (13.14%)
2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ-ಭಾಲಚಂದ್ರ ಲಕ್ಷಮಣರಾವ್ ಜಾರಕಿಹೊಳಿ
ಕಾಂಗ್ರೆಸ್- ಅರವಿಂದ್ ಮಹಾದೇವ್ ರಾವ್ ದಳವಾಯಿ
ಜೆಡಿಎಸ್- ಪ್ರಕಾಶ್ ರಾಮಪ್ಪ ಕಳಶೆಟ್ಟಿ
ಬಿ ಎಸ್ಪಿ - ಬಸವಂತ್ ಈರಪ್ಪ ವಡೆರ್
ಆಪ್- ಈಜಾಜ್ ಅಹ್ಮದ್ ಐ ಕೊಟ್ಟಲಗಿ
9.ಗೋಕಾಕ್
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,38,221
ಪುರುಷ ಮತದಾರರ ಸಂಖ್ಯೆ-1,18,115
ಮಹಿಳಾ ಮತದಾರರ ಸಂಖ್ಯೆ-1,20,091
ವಿಧಾನಸಭೆ ಚುನಾವಣೆ 2018ರ ಫಲಿತಾಂಶ
INC- ಜಾರಕಿಹೊಳಿ ರಮೇಶ್ ಲಕ್ಷ್ಮಣರಾವ್- 90,249-ಅಂತರ: 14280(51.87%)
BJP- ಅಶೋಕ್ ನಿಂಗಯ್ಯಸ್ವಾಮಿ ಪೂಜಾರಿ-75,969(43.67%)
JD(S)- ಕರೆಪ್ಪ ಲಕ್ಕಪ್ಪ ತಳವಾರ್- 1,553(0.89%)
2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ-ರಮೇಶ್ ಲಕ್ಷಮಣರಾವ್ ಜಾರಕಿಹೊಳಿ
ಕಾಂಗ್ರೆಸ್- ಕದಡಿ ಮಹಾಂತೆಶ್ ಕಲ್ಲಪ್ಪ
ಬಿ ಎಸ್ಪಿ - ಬಿ ಲೋಹಿತ್
ಆಪ್- ಜೆಎಂ ಕರೆಪ್ಪಗೊಳ್
10. ಯಮಕನಮರಡಿ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-1,85,780
ಪುರುಷ ಮತದಾರರ ಸಂಖ್ಯೆ-93,531
ಮಹಿಳಾ ಮತದಾರರ ಸಂಖ್ಯೆ-92,239
ವಿಧಾನಸಭೆ ಚುನಾವಣೆ 2018ರ ಫಲಿತಾಂಶ
INC- ಸತೀಶ್ ಎಲ್. ಜಾರಕಿಹೊಳಿ- 73,512 - ಅಂತರ: 2850(49.1%)
BJP- ಅಸ್ಟಗಿ ಮಾರುತಿ ಮಲ್ಲಪ್ಪ- 70,662(47.26 %)
JD(S)- ಶಂಕರ್ ಭರಮ ಗಸ್ತಿ- 1,837 (1.23%)
2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ-ಬಸವರಾಜ್ ಹುಂದ್ರಿ
ಕಾಂಗ್ರೆಸ್- ಸತೀಶ್ ಲಕ್ಷ್ಮಣ್ ರಾವ್ ಜಾರಕಿಹೊಳಿ
ಬಿ ಎಸ್ಪಿ - ಬಿ ಲೋಹಿತ್
ಆಪ್- ಜೆಎಂ ಕರೆಪ್ಪಗೊಳ್
11 ಬೆಳಗಾವಿ ಉತ್ತರ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,29,511
ಪುರುಷ ಮತದಾರರ ಸಂಖ್ಯೆ-1,14,437
ಮಹಿಳಾ ಮತದಾರರ ಸಂಖ್ಯೆ-1,15,049
ವಿಧಾನಸಭೆ ಚುನಾವಣೆ 2018ರ ಫಲಿತಾಂಶ
BJP- ಅನಿಲ್ ಎಸ್. ಬೆನಕೆ- 79,060- ಅಂತರ: 17267(53.63%)
INC- ಫೈರೋಜ್ ನುರುದ್ದೀನ್ ಸೇಠ್- 61,793 (41.91%)
IND- ಬಾಳಾಸಾಹೇಬ್ ಶಿವಾಜಿರಾವ್ ಕಾಕತ್ಕರ್- 1,869 (1.27%)
JD(S)- ಅಶ್ಫಾಕ್ ಅಹ್ಮದ್ ಮಡಕಿ- 1,143 (0.78%)
2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ-ಡಾ.ರವಿ ಬಿ ಪಾಟೀಲ್
ಕಾಂಗ್ರೆಸ್- ಆಸಿಫ್ ಉರ್ಫ್ ರಾಜು ಸೇಠ್
ಜೆಡಿಎಸ್- ಶಿವಾನಂದ್ ಮೂಗಳಿಹಾಳ್
ಆಪ್- ರಾಜಕುಮಾರ್ ಟೋಪನ್ನವರ್
12 ಬೆಳಗಾವಿ ದಕ್ಷಿಣ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,30,803
ಪುರುಷ ಮತದಾರರ ಸಂಖ್ಯೆ-1,16,736
ಮಹಿಳಾ ಮತದಾರರ ಸಂಖ್ಯೆ-1,14,004
ವಿಧಾನಸಭೆ ಚುನಾವಣೆ 2018ರ ಫಲಿತಾಂಶ
BJP- ಅಭಯ್ ಪಾಟೀಲ್- 84,498- ಅಂತರ: 58692 (57.59%)
INC- ಎಂ.ಡಿ. ಲಕ್ಷ್ಮೀನಾರಾಯಣ್ (ಅಣ್ಣಯ್ಯ) - 25,806 (17.59%)
IND- ಪ್ರಕಾಶ್ ಅಪ್ಪಾಜಿ ಮರಗಲೆ- 21,537 (14.68%)
2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ-ಅಭಯ ಪಾಟೀಲ್
ಕಾಂಗ್ರೆಸ್- ಪ್ರಭಾವತಿ ಬಿ ಮಾಸ್ತಮರಡಿ
ಜೆಡಿಎಸ್- ಶ್ರೀನಿವಾಸ್ ಯಲ್ಲಪ್ಪಾ ತಾಳುಕ್ದಾರ್
ಆಪ್- ನೂರಹಮ್ಮದ್ ಕುತುಬುದ್ದೀನ್ ಮುಲ್ಲಾ
13. ಬೆಳಗಾವಿ ಗ್ರಾಮಾಂತರ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,34,076
ಪುರುಷ ಮತದಾರರ ಸಂಖ್ಯೆ-1,19,656
ಮಹಿಳಾ ಮತದಾರರ ಸಂಖ್ಯೆ-1,14,401
ವಿಧಾನಸಭೆ ಚುನಾವಣೆ 2018ರ ಫಲಿತಾಂಶ
INC- ಲಕ್ಷ್ಮೀ ಆರ್. ಹೆಬ್ಬಾಳ್ಕರ್ -1,02,040- ಅಂತರ: 51724(54.74%)
BJP- ಸಂಜಯ್ ಬಿ. ಪಾಟೀಲ್- 50,316 (26.99%)
IND- ಕಿಣೇಕರ್ ಮನೋಹರ್ ಕಾಳಪ್ಪ - 23,776 (12.75%)
JD(S)- ಪಾಟೀಲ್ ಶಿವನಗೌಡ ಎಸ್ - 3,794(2.04%)
2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ-ನಾಗೇಶ್ ಅನ್ನಪ್ಪ ಮನೋಲ್ಕರ್
ಕಾಂಗ್ರೆಸ್- ಲಕ್ಷ್ಮಿ ಆರ್. ಹೆಬ್ಬಾಳ್ಕರ್
ಜೆಡಿಎಸ್- ಶಂಕರ್ ಗೌಡಾ ಪಾಟೀಲ್
ಆಪ್- ಟಿ ಮಾಲತಿ
14. ಖಾನಾಪೂರ್
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,04,694
ಪುರುಷ ಮತದಾರರ ಸಂಖ್ಯೆ-1,06,465
ಮಹಿಳಾ ಮತದಾರರ ಸಂಖ್ಯೆ-98,219
ವಿಧಾನಸಭೆ ಚುನಾವಣೆ 2018ರ ಫಲಿತಾಂಶ
INC- ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್- 36,649-ಅಂತರ: 5133(23.76)%
BJP- ವಿಠ್ಠಲ್ ಹಲಗೇಕರ್- 31,516(20.44%)
JD(S)- ಭಗ್ವಾನ್ ನಾಸೀರ್ ಪಪುಲ್‌ಸಾಬ್- 27,272 (17.68%)
2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ-ಇತಲ್ ಸೋಮಣ್ಣ ಹಲಗೆಕರ್
ಕಾಂಗ್ರೆಸ್- ಡಾ. ಅಂಜಲಿ ನಿಂಬಾಳ್ಕರ್
ಜೆಡಿಎಸ್- ಬಾಗ್ವಾನ್ ನಾಸಿರ್ ಪಪ್ಪುಲ್ಸಾಬ್
15. ಕಿತ್ತೂರು
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ- 1,86,195
ಪುರುಷ ಮತದಾರರ ಸಂಖ್ಯೆ-94,884
ಮಹಿಳಾ ಮತದಾರರ ಸಂಖ್ಯೆ-91,304
ವಿಧಾನಸಭೆ ಚುನಾವಣೆ 2018ರ ಫಲಿತಾಂಶ
BJP- ದೊಡ್ಡಗೌಡರ ಮಹಾಂತೇಶ ಬಸವಂತರಾಯ -73,155- ಅಂತರ: 32862(49.26)%
INC- ಇನಾಮದಾರ ದಾನಪ್ಪಗೌಡ ಬಸನಗೌಡ- 40,293 (27.13%)
IND- ಬಾಬಾಸಾಹೇಬ ದೇವನಗೌಡ ಪಾಟೀಲ - 25,366 (17.08%)
JD(S)- ಸುರೇಶ ಶಿವರುದ್ರಪ್ಪ ಮಾರಿಹಾಳ್- 3,755 (2.53 %)
2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ-ದೊಡ್ಡಗೌಡರ್ ಮಹಾಂತೇಷ್ ಬಸವಂತರಾಯ್
ಕಾಂಗ್ರೆಸ್- ಬಾಬಸಾಹೇಬ್ ಪಾಟೀಲ್
ಜೆಡಿಎಸ್- ಅಶ್ವಿನಿ ಸಿಂಗಯ್ಯಾ ಪೂಜೇರ್
ಆಪ್- ಆನಂದ್ ಹಂಪ್ಪನ್ನವರ್
16. ಬೈಲಹೊಂಗಲ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-1,82,491
ಪುರುಷ ಮತದಾರರ ಸಂಖ್ಯೆ-92,484
ಮಹಿಳಾ ಮತದಾರರ ಸಂಖ್ಯೆ-90,004
ವಿಧಾನಸಭೆ ಚುನಾವಣೆ 2018ರ ಫಲಿತಾಂಶ
INC- ಕೌಜಲಗಿ ಮಹಾಂತೇಶ ಶಿವಾನಂದ್-47,040- ಅಂತರ: 5122(32.49%)
IND- ಜಗದೀಶ್ ಚನ್ನಪ್ಪ ಮೆಟಗುಡ್- 41,918(28.95%)
BJP- ವಿಶ್ವನಾಥ ಈರನಗೌಡ ಪಾಟೀಲ- 37,498 (25.90%)
JD(S)- ಶಂಕರ್ ಭರಮಪ್ಪ ಮಾಡಲಗಿ- 13,548 (9.36%)
2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ-ಜಗದೀಶ್ ಚೆನ್ನಪ್ಪ ಮೆಟಗುಡ್
ಕಾಂಗ್ರೆಸ್- ಕೌಜಲಾಗಿ ಮಹಾಂಟೇಶ್ ಶಿವಾನಂದ್
ಜೆಡಿಎಸ್- ಶಂಕರ್ ಭರ್ಮಪ್ಪ ಮದಲಗಿ
ಆಪ್- ಬಸವನಗೌಡ ಎಂ ಚಿಕ್ಕಣಗೌಡರ್
ಇದನ್ನೂ ಓದಿ-ಸಾಂಸ್ಕೃತಿಕ ನಗರಿ ಮೈಸೂರಿನ ಒಟ್ಟು 11 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವ ಪಕ್ಷಕ್ಕೆ ಹೆಚ್ಚು ಸ್ಥಾನ!
17. ಸವದತ್ತಿ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-1,89,556
ಪುರುಷ ಮತದಾರರ ಸಂಖ್ಯೆ-95,907
ಮಹಿಳಾ ಮತದಾರರ ಸಂಖ್ಯೆ-93,648
ವಿಧಾನಸಭೆ ಚುನಾವಣೆ 2018ರ ಫಲಿತಾಂಶ
BJP- ಆನಂದ ಅಲಿಯಾಸ್ ವಿಶ್ವನಾಥ್ ಚಂದ್ರಶೇಖರ್ ಮಾಮನಿ-62,480- ಅಂತರ: 6291(40.65%)
IND- ಆನಂದ್ ಚೋಪ್ರಾ- 56,189 (36.56%)
INC- ವಿಶ್ವಾಸ್ ವಸಂತ್ ವೈದ್ಯ- 30,018 (19.53 %)
JD(S)- ದೊಡ್ಡಗೌಡ ಫಕೀರಗೌಡ ಪಾಟೀಲ- 758 (0.49%)
2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ-ಮಾಮನಿ ರತ್ನಾ ಆನಂದ್ ಅಲಿಯಾಸ್ ವಿಶ್ವನಾಥ್
ಕಾಂಗ್ರೆಸ್- ವಿಶ್ವಾಸ್ ವಸಂತ್ ವೈದ್ಯ
ಜೆಡಿಎಸ್- ಚೋಪ್ರಾ ಸೌರವ್ ಆನಂದ್
ಆಪ್- ಬಾಪೂಗೋಂಡಾ ಸಿದಗೋಂಡಾ ಪಾಟೀಲ್
18. ರಾಮದುರ್ಗ್
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-1,97,637
ಪುರುಷ ಮತದಾರರ ಸಂಖ್ಯೆ-1,01,020
ಮಹಿಳಾ ಮತದಾರರ ಸಂಖ್ಯೆ-96,605
ವಿಧಾನಸಭೆ ಚುನಾವಣೆ 2018ರ ಫಲಿತಾಂಶ
BJP - ಮಹಾದೇವಪ್ಪ ಶಿವಲಿಂಗಪ್ಪ ಯಾದವಾಡ - 68,349-ಅಂತರ: 2875(45.17%)
INC- ಅಶೋಕ್ ಮಹದೇವಪ್ಪ ಪಟ್ಟಣ- 65,474 (43.27%)
IND- ಪಂಚಕಟ್ಟಿಮಠ ರಮೇಶ್ ಚಂದ್ರಯ್ಯ- 8,427( 5.57%)
JD(S)- ಜಾವೀದಸಾಬ್. ಎಂ- 2,266(1.50%)
2023 ರ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ-ಚಿಕ್ಕ ರೇವಣ್ಣ
ಕಾಂಗ್ರೆಸ್- ಅಶೋಕ್ ಪಟ್ಟನ್
ಜೆಡಿಎಸ್- ಪ್ರಕಾಶ್ ಮುಧೋಲ್
ಆಪ್- ಮಲಿಕ್ ಜಾನ್ ನವಾಬ್
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.