Zee Kannada News Opinion Poll Live: ಡಬಲ್ ಇಂಜಿನ್ ಸರ್ಕಾರ, ಭಾರತ ಜೋಡೋ ಯಾತ್ರೆ , ಮೋದಿ ಅಲೆ; ಮತದಾರ ಪ್ರಭು ಹೇಳುವುದೇನು ?

ಬಿಜೆಪಿ ಪಕ್ಷವು ಆರಂಭದಿಂದಲೂ ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯಕ್ಕೆ ಅನುಕೂಲಕರವಾಗಲಿದೆ ಎನ್ನುವ ಅಭಿಪ್ರಾಯವನ್ನು ಹೇಳುತ್ತಲೇ ಬಂದಿದೆ. ಇದೆ ಮಾತಿನಂತೆ ಅದು ಈ ಬಾರಿಯ ಚುನಾವಣಾ ಪ್ರಚಾರದಲ್ಲಿಯೂ ಡಬಲ್ ಇಂಜಿನ್ ಸರ್ಕಾರದಿಂದ ಪ್ರಗತಿ ತ್ವರಿತಗತಿಯಲ್ಲಿ ಸಾಗಲಿದೆ ಎನ್ನುವುದು ಸ್ಪಷ್ಟವಾದಂತಹ ವಾದವಾಗಿದೆ.

Written by - Zee Kannada News Desk | Last Updated : May 1, 2023, 10:31 PM IST
  • ಬಿಜೆಪಿ ಪಕ್ಷವು ಆರಂಭದಿಂದಲೂ ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯಕ್ಕೆ ಅನುಕೂಲಕರವಾಗಲಿದೆ ಎನ್ನುವ ಅಭಿಪ್ರಾಯವನ್ನು ಹೇಳುತ್ತಲೇ ಬಂದಿದೆ.
  • ಡಬಲ್ ಇಂಜಿನ್ ಸರ್ಕಾರದಿಂದ ಪ್ರಗತಿ ತ್ವರಿತಗತಿಯಲ್ಲಿ ಸಾಗಲಿದೆ ಎನ್ನುವುದು ಅದರ ವಾದವಾಗಿದೆ.
  • ರಾಹುಲ್ ಗಾಂಧಿಯವರ ಭಾರತ ಜೋಡೋ ಯಾತ್ರೆ ಕುರಿತಾಗಿ ಜನರ ಅಭಿಪ್ರಾಯವನ್ನು ಜೀ ಕನ್ನಡ ನ್ಯೂಸ್ ಸಮೀಕ್ಷೆಯಲ್ಲಿ ಸಂಗ್ರಹಿಸಿದೆ.
Zee Kannada News Opinion Poll Live: ಡಬಲ್ ಇಂಜಿನ್ ಸರ್ಕಾರ, ಭಾರತ ಜೋಡೋ ಯಾತ್ರೆ , ಮೋದಿ ಅಲೆ; ಮತದಾರ ಪ್ರಭು ಹೇಳುವುದೇನು ? title=

ಬೆಂಗಳೂರು: ಬಿಜೆಪಿ ಪಕ್ಷವು ಆರಂಭದಿಂದಲೂ ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯಕ್ಕೆ ಅನುಕೂಲಕರವಾಗಲಿದೆ ಎನ್ನುವ ಅಭಿಪ್ರಾಯವನ್ನು ಹೇಳುತ್ತಲೇ ಬಂದಿದೆ. ಇದೆ ಮಾತಿನಂತೆ ಅದು ಈ ಬಾರಿಯ ಚುನಾವಣಾ ಪ್ರಚಾರದಲ್ಲಿಯೂ ಡಬಲ್ ಇಂಜಿನ್ ಸರ್ಕಾರದಿಂದ ಪ್ರಗತಿ ತ್ವರಿತಗತಿಯಲ್ಲಿ ಸಾಗಲಿದೆ ಎನ್ನುವುದು ಅದರ ಸ್ಪಷ್ಟವಾದಂತಹ ವಾದವಾಗಿದೆ.ಡಬಲ್ ಇಂಜಿನ್ ಸರ್ಕಾರದ ಜೊತೆಗೆ ಮೋದಿ ಪ್ರಭಾವ ಹಾಗೂ ರಾಹುಲ್ ಗಾಂಧಿಯವರ ಭಾರತ ಜೋಡೋ ಯಾತ್ರೆ ಕುರಿತಾಗಿ ಜನರ ಅಭಿಪ್ರಾಯವನ್ನು ಜೀ ಕನ್ನಡ ನ್ಯೂಸ್ ಸಮೀಕ್ಷೆಯಲ್ಲಿ ಸಂಗ್ರಹಿಸಿದೆ.

ಡಬಲ್ ಇಂಜಿನ್ ಸರ್ಕಾರ:

ಈ ಹಿನ್ನೆಲೆಯಲ್ಲಿ ಸಮೀಕ್ಷೆ ವೇಳೆ ಜನರಿಗೆ  ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯಕ್ಕೆ ಎಷ್ಟು ಅನುಕೂಲಕರವಾಗಲಿದೆ ಎನ್ನುವ ಪ್ರಶ್ನೆಯನ್ನು ಇಟ್ಟಾಗ ಇದಕ್ಕೆ ಶೇ 34 ರಷ್ಟು ಜನರು ತುಂಬಾ ಲಾಭವಾಗಲಿದೆ ಎಂದು ಹೇಳಿದರೆ, ಶೇ 45 ರಷ್ಟು ಜನರು ಸ್ವಲ್ಪ ಲಾಭವಾಗಲಿದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು, ಇನ್ನೂ ಶೇ 21 ರಷ್ಟು ಜನರು ಮಾತ್ರ ಯಾವುದೇ ಲಾಭವೇ ಆಗಿಲ್ಲ ಎಂದು ಹೇಳಿದರು.

ಗೇಮ್ ಚೇಂಜರ್ ಆಗ್ತಾರಾ ಮೋದಿ?

ಅದು ವಿಧಾನಸಭೆ ಚುನಾವಣೆ ಆಗಿರಲಿ ಅಥವಾ ಲೋಕಸಭಾ ಚುನಾವಣೆ ಆಗಿರಲಿ ಬಿಜೆಪಿ ಮೋದಿ ಅಲೆಯ ಮೇಲೆ ಚುನಾವಣೆಯನ್ನು ಎದುರಿಸುವುದು ಮತ್ತು ಅದನ್ನು ಒಂದು ರೀತಿ ಟ್ರಂಪ್ ಕಾರ್ಡ್ ಎನ್ನುವಂತೆ ಬಳಸಿಕೊಳ್ಳುವುದನ್ನು ನಾವು ನೋಡಿರುತ್ತೇವೆ.ಇದೆ ವಿಚಾರವಾಗಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಮತ್ತೊಮ್ಮೆ ಗೇಮ್ ಚೇಂಜರ್ ಆಗ್ತಾರಾ ಎನ್ನುವ ವಿಚಾರವನ್ನು ಜನರ ಮುಂದೆ ಇಟ್ಟಾಗ ಇದಕ್ಕೆ ಶೇ 44 ಜನರು ಖಂಡಿತಾ ಆಗುತ್ತಾರೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರೆ ಇನ್ನೂ ಶೇ 34 ರಷ್ಟು ಜನರು ಸ್ವಲ್ಪ ಮಟ್ಟಿಗೆ ಆಗಬಹುದು ಎಂದು ಹೇಳಿದ್ದಾರೆ, ಶೇ 22 ರಷ್ಟು ಜನರು ಯಾವುದೇ ವ್ಯತ್ಯಾಸವಾಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮೋಡಿ ಮಾಡುತ್ತಾ ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆ?

ಭಾರತದ ರಾಜಕಾರಣದಲ್ಲಿ ರಾಜಕೀಯ ಯಾತ್ರೆಗಳಿಗೆ ವಿಶೇಷ ಸ್ಥಾನವಿದೆ, ಹೌದು ಬಹುತೇಕ ರಾಜಕೀಯ ಪಕ್ಷಗಳು ತಮ್ಮ ಗೆಲುವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಹಿಂದೆ ಹಲವಾರು ಬಾರಿ ಈ ಪ್ರಯತ್ನವನ್ನು ಮಾಡಿವೆ. ಆ ನಿಟ್ಟಿನಲ್ಲಿ ಈ ಬಾರಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕೈಗೊಂಡಿರುವ ಭಾರತ ಜೋಡೋ ಯಾತ್ರೆ ರಾಜ್ಯದ ವಿಧಾನಸಭಾ ಚುನಾವಣೆಯ ಮೇಲೆ ಬಿರುವ ಪ್ರಭಾವದ ವಿಚಾರವಾಗಿ ಜನರ ಅಭಿಪ್ರಾಯವನ್ನು ಕೇಳಿದಾಗ ಇದರಲ್ಲಿ ಶೇ 12 ರಷ್ಟು ಜನರು ತುಂಬಾ ಲಾಭವಾಗಲಿದೆ ಎಂದು ಹೇಳಿದರೆ ಶೇ 26 ರಷ್ಟು ಜನರು ಸ್ವಲ್ಪ ಲಾಭವಾಗುತ್ತದೆ ಎನ್ನುತ್ತಾರೆ, ಇನ್ನೂ ಶೇ 62 ರಷ್ಟು ಜನರು ಈ ಯಾತ್ರೆಯಿಂದ ಯಾವುದೇ ಲಾಭವಿಲ್ಲ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News