ಹಾವೇರಿ: ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಸವರಾಜ ಬೊಮ್ಮಾಯಿಯವರು ಒಟ್ಟು 80,886 (ಶೇ.54.28) ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ.
ಬೊಮ್ಮಾಯಿಯವರ ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ ಪಕ್ಷದ ಯಾಸಿನ್ ಖಾನ್ ಪಠಾಣ್ 54,274 (ಶೇ.36.42) ಮತಗಳನ್ನು ಪಡೆಯುವ ಮೂಲಕ ಸೋಲು ಕಂಡಿದ್ದಾರೆ. ಇದಲ್ಲದೆ ಜೆಡಿಎಸ್‍ನ ಶಶಿಧರ ಯಲಿಗಾರ್ ಅವರು 11,941 (ಶೇ.7.48) ಮತಗಳನ್ನು ಪಡೆದು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಇದನ್ನೂ ಓದಿ: Karnataka Elections 2023 Results: ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸಿದ ಸ್ಥಳಗಳಲ್ಲಿ ಹೇಗಿದೆ ಕಾಂಗ್ರೆಸ್ ಸ್ಥಿತಿ?
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ ಮಾಹಿತಿ:
Shiggaon Vidhan Aabha Chunav Result 2023: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಬಸವರಾಜ್ ಬೊಮ್ಮಾಯಿಯವರೇ ಗೆಲುವು ಸಾಧಿಸಲಿದ್ದಾರೆಂದು ಹೇಳಲಾಗುತ್ತಿದೆ. ಶಾಸಕರಾಗಿ, ಸಚಿವರಾಗಿ, ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಜನಪ್ರಿಯತೆ ಗಳಿಸಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜೊತೆಗೆ ಗುರುತಿಸಿಕೊಂಡಿರುವ ಬೊಮ್ಮಾಯಿಗೆ ಶಿಗ್ಗಾವಿಯಲ್ಲಿ ಟಫ್ ಫೈಟೋ ನೀಡುವ ಎದುರಾಳಿಯಿಲ್ಲ. ಶಿಗ್ಗಾವಿ-ಸವಣೂರು ಮತದಾರರ ಜೊತೆ ನಿರಂತರ ಸಂಪರ್ಕ ಸಾಧಿಸುತ್ತಾ ಬಂದಿದ್ದು ಪ್ಲಸ್ ಪಾಯಿಂಟ್. ಶಾಸಕ, ಸಚಿವ, ಮುಖ್ಯಮಂತ್ರಿಯಾದರೂ ದೌಲತ್ತು ತೋರಿಸದೇ ಮತದಾರರಿಗೆ ಸ್ಪಂದಿಸಿದ್ದು ಬೊಮ್ಮಾಯಿ ಕೈ ಹಿಡಿಯೋ ಸಾಧ್ಯತೆಯಿದೆ. ಮುಸ್ಲಿಂ ಸಮುದಾಯ ಸೇರಿದಂತೆ ಎಲ್ಲಾ ಜಾತಿಯವರ ವಿಶ್ವಾಸ ಗಳಿಸಿದ್ದು ಬೊಮ್ಮಾಯಿಗೆ ಸರಳ ಗೆಲುವು ಸಿಗಲಿದೆ ಎಂದು ಹೇಳಲಾಗುತ್ತಿದೆ.
2018ರ ಚುನಾವಣಾ ಫಲಿತಾಂಶ:
2018ರ ಚುನಾವಣೆಯಲ್ಲಿ ಬಿಜೆಪಿಯ ಬಸವರಾಜ ಬೊಮ್ಮಾಯಿಯವರು 83,868 ಮತಗಳನ್ನು ಗಳಿಸುವ ಮೂಲಕ ಗೆಲುವು ಸಾಧಿಸಿದರು. ಕಾಂಗ್ರೆಸ್‍ನ ಸಯದ್ ಅಜೀಂಪರ್ ಖಾದರಿ 74,603 ಮತಗಳನ್ನು ಪಡೆಯುವ ಮೂಲಕ ಸೋಲು ಕಂಡಿದ್ದರು. ಇವರಿಬ್ಬರ ನಡುವಿನ ಗೆಲುವಿನ ಅಂತರ 9,265 ಮತಗಳಾಗಿದ್ದವು.
ಇದನ್ನೂ ಓದಿ: Karnataka Assembly Election 2023: ಮಾಜಿ ಸಿಎಂ ಸಿದ್ದರಾಮಯ್ಯರ ಭಾವ ನಿಧನ
2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು:
ಬಸವರಾಜ ಬೊಮ್ಮಾಯಿ - ಬಿಜೆಪಿ
ಯಾಸಿನ್ ಖಾನ್ ಪಠಾಣ್ – ಕಾಂಗ್ರೆಸ್
ಶಶಿಧರ ಯಲಿಗಾರ್ – ಜೆಡಿಎಸ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.