Black Fungus Cases : ರಾಜ್ಯದಲ್ಲಿ 1250 ಮಂದಿಗೆ ಬ್ಲಾಕ್ ಫಂಗಸ್: 35 ಮಂದಿ ಸಾವು!

ಬ್ಲಾಕ್ ಫಂಗಸ್ ಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ

Last Updated : May 30, 2021, 03:22 PM IST
  • ರಾಜ್ಯದಲ್ಲಿ 1250 ಬ್ಲಾಕ್ ಫಂಗಸ್ ಪ್ರಕರಣಗಳಿದ್ದು
  • ಬ್ಲಾಕ್ ಫಂಗಸ್ ಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ
  • ದೇಶಾದ್ಯಂತ 80,000 ವಯಲ್ಸ್ ಮಾರುಕಟ್ಟೆಗೆ ಬಂದಿದೆ.
Black Fungus Cases : ರಾಜ್ಯದಲ್ಲಿ 1250 ಮಂದಿಗೆ ಬ್ಲಾಕ್ ಫಂಗಸ್: 35 ಮಂದಿ ಸಾವು! title=

ಬೆಂಗಳೂರು : ರಾಜ್ಯದಲ್ಲಿ 1250 ಬ್ಲಾಕ್ ಫಂಗಸ್ ಪ್ರಕರಣಗಳಿದ್ದು, ಸುಮಾರು 35 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಸುಧಾಕರ್, ಬ್ಲಾಕ್ ಫಂಗಸ್(Black Fungus) ಡೆತ್ ಆಡಿಟ್ ನಿಖರವಾದ ಮಾಹಿತಿಗೆ ಸೂಚನೆ ನೀಡಿದ್ದೇನೆ. ಬ್ಲಾಕ್ ಫಂಗಸ್ ಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ದರ ನಿಗದಿಯಾಗಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : Lockdown Extension : ರಾಜ್ಯದಲ್ಲಿ ಲಾಕ್​ಡೌನ್ ವಿಸ್ತರಣೆ : ಸಿಎಂ ಬಿಎಸ್‌ವೈ ಹೇಳಿದ್ದೇನು?

ಬ್ಲಾಕ್ ಫಂಗಸ್ ಗೆ ರಾಜ್ಯಕ್ಕೆ ಔಷಧ ಕೊಡಿಸಲು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ(DV Sadananda Gowda) ಪ್ರಯತ್ನ ನಡೆಸಿದ್ದಾರೆ. 8 ಕ್ಕೂ ಹೆಚ್ಚು ಕಂಪನಿಗಳ ಜೊತೆ ಚರ್ಚೆ ನಡೆಸಿ ಸಿದ್ಧತೆ ಮಾಡಿಕೊಂಡಿದ್ದಾರೆ. ದೇಶಾದ್ಯಂತ 80,000 ವಯಲ್ಸ್ ಮಾರುಕಟ್ಟೆಗೆ ಬಂದಿದೆ. ರಾಜ್ಯಕ್ಕೆ 8 -10 ಸಾವಿರ ವಯಲ್ಸ್ ಪೂರೈಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಕೊರೊನಾ ಲಸಿಕೆ ಹಗರಣ: ಹೈಕೋರ್ಟ್ ಮಧ್ಯಸ್ಥಿಕೆಗೆ ಕಾಂಗ್ರೆಸ್ ಆಗ್ರಹ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News