ಕಾಪಿರೈಟ್ಸ್ ಉಲ್ಲಂಘನೆ ಆರೋಪ: ರಾಹುಲ್ ಗಾಂಧಿ ಸೇರಿ ಮೂವರ ವಿರುದ್ಧ ಪ್ರಕರಣ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಕೆಜಿಎಫ್- 2 ಚಿತ್ರದ ಹಾಡು ಹಕ್ಕುಸ್ವಾಮ್ಯ ಪಡೆಯದೇ ದುರ್ಬಳಕೆ ಮಾಡಿರುವ ಆರೋಪದಡಿ ಕಾಂಗ್ರೆಸ್ ನಾಯಕ‌ ರಾಹುಲ್ ಗಾಂಧಿ ಸೇರಿ ಮೂವರ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

Written by - VISHWANATH HARIHARA | Edited by - Manjunath N | Last Updated : Nov 4, 2022, 10:43 PM IST
  • ರಾಹುಲ್ ಗಾಂಧಿ, ಸಂಸದ ಜಯರಾಮ್ ರಮೇಶ್, ಸುಪ್ರಿಯಾ ಶ್ರೀನಾಥೆ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
  • ಎಮ್ಆರ್‌ಟಿ ಮ್ಯೂಸಿಕ್ ಕೆಜಿಎಫ್ 2 ಹಿಂದಿ ಚಿತ್ರಗೀತೆಗಳ ಹಕ್ಕುಸ್ವಾಮ್ಯ ಹೊಂದಿದೆ.
  • ಭಾರತ್ ಜೋಡೊ ಯಾತ್ರೆಯಲ್ಲಿ ಕೆಜಿಎಫ್ 2 ಹಿಂದಿ ಚಿತ್ರದ ಗೀತೆ ಸುಲ್ತಾನ್ ಹಾಡನ್ನು ಬಳಸಿಕೊಳ್ಳಲು ಎಮ್ಆರ್‌ಟಿ ಮ್ಯೂಸಿಕ್‌ನಿಂದ ಹಕ್ಕುಸ್ವಾಮ್ಯ ಪಡೆದಿರಲಿಲ್ಲ.
ಕಾಪಿರೈಟ್ಸ್ ಉಲ್ಲಂಘನೆ ಆರೋಪ: ರಾಹುಲ್ ಗಾಂಧಿ ಸೇರಿ ಮೂವರ ವಿರುದ್ಧ ಪ್ರಕರಣ title=
Photo Courtsey: Twitter

ಬೆಂಗಳೂರು:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಕೆಜಿಎಫ್- 2 ಚಿತ್ರದ ಹಾಡು ಹಕ್ಕುಸ್ವಾಮ್ಯ ಪಡೆಯದೇ ದುರ್ಬಳಕೆ ಮಾಡಿರುವ ಆರೋಪದಡಿ ಕಾಂಗ್ರೆಸ್ ನಾಯಕ‌ ರಾಹುಲ್ ಗಾಂಧಿ ಸೇರಿ ಮೂವರ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ : PF ಚಂದಾದಾರರಿಗೆ ಬಿಗ್ ನ್ಯೂಸ್, ನಿಮಗೆ EPS-95 ಠೇವಣಿ ಹಿಂಪಡೆಯಲು ಅನುಮತಿ!

ರಾಹುಲ್ ಗಾಂಧಿ, ಸಂಸದ ಜಯರಾಮ್ ರಮೇಶ್, ಸುಪ್ರಿಯಾ ಶ್ರೀನಾಥೆ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಎಮ್ಆರ್‌ಟಿ ಮ್ಯೂಸಿಕ್ ಕೆಜಿಎಫ್ 2 ಹಿಂದಿ ಚಿತ್ರಗೀತೆಗಳ ಹಕ್ಕುಸ್ವಾಮ್ಯ ಹೊಂದಿದೆ.
ಭಾರತ್ ಜೋಡೊ ಯಾತ್ರೆಯಲ್ಲಿ ಕೆಜಿಎಫ್ 2 ಹಿಂದಿ ಚಿತ್ರದ ಗೀತೆ ಸುಲ್ತಾನ್ ಹಾಡನ್ನು ಬಳಸಿಕೊಳ್ಳಲು ಎಮ್ಆರ್‌ಟಿ ಮ್ಯೂಸಿಕ್‌ನಿಂದ ಹಕ್ಕುಸ್ವಾಮ್ಯ ಪಡೆದಿರಲಿಲ್ಲ.

ಇದನ್ನೂ ಓದಿ : 7th Pay Commission : ಕೇಂದ್ರ ನೌಕರರಿಗೆ ಸರ್ಕಾರದಿಂದ ಮತ್ತೊಂದು ಬಿಗ್ ನ್ಯೂಸ್!

ಆ ವಿಡಿಯೋಗಳನ್ನು ಕಾಂಗ್ರೆಸ್ ಪಕ್ಷದ ಅಧಿಕೃತ ಸೋಷಿಯಲ್ ಮೀಡಿಯಾ ಫೇಸ್‌ಬುಕ್, ಟ್ವೀಟರ್, ಯೂಟ್ಯೂಬ್  ಹಾಗೂ ಯಾತ್ರೆಯಲ್ಲೂ ಬಳಸಲಾಗಿತ್ತು. ಹೀಗಾಗಿ ಸಂಸ್ಥೆಯ ಅನುಮತಿ ಪಡೆಯದೇ ಹಾಡು ಬಳಸಿರುವ ಹಿನ್ನೆಲೆ ಎಮ್ಆರ್‌ಟಿ ಸಂಸ್ಥೆಯ ನವೀನ್‌ಕುಮಾರ್ ಎಂಬುವವರು ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಸದ್ಯ ಕಾಪಿರೈಟ್ ಉಲ್ಲಂಘಿಸಿದ ಆರೋಪದಡಿ ಯಶವಂತಪುರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News