ಬೆಂಗಳೂರು: ಬುಧವಾರ ಚಿತ್ರದುರ್ಗದಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ನಾಳೆ ಸಂಜೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಇದರಿಂದಾಗಿ ರಾಜ್ಯ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆ ನಡೆದಿದೆ.
ಪರಿವರ್ತನಾ ಯಾತ್ರೆಯಲ್ಲಿ ಭಾಗಿಯಾಗಲು ಒಂದು ದಿನ ಮುನ್ನವೇ ರಾಜ್ಯಕ್ಕೆ ಆಗಮಿಸುತ್ತಿರುವ ಷಾ, ನಾಳೆ ಸಂಜೆ ಬಿಜೆಪಿ ಮುಖಂಡರ ಜೊತೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ. ನಾಳೆ ರಾಜ್ಯ ನಾಯಕರ ಜೊತೆ ಮುಖಾಮುಖಿ ಸಮಾಲೋಚನೆ ನಡೆಸಲಿರೋ ಷಾ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭದ ತಯಾರಿ ಕುರಿತು ಚರ್ಚೆ ಸಾಧ್ಯತೆ ನಡೆಸುವ ಸಾಧ್ಯತೆ ಇದೆ.
ಡಿ. 31ರಂದು ಬೆಂಗಳೂರಿಗೆ ಆಗಮಿಸಿದ್ದ ಷಾ, ಬೂತ್ ಮಟ್ಟದ ಸಮಿತಿ ರಚನೆ ಹಾಗೂ ಚುನಾವಣಾ ಸಿದ್ದತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಜನವರಿ 9 ರೊಳಗೆ ಬೂತ್ ಸಮಿತಿಗಳ ಕಾರ್ಯಗಳನ್ನು ಪೂರ್ಣಗೊಳಿಸುವ ಟಾಸ್ಕ್ ಸಹ ನೀಡಿದ್ದರು. ಇದೀಗ ಜ.9 ರಂದೇ ಷಾ ರಾಜ್ಯಕ್ಕೆ ಭೇಟಿ ನೀಡಿ ಬಿಜೆಪಿ ಶಾಸಕರು, ಉಸ್ತುವಾರಿಗಳು, ಬಿಜೆಪಿ ಜಿಲ್ಲಾದ್ಯಕ್ಷರ ಜೊತೆಗೂ ಸಮಾಲೋಚನೆ ನಡೆಸಲಿದ್ದಾರೆ.
ನಾಳೆ ನಡೆಯಲಿರುವ ಸಭೆಯ ಹೈಲೈಟ್ಸ್...
* ಬೂತ್ ಮಟ್ಟದ ಸಮಿತಿ ರಚನೆ ಹಾಗೂ ಚುನಾವಣಾ ಸಿದ್ದತೆ ಬಗ್ಗೆ ಚರ್ಚೆ.
* ಜನವರಿ 9 ರೊಳಗೆ ಬೂತ್ ಸಮಿತಿಗಳ ಕಾರ್ಯಗಳನ್ನು ಪೂರ್ಣಗೊಳಿಸುವ ಟಾಸ್ಕ್ ಪೂರ್ಣಗೊಂಡಿದೆಯೇ ಎಂಬ ಪರಿಶೀಲನೆ.
* ಮುಂಬರುವ ಚುನಾವಣೆಗಾಗಿ ಮುಂದೆ ಕೈ ಗೊಳ್ಳಬೇಕಾದ ಕಾರ್ಯತಂತ್ರ.
* ಪ್ರಚಾರದ ಶೈಲಿ, ಪಕ್ಷಕ್ಕೆ ಬರುವವರ ಮಾಹಿತಿ ಇತ್ಯಾದಿ ವಿಚಾರಗಳ ಬಗ್ಗೆ ಶಾ ಚರ್ಚೆ.
* ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭದ ತಯಾರಿ ಕುರಿತು ಚರ್ಚೆ ಸಾಧ್ಯತೆ.
ನಾಳೆ ನಡೆಯುವ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ಎಲ್ಲಾ ವಿಚಾರಗಳನ್ನು ಚರ್ಚೆಗೆ ಬರುವ ಸಾಧ್ಯತೆ ಇದೆ.