JOB:ಗ್ರಂಥಾಲಯಗಳ ಮೇಲ್ವಿಚಾರಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

 ಬೀದರ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಖಾಲಿ ಇರುವ ಗ್ರಾಮ ಪಂಚಾಯತ ಗ್ರಂಥಾಲಯಗಳ ಮೇಲ್ವಿಚಾರಕರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

Last Updated : Nov 17, 2020, 08:14 PM IST
JOB:ಗ್ರಂಥಾಲಯಗಳ ಮೇಲ್ವಿಚಾರಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ title=

ಬೆಂಗಳೂರು: ಬೀದರ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಖಾಲಿ ಇರುವ ಗ್ರಾಮ ಪಂಚಾಯತ ಗ್ರಂಥಾಲಯಗಳ ಮೇಲ್ವಿಚಾರಕರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಭಾಲ್ಕಿ ತಾಲೂಕಿನ ಧನ್ನೂರಾ ಗ್ರಾಮ ಪಂಚಾಯಿತಿಗೆ (ಎಸ್)ಗೆ ಪರಿಶಿಷ್ಟ ಜಾತಿ, ಬೀದರ ತಾಲೂಕಿನ ಗಾದಗಿ ಗ್ರಾಮ ಪಂಚಾಯಿತಿಗೆ ಸಾಮಾನ್ಯ ಅಭ್ಯರ್ಥಿ, ಹುಮನಾಬಾದ ತಾಲೂಕಿನ ಹಳ್ಳೀಖೇಡ (ಕೆ) ಗ್ರಾಮ ಪಂಚಾಯಿತಿಗೆ ಪರಿಶಿಷ್ಟ ಪಂಗಡ., ಮಾಣಿಕನಗರ ಗ್ರಾಮ ಪಂಚಾಯಿತಿಗೆ ಸಾಮಾನ್ಯ ಅಭ್ಯರ್ಥಿ(ಮಹಿಳಾ)., ತಾಳಮಡಗಿ ಗ್ರಾಮ ಪಂಚಾಯಿತಿಗೆ ಸಾಮಾನ್ಯ ಅಭ್ಯರ್ಥಿ (ಗ್ರಾಮೀಣ) ಮತ್ತು ಬಸವಕಲ್ಯಾಣ  ತಾಲೂಕಿನ ನಾರಾಯಣಪುರ ಗ್ರಾಪಂಗೆ ಪ್ರವರ್ಗ-1 ಮೀಸಲಾತಿ ನಿಗದಿಪಡಿಸಲಾಗಿದೆ.

ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಮುಖ್ಯ ಗ್ರಂಥಾಲಯಾಧಿಕಾರಿ ಕಛೇರಿ, ಜಿಲ್ಲಾ ಕೇಂದ್ರ ಗ್ರಂಥಾಲಯ, ಜನವಾಡ ರೋಡ್, ಬೀದರ ಇಲ್ಲಿ ಅರ್ಜಿ ನಮೂನೆ ತೆಗೆದುಕೊಳ್ಳಬೇಕು. ಅಭ್ಯರ್ಥಿಗಳು ಆಧಾರ ಕಾರ್ಡ್, ರೇಷನ್ ಕಾರ್ಡ್ ಮತ್ತು ಓಟರ್ ಐಡಿಯನ್ನು ಸ್ವಯಂ ದೃಢೀಕರಿಸಿ ಲಗತ್ತಿಸಬೇಕು.

JOB: ಆರೋಗ್ಯ ಇಲಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ನೇರ ಸಂದರ್ಶನ

ಭರ್ತಿ ಮಾಡಿದ ಅರ್ಜಿಯನ್ನು ಮುಚ್ಚಿದ/ಸಿಲ್ ಮಾಡಿದ ಲಕೋಟೆಯಲ್ಲಿ ಸಂಬಂಧಪಟ್ಟ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕಛೇರಿಗೆ ನಿಗದಿಪಡಿಸಿದ ಕೊನೆಯ ದಿನಾಂಕದ ಒಳಗಾಗಿ ಅಥವಾ ಮುಖ್ಯ ಗ್ರಂಥಾಲಯಾಧಿಕಾರಿಗಳ ಕಛೇರಿ, ಜಿಲ್ಲಾ ಕೇಂದ್ರ ಗ್ರಂಥಾಲಯ ಬೀದರ ಇಲ್ಲಿ ನೇರವಾಗಿ ಇಲ್ಲವೇ ಅಂಚೆ ಮೂಲಕ ಸಲ್ಲಿಸಲು ಸೂಚಿಸಿದೆ.

ಲಕೋಟೆಯ ಮೇಲೆ ದಪ್ಪ ಅಕ್ಷರದಲ್ಲಿ ಗ್ರಾಮ ಪಂಚಾಯತ ಗ್ರಂಥಾಲಯ ಮೇಲ್ವಿಚಾರಕ ನೇಮಕಾತಿಗಾಗಿ ಅರ್ಜಿ ಎಂದು ನಮೂದಿಸಿ ಸಲ್ಲಿಸಲು ತಿಳಿಸಿದೆ. ಗ್ರಂಥಾಲಯ ಪೀಠೋಪಕರಣ, ಪುಸ್ತಕ ಮತ್ತು ನಿಯತಕಾಲಿಕೆ ಜವಾಬ್ದಾರಿ ಮೇಲ್ವಿಚಾರಕರು ವಹಿಸಬೇಕಾಗುತ್ತದೆ ಹಾಗೂ ಸದರಿ ಮೇಲ್ವಿಚಾರಕರಿಗೆ ಪ್ರತಿ ತಿಂಗಳಿಗೆ ರೂ.7000=00 ಗೌರವ ಸಂಭಾವನೆ ಮೇಲೆ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ವಯೋಮಿತಿ : ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು 18 ವರ್ಷ ವಯಸ್ಸು ಪೂರೈಸಿರತಕ್ಕದ್ದು. ಹಾಗೂ ಗರಿಷ್ಠ ವಯೋಮಿತಿ ಈ ಕೆಳನಂತಿರತಕ್ಕದ್ದು.  ಸಾಮಾನ್ಯ ವರ್ಗ - 33 ವಷ., 2ಎ, 2ಬಿ,  3ಎ, 3ಬಿ  - 36 ವರ್ಷ., ಪ.ಜಾತಿ/ಪ.ಪಂಗಡ/ಪ್ರವರ್ಗ-1  -38 ವರ್ಷ.

BEL Recruitment 2020: ಇಂಜಿನಿಯರಿಂಗ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಷರತ್ತುಗಳು: ಅಭ್ಯರ್ಥಿಯು ಸ್ಥಳೀಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. (ದೃಢೀಕರಣ ಪತ್ರ ಲಗತ್ತಿಸಿರಬೇಕು. ಸ್ಥಳೀಯ ಮತದಾರರ ಪಟ್ಟಿಯ ಉದೃತ ಭಾಗ ಲಗತ್ತಿಸಿರಬೇಕು.)ನಿಗದಿಪಡಿಸಲಾದ ಮೀಸಲಾತಿಗೆ ಒಳಪಡುವ ಅಭ್ಯರ್ಥಿ ಮಾತ್ರ ಅರ್ಜಿಯನ್ನು ಸಲ್ಲಿಸತಕ್ಕದ್ದು. ಭರ್ತಿ ಮಾಡಿದ ಅರ್ಜಿಗಳನ್ನು ಸೂಕ್ತ ದಾಖಲಾತಿ ಎಸ್.ಎಸ್.ಎಲ್.ಸಿ ಅಂಕಪಟ್ಟಿ ಟಿ.ಸಿ., ಮೀಸಲಾತಿ ಪ್ರಮಾಣ ಪತ್ರ, ಸ್ಥಳೀಯ ವಾಸಿ ದೃಢೀಕರಣ ಪತ್ರ ಅಂಗವಿಕಲತೆ (ಇದ್ದಲ್ಲಿ) ದೃಢೀಕರಣ ಪತ್ರ ಹಾಗೂ ಇನ್ನೀತರ ವಿದ್ಯಾರ್ಹತೆ (ಇದ್ದಲ್ಲಿ) ಇತ್ಯಾದಿಗಳೊಂದಿಗೆ ಸ್ವಯಂ ದೃಢೀಕೃತ ದಾಖಲೆಗಳನ್ನು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ದಿನಾಕ 18-12-2020ರ ಸಂಜೆ 5:30 ರೊಳಗಾಗಿ ಸಲ್ಲಿಸಬೇಕು. ವಯಸ್ಕರ ಶಿಕ್ಷಣದಡಿ ನಡೆಯುತ್ತಿರುವ ಮುಂದುವರಿಕಾ ಕಲಿಕಾ ಕೇಂದ್ರಗಳ ಪ್ರೇರಕ/ಉಪಪ್ರೇರಕರು ಇವರಿಗೂ ಮೀಸಲಾತಿ ಅನ್ವಯಿಸುತ್ತದೆ. ಪ್ರೇರಕ/ಉಪಪ್ರೇರಕರು ಮೇಲ್ವಿಚಾರಕರಾಗಿ ನೇಮಕಗೊಂಡ ನಂತರ ಪ್ರೇರಕ/ಉಪಪ್ರೇರಕರ ಹುದ್ದೆಗೆ ರಾಜೀನಾಮೆ ನೀಡತಕ್ಕದ್ದು ಹಾಗೂ ಬಿಡುಗಡೆ ಪತ್ರವನ್ನು ಸಂಬಂಧಿಸಿದ ಇಲಾಖೆಯಿಂದ ಪಡೆದು ಈ ಕಛೇರಿಗೆ ಸಲ್ಲಿಸತಕ್ಕದ್ದು. ಗ್ರಂಥಾಲಯ ವಿಜ್ಞಾನದಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08482-226401 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Trending News