ಬೆಂಗಳೂರು: ಕಲಬುರಗಿ ರಂಗಾಯಣದಿಂದ 3 ಜನ ತಂತ್ರಜ್ಞರು ಹಾಗೂ 12 ಜನ ಕಲಾವಿದರನ್ನು ತಾತ್ಕಾಲಿಕವಾಗಿ ಮೂರು ವರ್ಷಗಳ ಅವಧಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ರಂಗಾಯಣ ಆಡಳಿತಾಧಿಕಾರಿಗಳಾದ ಜಗದೀಶ್ವರಿ ಶಿವಕೇರಿ ಅವರು ತಿಳಿಸಿದ್ದಾರೆ.
ಸಂಗೀತ, ಧ್ವನಿ-ಬೆಳಕು, ರಂಗಸಜ್ಜಿಕೆ, ಪರಿಕರ ವಿಭಾಗದಲ್ಲಿ ಕನಿಷ್ಠ 10 ವರ್ಷಗಳ ರಂಗಾನುಭವ ಹೊಂದಿರುವ, ಕನ್ನಡ ಭಾಷೆ ಓದುವ, ಬರೆಯುವ ಮತ್ತು ಮಾತಾನಾಡುವ ಸಾಮಥ್ರ್ಯವಿರುವ ತಂತ್ರಜ್ಞರನ್ನು ಆಯ್ಕೆ ಮಾಡಲಾಗುವುದು. ರಂಗಾನುಭವ ಮತ್ತು ಶೈಕ್ಷಣಿಕ ಅರ್ಹತೆಗಳು ಇದ್ದಲ್ಲಿ ಅಂತಹವರಿಗೆ ಆದ್ಯತೆ ನೀಡಲಾಗುವುದು. ಯಾವುದೇ ಭತ್ಯೆರಹಿತ ಮಾಸಿಕ ಗೌರವ ಸಂಭಾವನೆ 20,000 ರೂ. ನೀಡಲಾಗುತ್ತದೆ.
ಕಲಾವಿದರ ನೇಮಕದಲ್ಲಿ 4 ಜನ ಮಹಿಳೆಯರು ಮತ್ತು 4 ಜನ ಪ.ಜಾತಿ/ವರ್ಗದ ಕಲಾವಿದರಿಗೂ ಅವಕಾಶವಿದ್ದು, ಪ್ರಾದೇಶಿಕ ವಲಯದ, ರಂಗಪರಿಣಿತಿ ಹೊಂದಿರುವ, ರಂಗ ಪ್ರಯೋಗಗಳಲ್ಲಿ ಭಾಗವಹಿಸುವವರಿಗೆ, ಪಾರಂಪರಿಕ ಕಲೆಯ ಕುಟುಂಬಗಳಿಂದ ಬಂದವರಿಗೆ, ರಂಗಶಿಕ್ಷಣದ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು. ನೇಮಕಗೊಂಡ ಕಲಾವಿದರು ರಪರ್ಟಿಯಭಾಗವಾಗಿದ್ದು, ರಂಗ ಶಿಕ್ಷಣದ ಎಲ್ಲಾ ವಿಭಾಗಗಳಲ್ಲಿ ತರಬೇತಿ ಪಡೆಯುವುದರ ಜೊತೆಗೆ ಅಭಿನಯದ ಜವಾಬ್ದಾರಿಯನ್ನು ನಿಭಾಯಿಸಬೇಕು. ಮಾಸಿಕ ಶಿಷ್ಯವೇತನ ಯಾವುದೇ ಭತ್ಯೆ ರಹಿತಸಂಚಿತವಾಗಿ ತಿಂಗಳಿಗೆ 12,000 ರೂ., ಎರಡನೇ ವರ್ಷ 14,000 ರೂ. ಹಾಗೂ ಮೂರನೇ ವರ್ಷದಲ್ಲಿ 16,000 ರೂ.ಗಳನ್ನು ನೀಡಲಾಗುವುದು. ಕಲಾವಿದರ ವಯೋಮಿತಿ 25 ವರ್ಷದೊಳಗಿರಬೇಕು.
ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆಯು ರಂಗಾಯಣದ ಚಟುವಟಿಕೆಗಳ ಅಗತ್ಯದ ಹಿನ್ನೆಲೆಯಲ್ಲಿ ಗೌರವ ಸಂಭಾವನೆ ಆಧಾರದಲ್ಲಿ ಆಯ್ಕೆಮಾಡಿಕೊಳ್ಳಲಾಗುತ್ತದೆ. ಆಸಕ್ತರು ಸ್ವವಿವರದೊಂದಿಗೆ 2020ರ ಜುಲೈ 31 ರೊಳಗಾಗಿ ಆಡಳಿತಾಧಿಕಾರಿಗಳು, ರಂಗಾಯಣ, ಡಾ.ಸಿದ್ದಯ್ಯ ಪುರಾಣಿಕ ಸುವರ್ಣ ಸಾಂಸ್ಕøತಿಕ ಸಮುಚ್ಛಯ, ಸೇಡಂ-ಶಹಾಬಾದ ವರ್ತುಲರಸ್ತೆ, ಕಲಬುರಗಿ - 585105, ವಿಳಾಸಕ್ಕೆ ಅಂಚೆ ಮೂಲಕ ಅಥವಾ ಇ-ಮೇಲ್ rangayanakalaburgi@gmail.com, rangayanakalaburagi@gmail.com ಮೂಲಕ ಅರ್ಜಿ ಸಲ್ಲಿಸಬೇಕು.
ಮತ್ತಿತರ ಹೆಚ್ಚಿನ ಮಾಹಿತಿಗಾಗಿ ರಂಗಾಯಣದ http://www.rangayanakalaburagi.com ವೆಬ್ಸೈಟ್ನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-227735ಗೆ ಕಚೇರಿ ವೇಳೆಯಲ್ಲಿ ಸಂಪರ್ಕಿಸಲು ಕೋರಲಾಗಿದೆ.