ಬಿಬಿಎಂಪಿ ಉಪ ಮೇಯರ್ ರಮೀಳಾ ಉಮಾಶಂಕರ್ ಹೃದಯಾಘಾತದಿಂದ ನಿಧನ

ತಡರಾತ್ರಿ 12:50 ರ ಸುಮಾರಿನಲ್ಲಿ ಕೊನೆಯುಸಿರೆಳೆದ ರಮೀಳಾ.

Last Updated : Oct 5, 2018, 08:48 AM IST
ಬಿಬಿಎಂಪಿ ಉಪ ಮೇಯರ್ ರಮೀಳಾ ಉಮಾಶಂಕರ್ ಹೃದಯಾಘಾತದಿಂದ ನಿಧನ title=

ಬೆಂಗಳೂರು: ಬಿಬಿಎಂಪಿ ನೂತನ ಉಪಮೇಯರ್ ಆಗಿ ಅಧಿಕಾರ ಸ್ವೀಕರಿಸಿದ್ದ ಜೆಡಿಎಸ್ ಪಕ್ಷದ ರಮೀಳಾ ಉಮಾಶಂಕರ್ ಗುರುವಾರ ತಡರಾತ್ರಿ 12:50 ರ ಸುಮಾರಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ನಿನ್ನೆ ರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಪಶ್ಚಿಮ ಕಾರ್ಡ್​ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ 
ಅವರು ಮೃತಪಟ್ಟಿದ್ದಾರೆ.

44 ವರ್ಷ ವಯಸ್ಸಿನ ರಮೀಳಾ ಉಮಾಶಂಕರ್ ಪತಿ ಡಿ.ಉಮಾಶಂಕರ್ ಮತ್ತು ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. 

ಡಿಪ್ಲೊಮೊ ಇನ್ ಎಲೆಕ್ಟ್ರಾನಿಕ್ಸ್ ಪದವಿ ಪಡೆದಿದ್ದ ಇವರು 2015 ರಲ್ಲಿ ಕಾವೇರಿಪುರ ವಾರ್ಡ್ ನಂ. 103ರಲ್ಲಿ ಮೊದಲ ಬಾರಿ ಆಯ್ಕೆಯಾದರು. ಈ ಹಿಂದೆ ರಾಜರಾಜೇಶ್ವರಿ ನಗರ ನಗರಸಭೆಯ ಸದಸ್ಯರಾಗಿದ್ದರು. ಜೆಡಿಎಸ್ ಕಳೆದ ವಾರ ನಡೆದ ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಕಳೆದ 30 ವರ್ಷದಿಂದ ಜನತಾ ಪರಿವಾರದಲ್ಲಿ ಆನಂತರ ಜೆಡಿಎಸ್ ಸಕ್ರಿಯರಾಗಿದ್ದ ರಮೀಳಾ ಅವರನ್ನು ಬಿಬಿಎಂಪಿಯ ಉಪಮೇಯರ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿತ್ತು. 
 

Trending News