ಬಿಬಿಎಂಪಿ ಕಾರ್ಪೋರೇಟರ್‌ ಮೇಲೆ ಪತಿಯಿಂದಲೇ ಗುಂಡಿನ ದಾಳಿ...

ಮಹಿಳಾ ಕಾರ್ಪೋರೇಟರ್‌ ಮಮತಾ ಮೇಲೆ ಫೈರಿಂಗ್‌.

Last Updated : Oct 23, 2017, 01:32 PM IST
ಬಿಬಿಎಂಪಿ ಕಾರ್ಪೋರೇಟರ್‌ ಮೇಲೆ ಪತಿಯಿಂದಲೇ ಗುಂಡಿನ ದಾಳಿ...  title=

ಬೆಂಗಳೂರು: ಬಿಬಿಎಂಪಿ ಕಾರ್ಪೋರೇಟರ್‌ ಮಮತಾ ಮೇಲೆ ಪತಿಯಿಂದಲೇ ಗುಂಡಿನ ದಾಳಿ ನಡೆದಿದ್ದು, ಮಮತಾ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಮಮತಾಳ ಮೇಲೆ ಗುಂಡು ಹಾರಿಸಿದ ಪತಿ ವೆಂಕಟೇಶ್ ಪರಾರಿಯಾಗಿದ್ದಾನೆ. 

ಪತಿ-ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ವಾರ್ಡ್ ನಂಬರ್ 6 ರ ಥಣಿಸಂದ್ರ ಕಾರ್ಪೊರೇಟರ್ ಮಮತಾ ಬೆಂಗಳೂರಿನ ಕೊತ್ತನೂರು ಠಾಣೆಯಲ್ಲಿ ಲಿಖಿತ ದೂರು ದಾಖಲಿಸದೆ, ಠಾಣೆಗೆ ಕರೆಸಿ ಎಚ್ಚರಿಕೆ ಕೊಡಿ ಎಂದು ಮೌಖಿಕ ದೂರು ದಾಖಲಿಸುವ ಮೂಲಕ ಪೊಲೀಸರಿಗೆ ಮನವಿ ಮಾಡಿದ್ದರು. ಇದರಿಂದ ಕುಪಿತಗೊಂಡ ಪತಿ ವೆಂಕಟೇಶ್ ಈಗ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. 

ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ವೆಂಕಟೇಶ್ ಗಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

Trending News