ಸಾಕಷ್ಟು ನಿಗೂಢವಾಯ್ತು ವಿ. ಸೋಮಣ್ಣನ ನಡೆ...!

V. Somanna : ವಿ. ಸೋಮಣ್ಣ ಯಾವ ಪಕ್ಷಕ್ಕೆ ಸೇರಿಕೊಳ್ಳುತ್ತಾರೆ ಎನ್ನುವ ಪ್ರಶ್ನೆ ಎಲ್ಲರಿಗೂ ಕಾಡುತ್ತಿತ್ತು. ಸಿಎಂ. ಬೊಮ್ಮಾಯಿ ಸೇರಿದಂತೆ ಹಲವಾರು ಬಿಜೆಪಿ ಅಭ್ಯರ್ಥಿಗಳು ಈ ಬಗ್ಗೆ ಹೇಳಿಕೆಗಳನ್ನೂ ನೀಡಿದ್ದರು. ಅಲ್ಲದೇ ಸ್ವತಃ ವಿ. ಸೋಮಣ್ಣ ಅವರೇ ನೆನ್ನೆಯಷ್ಟೇ ಕೆಲವು ರಾಜಕೀಯ ಏರಿಳಿತಗಳು ಉಂಟಾಗುತ್ತಿರುತ್ತವೆ. ಬಿಜೆಪಿ ಪಕ್ಷದವರು ಟಿಕೆಟ್‌ ಕೊಟ್ಟರೆ ನಿಂತ್ಕೋತಿನಿ ಇಲ್ಲ ಅಂದರೇ ಇಲ್ಲ ಎಂದರು.   

Written by - Zee Kannada News Desk | Last Updated : Mar 14, 2023, 03:27 PM IST
  • ಸೋಮಣ್ಣ ಬಿಜೆಪಿ ಬಿಟ್ಟು ಕಾಂಗ್ರೇಸ್‌ ಗೆ ಸೇರಿಕೊಳ್ಳುತ್ತಾರಾ
  • ಡಿ. ಕೆ ಶಿವಕುಮಾರ ಅವರ ಜೊತೆ ಇರುವ ಪೋಟೋ ವೈರಲ್‌ ಆಗಿದ್ದು,
  • ಸೋಮಣ್ಣ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ,
ಸಾಕಷ್ಟು ನಿಗೂಢವಾಯ್ತು ವಿ. ಸೋಮಣ್ಣನ ನಡೆ...!  title=

ಸೋಮಣ್ಣ ಬಿಜೆಪಿ ಬಿಟ್ಟು ಕಾಂಗ್ರೇಸ್‌ ಗೆ ಸೇರಿಕೊಳ್ಳುತ್ತಾರಾ ಅಥವಾ ಬಿಜೆಪಿಯಲ್ಲಿಯೇ ಇರುತ್ತಾರಾ ಎನ್ನುವ ಹಲವಾರು ಪ್ರಶ್ನೆಗಳಿಗೆ ವಿ. ಸೋಮಣ್ಣ ನೆನ್ನೆ ಉತ್ತರ ನೀಡಿದ್ದರು. ಆದರೆ ಇದೀಗ ಅವರು ಡಿ. ಕೆ ಶಿವಕುಮಾರ ಅವರ ಜೊತೆ ಇರುವ ಪೋಟೋ ವೈರಲ್‌ ಆಗಿದ್ದು, ವಿ. ಸೋಮಣ್ಣ ಅವರ ನಡೆ ಸಾಷ್ಟು ನಿಗೂಢವಾಗಿದೆ ಎನ್ನಲಾಗುತ್ತಿದೆ. 

ಸೋಮಣ್ಣ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ, ಅದರ ಬೆನ್ನಲೇ ‌ಇದೀಗ ಎಕ್ಸ್ ಕ್ಲ್ಯೂಸಿವ್ ಸೋಮಣ್ಣ ಮತ್ತು ಡಿಕೆಯ ಮಾತುಕತೆಯ ಪೋಟೋ‌ ಹೊರಬಂದಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸದ್ಯದ ಮಾಹಿತಿ ಪ್ರಕಾರ ಗೋವಿಂದರಾಜುನಗರ ಅಥವಾ ಗುಂಡ್ಲುಪೇಟೆ ಕ್ಷೇತ್ರದಿಂದ ವಿ. ಸೋಮಣ್ಣ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ-ಉರಿಗೌಡ, ನಂಜೇಗೌಡ ದ್ವಾರ ವಿವಾದ : ಡಿಜಿಪಿ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು - ಡಿಕೆಶಿ ಆಗ್ರಹ 

ಇದಲ್ಲದೇ ಕುಟುಂಬ ರಾಜಕಾರಣ ಮಾಡಲು ಬಿಜೆಪಿಯಲ್ಲಿ ಮಗನಿಗೆ ಟಿಕೆಟ್ ಭದ್ರ ಮಾಡೋದಕ್ಕೆ ಹೊರಟಿದ್ದಾರೆ‌ ಎನ್ನಲಾಗಿದೆ. ಇತ್ತ ಕೆಪಿಪಿಸಿ ಅಧ್ಯಕ್ಷರು ಮಾತ್ರ ಸೋಮಣ್ಣ ಪಾರ್ಟಿಗೆ ಕರೆತರಲು ಇನ್ನಿಲ್ಲದ ಪ್ರಯತ್ನ ಮಾಡುವುದನ್ನು ಡಿಕೆ ಶಿವಕುಮಾರ ಬಿಟ್ಟಿಲ್ಲ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ-ಶೀಘ್ರದಲ್ಲೇ ಲಕ್ಕುಂಡಿ ಹಂಪಿ ವ್ಯಾಪ್ತಿಗೆ ಸೇರ್ಪಡೆ: ಸಿಎಂ ಬೊಮ್ಮಾಯಿ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

DK shivakumar

Trending News