ವಿಧಾನಸೌಧ 2ನೇ ಮಹಡಿಯಲ್ಲಿ ಬಿಯರ್ ಬಾಟಲ್ ಪತ್ತೆ: ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಿಡಿ..!

ರಾಜ್ಯದ ಆಡಳಿತ ಶಕ್ತಿ ಕೇಂದ್ರಕ್ಕೆ ಅದರದೆಯಾದ ಗೌರವ, ಪಾವಿತ್ರ್ಯತೆ ಇದೆ, ಆದರೆ ಇಂತಹ ಶಕ್ತಿ ಕೇಂದ್ರದಲ್ಲಿ ಬಿಯರ್ ಬಾಟಲ್ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.

Written by - Zee Kannada News Desk | Last Updated : Sep 14, 2021, 11:12 AM IST
  • ವಿಧಾನಸೌಧದ 2ನೇ ಮಹಡಿಯ 208ರ ಕೊಠಡಿ ಬಳಿ ಎರಡು ಬಿಯರ್ ಬಾಟಲ್ ಪತ್ತೆಯಾಗಿದೆ ಎಂದು ಆರೋಪಿಸಲಾಗಿದೆ
  • ‘ರಾಜ್ಯದ ದಿಕ್ಕೆಟ್ಟ ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ಬಿಜೆಪಿ ಸರ್ಕಾರದ ಅಭಕಾರಿ ಇಲಾಖೆ ವಿಧಾನಸೌಧದಲ್ಲಿಯೇ ಮದ್ಯದಂಗಡಿ ತೆರೆದಿರುವಂತಿದೆ’
  • ಸದಾ ಬಾರ್ ಬಗ್ಗೆಯೇ ಕನವರಿಸುತ್ತಿದ್ದ ಬಿಜೆಪಿ ತನ್ನ ಆಡಳಿತದಲ್ಲಿ ವಿಧಾನಸೌಧದಲ್ಲಿಯೇ ಬಾರ್‌ ತೆರೆದಿದೆ ಎಂದು ಕಾಂಗ್ರೆಸ್ ಆಕ್ರೋಶ
ವಿಧಾನಸೌಧ 2ನೇ ಮಹಡಿಯಲ್ಲಿ ಬಿಯರ್ ಬಾಟಲ್ ಪತ್ತೆ: ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಿಡಿ..! title=
ವಿಧಾನಸೌಧ 2ನೇ ಮಹಡಿಯಲ್ಲಿ ಬಿಯರ್ ಬಾಟಲ್ ಪತ್ತೆ?! (Photo Courtesy: Twitter/@INCKarnataka)

ಬೆಂಗಳೂರು: ವಿಧಾನಸಭಾ ಅಧಿವೇಶನ(Assembly session) ಆರಂಭವಾದ ಮೊದಲ ದಿನವೇ ಶಕ್ತಿ‌ಸೌಧದಲ್ಲಿ ಬಿಯರ್ ಬಾಟಲ್(Beer Bottle) ಕಾಣಿಸಿಕೊಂಡಿದೆ ಎಂದು ಆರೋಪಿಸಲಾಗಿದೆ. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಮಂಗಳವಾರ ಟ್ವೀಟ್ ಮಾಡಿರುವ ಕಾಂಗ್ರೆಸ್(Congress), ‘ರಾಜ್ಯದ ದಿಕ್ಕೆಟ್ಟ ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ಬಿಜೆಪಿ ಸರ್ಕಾರದ ಅಭಕಾರಿ ಇಲಾಖೆ ವಿಧಾನಸೌಧದಲ್ಲಿಯೇ ಮದ್ಯದಂಗಡಿ ತೆರೆದಿರುವಂತಿದೆ!’ ಎಂದು ವ್ಯಂಗ್ಯವಾಡಿದೆ. ‘ಪ್ರಜಾಪ್ರಭುತ್ವದ ದೇಗುಲ ಎಂದು ಕರೆಸಿಕೊಳ್ಳುವ ವಿಧಾನಸೌಧದ ಆವರಣದೊಳಗೆ ಭದ್ರತೆ ಮೀರಿ ಮದ್ಯದ ಪಾರ್ಟಿ ನಡೆಯುತ್ತದೆಂದರೆ ರಾಜ್ಯದ ಕಾನೂನು ಸುವ್ಯವಸ್ಥೆಯ ದುಃಸ್ಥಿತಿಯನ್ನು ಊಹಿಸಬಹುದು’ ಎಂದು ಟೀಕಿಸಿದೆ.

ಇದನ್ನೂ ಓದಿ: ಕಾಂಗ್ರೆಸ್ ಎತ್ತಿನಗಾಡಿ ಪ್ರತಿಭಟನೆಗೆ ಸಿದ್ದು & ಡಿಕೆಶಿ ಕಲಹದ ಬಂಡಿ ಎಂದ ಬಿಜೆಪಿ..!

‘ಆ ಬಾರ್, ಈ ಬಾರ್ ಎಂದು ಸದಾ ಬಾರ್ ಬಗ್ಗೆಯೇ ಕನವರಿಸುತ್ತಿದ್ದ ಬಿಜೆಪಿ(BJP) ತನ್ನ ಆಡಳಿತದಲ್ಲಿ ವಿಧಾನಸೌಧದಲ್ಲಿಯೇ ಬಾರ್‌ ತೆರೆದಿದೆ!’ ಅಂತಾ ಕಾಂಗ್ರೆಸ್ ಟ್ವೀಟ್ ಮಾಡಿ ರಾಜ್ಯ ಸರ್ಕಾರಕ್ಕೆ ಕುಟುಕಿದೆ. ಶಕ್ತಿಸೌಧದಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿರುವುದು ಸಾರ್ವಜನಿಕರಿಂದಲೂ ಆಕ್ರೋಶ ವ್ಯಕ್ತವಾಗಿದೆ.  

ಶಕ್ತಿಸೌಧದಲ್ಲಿ ಬಿಯರ್ ಬಾಟಲ್ ಪತ್ತೆ..!

ವಿಧಾನಸೌಧದ(Vidhana Soudha) 2ನೇ ಮಹಡಿಯ 208ರ ಕೊಠಡಿ ಬಳಿ ಸೋಮವಾರ ಬಿಯರ್ ಬಾಟಲ್ ಗಳು ಪತ್ತೆಯಾಗಿದ್ದವು ಎಂದು ವರದಿಯಾಗಿದೆ. ಬಿಯರ್ ಬಾಟಲ್ ಗಳಿರುವ ಫೋಟೋಗಳು ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗಿದ್ದವು. ಯಾರೋ ಎಣ್ಣೆ ಹೊಡೆದು ಬಾಟಲ್ ಬಿಟ್ಟು ಹೋದ್ರಾ..?, ಶಕ್ತಿ ಸೌಧದಲ್ಲಿ ಮದ್ಯಪಾನ ಮಾಡಿದ್ರಾ..? ಅನ್ನೋ ಪ್ರಶ್ನೆಗಳು ಎದ್ದಿದ್ದವು.

ಇದನ್ನೂ ಓದಿ: ಮಹಿಳೆಯನ್ನು ವಿವಸ್ತ್ರಗೊಳಿಸಿ ಲೈಂಗಿಕ ದೌರ್ಜನ್ಯ: ನಾಲ್ವರು ಆರೋಪಿಗಳ ಬಂಧನ

‘ಸರ್ಕಾರಿ ಕೆಲಸ ದೇವರ ಕೆಲಸ’ ಎನ್ನುವ ರಾಜ್ಯದ ಆಡಳಿತ ಶಕ್ತಿಕೇಂದ್ರಕ್ಕೆ ಅದರದೆಯಾದ ಗೌರವ, ಪಾವಿತ್ರ್ಯತೆ ಇದೆ.‌ ಆದರೆ ಇಂತಹ ಶಕ್ತಿಕೇಂದ್ರದಲ್ಲಿ ಬಿಯರ್ ಬಾಟಲ್ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. ವಿಧಾನಸೌಧ(Vidhana Soudha)ದೊಳಗೆ ಮದ್ಯಪಾನ ಮಾಡಿದವರು ಯಾರು ಅನ್ನೋ ಪ್ರಶ್ನೆ ಉದ್ಭವವಾಗಿದೆ. ಸದ್ಯ ಬಿಯರ್ ಬಾಟಲ್ ಗಳನ್ನು ತೆರವುಗೊಳಿಸಲಾಗಿದ್ದು, ಸ್ವಚ್ಛತಾ ಸಿಬ್ಬಂದಿ ಆ ಜಾಗವನ್ನು ಶುಚಿಗೊಳಿಸಿದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ ಸ್ಪೀಕರ್ ಕಚೇರಿಯಿಂದ ತನಿಖೆಗೆ ಸೂಚಿಸುವ ಸಾಧ್ಯತೆ ಇದೆ. ವಿಧಾನಸೌಧ ಪೋಲಿಸರು ಕೂಡ ಈ ಬಗ್ಗೆ ತನಿಖೆ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.      

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News