Rameshwarama cafe Blast suspect Latest Photo : ಬೆಂಗಳೂರು ಕೆಫೆ ಸ್ಪೋಟ ಶಂಕಿತ ಆರೋಪಿಯ ಹೊಸ ಫೋಟೋಗಳು ಹೊರಬಿದ್ದಿವೆ. ಈ ಫೋಟೋದಲ್ಲಿ ಶಂಕಿತ ವ್ಯಕ್ತಿಯು ಕ್ಯಾಪ್ ಮತ್ತು ಮಾಸ್ಕ್ ಇಲ್ಲದೆ ಬಸ್ನಲ್ಲಿ ಪ್ರಯಾಣಿಸುತ್ತಿರುವುದು ಕಂಡು ಬಂದಿದೆ.
ಶಂಕಿತನ ಬೇಸ್ಬಾಲ್ ಕ್ಯಾಪ್ ಅನ್ನು ಹತ್ತಿರದ ಮಸೀದಿಯ ಹೊರಗೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಸ್ಫೋಟದ ನಂತರ ಶಂಕಿತ ವ್ಯಕ್ತಿ ತನ್ನ ಬಟ್ಟೆಯನ್ನು ಬದಲಾಯಿಸಿದ್ದ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ : Rameshwara cafeಯಲ್ಲಿ ಸ್ಪೋಟಕ್ಕೂ ಮುನ್ನ ಖತರ್ನಾಕ್ ಐಡಿಯಾ ಮಾಡಿದ್ದ ಆರೋಪಿ!ಸುಳಿವು ಸಿಗದಂತೆ ಭಾರೀ ತಯಾರಿ ನಡೆಸಿದ್ದ ಬಾಂಬರ್
ಮಾರ್ಚ್ 1ರಂದು ಬೆಂಗಳೂರಿನ ವೈಟ್ಫೀಲ್ಡ್ ಪ್ರದೇಶದ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಒಂಬತ್ತು ಜನರು ಗಾಯಗೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಮೂಲಕ ಶಂಕಿತ ವ್ಯಕ್ತಿಯ ಗುರುತಿನ ಬಗ್ಗೆ ಕೆಲವು ಅಂಶಗಳು ಬಹಿರಂಗಗೊಂಡಿವೆ.
ಬೆಳಗ್ಗೆ 10.45ಕ್ಕೆ ಕೆಫೆಯಿಂದ 100 ಮೀಟರ್ ದೂರದಲ್ಲಿರುವ ಬಸ್ ನಿಲ್ದಾಣಕ್ಕೆ ಶಂಕಿತ ವ್ಯಕ್ತಿ ಆಗಮಿಸಿದ್ದು, 11.34ಕ್ಕೆ ಕೆಫೆಗೆ ಪ್ರವೇಶಿಸಿದ್ದಾನೆ. 11.43ಕ್ಕೆ ನಿರ್ಗಮಿಸಿದ್ದು, ಬಸ್ ನಿಲ್ದಾಣಕ್ಕೆ ನಡೆದುಕೊಂಡು ಹೋಗುತ್ತಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಇದನ್ನೂ ಓದಿ : BMRCL :ಹಳದಿ ಮಾರ್ಗದ ಮೊದಲ ಚಾಲಕ ರಹಿತ ರೈಲು : ಈ ಕುರಿತು ಮಾಹಿತಿ ಇಲ್ಲಿದೆ
ಬುಧವಾರ ಎನ್ಐಎ ಶಂಕಿತನ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದು, ಸಿಸಿಟಿವಿ ಯಲ್ಲಿ ಕಂಡು ಬಂದ ಫೋಟೋವನ್ನು ಪೋಸ್ಟ್ ಮಾಡಿದೆ. ಮೂಲಗಳ ಪ್ರಕಾರ ಶಂಕಿತ ಬೇರೆ ಬೇರೆ ಬಸ್ಸುಗಳನ್ನು ಬದಲಾಯಿಸಿಕೊಂಡು ಸಂಚಾರ ಮಾಡಿದ್ದಾನೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.