ಸಾರ್ವಜನಿಕರಿಂದ ವಸೂಲಿ ಮಾಡಿ ಕಳ್ಳ ಎನಿಸಿಕೊಂಡಿದ್ದ ಇಬ್ಬರು ಪೊಲೀಸರು ಸಸ್ಪೆಂಡ್‌..!

ಪೀಣ್ಯ ಎರಡನೇ ಹಂತದಲ್ಲಿರುವ ಇದೇ ರಸ್ತೆಯಲ್ಲಿ ಹೈಡ್ರಾಮಾವೊಂದು ನಡೆದುಹೋಗಿತ್ತು. ಹೊಯ್ಸಳ ವಾಹನವೊಂದು ವೇಗವಾಗಿ ಹೋದ್ರೆ ಹಿಂಬದಿಯಿಂದ ಜನರು ಪೊಲೀಸ್ ಕಳ್ಳ ಪೊಲೀಸ್ ಕಳ್ಳ ಎಂದು ಕೂಗಲು ಶುರು ಮಾಡಿದ್ರು. ಈ ಎಲ್ಲಾ ದೃಶ್ಯಗಳು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು.

Written by - VISHWANATH HARIHARA | Edited by - Krishna N K | Last Updated : May 22, 2024, 06:26 PM IST
    • ಪೊಲೀಸ್ ಇಲಾಖೆ ಗತ್ತು, ಗಾಂಭೀರ್ಯ ಶಿಸ್ತಿಗೆ ಹೆಸರಾಗಿದೆ.
    • ಅದೇ ರೀತಿ ಚಿಲ್ಲರೆ ಕಾಸಿಗೆ ಕೈಚಾಚೊ ಖದೀಮರು ಇದ್ದಾರೆ..
    • ಅಷ್ಟೇ ಅಲ್ಲ ಪೊಲೀಸ್ ಕಳ್ಳ.. ಪೊಲೀಸ್ ಕಳ್ಳ ಎಂದು ಅಟ್ಟಿಸಿಕೊಂಡು ಹೋಗಿದ್ದಾರೆ.
ಸಾರ್ವಜನಿಕರಿಂದ ವಸೂಲಿ ಮಾಡಿ ಕಳ್ಳ ಎನಿಸಿಕೊಂಡಿದ್ದ ಇಬ್ಬರು ಪೊಲೀಸರು ಸಸ್ಪೆಂಡ್‌..! title=

ಬೆಂಗಳೂರು : ಪೊಲೀಸ್ ಇಲಾಖೆ ಗತ್ತು, ಗಾಂಭೀರ್ಯ ಶಿಸ್ತಿಗೆ ಹೆಸರಾಗಿದೆ. ಇದೇ ಪೊಲೀಸ್ ಇಲಾಖೆಯಲ್ಲಿ ದಕ್ಷ ಅಧಿಕಾರಿ, ಸಿಬ್ಬಂದಿಗಳೂ ಸಹ ಇದ್ದಾರೆ. ಅದೇ ರೀತಿ ಚಿಲ್ಲರೆ ಕಾಸಿಗೆ ಕೈಚಾಚೊ ಖದೀಮರು ಇದ್ದಾರೆ.. ಇಲ್ಲಾಗಿರೋದು ಕೂಡ ಅದೇ ಬೀದಿ ಬದಿ ವ್ಯಾಪಾರಿಗಳಿಂದ ಸುಲಿಗೆ ಮಾಡ್ತಿದ್ದ ಪೊಲೀಸ್ ಸಿಬ್ಬಂದಿಯ ಬಂಡವಾಳವನ್ನು ಸಾರ್ವಜನಕರು ಬಟಾಬಯಲು ಮಾಡಿದ್ದಾರೆ. ಅಷ್ಟೇ ಅಲ್ಲ ಪೊಲೀಸ್ ಕಳ್ಳ.. ಪೊಲೀಸ್ ಕಳ್ಳ ಎಂದು ಅಟ್ಟಿಸಿಕೊಂಡು ಹೋಗಿದ್ದಾರೆ.. ಮಾಡಿದ್ದ ತಪ್ಪಿಗೆ ಇಬ್ಬರ ತಲೆದಂಡ ಆಗಿದೆ..

ಪೊಲೀಸ್ ಇಲಾಖೆಯನ್ನ ಶಿಸ್ತಿನ ಇಲಾಖೆ ಎಂದು ಕರೆಯಲಾಗುತ್ತೆ. ಆದರೆ ಅಲ್ಲಿಯೂ ಕೂಡ ಪರಿಪೂರ್ಣತಯೆ ಕೊರತೆ ಇದೆ. ಯಾಕಂದ್ರೆ ಪೊಲೀಸರ ಮೇಲೆಯೆ ಹಪ್ತಾ ವಸೂಲಿ ಆರೋಪ ಕೇಳಿ ಬಂದಿದೆ. ರಾಜಗೋಪಾಲನಗರ ಸಿಬ್ಬಂದಿಗಳಾದ ಎಎಎಸ್ಐ ಲಿಂಗರಾಜಮೂರ್ತಿ ಹಾಗು ಹೆಡ್ ಕಾನ್ಸ್‌ಟೇಬಲ್‌ ಪ್ರಸನ್ನ ಕುಮಾರ್ ಎಂಬಿಬ್ಬರನ್ನು ಹಫ್ತಾ ವಸೂಲಿ ಆರೋಪದ ಮೇಲೆ ಅಮಾನತು ಮಾಡಲಾಗಿದೆ. 

ಇದನ್ನೂ ಓದಿ:ಪ್ರಜ್ವಲ್‌ ತಪ್ಪು ಮಾಡಿಲ್ಲ ಅಂದ್ರೆ ಬಂದು ಎಸ್ಐಟಿಗೆ ಸಹಕಾರ ನೀಡು

ಹೌದು.. ಅದು ಮೇ.17 ರ ರಾತ್ರಿ 8.30 ರ ಸಮಯ. ಪೀಣ್ಯ ಎರಡನೇ ಹಂತದಲ್ಲಿರುವ ಇದೇ ರಸ್ತೆಯಲ್ಲಿ ಹೈಡ್ರಾಮಾವೊಂದು ನಡೆದುಹೋಗಿತ್ತು. ಹೊಯ್ಸಳ ವಾಹನವೊಂದು ವೇಗವಾಗಿ ಹೋದ್ರೆ ಹಿಂಬದಿಯಿಂದ ಜನರು ಪೊಲೀಸ್ ಕಳ್ಳ ಪೊಲೀಸ್ ಕಳ್ಳ ಎಂದು ಕೂಗಲು ಶುರು ಮಾಡಿದ್ರು. ಈ ಎಲ್ಲಾ ದೃಶ್ಯಗಳು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು. ಇದೇ ದೃಶ್ಯದ ಆಧಾರದ ಮೇಲೆ ರಾಜಗೋಪಾಲನಗರ ಪೊಲೀಸ್ ಠಾಣೆಯ ಎಎಸ್ಐ ಲಿಂಗರಾಜಮೂರ್ತಿ ಹಾಗೂ ಹೆಡ್ ಕಾನ್ಸ್ಟೇಬಲ್ ಪ್ರಸನ್ನ ಕುಮಾರ್ ನನ್ನ ಉತ್ತರ ವಿಭಾಗ ಡಿಸಿಪಿ ಸೈದುಲು ಅಡಾವತ್ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.

ಆಗಿದ್ದೇನಂದ್ರೆ ಹೊಯ್ಸಳ ಸಿಬ್ಬಂದಿ ವಾಹನ ನಿಲ್ಲಿಸಿ ಹೋಟೆಲ್ ನಿಂದ ಊಟ ಹಾಗೂ ನೀರಿನ ಬಾಟಲ್ ಪಡೆದಿದ್ದಾರೆ. ಅದಕ್ಕೆ ಹಣ ಪಾವತಿ ಮಾಡಿದ್ದಾರೊ ಇಲ್ವೋ ಗೊತ್ತಿಲ್ಲ. ಅದಲ್ಲದೇ ಅಂಗಡಿಗಳಿಂದ ಹಣ ವಸೂಲಿ ಮಾಡ್ತಿದ್ರು ಅನ್ನೋ ಆರೋಪ ಕೂಡ ಇದೇ ಅದೇ ಆರೋಪದ ಮೇಲೆ ಸಾರ್ವಜನಿಕರು ವಿಡಿಯೋ ಮಾಡಿದ್ದಾರೆ. ಬಳಿಕ ಹೊಯ್ಸಳ ವಾಹನ ಸಮೀಪ‌ ಬರ್ತಿದ್ದಂತೆ ವಾಹನ ಚಲಾಯಿಸಿಕೊಂಡು ಇಬ್ಬರು ಸಿಬ್ಬಂದಿಗಳು ತೆರಳಿದ್ದಾರೆ..ಇದೇ ಈಗ ಹಲವು ನುಮಾನಕ್ಕೆ ಕಾರಣ ಆಗಿದೆ. ಸದ್ಯ ಇಬ್ಬರು ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಿರುವ ಉತ್ತರ ವಿಭಾಗ ಡಿಸಿಪಿ ಭ್ರಷ್ಟ ಸಿಬ್ಬಂದಿಗೆ ಎಚ್ಚರಿಕೆ ಕೊಟ್ಟಿದ್ದಾರೆ.. ಘಟನೆಗೆ ಸಂಬಂಧಪಟ್ಟಂತೆ ಇಲಾಖಾ ತನಿಖೆಗೆ ವಹಿಸಿದ್ದು, ಸತ್ಯಾಸತ್ಯತೆ ಹೊರಬರಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News