ಬೆಂಗಳೂರು: ಸಿದ್ದರಾಮಯ್ಯ ಅವಧಿಯ ಕಾಂಗ್ರೆಸ್ ಸರ್ಕಾರ ಹಗರಣಗಳ ಸರ್ಕಾರವಾಗಿತ್ತು. ಅಕ್ರಮ ಲ್ಯಾಪ್ಟ್ಯಾಪ್ ಖರೀದಿ ಸಿದ್ದರಾಮಯ್ಯ ಸರ್ಕಾರದ ಕೂಸು ಎಂದು ಬಿಜೆಪಿ ಆರೋಪಿಸಿದೆ.
ಈ ಬಗ್ಗೆ ಗುರುವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಲ್ಯಾಪ್ಟ್ಯಾಪ್ ಖರೀದಿ ಅವ್ಯವಹಾರದಲ್ಲಿ 100 ಕೋಟಿ ರೂ. ಭ್ರಷ್ಟಾಚಾರ ನಡೆದಿದ್ದು, ತನಿಖೆಯಾಗಿ ಸತ್ಯ ಹೊರಬರಬೇಕೆಂದು ಆಗ್ರಹಿಸಿರುವ ಕಾಂಗ್ರೆಸ್ ನಾಯಕ ಬಸವರಾಜ್ ರಾಯರೆಡ್ಡಿ ಹೇಳಿಕೆಗೆ ತಿರುಗೇಟು ನೀಡಿದೆ.
ಇದನ್ನೂ ಓದಿ: ಸಿದ್ದರಾಮಯ್ಯನವರೇ ನನ್ನ ಜೀವನ ತೆರೆದ ಪುಸ್ತಕವಿದ್ದಂತೆ: ಸಚಿವ ಹೆಬ್ಬಾರ್
‘ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಒಂದು ಲ್ಯಾಪ್ಟಾಪ್ಗೆ 14,490 ರೂ. ಇತ್ತು. ಇದು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 28,320 (Per Laptop) ಆಗಿತ್ತು. ಬೆಲೆ ನಿಗದಿ ಮತ್ತು ಹೆಚ್ಚಳ ಇವೆರಡರಲ್ಲೂ ಕಾಂಗ್ರೆಸ್ ಪಾತ್ರವಿದೆಯೇ ಹೊರತು, ಬಿಜೆಪಿ ಸರ್ಕಾರದ್ದೇನಿಲ್ಲ. ಲ್ಯಾಪ್ಟಾಪ್ ಖರೀದಿ ಅಕ್ರಮದಲ್ಲಿ SG,RG,Office ಮತ್ತು ಕೆಪಿಸಿಸಿ ಕಚೇರಿಗೆ ಎಷ್ಟು % ಸಂದಾಯವಾಗಿದೆ?’ ಎಂದು ಬಿಜೆಪಿ ಪ್ರಶ್ನಿಸಿದೆ.
‘ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಲ್ಯಾಪ್ಟ್ಯಾಪ್ ಬೆಲೆಯನ್ನು 14,490 ರೂ.ನಿಂದ 28,320 ರೂ.ಗೆ ಹೆಚ್ಚಳ ಮಾಡಲಾಗಿತ್ತು. ಕಾಂಗ್ರೆಸ್ ಪಕ್ಷ ಒಳಗೊಂಡ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೇ ಬೆಲೆಯನ್ನು ಹೆಚ್ಚಳ ಮಾಡಿ, ಅನುಮೋದನೆ ನೀಡಿದ್ದು ಕಾಂಗ್ರೆಸ್ಸಿಗರಿಗೆ ಮರೆತು ಹೋಯಿತೇ? ಅದು ಎಷ್ಟು % ವ್ಯವಹಾರವಾಗಿತ್ತು?’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: Bengaluru Acid Attack: ಸ್ವಾಮೀಜಿ ವೇಷತೊಟ್ಟು ಎಸ್ಕೇಪ್ ಆಗಿದ್ದ ಆ್ಯಸಿಡ್ ನಾಗ ಅರೆಸ್ಟ್!
‘ಸಿದ್ದರಾಮಯ್ಯ ಅವಧಿಯ ಕಾಂಗ್ರೆಸ್ ಸರ್ಕಾರ ಹಗರಣಗಳ ಸರ್ಕಾರವಾಗಿತ್ತು. ಅಕ್ರಮ ಲ್ಯಾಪ್ಟ್ಯಾಪ್ ಖರೀದಿ ಸಿದ್ದರಾಮಯ್ಯ ಸರ್ಕಾರದ ಕೂಸು. ಮಾಜಿ ಸಚಿವ ರಾಯರೆಡ್ಡಿಇತರೆ ಕಾಂಗ್ರೆಸ್ ನಾಯಕರಂತೆ Hit and Run ಹೇಳಿಕೆ ನೀಡಿದ್ದಾರೆ. ಹಳೆಯ ಪತ್ರಗಳನ್ನು ನೋಡಿದರೆ ಯಾರು ಅಕ್ರಮವೆಸಗಿದ್ದು ಎಂದು ಸ್ಪಷ್ಟವಾಗುತ್ತಿತ್ತಲ್ಲವೇ? #ಭ್ರಷ್ಟಕಾಂಗ್ರೆಸ್’ ಎಂದು ಬಿಜೆಪಿ ಕಿಡಿಕಾರಿದೆ.
100 ಕೋಟಿ ರೂ. ಅವ್ಯವಹಾರ!
ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲು ಲ್ಯಾಪ್ಟ್ಯಾಪ್ ಖರೀದಿಯಲ್ಲಿ 100 ಕೋಟಿ ರೂ.ಗೂ ಹೆಚ್ಚು ಭ್ರಷ್ಟಾಚಾರ ನಡೆದಿದ್ದು, ಇದರಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಶಾಮೀಲಾಗಿದ್ದಾರೆ ಎಂದು ಬಸವರಾಜ್ ರಾಯರಡ್ಡಿ ಆರೋಪಿಸಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.