ಅವಧಿಗೂ ಮುನ್ನವೇ ವಿಧಾನಸಭಾ ಚುನಾವಣೆಗೆ ಬಿಜೆಪಿ ಮಾಸ್ಟರ್ ಪ್ಲಾನ್..?

ಬಿಬಿಎಂಪಿ ಚುನಾವಣಾ ಫಲಿತಾಂಶ ಅವಲೋಕಿಸಿ ಬಿಜೆಪಿ ಸರ್ಕಾರ ಈ ವರ್ಷದ ನವೆಂಬರ್ ಅಥವಾ ಡಿಸಂಬರ್ ಅಷ್ಟರಲ್ಲಿ ವಿಧಾನಸಭೆ ವಿಸರ್ಜಿಸಿ, ಅವಧಿಗೂ ಮುನ್ನವೇ ಚುನಾವಣೆಗೆ ಹೋಗುವ ಲೆಕ್ಕಾಚಾರ ನಡೆಸುತ್ತಿದೆ.

Written by - Prashobh Devanahalli | Edited by - Puttaraj K Alur | Last Updated : Mar 6, 2022, 01:26 PM IST
  • ಅವಧಿಗೂ ಮುನ್ನವೇ ವಿಧಾನಸಭಾ ಚುನಾವಣೆಗೆ ಬಿಜೆಪಿ ಮಾಸ್ಟರ್ ಪ್ಲಾನ್ ಮಾಡುತ್ತಿದೆ
  • ಬಸವರಾಜ್ ಬೊಮ್ಮಾಯಿ ಸರ್ಕಾರಕ್ಕೆ ಸದ್ಯ ಸಚಿವ ಸಂಪುಟ ವಿಸ್ತರಣೆ ಸವಾಲು ಎದುರಾಗಿದೆ
  • ಬಿಬಿಎಂಪಿ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಕಲ ಸಿದ್ಧತೆ
ಅವಧಿಗೂ ಮುನ್ನವೇ ವಿಧಾನಸಭಾ ಚುನಾವಣೆಗೆ ಬಿಜೆಪಿ ಮಾಸ್ಟರ್ ಪ್ಲಾನ್..?  title=
ವಿಧಾನಸಭಾ ಚುನಾವಣೆಗೆ ಬಿಜೆಪಿ ಮಾಸ್ಟರ್ ಪ್ಲಾನ್..?

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ನೇತೃತ್ವದಲ್ಲಿ ಬಜೆಟ್ ಮಂಡಿಸಿರುವ ಬಿಜೆಪಿ ಸರ್ಕಾರದ ಮುಂದೆ ಇದೀಗ ಸಂಪುಟ ವಿಸ್ತರಣೆಯ ಸವಾಲು ಎದುರಾಗಿದೆ. ಕೆಲವೇ ತಿಂಗಳಲ್ಲಿ ಬಿಬಿಎಂಪಿ ಚುನಾವಣೆ(BMP Election) ಘೋಷಣೆಯಾಗುವ ಸಾಧ್ಯತೆ ಹೆಚ್ಚಾಗಿದ್ದು, ಪಾಲಿಕೆ ಚುಕ್ಕಾಣಿ ಹಿಡಿಯಲು ಬಿಜೆಪಿ ಸಿದ್ಧತೆಗಳನ್ನು ನಡೆಸುತ್ತಿದೆ.

ಬಿಬಿಎಂಪಿ ಚುನಾವಣಾ ಫಲಿತಾಂಶ(BBMP Election Result)ವನ್ನು ಅವಲೋಕಿಸಿ ಬಿಜೆಪಿ ಸರ್ಕಾರ ಈ ವರ್ಷದ ನವೆಂಬರ್ ಅಥವಾ ಡಿಸಂಬರ್ ಅಷ್ಟರಲ್ಲಿ ವಿಧಾನಸಭೆ ವಿಸರ್ಜಿಸಿ, ಅವಧಿಗೂ ಮುನ್ನವೇ ಚುನಾವಣೆಗೆ ಹೋಗುವ ಲೆಕ್ಕಾಚಾರ ನಡೆಸುತ್ತಿದೆ ಎಂಬ ಮಾತುಗಳು ಕಮಲ ಪಾಳಯದ ಆಂತರಿಕ ವಲಯದಲ್ಲಿ ಕೇಳಿಬರುತ್ತಿವೆ.

ಇದನ್ನೂ ಓದಿ: ಉಕ್ರೇನ್‌ನಿಂದ ವಾಪಸಾದ ಧಾರವಾಡದ ವಿದ್ಯಾರ್ಥಿನಿಗೆ ಸಿಎಂ ಬೊಮ್ಮಾಯಿ ಸ್ವಾಗತ

ಪದೇ ಪದೇ ನಾಯಕತ್ವ ಬದಲಾವಣೆ; ಶಾಸಕರಿಗೆ ಇರುಸು ಮುರುಸು!

ರಾಜ್ಯದಲ್ಲಿ ಬಿಜೆಪಿ ಸರ್ಕಾರ(BJP Government)ವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಬಿ.ಎಸ್.ಯಡಿಯೂರಪ್ಪರನ್ನು ವಯೋಮಿತಿಯ ನೆಪ ಹೇಳಿ ಅಧಿಕಾರದಿಂದ ಕೆಳಗಿಳಿಸಿದ್ದ ಬಿಜೆಪಿ ಹೈಕಮಾಂಡ್ ಬಸವರಾಜ್ ಬೊಮ್ಮಾಯಿಗೆ ಸಿಎಂ ಪಟ್ಟ ನೀಡಿತ್ತು. ಇದರಿಂದ ಬಿಎಸ್ ವೈ ಬೆಂಬಲಿಗ ಶಾಸಕರಿಗೆ ಹಿನ್ನಡೆ ಜೊತೆಗೆ ಇರುಸು ಮುರುಸು ಉಂಟಾಗಿತ್ತು.

ಅಧಿಕಾರ ವಹಿಸಿದ ದಿನದಿಂದಲೂ 6 ತಿಂಗಳ ಸಿಎಂ ಎಂದು ಕರೆಸಿಕೊಂಡ ಬೊಮ್ಮಾಯಿ(Basavaraj Bommai) ಸದ್ಯ ಆಡಳಿತ ನಡೆಸುತ್ತಿದ್ದಾರೆ. ಬೆಂಗಳೂರು ಉಸ್ತುವಾರಿ ಇವರ ಬಳಿಯೇ ಉಳಿದಿದ್ದು, ಈ ಸ್ಥಾನದ ಮೇಲೆ ಕಂದಾಯ ಸಚಿವ ಆರ್.ಅಶೋಕ್ ಮತ್ತು ವಸತಿ ಸಚಿವ ಸೋಮಣ್ಣ ಕಣ್ಣಿಟ್ಟಿದ್ದರೆ. ಬಿಬಿಎಂಪಿ ಚುನಾವಣೆಗೆ ಸೂತ್ರಧಾರ ಆಗುವ ಅವಕಾಶ ಯಾರಿಗೆ ಸಿಗತ್ತೆ ಅಂತಾ ಇವರಿಬ್ಬರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇಬ್ಬರು ಬೆಂಗಳೂರಿನ ಮೇಲೆ ಉತ್ತಮ ಹಿಡಿತ ಸಾಧಿಸಿದ್ದು, ಒಬ್ಬರಿಗೆ ಕೊಟ್ಟರೆ ಮತ್ತೊಬ್ಬರ ರಾಜಕೀಯ ಪರಿಣಾಮ ಹೇಗಿರುತ್ತದೆ ಎಂಬ ಚಿಂತೆಯಲ್ಲಿ ಸಿಎಂ ಇದ್ದಾರೆ.

ಇದನ್ನೂ ಓದಿ: Kartanataka Job Growth Rate : ರಾಜ್ಯ ಕೈಗಾರಿಕೆ ವಲಯದಲ್ಲಿ ಉದ್ಯೋಗ ಬೆಳವಣಿಗೆ ದರ ಭಾರೀ ಕುಸಿತ!

ಇನ್ನುಳಿದಂತೆ ಸಚಿವ ಪ್ರಭು ಚವ್ಹಾಣ್, ಶಶಿಕಲಾ ಜೊಲ್ಲೆ, ಗೋವಿಂದ ಕಾರಜೋಳ ಸೇರಿದಂತೆ ಕೆಲ ಶಾಸಕರನ್ನು ಸಂಪುಟ ಸರ್ಜರಿಯಲ್ಲಿ ಕೈಬಿಡುವ ಸಾಧ್ಯತೆಗಳು ಹೆಚ್ಚಿದ್ದು,ಇವರ ಸ್ಥಾನಕ್ಕೆ ಯಾವ ನಾಯಕರನ್ನು ನೇಮಿಸಬಹುದು ಎಂಬ ಚಿಂತೆಯಲ್ಲಿ ಬಿಜೆಪಿ ಇದೆ.

ಪಂಚರಾಜ್ಯ ಚುನಾವಣೆ ಫಲಿತಾಂಶದ ಬಳಿಕ ಗಮನ

ಸದ್ಯಕ್ಕೆ ಪಂಚರಾಜ್ಯಗಳ ಚುನಾವಣೆಯಲ್ಲಿ ಬ್ಯುಸಿ ಆಗಿರುವ ಬಿಜೆಪಿ ಹೈಕಮಾಂಡ್, ಮಾರ್ಚ್ 10ರ ನಂತರ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡಲಿದೆ ಎಂಬ ಮಾತುಗಳು ರಾಜ್ಯ ಬಿಜೆಪಿಯಲ್ಲಿ ಕೇಳಿಬರುತ್ತಿವೆ. ಸಂಪುಟ ರಚನೆ, ಬಿಬಿಎಂಪಿ ಚುನಾವಣೆ ಹಾಗೂ ಮುಂದಿನ ಚುನಾವಣೆ(Karnataka Assembly Election)ಯ ತಯಾರಿ ಬಗ್ಗೆ ಸರಣಿ ಸಭೆಗಳನ್ನು ರಾಜ್ಯ ಬಿಜೆಪಿ ನಾಯಕರ ಜೊತೆ ನಡೆಸಲಿದೆ ಎಂದು ತಿಳಿದುಬಂಬಿದೆ.

ಇದೇ ವೇಳೆ ಶಾಸಕರ, ಸಚಿವರ, ಮುಖ್ಯಮಂತ್ರಿ ಬೊಮ್ಮಾಯಿಯವರ 6 ತಿಂಗಳ ಸಾಧನೆ ಬಗ್ಗೆ ವಿಚಾರ ಮಾಡಲಿದೆ. ಕಳಪೆ ಅಧಿಕಾರ ನಡೆಸುತ್ತಿರುವ ನಾಯಕರನ್ನು ಪಕ್ಷದ ಸಂಘಟನೆಗೆ ಬಳೆಸಿಕೊಂಡು ಅಧಿಕಾರ ವಂಚಿತ ನಾಯಕರಿಗೆ ಅವಕಾಶ ನೀಡುವ ಸಾಧ್ಯತೆ ಕೂಡ ಇದೆ. ಒಟ್ಟಾರೆ  ಹೈಕಮಾಂಡ್ ಮಾತಿನ ಮೇಲೆ ನಡೆಯುವ ರಾಜ್ಯ ಬಿಜೆಪಿ(BJP) ಪ್ಲಾನ್ A, ಪ್ಲಾನ್ B ಸಿದ್ಧಪಡಿಸಿಕೊಂಡಿದೆಯಂತೆ. 2023ರಲ್ಲಿ ನಡೆಯಬೇಕಾಗಿರುವ ವಿಧಾಸಭಾ ಚುನಾವಣೆಗೂ ಮುನ್ನವೇ ಅಂದರೆ ಅವಧಿಗೂ ಮುಂಚಿತವಾಗಿ ಚುನಾವಣೆಗೆ ಹೋದರೆ ಪರಿಣಾಮ ಹೇಗಿರಬಹುದೆಂಬ ಆತಂತರಿಕ ಅಭಿಮತಗಳನ್ನು ಅಧಿವೇಶನದ ನಂತರ ಸ್ವಂತ ಕ್ಷೇತ್ರಕ್ಕೆ ತೆರಳುವ ಶಾಸಕರು ನೀಡಲಿದ್ದಾರೆ. ಇದರ ಆಧಾರದ ಮೇಲೆ ಮುಂದಿನ ಹೆಜ್ಜೆಗಳನ್ನು ಬಿಜೆಪಿ ಇಡಲಿದೆ ಅಂತಾ ಮೂಲಗಳು ತಿಳಿಸಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News