ಬೆಂಗಳೂರು : ಕೈಗಾರಿಕಾ ವಲಯದಲ್ಲಿ ಕರ್ನಾಟಕ ಸಾಕಷ್ಟು ಹಿಂದುಳಿದಿದ್ದು, ಕಳೆದ ಐದು ವರ್ಷದಲ್ಲಿ ಶೇ 6.1 ಸಿಎಜಿಆರ್ ಮಾತ್ರ ಸಾಧಿಸಿದೆ. ಈ ಮೂಲಕ ರಾಜ್ಯದ ಜಿಡಿಪಿಗೆ ರಾಜ್ಯದ ಕೈಗಾರಿಕೆಗಳು ಕೇವಲ 20.3% ಕೊಡುಗೆ ನೋಡುತ್ತಿದೆ.
ಗುಜರಾತ್ ರಾಜ್ಯದ ಒಟ್ಟು ಜಿಡಿಪಿ(GDP)ಗೆ ಅಲ್ಲಿನ ಕೈಗಾರಿಕೆಗಳು 48.2% ನೀಡಿದರೆ, ತಮಿಳುನಾಡಿನಲ್ಲಿ ಶೇ 33, ಮಹಾರಾಷ್ಟ್ರದಲ್ಲಿ ಶೇ 28.4 ರಷ್ಟು ಪಾಲು ಆ ರಾಜ್ಯಗಳ ಕೊಡುಗೆ ಜಿಡಿಪಿಗೆ ಇದೆ. ಆದರೆ ಕರ್ನಾಟಕ ಕೇವಲ 20.3% ಇರುವ ಹಿನ್ನಲೆಯಲ್ಲಿ ಉದ್ಯೋಗ ದರ ತೀವ್ರ ಕುಸಿತಗೊಂಡಿದೆ ಎಂದು ರಾಜ್ಯ ಸರ್ಕಾರ ನಡೆಸಿರುವ ಆರ್ಥಿಕ ಸಮೀಕ್ಷೆಯ ಅಂಕಿಅಂಶಗಳು ತಿಳಿಸಿವೆ.
ಇದನ್ನೂ ಓದಿ : ಉಕ್ರೇನ್‌ನಿಂದ ವಾಪಸಾದ ಧಾರವಾಡದ ವಿದ್ಯಾರ್ಥಿನಿಗೆ ಸಿಎಂ ಬೊಮ್ಮಾಯಿ ಸ್ವಾಗತ
ಪ್ರಗತಿ ಕಾಣದ ಕೈಗಾರಿಕಾ ವಲಯ; ಕಾರಣ ಏನು?
ಕೋವಿಡ್-19 : ಕೋವಿಡ್ ಮಹಾಮಾರಿ ಆರ್ಥಿಕತೆ ಮೇಲೆ ಕರಾಳ ಛಾಯೆ ಬೀರಿದ್ದು, ಸರಣಿ ಲಾಕ್ ಡೌನ್(Lock Down), ಜಾಗತಿಕ ಮಟ್ಟದಲ್ಲಿ ಬೇಡಿಕೆ ಇಳಿಕೆ ಕಾರಣದಿಂದ ಕೈಗಾರಿಕೆ ಪ್ರಗತಿಯಲ್ಲಿ ಕುಂಠಿತವಾಗಿದೆ.
ದುಬಾರಿ ವಿದ್ಯುತ್ ಶುಲ್ಕ: ಇತರೆ ರಾಜ್ಯಗಳಿಗೆ ಹಾಲೊಸಿದರೆ ಕರ್ನಾಟಕದಲ್ಲಿ ವಿದ್ಯುತ್ ಶುಲ್ಕ ಹೆಚ್ಚಾಗಿದ್ದು, ಕೈಗಾರಿಗೆಗಳಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸಾಮಾನ್ಯವಾಗಿ ಕಾರ್ಖಾನೆಗಳಿಗೆ ಅಧಿಕ ವಿದ್ಯುತ್ ಬಳಕೆ ಅಗತ್ಯವಿರುತ್ತದೆ, ಸದ್ಯ ಒಂದು ಕಿಲೋ ವಾಟ್ ಗೆ ಅಂದಾಜು ₹220 ರೂಪಾಯಿ ಬರಿಸಲಾಗುತ್ತಿದೆ.
2017 ರಲ್ಲಿ ವಿದ್ಯುತ್(Electricity) ಬಳಕೆ 54,183 ಮಿಲಿಯನ್ ಯೂನಿಟ್ ಇದ್ದು, 2021ರಲ್ಲಿ 54,284 ಮಿಲಿಯನ್ ಯೂನಿಟ್ ಬಳಕೆ ಆಗಿದೆ.
ಹಣಕಾಸು ನೆರವು : ರಾಜ್ಯದಲ್ಲಿ ಅಂದಾಜು 8.5 ಲಕ್ಷ ಉದ್ದಿಮೆಗಳು ಇವೆ, ಹಾಗೂ ಇದರಿಂದ 55 ಲಕ್ಷ ಜನರಿಗೆ ಉದ್ಯೋಗ ನೀಡಿದೆ. ಕೃಷಿ ಕ್ಷೇತ್ರ ನಂತರ ಗುಡಿ,ಸಣ್ಣ,ಮಧ್ಯಮ ಕೈಗಾರಿಕೆಗಳು ಅತೀ ಹೆಚ್ಚು ಉದ್ಯೋಗ ನೀಡುವ ವಲಯ, ಇದಕ್ಕೆ ಸೂಕ್ತ ಹಣಕಾಸಿನ ನೆರವು ಸಿಗಡೆಯಿರುವುದು ವಿಪರ್ಯಾಸ.
ಇದನ್ನೂ ಓದಿ : "ಭಾರತದ ಧ್ವಜವೇ ಉಕ್ರೇನ್ ನಲ್ಲಿ ನಮಗೆ ಶ್ರೀರಕ್ಷೆ".. ಯುದ್ಧದ ಭೀಕರತೆ ಬಿಚ್ಚಿಟ್ಟ ವಿದ್ಯಾರ್ಥಿನಿ
ಬಂಡವಾಳ ಅಲಭ್ಯತೆ, ಹೆಚ್ಚಿನ ಬಡ್ಡಿಯ ಸಾಲ(Loan), ರಾಷ್ಟ್ರೀಯ ಬ್ಯಾಂಕ್ ಗಳಿಂದ ಸಾಲ ನೀಡುವಲ್ಲಿ ಕನಿಷ್ಠ ಆದ್ಯತೆ ಕಾರಣಗಳಿಂದ ರಾಜ್ಯದ ಕೈಗಾರಿಕೆಗಳು ಹಿಂದುಳಿದಿವೆ.
ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಪ್ರಕಟಿಸುವ ಈಸ್ ಆಫ್ ಡುಯಿಂಗ್ ಬಿಸ್ನೆಸ್ ಸೂಚ್ಯಂಕದಡಿ 2019ರಲ್ಲಿ 17ಕ್ಕೆ ಶ್ರೇಣಿಗೆ ಇಳಿಕೆ ಆಗಿದೆ.
ಒಟ್ಟಾರೆ ಕೋಟ್ಯಾಂತರ ಜನರಿಗೆ ಉದ್ಯೋಗ ನೋಡುವ ಕೈಗಾರಿಕೆಗಳು(Industry) ಅನೇಕ ಕಾರಣಗಳಿಂದ ಹಿಂದುಳಿದಿವೆ, ಹೀಗೆ ಮುಂದುವರೆದರೆ ಅನೇಕರು ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗುವ ಸಾಧ್ಯತೆ ಹೆಚ್ಚಿವೆ. ಕೂಡಲೇ ಸರ್ಕಾರ ಕೈಗಾರಿಗೆಗಳಿಗೆ ಆರ್ಥಿಕ ನೆರವು ನೀಡುವ ಜೊತೆಗೆ, ವಿದ್ಯುತ್ ಶುಲ್ಕ ಇಳಿಕೆ ಮಾಡಬೇಕು.