ಆಂಟೋನಿಯೋ ಮೈನೋ ಕೃಪೆಗಾಗಿ ಹುಟ್ಟಿದ ಧರ್ಮವನ್ನೇ ತುಳಿಯುತ್ತೀರಾ?: ಡಿಕೆಶಿ-ಸಿದ್ದುಗೆ ಬಿಜೆಪಿ ಪ್ರಶ್ನೆ

ಸಿದ್ದರಾಮಯ್ಯನವರೇ ಕದ್ದುಮುಚ್ಚಿ #AntiConversionBill ಮಂಡನೆ ಮಾಡುವ ಅಗತ್ಯ ನಮಗಿಲ್ಲ. ಮಸೂದೆಯನ್ನು ಮಂಡನೆ ಮಾಡಬೇಕೆಂಬ ಉದ್ದೇಶದಿಂದಲೇ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

Written by - Zee Kannada News Desk | Last Updated : Dec 21, 2021, 08:51 PM IST
  • ಬಲವಂತ ಮತಾಂತರಕ್ಕೆ ಸಹಮತಿ-ಸಹಾನುಭೂತಿ ತೋರಿಸುತ್ತಿದ್ದ ಕಾಂಗ್ರೆಸ್‌ ನಾಯಕರಿಗೆ ದಿಕ್ಕು ಕಾಣದಂತಾಗಿದೆ
  • ಮತಾಂತರ ನಿಷೇಧ ವಿಧೇಯಕದ ಪ್ರತಿಯನ್ನು ಸದನದಲ್ಲೇ ಡಿಕೆಶಿ ಹರಿದು ಹಾಕಿದ್ದು ಸಂಸದೀಯ ನಡವಳಿಕೆಯೇ?
  • ಆಂಟೋನಿಯೋ ಮೈನೋ ಕೃಪೆ ಗಳಿಸಲು ಹುಟ್ಟಿದ ಧರ್ಮವನ್ನೇ ತುಳಿಯುತ್ತಿದ್ದೀರಾ? ಅಂತಾ ಪ್ರಶ್ನಿಸಿದ ಬಿಜೆಪಿ
ಆಂಟೋನಿಯೋ ಮೈನೋ ಕೃಪೆಗಾಗಿ ಹುಟ್ಟಿದ ಧರ್ಮವನ್ನೇ ತುಳಿಯುತ್ತೀರಾ?: ಡಿಕೆಶಿ-ಸಿದ್ದುಗೆ ಬಿಜೆಪಿ ಪ್ರಶ್ನೆ title=
ಡಿಕೆಶಿ & ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ

ಬೆಂಗಳೂರು: ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ, ಸ್ವಾರ್ಥಕ್ಕಾಗಿ, ಇನ್ನೊಬ್ಬರ ಮನೆಗೆ ಬಿದ್ದ ಬೆಂಕಿಯಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿದ್ದ ಹಾಗೂ ಬಲವಂತ ಮತಾಂತರಕ್ಕೆ ಸಹಮತಿ - ಸಹಾನುಭೂತಿ ತೋರಿಸುತ್ತಿದ್ದ ಕಾಂಗ್ರೆಸ್‌ ನಾಯಕರಿಗೆ ಈಗ ದಿಕ್ಕು ಕಾಣದಂತಾಗಿದೆ ಎಂದು ಬಿಜೆಪಿ ಟೀಕಿಸಿದೆ. ಮತಾಂತರ ನಿಷೇಧ ವಿಧೇಯಕ(Anti Conversion Bill 2021) ಮಂಡನೆ ವಿಚಾರವಾಗಿ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಗೆ ಬಿಜೆಪಿ ತಿರುಗೇಟು ನೀಡಿದೆ.

‘ಮತಾಂತರ ನಿಷೇಧ ವಿಧೇಯಕದ ಪ್ರತಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಅವರು ಸದನದಲ್ಲೇ ಹರಿದು ಹಾಕಿದರು. ಇದು ಸಂಸದೀಯ ನಡವಳಿಕೆಯೇ? ಯಾರನ್ನು ಮೆಚ್ಚಿಸುವುದಕ್ಕಾಗಿ ಸದನದಲ್ಲಿ ಈ ರೀತಿಯ ಗೂಂಡಾಗಿರಿ ಪ್ರದರ್ಶನ ಮಾಡುತ್ತೀರಿ? ಆಂಟೋನಿಯೋ ಮೈನೋ ಅವರ ಕೃಪೆ ಗಳಿಸಲು ಹುಟ್ಟಿದ ಧರ್ಮವನ್ನೇ ತುಳಿಯುತ್ತಿದ್ದೀರಾ?’ ಅಂತಾ ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: ಸಂವಿಧಾನ ವಿರೋಧಿ ನಡೆಗಳನ್ನೇಕೆ ಕಾಂಗ್ರೆಸ್‌ ಪ್ರೋತ್ಸಾಹಿಸುತ್ತಿದೆ?: ಬಿಜೆಪಿ ಪ್ರಶ್ನೆ

‘ಬಲವಂತದ ಮತಾಂತರದ ತಡೆಗೆ ಈಗಾಗಲೇ ಕಾನೂನುಗಳಿರುವುದು ನಿಜ. ಆದರೂ ಬಲವಂತದ ಮತಾಂತರ(Anti Conversion) ನಡೆಯುತ್ತಿದೆ. ಹೀಗಾಗಿ ಕಾನೂನನ್ನು ಮತ್ತಷ್ಟು ಬಲಿಷ್ಠಗೊಳಿಸಿದರೆ ನಿಮಗೆ ಏನು ಸಮಸ್ಯೆ? ಮತಾಂತರಕ್ಕೆ ನೀವು ಏಕೆ ಪ್ರೋತ್ಸಾಹ ನೀಡುತ್ತಿದ್ದೀರಿ? ಮತ ಹೆಚ್ಚುತ್ತದೆ ಎಂಬ ದುರಾಸೆಯೇ?’ ಅಂತಾ ಕಾಂಗ್ರೆಸ್ ಗೆ ಬಿಜೆಪಿ ಪ್ರಶ್ನಿಸಿದೆ.

‘ಸಿದ್ದರಾಮಯ್ಯನವರೇ ಕದ್ದುಮುಚ್ಚಿ #AntiConversionBill ಮಂಡನೆ ಮಾಡುವ ಅಗತ್ಯ ನಮಗಿಲ್ಲ. ಮಸೂದೆಯನ್ನು ಮಂಡನೆ ಮಾಡಬೇಕೆಂಬ ಉದ್ದೇಶದಿಂದಲೇ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ. ಈ ಕಾಯ್ದೆ ಜಾರಿ ನಮ್ಮ ಬದ್ಧತೆ, ಅದರಂತೆ ನಡೆದುಕೊಂಡಿದ್ದೇವೆ. ಯಾವುದು ಸಂವಿಧಾನ ವಿರುದ್ಧ? ಯಾವುದು ವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ? ಬಡವರು, ದುರ್ಬಲರು, ಅಶಕ್ತರು, ಅಪ್ರಾಪ್ತರನ್ನು ಆಮಿಷ ತೋರಿ ಮತಾಂತರ ಮಾಡುವುದು ನಿಮ್ಮ ಪ್ರಕಾರ ಸಂವಿಧಾನದ ಆಶಯಕ್ಕೆ ಸಮಾನವಾದುದೇ? ಮೊದಲು ಸಂವಿಧಾನವನ್ನು ಸರಿಯಾಗಿ ಓದಿ. ಆಮೇಲೆ #AntiConversionBill ಕುರಿತು ಮಾತನಾಡಿ’ ಅಂತಾ ಬಿಜೆಪಿ ಕುಟುಕಿದೆ.

ಇದನ್ನೂ ಓದಿ: Anti Conversion Bill 2021: ಭಾರೀ ವಿರೋಧದ ನಡುವೆಯೇ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ

‘ಯಾರು ಯಾರನ್ನು ಮದುವೆಯಾಗಬೇಕೆಂಬುದನ್ನು ಸರ್ಕಾರ ನಿರ್ಧರಿಸುವುದಿಲ್ಲ. ಅದು ವ್ಯಕ್ತಿಯ ಆಯ್ಕೆ. ಆದರೆ ಮದುವೆಯಾಗುತ್ತೇನೆಂದು ಬಡ ಹೆಣ್ಣು ಮಕ್ಕಳಿಗೆ, ಮುಗ್ಧರಿಗೆ ಆಮಿಷ ತೋರಿ ಮತಾಂತರ ಮಾಡುವುದನ್ನು ನಿಯಂತ್ರಿಸುವುದು ಸರ್ಕಾರದ ಕರ್ತವ್ಯ. ಅದಕ್ಕಾಗಿಯೇ #AntiConversionBill ತಂದಿದ್ದೇವೆ. ಸಿದ್ದರಾಮಯ್ಯನವರೇ ಶಿಕ್ಷಣ ಪ್ರತಿಯೊಬ್ಬ ನಾಗರಿಕನ ಹಕ್ಕು. ಆದರೆ ಶಿಕ್ಷಣ ವಂಚಿತರಿಗೆ ಶಿಕ್ಷಣ, ಉದ್ಯೋಗದ ಆಮಿಷ ತೋರಿ ಮತಾಂತರ ಮಾಡುವುದು ಸಂವಿಧಾನದ ಆಶಯಕ್ಕೆ ಪೂರಕವೇ? ಮತಾಂತರ ಸಂವಿಧಾನದ ಆಶಯಕ್ಕೆ ವ್ಯತಿರಿಕ್ತವಾದುದು. ಸಂವಿಧಾನದ ಹೆಸರಿನಲ್ಲಿ ಜನರನ್ನು ಏಕೆ ದಾರಿ ತಪ್ಪಿಸುತ್ತೀರಿ?’ ಅಂತಾ ಬಿಜೆಪಿ(BJP Karnataka) ಪ್ರಶ್ನಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News