ಬೆಂಗಳೂರಿನ ಮೊದಲ ಉಕ್ಕಿನ ಫ್ಲೈ ಓವರ್ ಗೆ ಅಪ್ಪು ಹೆಸರು : ಬಿಬಿಎಂಪಿ ಕಮಿಷನರ್ ಗೆ ಬಿಜೆಪಿ ಮುಖಂಡ ಪತ್ರ

ಉಕ್ಕಿನ ಫ್ಲೈ ಓವವರ್ ಗೆ ಪುನೀತ್ ರಾಜ್ ಕುಮಾರ್ ಹೆಸರಿಡುವಂತೆ  ಬಿಜೆಪಿ ಮುಖಂಡ  ರಮೇಶ್ ಎನ್ ಆರ್ ಬಿಬಿಎಂಪಿ ಕಮಿಷನರ್ ಗೆ ಪತ್ರ ಬರೆದಿದ್ದಾರೆ.   

Written by - Ranjitha R K | Last Updated : Oct 14, 2022, 05:04 PM IST
  • ಉಕ್ಕಿನ ಫ್ಲೈ ಓವವರ್ ಗೆ ಅಪ್ಪು ಹೆಸರಿಡುವ ಸಾಧ್ಯತೆ
  • ಬಿಬಿಎಂಪಿ ಕಮಿಷನರ್ ಗೆ ಪತ್ರ ಬರೆದ ಬಿಜೆಪಿ ಮುಖಂಡ
  • ಡಾ. ಪುನೀತ್ ರಾಜ್ ಕುಮಾರ್ ಫ್ಲೈ ಓವರ್ ಎಂದು ನಾಮಕರಣ ಮಾಡಲು ಮನವಿ
ಬೆಂಗಳೂರಿನ ಮೊದಲ ಉಕ್ಕಿನ ಫ್ಲೈ ಓವರ್ ಗೆ ಅಪ್ಪು ಹೆಸರು :  ಬಿಬಿಎಂಪಿ ಕಮಿಷನರ್ ಗೆ ಬಿಜೆಪಿ ಮುಖಂಡ ಪತ್ರ  title=
letter to bbmp

ಬೆಂಗಳೂರು : ಬೆಂಗಳೂರಿನ ಮೊದಲ ಉಕ್ಕಿನ ಫ್ಲೈ ಓವವರ್ ಗೆ ಅಪ್ಪು ಹೆಸರಿಡುವ ಸಾಧ್ಯತೆ ಇದೆ. ಉಕ್ಕಿನ ಫ್ಲೈ ಓವವರ್ ಗೆ ಪುನೀತ್ ರಾಜ್ ಕುಮಾರ್ ಹೆಸರಿಡುವಂತೆ  ಬಿಜೆಪಿ ಮುಖಂಡ  ರಮೇಶ್ ಎನ್ ಆರ್ ಬಿಬಿಎಂಪಿ ಕಮಿಷನರ್ ಗೆ ಪತ್ರ ಬರೆದಿದ್ದಾರೆ. ಈ ಸೇತುವೆಗೆ ಡಾ. ಪುನೀತ್ ರಾಜ್ ಕುಮಾರ್ ಫ್ಲೈ ಓವರ್  ಎಂದು ನಾಮಕರಣ ಮಾಡುವಂತೆ ಆಗ್ರಹಿಸಿದ್ದಾರೆ. 

ಶಿವಾನಂದ ಸರ್ಕಲ್ ಬಳಿ ಬೆಂಗಳೂರಿನ ಮೊದಲ ಉಕ್ಕಿನ ಫ್ಲೈ ಓವರ್ ನಿರ್ಮಾಣವಾಗಿದೆ. ಈ ಫ್ಲೈ ಓವರ್ ಕಾಮಗಾರಿಗೆ ಈ ಹಿಂದೆ ಶಿವಾನಂದ ಸ್ಟೋರ್ ನವರು ಅಡ್ಡಿಪಡಿಸಿದ್ದರು.  ಇದೀಗ ಫ್ಲೈ ಓವರ್ ಕಾಮಗಾರಿ  ಮುಕ್ತಾಯವಾಗಿದೆ.  ಆದುದರಿಂದ  ಈ ಸೇತುವೆಗೆ ಯಾವುದೇ ಕಾರಣಕ್ಕೂ ಶಿವಾನಂದ ಫ್ಲೈ ಓವರ್ ಎಂದು ನಾಮಕರಣ ಆಗಬಾರದು ಎಂದು ಬಿಜೆಪಿ ಮುಖಂಡ  ರಮೇಶ್ ಎನ್ ಆರ್  ಪತ್ರ ಬರೆದಿದ್ದಾರೆ. ಬದಲಾಗಿ ಈ ಮೇಲ್ಸೆತುವೆಗೆ  ಪುನೀತ್ ರಾಜ್ ಕುಮಾರ ಹೆಸರಿಸುವಂತೆ ಆಗ್ರಹಿಸಿದ್ದಾರೆ. 

ಇದನ್ನೂ ಓದಿ : Crime News: ಚಿಕ್ಕ ಕೋಣೆಗಾಗಿ ಅತ್ತೆಯನ್ನೇ ಹೊಡೆದು ಕೊಂದ ಸೊಸೆ..!

ಔನೀತ ರಾಜ್ ಕುಮಾರ್ ಕನ್ನಡ ಸಿನಿರಂಗದಲ್ಲಿ ಸೇವೆ ಸಲ್ಲಿಸಿರುವುದು ಮಾತ್ರವಲ್ಲ, ಸಾಮಾಜಿಕ ಕಳಕಳಿ ಇದ್ದ ವ್ಯಕ್ತಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಉಕ್ಕಿನ ಮೇಲ್ಸೆತುವೆಗೆ ಈ ಬಗ್ಗೆ ಬಿಬಿಎಂಪಿ ಕಮಿಷನರ್ ಗೆ ಪತ್ರ ಬರೆದ ಬಿಜೆಪಿ ಮುಖಂಡ ಡಾ. ಪುನೀತ್ ರಾಜ್ ಕುಮಾರ್ ಫ್ಲೈ ಓವರ್ ಎಂದು  ನಾಮಕರಣ ಮಾಡುವಂತೆ ಪತ್ರ ಬರೆದಿದ್ದಾರೆ. 

ಈಗಾಗಲೇ ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ಒಂದಕ್ಕೆ ಅಪ್ಪು ಹೆಸರಿಡಲಾಗಿದೆ. ಅದರಂತೆ ನೂತನ ಉಕ್ಕಿನ ಸೇತುವೆಗೂ ಅಪ್ಪು ಹೆಸರು ಇಡುವಂತೆ  ಬಿಬಿಎಂಪಿ ಆಯುಕ್ತರು ಹಾಗೂ ಆಡಳಿತಾಧಿಕಾರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ. 

ಇದನ್ನೂ ಓದಿ : ಕಾಂಗ್ರೆಸ್ ಪಕ್ಷಕ್ಕೆ ಪ್ರಧಾನಿ ಮೋದಿ ರಾಮನಾಮ ಜಪಿಸುವಂತೆ ಮಾಡಿದ್ದಾರೆ: ಬಿಜೆಪಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News