ನೀನೇನು ಅಂತಾ ಗೊತ್ತಿದೆ, ನೀನೊಬ್ಬ ಅಸಮರ್ಥ ಮಂತ್ರಿ; ಸಚಿವ ನಾರಾಯಣಗೌಡ ವಿರುದ್ಧ ಬಿಜೆಪಿ ಶಾಸಕನಿಂದಲೇ ಏಕವಚನದ ಅವಾಜ್

ತೋಟಗಾರಿಕಾ ಸಚಿವ ನಾರಾಯಣಗೌಡ ಹಾಗೂ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ನಡುವೆ ವಿಧಾನಸಭೆ ಸದನದ ಹೊರಗೆ ಶಾಸಕರಿಗಾಗಿ ಇರುವ ಹೊಟೇಲ್ ನಲ್ಲಿ ಜಟಾಪಟಿ ನಡದಿದೆ. ಇದೇ ವೇಳೆ ಇವರಿಬ್ಬರು ಕೈ ಕೈ ಮಿಲಾಯಿಸಲು ಮುಂದಾಗಿದ್ದಾರೆ.

Updated: Sep 21, 2020 , 03:25 PM IST
ನೀನೇನು ಅಂತಾ ಗೊತ್ತಿದೆ, ನೀನೊಬ್ಬ ಅಸಮರ್ಥ ಮಂತ್ರಿ; ಸಚಿವ ನಾರಾಯಣಗೌಡ ವಿರುದ್ಧ ಬಿಜೆಪಿ ಶಾಸಕನಿಂದಲೇ ಏಕವಚನದ ಅವಾಜ್
File Image

ಬೆಂಗಳೂರು: ಸರ್ಕಾರ ನಡೆಸುವ ಸಚಿವರು ಹಾಗೂ ವಿರೋಧ ಪಕ್ಷದ ಶಾಸಕರು ನಡುವೆ ಜಗಳ ಆಗುವುದು, ವಾಗ್ಯುದ್ದ ಆಗುವುದು ಸಾಮಾನ್ಯ. ಆದರೆ ಆಡಳಿತಾರೂಢ ಬಿಜೆಪಿ (BJP) ಸಚಿವರು ಹಾಗೂ ಶಾಸಕರ ನಡುವೆಯೇ ಮಾತಿನ ಚಕಮಕಿ ನಡೆದಿದೆ ಮತ್ತು ಕೈ ಕೈ ಮಿಲಾಯಿಸುವ ಹಂತ ತಲುಪಿದೆ.

ತೋಟಗಾರಿಕಾ ಸಚಿವ ನಾರಾಯಣಗೌಡ (Narayan Gowda) ಹಾಗೂ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ನಡುವೆ ವಿಧಾನಸಭೆ ಸದನದ ಹೊರಗೆ ಶಾಸಕರಿಗಾಗಿ ಇರುವ ಹೊಟೇಲ್ ನಲ್ಲಿ ಜಟಾಪಟಿ ನಡದಿದೆ. ಇದೇ ವೇಳೆ ಇವರಿಬ್ಬರು ಕೈ ಕೈ ಮಿಲಾಯಿಸಲು ಮುಂದಾಗಿದ್ದಾರೆ.

ಇಂದಿನಿಂದ ರಾಜ್ಯ ವಿಧಾನ ಮಂಡಲದ ಅಧಿವೇಶನ ಆರಂಭ: ಸರಿಯಾಗಿ ನಡೆಯುವುದು ಅನುಮಾನ

ಅಧಿವೇಶನದಲ್ಲಿ ಪಾಲ್ಗೊಳ್ಳಲು ಬಂದ ಶಾಸಕರಿಗಾಗಿ ಮಾಡಿದ ಪ್ರತ್ಯೇಕ ಹೊಟೇಲ್ ನಲ್ಲಿ ತೋಟಗಾರಿಕಾ ಸಚಿವ ನಾರಾಯಣಗೌಡ ಹಾಗೂ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ನಡುವೆ ನಡೆದ ಗಲಾಟೆಯನ್ನು ಸಚಿವರಾದ ಕೆ‌.ಎಸ್. ಈಶ್ವರಪ್ಪ, ಸಿ.ಟಿ. ರವಿ (CT Ravi) ಹಾಗೂ ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ತಡೆದಿದ್ದಾರೆ. ಇದೇ ವೇಳೆ ಹೊಟೇಲ್ ನ ಇನ್ನೊಂದು ಬದಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಮಾಜಿ‌ ಸಚಿವ ಕೃಷ್ಣಭೈರೇಗೌಡ, ಸಚಿವ ಸೋಮಣ್ಣ ಇದ್ದರು.

ಇಲಾಖೆಯ ಕೆಲಸದ ವಿಚಾರದಲ್ಲಿ ಸಚಿವ ನಾರಾಯಣಗೌಡರ ನಿರ್ಲಕ್ಷ್ಯಕ್ಕೆ ಬೇಸತ್ತು ಶಾಸಕ ಬೆಳ್ಳಿ ಪ್ರಕಾಶ್ ಕೂಗಾಡಿದ್ದಾರೆ. ಸಚಿವ ಮತ್ತು ಶಾಸಕರು ಏಕವಚನದಲ್ಲೇ ಪರಸ್ಪರ ಕೂಗಾಡಿಕೊಂಡಿದ್ದಾರೆ. 

ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸೂಕ್ತ ತೀರ್ಮಾನ: ರಮೇಶ್ ಜಾರಕಿಹೊಳಿ

'ನೀನೇನು ಅಂತ ನಂಗೆ ಗೊತ್ತಿದೆ. ನೀನೊಬ್ಬ ಅಸಮರ್ಥ ಮಂತ್ರಿ' ಎಂದು ಬೆಳ್ಳಿ ಪ್ರಕಾಶ್ ಕಿಡಿ ಕಾರಿದ್ದಾರೆ. 'ನೀನೇನು ಅಂತಾನೂ ಗೊತ್ತಿದೆ. ನಿನ್ನ ಸರ್ಟಿಫಿಕೇಟ್ ಯಾವನಿಗೆ ಬೇಕು ಹೋಗೋ' ಎಂದು ಸಚಿವ ನಾರಾಯಣಗೌಡ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.