BJP Rowdy Morcha Website: ಚುನಾವಣೆ ಸಮೀಪಿಸುತ್ತಿದ್ದಂತೆ 'ಬಿಜೆಪಿ ರೌಡಿ ಮೋರ್ಚಾ' ವೆಬ್ ಸೈಟ್ ಓಪನ್...!?

BJP Rowdy Morcha Website: ಅನಾಮಿಕರು ಈ ವೆಬ್ ಸೈಟ್ ಆರಂಭಿಸಿದ್ದು, ರೌಡಿಗಳಾದ ಸೈಲೆಂಟ್ ಸುನೀಲ್, ವಿಲ್ಸನ್ ಗಾರ್ಡನ್ ನಾಗ, ಫೈಟರ್ ರವಿ ಹಾಗೂ ಬೆತ್ತನಗೆರೆ ಶಂಕರ ಸೇರಿದಂತೆ ಹಲವರ ಹೆಸರು ಬಿಜೆಪಿಯಿಂದ 2023ರಲ್ಲಿ ನಡೆಯುವ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳು ಹಾಗೂ ಅವರ ಸಾಧನೆಗಳ ಬಗ್ಗೆ ನಮೂದಿಸಲಾಗಿದೆ.

Written by - VISHWANATH HARIHARA | Edited by - Bhavishya Shetty | Last Updated : Dec 4, 2022, 11:45 AM IST
    • ರೌಡಿಗಳು ಬಿಜೆಪಿ ಸೇರುತ್ತಾರೆ ಎಂಬ ವಿಷಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿದೆ
    • ಬಿಜೆಪಿ ರೌಡಿ ಮೋರ್ಚಾ ಹೆಸರಿನ ವೆಬ್ ಸೈಟ್ ಆರಂಭ
    • ಅನಾಮಿಕರು ಈ ವೆಬ್ ಸೈಟ್ ಆರಂಭಿಸಿದ್ದಾರೆ
BJP Rowdy Morcha Website: ಚುನಾವಣೆ ಸಮೀಪಿಸುತ್ತಿದ್ದಂತೆ 'ಬಿಜೆಪಿ ರೌಡಿ ಮೋರ್ಚಾ' ವೆಬ್ ಸೈಟ್ ಓಪನ್...!? title=
BJP Rowdy Morcha Website

BJP Rowdy Morcha Website: ಬೆಂಗಳೂರು: ಕೆಲ ರೌಡಿಗಳು ಬಿಜೆಪಿ ಸೇರುತ್ತಾರೆ ಎಂಬ ವಿಷಯ ರಾಜಕೀಯ ವಲಯದಲ್ಲಿ ಇತ್ತೀಚೆಗೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ರೌಡಿ ಮೋರ್ಚಾ ಹೆಸರಿನ ವೆಬ್ ಸೈಟ್ ಆರಂಭವಾಗಿದೆ.

ಅನಾಮಿಕರು ಈ ವೆಬ್ ಸೈಟ್ ಆರಂಭಿಸಿದ್ದು, ರೌಡಿಗಳಾದ ಸೈಲೆಂಟ್ ಸುನೀಲ್, ವಿಲ್ಸನ್ ಗಾರ್ಡನ್ ನಾಗ, ಫೈಟರ್ ರವಿ ಹಾಗೂ ಬೆತ್ತನಗೆರೆ ಶಂಕರ ಸೇರಿದಂತೆ ಹಲವರ ಹೆಸರು ಬಿಜೆಪಿಯಿಂದ 2023ರಲ್ಲಿ ನಡೆಯುವ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳು ಹಾಗೂ ಅವರ ಸಾಧನೆಗಳ ಬಗ್ಗೆ ನಮೂದಿಸಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಭಾರತದ ಮೊದಲ ವಿಶ್ವ ಯೋಗ ಸ್ಪರ್ಧೆ: ಸಿಎಂ ಬೊಮ್ಮಾಯಿ ಸಂತಸ

ಚುನಾವಣೆ ಹತ್ತಿರ ಬರುತ್ತಿದೆ, ಜನರು ನಮ್ಮಿಂದ ದೂರ ಹೋಗುತ್ತಿದ್ದಾರೆ, ಆಪರೇಷನ್ ಕಮಲ ಮಾಡಿದ್ರೂ ಗೆಲ್ಲುವುದು ಗ್ಯಾರಂಟಿ ಇಲ್ಲದ ಕಾರಣ 'ಬಿಜೆಪಿ ರೌಡಿ ಮೋರ್ಚಾ' ಸ್ಥಾಪಿಸುವುದಕ್ಕಾಗಿ 'ಆಪರೇಷನ್ ರೌಡಿ ಶೀಟರ್' ಪ್ರಾರಂಭಿಸಿದ್ದೇವೆ ಎಂದು ಪೋಸ್ಟ್ ಮಾಡಿ ವೆಬ್ ಸೈಟ್ ನಲ್ಲಿ  ಹರಿಬಿಡಲಾಗಿದೆ. ಈ ಬಗ್ಗೆ ಯಾವ  ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.

ಸೈಲೆಂಟ್ ಸುನೀಲ್ ಸಾಧನೆಗಳು- ಪೊಲೀಸ್ ಪೇದೆ ಮರ್ಡರ್ ಕೇಸ್ ಸೇರಿದಂತೆ 17 ಕೊಲೆ, ದರೋಡೆ ಮತ್ತು ಸುಲಿಗೆ ಆರೋಪಗಳು, ವಿಲ್ಸನ್ ಗಾರ್ಡನ್ ನಾಗ ಸಾಧನೆಗಳು-ಕೊಲೆ ಕೇಸುಗಳು ಸೇರಿದಂತೆ ಗ್ಯಾಂಗ್ ವಾರ್ ಗಳಲ್ಲಿ ಭಾಗಿ ಹೀಗೆ ಕೆಲ ರೌಡಿಶೀಟರ್ ಗಳ ಹೆಸರು ಮತ್ತು ಅವರ ಮೇಲಿರುವ ಆರೋಪಗಳ ಬಗ್ಗೆ ಬರೆದು ಪೋಸ್ಟರ್ ಹಾಕಲಾಗಿದೆ.

ಇದನ್ನೂ ಓದಿ: Shivamogga: ನಿಷೇಧಿತ PFI ಅಂಗಸಂಸ್ಥೆ CFI ಸಂಘಟನೆ ಸೇರುವಂತೆ ಗೋಡೆ ಬರಹ ಪತ್ತೆ

ಜೊತೆಗೆ ಈ ಪೋಸ್ಟರ್ ನಲ್ಲಿ ಬಿಜೆಪಿ ಪಕ್ಷದ ಚಿಹ್ನೆಯನ್ನು ಉಲ್ಟಾ ಬರೆಯಲಾಗಿದ್ದು, ಅದರಲ್ಲಿ ಕಮಲದ ದಳ ಕೆಳಗೆ ಬೀಳುತ್ತಿರುವಂತೆ ಮುದ್ರಣ ಮಾಡಲಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News