ಅಂಗೈಯಲ್ಲಿ ಅರಮನೆ ತೋರಿಸಿದ ಕೇಜ್ರಿವಾಲ್ ಪಕ್ಷದಿಂದ ಜನತೆಗೆ ನರಕ ದರ್ಶನ- ಬಿಜೆಪಿ

ದೇಶದ ಶೇ.42ರಷ್ಟು ಜನರು ಅರವಿಂದ್ ಕೇಜ್ರಿವಾಲ್ ಮುಂದಿನ ಪ್ರಧಾನಿಯಾಗಬೇಕೆದು ಬಯಸುತ್ತಿದ್ದಾರೆಂಬ ಭಾಸ್ಕರ್ ರಾವ್ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ.

Written by - Zee Kannada News Desk | Last Updated : May 31, 2022, 01:08 PM IST
  • ಮಾದಕದ್ರವ್ಯ ವ್ಯಸನದಿಂದ ಕಳೆದ 2.5 ತಿಂಗಳಲ್ಲಿ 60ಕ್ಕೂ ಹೆಚ್ಚು ಜನರು ಪಂಜಾಬಿನಲ್ಲಿ ಸಾವಿಗೀಡಾಗಿದ್ದಾರೆ
  • ಪಂಜಾಬಿನ 2.5 ತಿಂಗಳ ಆಡಳಿತದಲ್ಲೇ ಕೇಜ್ರಿವಾಲ್‌ ಪಕ್ಷದ ಸಾಧನೆ ಬಹಿರಂಗವಾಗಿದೆ
  • ರೈತರ ಆತ್ಮಹತ್ಯೆ, ರೈತರ ಬಂಧನ, ಕಲಾವಿದರ, ಕ್ರೀಡಾಪಟುಗಳ ಹತ್ಯೆ ಇದೇ ಆಪ್‌ ಸಾಧನೆ!
ಅಂಗೈಯಲ್ಲಿ ಅರಮನೆ ತೋರಿಸಿದ ಕೇಜ್ರಿವಾಲ್ ಪಕ್ಷದಿಂದ ಜನತೆಗೆ ನರಕ ದರ್ಶನ- ಬಿಜೆಪಿ title=
ಕೇಜ್ರಿವಾಲ್‌ ಪಕ್ಷದ ಸಾಧನೆ ಬಹಿರಂಗವಾಗಿದೆ

ಬೆಂಗಳೂರು: ಅಂಗೈಯಲ್ಲಿ ಅರಮನೆ ತೋರಿಸಿದ ಕೇಜ್ರಿವಾಲ್‌ ಪಕ್ಷ ಈಗ ಜನತೆಗೆ ನರಕ ದರ್ಶನ ಮಾಡಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. #KejriwalExposed ಹ್ಯಾಶ್ ಟ್ಯಾಗ್ ಬಳಸಿ ಮಂಗಳವಾರ ಬಿಜೆಪಿ ಸರಣಿ ಟ್ವೀಟ್ ಮಾಡಿದ್ದು, ಆಮ್ ಆದ್ಮಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ದೇಶದ ಶೇ.42ರಷ್ಟು ಜನರು ಅರವಿಂದ್ ಕೇಜ್ರಿವಾಲ್ ಮುಂದಿನ ಪ್ರಧಾನಿಯಾಗಬೇಕೆದು ಬಯಸುತ್ತಿದ್ದಾರೆಂಬ ಭಾಸ್ಕರ್ ರಾವ್ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ‘ಪಂಜಾಬಿನ 2.5 ತಿಂಗಳ ಆಡಳಿತದಲ್ಲೇ ಕೇಜ್ರಿವಾಲ್‌ ಪಕ್ಷದ ಸಾಧನೆ ಬಹಿರಂಗವಾಗಿದೆ. ರೈತರ ಆತ್ಮಹತ್ಯೆ, ರೈತರ ಬಂಧನ, ಕಲಾವಿದರ, ಕ್ರೀಡಾಪಟುಗಳ ಹತ್ಯೆ ಇದೇ ಆಪ್‌ ಸಾಧನೆ! ಇಂತಹ ಪಕ್ಷದ ಮುಖ್ಯಸ್ಥ ದೇಶದ ಪ್ರಧಾನಿಯಾದರೆ, ದೇಶದ ಗತಿ ಏನಾಗಬಹುದು? ಭಾಸ್ಕರ್ ರಾವ್ ಅವರೇ, ಬಿಟ್ಟಿ ಯೋಜನೆಗಳ ಘೋಷಣೆಯೇ ಸಮಾಜ ಪರಿವರ್ತನೆಯೇ?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: 'ಹಿಂದುಗಳೆಲ್ಲ ಒಂದು ಎನ್ನುವ ನಿಮ್ಮ ಸಂಘದ ಉನ್ನತ ಪದಾಧಿಕಾರ ಯಾಕೆ ಒಂದು ಜಾತಿಗೆ ಸೀಮಿತವಾಗಿದೆ?'

‘ಮಾದಕದ್ರವ್ಯ ವ್ಯಸನದಿಂದ ಕಳೆದ 2.5 ತಿಂಗಳಲ್ಲಿ 60ಕ್ಕೂ ಹೆಚ್ಚು ಜನರು ಪಂಜಾಬಿನಲ್ಲಿ ಸಾವಿಗೀಡಾಗಿದ್ದಾರೆ, ಅಂದರೆ ದಿನಕ್ಕೆ ಸರಾಸರಿ ಒಂದು ಸಾವು! ಯುವ ಜನಾಂಗ, ಈ ರೀತಿಯ ವ್ಯಸನದಿಂದ ಸಾವನ್ನಪ್ಪುತ್ತಿರುವುದು ಅತ್ಯಂತ ಖೇದ. ಅಂಗೈಯಲ್ಲಿ ಅರಮನೆ ತೋರಿಸಿದ ಕೇಜ್ರಿವಾಲ್‌ ಪಕ್ಷ ಈಗ ಜನತೆಗೆ ನರಕ ದರ್ಶನ ಮಾಡಿಸುತ್ತಿದೆ’ ಎಂದು ಕುಟುಕಿದೆ.

‘ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ್ ಸಿಂಗ್ ನಂಗಲ್ ಅವರನ್ನು ಮಾರ್ಚ್ ತಿಂಗಳಲ್ಲಿ ಮೈದಾನದಲ್ಲಿಯೇ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಎಪ್ರಿಲ್ ತಿಂಗಳಲ್ಲಿ ಮತ್ತೋರ್ವ  ಕಬಡ್ಡಿ ಆಟಗಾರ ಧರ್ಮೇಂದರ್ ಸಿಂಗ್ ಕೊಲೆಯಾದರು. ಪ್ರಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ.  ಕೇಜ್ರಿವಾಲ್ ಆಡಳಿತದಲ್ಲಿ ಕ್ರೀಡಾಳುಗಳ ಜೀವಕ್ಕೆ ಬೆಲೆಯೇ ಇಲ್ಲವೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: ಮಗಳ ಶವದ ಜತೆ 4 ದಿನ ಕಳೆದ ತಾಯಿ..! ಮಂಡ್ಯದಲ್ಲೊಂದು ಬೆಚ್ಚಿ ಬೀಳಿಸುವ ಘಟನೆ

‘ಆಪ್‌ ಆಡಳಿತದಲ್ಲಿ 240ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಸಾವಿರಾರು ರೈತರನ್ನು ಜೈಲಿಗಟ್ಟಲಾಗಿದೆ. ಇಂತಹ ಪಕ್ಷದ ಮುಖಂಡ ಪ್ರಧಾನಿಯಾಗಬೇಕೆಂದು ರಾಜ್ಯದ ಕೆಲವರು ಕನವರಿಸುತ್ತಿದ್ದಾರೆ! ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ ಅಧಿಕಾರ ಹಿಡಿದು, ಈಗ ತಾವೇ ಭ್ರಷ್ಟಾಚಾರದಲ್ಲಿ ತೊಡಗಿರುವುದು ದುರಂತವೇ ಸರಿ’ ಎಂದು ಬಿಜೆಪಿ ಟೀಕಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News