ಸತ್ಯವನ್ನು ಮರೆಮಾಚಿ, ಸುಳ್ಳನ್ನೇ ಸತ್ಯವೆಂದು ನಿರೂಪಿಸುವುದು ಕಾಂಗ್ರೆಸ್‍ನ ಸಾಮಾನ್ಯ ಲಕ್ಷಣ: ಬಿಜೆಪಿ

ಒಂದು ಸುಳ್ಳನ್ನು ನಿರಂತರವಾಗಿ ಹೇಳುತ್ತಾ, ಸತ್ಯವನ್ನು ಮರೆಮಾಚಿ, ಆ ಸುಳ್ಳನ್ನೇ ಸತ್ಯ ಎಂದು ನಿರೂಪಿಸುವುದು ಕಾಂಗ್ರೆಸ್ ಪಕ್ಷದ ಸಾಮಾನ್ಯ ಲಕ್ಷಣವಾಗಿದೆ ಎಂದು ಬಿಜೆಪಿ ಟೀಕಿಸಿದೆ.

Written by - Puttaraj K Alur | Last Updated : Jul 15, 2023, 07:15 PM IST
  • ನಿರಂತರವಾಗಿ ಸುಳ್ಳು ಹೇಳುತ್ತಾ, ಆ ಸುಳ್ಳನ್ನೇ ಸತ್ಯವೆಂದು ನಿರೂಪಿಸುವುದು ಕಾಂಗ್ರೆಸ್‍ನ ಸಾಮಾನ್ಯ ಲಕ್ಷಣ
  • ಚುನಾವಣಾ ಅವಧಿಯಲ್ಲಿ ಬೆಲೆಯೇರಿಕೆಯ ಬಗ್ಗೆ ಕಾಂಗ್ರೆಸ್ ರಾಜ್ಯದ ಮಹಿಳೆಯರ ಹಾದಿ ತಪ್ಪಿಸಲು ಯತ್ನಿಸಿದೆ
  • ಕಾಂಗ್ರೆಸ್ ಅಧಿಕಾರಕ್ಕೇರಿದ ದಿನದಿಂದ ನಿತ್ಯವೂ ದಿನ ಬಳಕೆಯ ವಸ್ತುಗಳ ಬೆಲೆ ಏರಿಸುತ್ತಿದೆ ಎಂದು ಬಿಜೆಪಿ ಟೀಕೆ
ಸತ್ಯವನ್ನು ಮರೆಮಾಚಿ, ಸುಳ್ಳನ್ನೇ ಸತ್ಯವೆಂದು ನಿರೂಪಿಸುವುದು ಕಾಂಗ್ರೆಸ್‍ನ ಸಾಮಾನ್ಯ ಲಕ್ಷಣ: ಬಿಜೆಪಿ title=
ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ!

ಬೆಂಗಳೂರು: ಒಂದು ಸುಳ್ಳನ್ನು ನಿರಂತರವಾಗಿ ಹೇಳುತ್ತಾ, ಸತ್ಯವನ್ನು ಮರೆಮಾಚಿ, ಆ ಸುಳ್ಳನ್ನೇ ಸತ್ಯ ಎಂದು ನಿರೂಪಿಸುವುದು ಕಾಂಗ್ರೆಸ್ ಪಕ್ಷದ ಸಾಮಾನ್ಯ ಲಕ್ಷಣವಾಗಿದೆ ಎಂದು ಬಿಜೆಪಿ ಟೀಕಿಸಿದೆ.

ಈ ಬಗ್ಗೆ ಶನಿವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಚುನಾವಣಾ ಅವಧಿಯಲ್ಲಿ ಬೆಲೆಯೇರಿಕೆಯ ಬಗ್ಗೆ ರಾಜ್ಯದ ಮಹಿಳೆಯರ ಹಾದಿ ತಪ್ಪಿಸಲು ಯತ್ನಿಸಿದ ಕಾಂಗ್ರೆಸ್, ಅಧಿಕಾರಕ್ಕೇರಿದ ದಿನದಿಂದ ನಿತ್ಯವೂ ದಿನ ಬಳಕೆಯ ವಸ್ತುಗಳ ಬೆಲೆ ಏರಿಸುತ್ತಿದೆ’ ಎಂದು ಕುಟುಕಿದೆ.

ಇದನ್ನೂ ಓದಿ: KSRTC: ಅಪಘಾತದಲ್ಲಿ ಮೃತಪಟ್ಟ ಚಾಲನಾ ಸಿಬ್ಬಂದಿಗಳ 2 ಕುಟುಂಬಕ್ಕೆ ತಲಾ 1 ಕೋಟಿ ರೂ.ನೆರವು

‘ಮೊದಲ ಕ್ಯಾಬಿನೆಟ್‌ನಲ್ಲಿಯೇ ನೀಡಬೇಕಾಗಿದ್ದ "ಗೃಹಲಕ್ಷ್ಮಿ" ಯೋಜನೆಯ ₹2000 ಇನ್ನೂ ಮಹಿಳೆಯರ ಅಕೌಂಟ್‌ಗಳಿಗೆ ಜಮೆಯಾಗಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ದಿನದಿಂದ ರಾಜ್ಯದಲ್ಲಿ ಉಂಟಾಗಿರುವ ಬೆಲೆಯೇರಿಕೆಯನ್ನು ಗಮನಿಸಿದರೆ, ಇವರು ನೀಡುವ ₹2000ದಲ್ಲಿ ಬೇಕಾಗುವಷ್ಟು ದಿನಸಿ ಖರೀದಿಸಲು ಸಾಧ್ಯವಿಲ್ಲ’ವೆಂದು ಟೀಕಿಸಿದೆ.

‘ಮಹಿಳಾ ಸಬಲೀಕರಣದ ಅಂಶವನ್ನೇ ಕಾಂಗ್ರೆಸ್ ಬುಡಮೇಲು ಮಾಡಿದ್ದು, ಸರ್ವರ್ ಹ್ಯಾಕ್ ಆಗಿದೆ ಎಂಬ ಅಸಂಬದ್ಧ ಸುಳ್ಳುಗಳನ್ನು ಹೇಳುತ್ತಾ ಕಾಲಹರಣ ಮಾಡುತ್ತಿದೆ. ಸ್ವಾತಂತ್ರ್ಯ ಬಂದು 70 ವರ್ಷಗಳ ಕಾಲ ಹೊಗೆಯೊಂದಿಗೆ ಅಡುಗೆ ಮಾಡಿದ್ದ ಮಹಿಳೆಗೆ ಉಜ್ವಲಾ ಯೋಜನೆಯ ಮೂಲಕ ಹೊಗೆ ಮುಕ್ತ ಅಡುಗೆ ಮನೆ ನೀಡಿದ್ದು ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ’ವೆಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: Viral Video: ಕಾರು ಅಡ್ಡಗಟ್ಟಿ ಗಾಜು ಒಡೆದ ಮೂವರು ಪುಂಡರ ಬಂಧನ!

‘ದಶಕಗಳ ಕಾಲ ನೀರಿಗಾಗಿ ಹವಣಿಸಿದ್ದ ಮಹಿಳೆಯರಿಗೆ, ಅವರ ಮನೆ ಬಾಗಿಲಿಗೆ ಜಲ ಜೀವನ್ ಮಿಷನ್ ಯೋಜನೆಯ ಮೂಲಕ ನಳದ ಸಂಪರ್ಕ ಒದಗಿಸಿದ್ದು ಪ್ರಧಾನಿ ಮೋದಿಯವರ ಸರ್ಕಾರ. ಕಾಂಗ್ರೆಸ್ ಜಾರಿ ತರುವ ಮಹಿಳಾ ಸಬಲೀಕರಣ ಅಂಶಗಳು ಗೊಂದಲದ ಗೂಡಾದರೇ, ಬಿಜೆಪಿ ಜಾರಿ ತರುವ ಮಹಿಳಾ ಸಬಲೀಕರಣ ಅಂಶಗಳು ಮಹಿಳೆಯರ ಮುಖದಲ್ಲಿ ನೆಮ್ಮದಿಯ ಮಂದಹಾಸವನ್ನು ಮೂಡಿಸುತ್ತದೆ’ ಎಂದು ಬಿಜೆಪಿ ಹೇಳಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News