ಬೆಂಗಳೂರು: ರಸ್ತೆಯಲ್ಲಿ ದಾರಿ ಬಿಡುವಂತೆ ಹಾರ್ನ್ ಮಾಡಿದ್ದಕ್ಕೆ ಕಾರು ಅಡ್ಡಗಟ್ಟಿ ಗಾಜು ಒಡೆದು ಹಾಕಿದ್ದ ಮೂವರು ಪುಂಡರನ್ನು ಬೆಂಗಳೂರಿನ ವರ್ತೂರು ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗಣೇಶ್, ರವೀಂದ್ರ ಮತ್ತು ಕೇಶವಮೂರ್ತಿ ಬಂಧಿತ ಆರೋಪಿಗಳು. ಗುರುವಾರ ಮಧ್ಯಾಹ್ನ 2.30ರ ವೇಳೆ ಈ ಘಟನೆ ನಡೆದಿತ್ತು. ವರ್ತೂರು ಬಳಿಯ ರಸ್ತೆಯಲ್ಲಿ ಕಾರಿಗೆ ದಾರಿ ನೀಡದೆ 3-4 ಬೈಕ್ ಸವಾರರು ಅಡ್ಡಾದಿಡ್ಡಿ ಚಾಲನೆ ಮಾಡುತ್ತಿದ್ದರು. ಈ ವೇಳೆ ತಮಗೆ ದಾರಿ ಬಿಡುವಂತೆ ಕಾರು ಚಾಲಕ ಹಾರ್ನ್ ಮಾಡಿದ್ದರು. ಇದರಿಂದ ಕೋಪಗೊಂಡ ಪುಂಡರು ಬೈಕ್‍ಗಳನ್ನು ನಿಲ್ಲಿಸಿ ಬಂದು ಚಾಲಕನ ಜೊತೆಗೆ ಗಲಾಟೆ ಮಾಡಿದ್ದರು. ಈ ಪೈಕಿ ಒಬ್ಬಾತ ತನ್ನ ಬೈಕ್ ತಂದು ಕಾರಿಗೆ ಗುದ್ದಿಸಿದ್ದ.
ಇದನ್ನೂ ಓದಿ: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಶಾಕ್!
@east_bengaluru @BlrCityPolice @blrcitytraffic . Incident occurred on the new road which is connecting from DSR rivera to Varthur. Goons on the street of Bangalore . Is there any action taken yet on it @DCPTrEastBCP pic.twitter.com/kk8uENgdeB
— RON (@ronmania2009) July 13, 2023
ಕಾರು ಚಾಲಕನ ಮೇಲೆ ಪುಂಡರು ದಾಳಿ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಈ ವಿಡಿಯೋವನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದ ವರ್ತೂರು ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Zero tolerance towards such deceptive elements. Please note, the accused have been arrested!
In the future, please dial #Namma112 for immediate and swift intervention.#WeServeWeProtect https://t.co/unxmI2MPjB pic.twitter.com/wk3nmjX7c7
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) July 14, 2023
ತಮ್ಮ ಮೇಲೆ ಪುಂಡರು ಹಲ್ಲೆಗೆ ಮುಂದಾಗುತ್ತಿದ್ದಂತೆಯೇ ಚಾಲಕ ಕಾರನ್ನು ಹಿಂದಕ್ಕೆ ಓಡಿಸಿಕೊಂಡು ಬಳಿಕ ಯೂ ಟರ್ನ್ ತೆಗೆದುಕೊಂಡು ಸ್ಥಳದಿಂದ ಎಸ್ಕೇಪ್ ಆಗಿದ್ದರು. ಬಳಿಕ ಕಾರು ಬೆನ್ನಟ್ಟಿ ಗಲಾಟೆ ಮಾಡಿದ್ದ ಪುಂಡರು ಕಾರಿನ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದರು.ಈ ದೃಶ್ಯ ಕಾರಿನಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. RON ಎಂಬ ಟ್ವಿಟರ್ ಖಾತೆಯಲ್ಲಿ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು. ಈ ಟ್ವೀಟ್‍ಗೆ ತಕ್ಷಣವೇ ಸ್ಪಂದಿಸಿದ ಬೆಂಗಳೂರು ಪೊಲೀಸರು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆಯಲ್ಲಿ ಹೆಚ್ಚಳ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.