ಶೀಘ್ರವೇ ಮಹಾದಾಯಿ ವಿವಾದ ಬಗೆಹರಿಸಲಿರುವ ಬಿಜೆಪಿ..!

ಮಹದಾಯಿ ನದಿ ನೀರಿನ ವಿವಾದ ಬಹಳ ಕಾಲದಿಂದ ನಡೆಯುತ್ತಿದೆ. ಇದೀಗ ಕಾಂಗ್ರೇಸ್ ಗಿಂತಲೂ ಮೊದಲೇ ಈ ವಿವಾದವನ್ನು ಬಗೆ ಹರಿಸಲು ಬಿಜೆಪಿ ಸಿದ್ದತೆ ನಡೆಸಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ. 

Last Updated : Aug 29, 2017, 01:29 PM IST
  • ಮಹದಾಯಿ ನದಿ ನೀರಿನ ವಿವಾದ ಬಹಳ ಕಾಲದಿಂದ ನಡೆಯುತ್ತಿದೆ. ಇದೀಗ ಕಾಂಗ್ರೇಸ್ ಗಿಂತಲೂ ಮೊದಲೇ ಈ ವಿವಾದವನ್ನು ಬಗೆ ಹರಿಸಲು ಬಿಜೆಪಿ ಸಿದ್ದತೆ
ಶೀಘ್ರವೇ ಮಹಾದಾಯಿ ವಿವಾದ ಬಗೆಹರಿಸಲಿರುವ ಬಿಜೆಪಿ..! title=

ನವದೆಹಲಿ : ಮಹದಾಯಿ ನದಿ ನೀರಿನ ವಿವಾದ ಬಹಳ ಕಾಲದಿಂದ ನಡೆಯುತ್ತಿದೆ. ಇದೀಗ ಕಾಂಗ್ರೇಸ್ ಗಿಂತಲೂ ಮೊದಲೇ ಈ ವಿವಾದವನ್ನು ಬಗೆ ಹರಿಸಲು ಬಿಜೆಪಿ ಸಿದ್ದತೆ ನಡೆಸಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ. 

ಈಗಾಗಲೇ ಅಮಿತ್ ಷಾ ಜೊತೆ ಸಮಾಲೋಚನೆ ನಡೆಸಿರುವ ಬಿಜೆಪಿ ನಾಯಕರು, ಶೀಘ್ರದಲ್ಲೇ ಗೋವ ಸಿಎಂ ಮನೋಹರ್ ಪರಿಕ್ಕರ್ ಹಾಗೂ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ಮವೀಸ್ ಜೊತೆಗೆ ಮಾತುಕತೆಗೆ ತಯಾರಿ ನಡೆಸಿದ್ದಾರೆ. 

ಗೋವಾ ಉಪಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆಲುವಿನ ನಂತರ, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವೀಸ್ ಜೊತೆಗೆ ಈಗಾಗಲೇ ರಾಜ್ಯ ಬಿಜೆಪಿ ನಾಯಕರು ಮಾತುಕತೆ ನಡೆಸಿದ್ದಾರೆ.  

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್ ಕುಮಾರ್ ಮತ್ತು ಸದಾನಂದಗೌಡ, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ, ಲಕ್ಷ್ಮಣ ಸವಧಿ ನೇತೃತ್ವದ ನಿಯೋಗ ಶೀಘ್ರದಲ್ಲೇ ಗೋವಾ ಹಾಗೂ ಮಹಾರಾಷ್ಟ್ರಕ್ಕೆ ತೆರಳಿ ಮಹಾದಾಯಿ ನದಿ ನೀರಿನ ವಿವಾದವನ್ನು ಬಗೆಹರಿಸುವ ಬಗ್ಗೆ ಸಮಾಲೋಚನೆ ನಡೆಸಲಿದೆ.

ಬಗೆಹರಿಯುತ್ತಾ ಶತಮಾನಗಳ ಇತಿಹಾಸದ ವಿವಾದ?

ಸಿಎಂ ಸಿದ್ದರಾಮಯ್ಯ ಮೂರು ಬಾರಿ ಗೋವಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಅವರಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯ ಬಂದಿಲ್ಲ. ಈ ಕಾರಣ ಪ್ರಧಾನಿ ನರೇಂದ್ರ ಮೋದಿ ಮಹದಾಯಿ ವಿಚಾರವಾಗಿ ಮಧ್ಯೆ ಪ್ರವೇಶಕ್ಕೆ ಒತ್ತಾಯಿಸಲು ಮತ್ತೊಮ್ಮೆ ಸರ್ವ ಪಕ್ಷಗಳ ನಿಯೋಗವನ್ನು ಪ್ರಧಾನಿ ಬಳಿಗೆ ಕರೆದೊಯ್ಯುವ ಬಗ್ಗೆ ಆ.14ರಂದು ನಡೆದ ಸರ್ವಪಕ್ಷಗಳ ಸಭೆಯಲ್ಲಿ ಇಂಗಿತ ವ್ಯಕ್ತವಾಗಿತ್ತು. 

ಇಷ್ಟು ‌ದಿನ ಕಾಂಗ್ರೆಸ್ ಸರ್ಕಾರ ಮೊದಲು ಗೋವಾ, ಮಹಾರಾಷ್ಟ್ರ ರಾಜ್ಯದ ಕಾಂಗ್ರೆಸ್ ನಾಯಕರ ಮನವೊಲಿಸಲಿ ಎನ್ನುತ್ತಿದ್ದ ಬಿಜೆಪಿ, ಗೋವಾ ಉಪ ಚುನಾವಣೆ ಗೆಲುವಿನ ಬಳಿಕ ಮಹಾದಾಯಿ ವಿವಾದವನ್ನು ಕಾಂಗ್ರೇಸ್ ಗಿಂತಲೂ ಮೊದಲೇ ಬಗೆಹರಿಸುವ ಚಿಂತನೆ ನಡೆಸಿದೆ. ಬಿಜೆಪಿ ಕಣ್ಣು ಕರ್ನಾಟಕದ ಮೇಲೆ ಬಿದ್ದಿದೆಯೇ ಎಂದು ಸಂದೇಹ ಮೂಡುವುದು ಸಹಜ.

ಮಹಾದಾಯಿ ವಿವಾದವನ್ನು ಬಗೆಹರಿಸಿ 2018ರ ಚುನಾವಣೆಯಲ್ಲಿ ಈ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳುವ ತಂತ್ರ ಬಿಜೆಪಿಯದು ಎಂದು ಮೇಲ್ನೋಟಕ್ಕೆ ತಿಳಿದುಬರುತ್ತದೆ. ಕಾಂಗ್ರೇಸ್ ಈ ವಿವಾದದ ಇತ್ಯರ್ಥಕ್ಕೆ ಮುಂದಾದಾಗ ಇದರಿಂದ ಹಿಂದೆ ಸರಿಯುತ್ತಿದ್ದ ಬಿಜೆಪಿ, ಮಹಾದಾಯಿ ವಿವಾದಕ್ಕೆ ತೆರೆ ಎಳೆಯುವುದೇ ಎಂಬುದನ್ನು ಕಾದುನೋಡಬೇಕಿದೆ. 

Trending News