Ballari: ನಲ್ಲಿಯಲ್ಲಿ ಚಿಮ್ಮಿದ ರಕ್ತದ ನೀರು; ಬೆಚ್ಚಿಬಿದ್ದ ಗ್ರಾಮಸ್ಥರು!

Blood water Comes in Water Tap: ನಲ್ಲಿಯಲ್ಲಿ ರಕ್ತದ ನೀರು ಬರುತ್ತಿರುವ ದೃಶ್ಯವನ್ನು ಕಂಡು ಯುವಕರು ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.

Written by - Zee Kannada News Desk | Last Updated : Nov 5, 2023, 06:30 PM IST
  • ನಲ್ಲಿಯಲ್ಲಿ ಹರಿದುಬಂದ ರಕ್ತ ನೀರು ಕಂಡು ಹೌಹಾರಿದ ಗ್ರಾಮಸ್ಥರು
  • ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ಘಟನೆ
  • ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು
Ballari: ನಲ್ಲಿಯಲ್ಲಿ ಚಿಮ್ಮಿದ ರಕ್ತದ ನೀರು; ಬೆಚ್ಚಿಬಿದ್ದ ಗ್ರಾಮಸ್ಥರು! title=
ನಲ್ಲಿಯಲ್ಲಿ ಹರಿದುಬಂದ ರಕ್ತ ನೀರು!

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಮೂರನೇ ವಾರ್ಡಿನ ಕೆಲವು ಕೇರಿಗಳಲ್ಲಿ ನೀರು ಬಿಟ್ಟ ಸಂದರ್ಭದಲ್ಲಿ ನಲ್ಲಿಗಳಲ್ಲಿ ರಕ್ತದ ನೀರು ಬಂದಿದ್ದು ಸಾರ್ವಜನಿಕರು ಆತಂಕಗೊಂಡಿದ್ದಾರೆ.

ಜಾಮಿಯಾ ಮಸೀದಿ ಹತ್ತಿರದ ಕಮಾಲ್ ಸಾಬ್ ಓಣಿ, ವಲಿಪೀರ್ ಸಾಬ್‌ ಅವರ ಓಣಿಯ ಕೆಲವು ನಲ್ಲಿಯಲ್ಲಿ ಏಕಾಏಕಿ ರಕ್ತ ಹಾಗೂ ರಕ್ತದ ಗಡ್ಡೆಗಳು ಬಂದಿದ್ದು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ನಲ್ಲಿಯಲ್ಲಿ ರಕ್ತದ ನೀರು ಬರುತ್ತಿರುವ ದೃಶ್ಯವನ್ನು ಕಂಡು ಯುವಕರು ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಬದಲಾವಣೆ ಫಿಕ್ಸ್

ಈ ವಿಡಿಯೋ ವೀಕ್ಷಿಸಿದ ಪಟ್ಟಣ ಪಂಚಾಯಿತಿ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಪಂಚಾಯಿತಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು ನೀರುಬಿಟ್ಟ ಸಂದರ್ಭದಲ್ಲಿ ಒಂದಿಲ್ಲೊಂದು ಸಮಸ್ಯೆ ಇದ್ದೇ ಇರುತ್ತದೆ. ಆದರೆ ಇಂದು 10 ನಿಮಿಷಗಳವರೆಗೆ ರಕ್ತಮಿಶ್ರಿತ ನೀರು ಬಂದಿದ್ದರಿಂದ ಮಹಿಳೆಯರು ನೀರು ಹಿಡಿಯದೆ ಆತಂಕಕ್ಕಗೊಳಗಾಗಿದ್ದಾರೆ. ಹೀಗಾದರೆ ನಾವು ಕುಡಿಯುವ ನೀರಿಗೆ ಏನು ಮಾಡಬೇಕು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ನಲ್ಲಿ ನೀರಿನಲ್ಲಿ ರಕ್ತ ಬಂದಿರುವುದರಿಂದ ಪಂಚಾಯಿತಿಯವರು ಸ್ಥಳಕ್ಕೆ ಬಂದು ನೋಡಿ ಹೋಗಿದ್ದಾರೆ. ಆದರೆ ಆ ನೀರು ಬಳಕೆಗೆ ಯೋಗ್ಯವೋ ಅಲ್ಲವೋ ಎಂಬುದರ ಬಗ್ಗೆ ತಿಳಿಸಿಲ್ಲ. ಈ ನೀರು ಏನು ಮಾಡಬೇಕು? ಅಂತಾ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಅಂತಾ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿನನಗೆ ಯಾರ ಬೆಂಬಲವೂ ಬೇಡ: ಡಿಕೆಶಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News