Lokshabha Elections 2024: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 305 ಸ್ಥಾನಗಳನ್ನು ಗೆಲ್ಲಲಿದೆ!

Lokshabha Elections 2024: ಭಾರತದ ಲೋಕಸಭೆ ಚುನಾವಣಾ ಫಲಿತಾಂಶದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ 295-315 ಸ್ಥಾನಗಳನ್ನು ಗೆಲ್ಲುತ್ತದೆ ಅಂತಾ ಯುರೇಷಿಯಾ ಗ್ರೂಪ್ ಸಂಶೋಧನೆಯು ತಿಳಿಸಿರುವುದಾಗಿ ಇಯಾನ್ ಬ್ರೆಮ್ಮರ್ ಹೇಳಿದ್ದಾರೆ.

Written by - Puttaraj K Alur | Last Updated : May 22, 2024, 08:06 PM IST
  • ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 305ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ
  • ಅಮೆರಿಕದ ರಾಜಕೀಯ ವಿಜ್ಞಾನಿ & ಜಾಗತಿಕ ರಾಜಕೀಯ ಸಲಹೆಗಾರ ಇಯಾನ್ ಬ್ರೆಮ್ಮರ್ ಭವಿಷ್ಯ
  • 2028ರ ವೇಳೆಗೆ ಭಾರತ ಜಗತ್ತಿನ ಅತಿದೊಡ್ಡ 3ನೇ ಆರ್ಥಿಕತೆಯಾಗಲಿದೆ
Lokshabha Elections 2024: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 305 ಸ್ಥಾನಗಳನ್ನು ಗೆಲ್ಲಲಿದೆ! title=
ʼಬಿಜೆಪಿ 305 ಸ್ಥಾನ ಗೆಲ್ಲಲಿದೆʼ

Lokshabha Elections 2024: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 305ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಮೆರಿಕದ ರಾಜಕೀಯ ವಿಜ್ಞಾನಿ ಮತ್ತು ಜಾಗತಿಕ ರಾಜಕೀಯ ಸಲಹೆಗಾರ ಇಯಾನ್ ಬ್ರೆಮ್ಮರ್ ಭವಿಷ್ಯ ನುಡಿದಿದ್ದಾರೆ. ಜಾಗತಿಕ ರಾಜಕೀಯ ದೃಷ್ಟಿಕೋನದಿಂದ ಗಮನಿಸಿದಾಗ ಭಾರತೀಯ ಸಾರ್ವತ್ರಿಕ ಚುನಾವಣೆಯು "ಸ್ಥಿರವಾಗಿ ಕಾಣುವ ಏಕೈಕ ವಿಷಯವಾಗಿದೆ. ಉಳಿದಂತೆ ಎಲ್ಲವೂ (ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕ ಚುನಾವಣೆ) ಸಮಸ್ಯಾತ್ಮಕವಾಗಿದೆ" ಎಂದರು.

ನಾವು ಅಗಾಧ ಪ್ರಮಾಣದ ಭೌಗೋಳಿಕ ರಾಜಕೀಯ ಅನಿಶ್ಚಿತತೆಯನ್ನು ಹೊಂದಿದ್ದೇವೆ. ಜಾಗತೀಕರಣದ ಭವಿಷ್ಯವು ಕಂಪನಿಗಳು ಬಯಸಿದ ರೀತಿಯಲ್ಲಿ ಹೋಗುತ್ತಿಲ್ಲ. ರಾಜಕೀಯವು ಜಾಗತಿಕ ಮಾರುಕಟ್ಟೆಯಲ್ಲಿ ತನ್ನನ್ನು ತಾನು ಸೇರಿಸಿಕೊಳ್ಳುತ್ತಿದೆ… ಯುದ್ಧಗಳು, ಅಮೆರಿಕ-ಚೀನಾ ಸಂಬಂಧಗಳು ಮತ್ತು ಅಮೆರಿಕ ಚುನಾವಣೆ ಎಲ್ಲವೂ ಅದರ ದೊಡ್ಡ ಭಾಗವಾಗಿದೆ" ಎಂದು ಬ್ರೆಮ್ಮರ್ ಹೇಳಿದ್ದಾರೆ.

ಇದನ್ನೂ ಓದಿ: ಪತ್ರಕ್ಕೆ ಕೇಂದ್ರ ಸ್ಪಂದಿಸಿಲ್ಲ-ಗೃಹ ಸಚಿವ ಪರಮೇಶ್ವರ್‌

ಇವೆಲ್ಲವನ್ನೂ ಸರಿಯಾಗಿ ನಿರ್ವಹಿಸುತ್ತಿಲ್ಲ ಮತ್ತು ಈ ಒತ್ತಡಗಳು ಹೆಚ್ಚು ನಕಾರಾತ್ಮಕವಾಗಿವೆ. ರಾಜಕೀಯವಾಗಿ ಅಚಲ ಮತ್ತು ಸ್ಥಿರವಾಗಿ ಕಾಣುವ ಏಕೈಕ ವಿಷಯವೆಂದರೆ ಭಾರತದ ಚುನಾವಣೆ. ಉಳಿದಂತೆ ಎಲ್ಲವೂ ಸಮಸ್ಯಾತ್ಮಕವಾಗಿ ಕಾಣುತ್ತಿವೆ ಎಂದು ಅವರು ವಿಶ್ಲೇಷಿಸಿದ್ದಾರೆ.

ಭಾರತದ ಲೋಕಸಭೆ ಚುನಾವಣಾ ಫಲಿತಾಂಶದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ 295-315 ಸ್ಥಾನಗಳನ್ನು ಗೆಲ್ಲುತ್ತದೆ ಅಂತಾ ಯುರೇಷಿಯಾ ಗ್ರೂಪ್ ಸಂಶೋಧನೆಯು ತಿಳಿಸಿರುವುದಾಗಿ ಹೇಳಿದ್ದಾರೆ. ಭಾರತದ "ಮುಕ್ತ ಮತ್ತು ನ್ಯಾಯೋಚಿತ ಹಾಗೂ ಪಾರದರ್ಶಕ" ಚುನಾವಣಾ ಪ್ರಕ್ರಿಯೆಯನ್ನು ಇದೇ ವೇಳೆ ಅವರು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ನಗರ ಪ್ರದಕ್ಷಿಣೆ ಮಾಡಿ ಮಳೆಗಾಲ ಎದುರಿಸಲು ಪೂರ್ವಭಾವಿ ತಯಾರಿ, ವಿವಿಧ ಕಾಮಗಾರಿ ಪರಿಶೀಲಿಸಿದ ಸಿಎಂ, ಡಿಸಿಎಂ

ಪ್ರಧಾನಿ ಮೋದಿಯವರು ಸಾಕಷ್ಟು ಪ್ರಬಲ ಆರ್ಥಿಕ ಕಾರ್ಯಕ್ಷಮತೆ ಮತ್ತು ಸ್ಥಿರವಾದ ಸುಧಾರಣೆಯ ಹಿನ್ನಲೆ 3ನೇ ಅವಧಿಯಲ್ಲಿ ಗೆಲ್ಲುವುದು ಬಹುತೇಕ ಖಚಿತವಾಗಿದೆ. ಭಾರತವು ಮುಂದಿನ ವರ್ಷ ವಿಶ್ವದಲ್ಲಿ 4ನೇ ಅತಿದೊಡ್ಡ ಆರ್ಥಿಕತೆಯಾಗುವುದನ್ನು ನಾವು ನೋಡಲಿದ್ದೇವೆ. ಬಹುಶಃ 2028ರ ವೇಳೆಗೆ ಭಾರತ ಜಗತ್ತಿನ ಅತಿದೊಡ್ಡ ೩ನೇ ಆರ್ಥಿಕತೆಯಾಗಲಿದೆ ಎಂದು ಅವರು ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

Trending News