BMTC Driver : ದಯಾಮರಣ ಕೋರಿ ರಾಷ್ಟ್ರಪತಿ, ಪ್ರಧಾನಿಗೆ ಪತ್ರ ಬರೆದ BMTC ಡ್ರೈವರ್!

ಕಳೆದ ಒಂದು ವರ್ಷದಿಂದ ನೌಕರಿ ಇಲ್ಲದೆ ನರಕ ಅನುಭವಿಸುವಂತಾಗಿದೆ ಎಂದು ವಜಾಗೊಂಡ ನೌಕರರು ಅಳಲನ್ನ ತೋಡಿಕೊಳ್ಳುತ್ತಿದ್ದಾರೆ.ಆದ್ರೆ, ಇಲ್ಲೊಬ್ಬ ಬಿಎಂಟಿಸಿ ಡ್ರೈವರ್ ದಯಾಮರಣ ಕೋರಿ ರಾಷ್ಟ್ರಪತಿ, ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದಿದ್ದಾರೆ.

Written by - Manjunath Hosahalli | Last Updated : May 7, 2022, 07:52 PM IST
  • ಪತ್ರ ಬರೆದ ಬಿಎಂಟಿಸಿ ಡ್ರೈವರ್ ಶಂಬುಲಿಂಗಯ್ಯ
  • ಕೆಲಸ ಇಲ್ಲ, ತಿನ್ನಲು ಅನ್ನವೂ ಇಲ್ಲ
  • ಸಿಎಂ, ಸಾರಿಗೆ ಸಚಿವರಿಂದಲೂ ದೊರೆಯದ ಸ್ಪಂದನೆ
BMTC Driver : ದಯಾಮರಣ ಕೋರಿ ರಾಷ್ಟ್ರಪತಿ, ಪ್ರಧಾನಿಗೆ ಪತ್ರ ಬರೆದ BMTC ಡ್ರೈವರ್! title=

ಬೆಂಗಳೂರು : ಸಾರಿಗೆ ನೌಕರರಿಗೆ ಸರ್ಕಾರಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಹೀಡೇರಿಸುವಂತೆ ಒತ್ತಾಯಿಸಿ 2021ರ ಏಪ್ರಿಲ್ ತಿಂಗಳಲ್ಲಿ ಪ್ರತಿಭಟನಾ ನಿರತ ಮುಷ್ಕರವನ್ನ ನಡೆಸಲಾಗಿತ್ತು. ಬರೊಬ್ಬರಿ 14ದಿನಗಳ ಕಾಲ ನಡೆದ ಮುಷ್ಕರಿಂದ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸುವಂತೆ ಮಾಡಿತ್ತು. ಇದರಿಂದ ಸಾರಿಗೆ ನೌಕರರ ವಿರುದ್ದ ಕೆಂಡವಾಗಿದ್ದ ಸರ್ಕಾರ ಮುಷ್ಕರದಲ್ಲಿ ಭಾಗಿಯಾಗಿದ್ದ ಎಲ್ಲಾ ನೌಕರರನ್ನ ಕೆಲಸದಿಂದ ವಜಾಮಾಡಿತ್ತು.

ಅಂದಿನಿಂದ ಇಲ್ಲಿವರೆಗೂ ಕೆಲವರಿಗೆ ಕೆಲವಸೇ ಸಿಗದೆ ಪರದಾಟ ನಡೆಸುವಂತಾಗಿದೆ. ತಿನ್ನೋಕೆ ಒಪ್ಪೊತ್ತಿನ ಊಟಕ್ಕೂ ಕಾಡಿ ಬೇಡಿ ತಿನ್ನುವಂತಾಗಿದೆ. ಕಳೆದ ಒಂದು ವರ್ಷದಿಂದ ನೌಕರಿ ಇಲ್ಲದೆ ನರಕ ಅನುಭವಿಸುವಂತಾಗಿದೆ ಎಂದು ವಜಾಗೊಂಡ ನೌಕರರು ಅಳಲನ್ನ ತೋಡಿಕೊಳ್ಳುತ್ತಿದ್ದಾರೆ.ಆದ್ರೆ, ಇಲ್ಲೊಬ್ಬ ಬಿಎಂಟಿಸಿ ಡ್ರೈವರ್ ದಯಾಮರಣ ಕೋರಿ ರಾಷ್ಟ್ರಪತಿ, ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ : ‘ನಿಮ್ಮ ಕೈಗೆ ಹ್ಯೂಬ್ಲೊಟ್ ವಾಚ್ ಬಂದಿದ್ದು ಚಹಾ ಕುಡಿಸಿಯೋ ಅಥವಾ ಚಹಾ ಕುಡಿದೋ?’

ಸಾವು ಬಿಟ್ಟರೆ ಬೇರೆ ದಾರಿ ಇಲ್ಲ

ಪ್ರತಿಭಟನೆ, ಮುಷ್ಕರದಲ್ಲಿ ನಾನು ಭಾಗಿಯಾಗಿಲ್ಲದಿದ್ದರೂ ನನ್ನ ಕೆಲಸ ಹಾಳಾಗಿದೆ.‌ ಮುಷ್ಕರದಲ್ಲಿ ಭಾಗಿಯಾದವರಿಗೆ ಮತ್ತೆ ಕೆಲಸ ಸಿಕ್ಕಿ  ಅವರ ಬದುಕು ಚನ್ನಾಗಿದೆ ಆದ್ರೆ ನನಗ್ಯಾಕೆ ಇಂತಹ ಶಿಕ್ಷೆ ಎಂದು ಸಂಬಂಧಿಸಿದ ಇಲಾಖೆ ಮತ್ತು ಅಧಿಕಾರಿಗಳಿಗೆ ಪ್ರಶ್ನಿಸಿದ್ದಾರೆ. ಇದೀಗ ನನಗೆ ಬೇರೆ ದಾರಿಯಿಲ್ಲ, ದಯವಿಟ್ಟು ದಯಾಮರಣ ಕಲ್ಪಿಸಿ ಎಂದು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಸೇರಿದಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಾರಿಗೆ ಸಚಿವ ಶ್ರೀರಾಮುಲು, ರಾಜಪಾಲರಾದ ಥಾವರ್ ಚಂದ್ ಗೆಹ್ಲೋಟ್ ರವರಿಗೆ ವಜಾಗೊಂಡ ಶಂಬುಲಿಂಗಯ್ಯ ಮಠ ಎಂಬುವವರು ಪತ್ರ ಬರೆದಿದ್ದಾರೆ.

ರಾಷ್ಟ್ರಪತಿಗೆ ಪತ್ರ ಬರೆದ ಚಾಲಕ

ನಾನು ಸತ್ತರೆ ಸರ್ಕಾರ ಮತ್ತು ಬಿಎಂಟಿಸಿ ಹೊಣೆ

ಅನ್ಯಾಯಕ್ಕೊಳಗಾಗಿರುವ ಸಾರಿಗೆ ನೌಕರ ಶಂಬುಲಿಂಗಯ್ಯ ಮಠ, ಒಂದು ವರ್ಷದಿಂದ ಕೆಲಸವಿಲ್ಲದೆ ನೊಂದಿದ್ದು, ಮರು ಕೆಲಸಕ್ಕಾಗಿ ಅಲೆಯದ ಕಚೇರಿ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಕೊನೆಯದಾಗಿ ಸಾವೇ ದಾರಿ ಎಂದು ನಿರ್ಣಯಿಸಿರುವ ಇವರು ದಯಾಮರಣಕೋರಿದ್ದಾರೆ. ಈ ಬಗ್ಗೆ ಗಣ್ಯರಿಗೆಲ್ಲರಿಗೂ ಪತ್ರ ಬರೆದಿದ್ದಾರೆ. ಸದ್ಯ ಅಂತಿಮವಾಗಿ ನಾನು ಏನಾದ್ರು ಪ್ರಾಣಬಿಟ್ಟರೆ ನನ್ನ ಸಾವಿಗೆ ಸರ್ಕಾರ ಮತ್ತು ಬಿಎಂಟಿಸಿಯೇ ನೇರ ಹೊಣೆ ಎಂದು ದೂರಿದ್ದಾರೆ. 

ಒಟ್ಟಾರೆ.. ಇದನ್ನೆಲ್ಲಾ ಬಿಎಂಟಿಸಿ ಸೇರಿಸಂತೆ ಸಾರಿಗೆ ಸಚಿವರು ಇನ್ನಾದ್ರು ಇಂತಹವರ ಕಷ್ಟಕ್ಕೆ ಸ್ಪಂದಿಸುತ್ತಾರಾ ಎಂಬುವುದು ಯಕ್ಷ ಪ್ರಶ್ನೆಯಾಗಿದೆ.

ಇದನ್ನೂ ಓದಿ : ಮೀಟರ್ ಡೆಪಾಸಿಟ್ ಮೊತ್ತವನ್ನ ಏರಿಸಿದ ಬೆಸ್ಕಾಂ: ಗ್ರಾಹಕರಿಂದ ತೀವ್ರ ವಿರೋಧ

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News