ಚಳಿಗಾಲದ ಅಧಿವೇಶನಕ್ಕೂ ಮುನ್ನವೇ ಸಚಿವ ಸಂಪುಟ ವಿಸ್ತರಣೆ: ದಿನೇಶ್ ಗುಂಡೂರಾವ್

ಚಳಿಗಾಲದ ಅಧಿವೇಶನದೊಳಗೆ ಸಂಪುಟ ವಿಸ್ತರಣೆ ಖಚಿತ, ಇದಕ್ಕೆ ಜೆಡಿಎಸ್ ನಾಯಕರ ಸಲಹೆಯನ್ನೂ ಪಡೆಯುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

Updated: Nov 29, 2018 , 05:12 PM IST
ಚಳಿಗಾಲದ ಅಧಿವೇಶನಕ್ಕೂ ಮುನ್ನವೇ ಸಚಿವ ಸಂಪುಟ ವಿಸ್ತರಣೆ: ದಿನೇಶ್ ಗುಂಡೂರಾವ್

ಬೆಂಗಳೂರು: ಚಳಿಗಾಲ ಅಧಿವೇಶನಕ್ಕೂ ಮುನ್ನವೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಇನ್ನು ವಿಳಂಬವಾಗುವುದಿಲ್ಲ. ಚಳಿಗಾಲದ ಅಧಿವೇಶನದೊಳಗೆ ಸಂಪುಟ ವಿಸ್ತರಣೆ ಖಚಿತ, ಇದಕ್ಕೆ ಜೆಡಿಎಸ್ ನಾಯಕರ ಸಲಹೆಯನ್ನೂ ಪಡೆಯುತ್ತೇವೆ ಎಂದರು.

ಹಾಸನದ ಕಾಂಗ್ರೆಸ್ ಮುಖಂಡರ ಭೇಟಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಹಾಸನದಲ್ಲಿ ನಮ್ಮ‌ ಕಾರ್ಯಕರ್ತರಿಗೆ ಹಿನ್ನಡೆ ಆಗ್ತಿದೆ ಎಂಬ ಭಾವನೆ ಬಂದಿದೆ. ಅವರಿಗೆ ರಾಜಕೀಯ ಪ್ರಾತಿನಿಧ್ಯ ದೊರೆಯುತ್ತಿಲ್ಲ ಎಂದು ಭಾವಿಸಿದ್ದಾರೆ. ಹಾಗಾಗಿ ಈ ಬಗ್ಗೆ ಚರ್ಚಿಸಲು ಬಂದಿದ್ದರೇ ಹೊರತು ಯಾರ ವಿರುದ್ಧವೂ ದೂರು ನೀಡಲು ಅಲ್ಲ. ಅಷ್ಟಕ್ಕೂ ಇದು ಪಕ್ಷದ ಅಂತರಿಕ ವಿಚಾರವಾದ್ದರಿಂದ ನಾವೇ ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ ಎಂದರು.