Cauvery Water Dispute: ಅ.15ರವರೆಗೆ 3000 ಕ್ಯೂಸೆಕ್ಸ್ ನೀರು ಬಿಡಲು ಶಿಫಾರಸು

Cauvery water dispute: ತಮಿಳುನಾಡಿಗೆ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸುವಂತೆ 87ನೇ ಸಭೆಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸೋಮವಾರ ಶಿಫಾರಸು ಮಾಡಿದೆ.

Written by - Puttaraj K Alur | Last Updated : Sep 26, 2023, 04:02 PM IST
  • ಕಾವೇರಿ ವಿಚಾರದಲ್ಲಿ ಕನ್ನಡಿಗರಿಗೆ ಮತ್ತೊಂದು ಶಾಕ್..!
  • ಅ.15ರವರೆಗೆ 3000 ಕ್ಯೂಸೆಕ್ಸ್ ನೀರು ಬಿಡುವಂತೆ ಶಿಫಾರಸು
  • ಕಾವೇರಿ ಹೋರಾಟ ಮತ್ತಷ್ಟು ತೀವ್ರತೆ ಪಡೆದುಕೊಳ್ಳುವ ಸಾಧ್ಯತೆ
Cauvery Water Dispute: ಅ.15ರವರೆಗೆ 3000 ಕ್ಯೂಸೆಕ್ಸ್ ನೀರು ಬಿಡಲು ಶಿಫಾರಸು title=
Cauvery Water Dispute

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವುದನ್ನು ಖಂಡಿಸಿ ಇಂದು (ಸೆಪ್ಟೆಂಬರ್ 26) ವಿವಿಧ ಸಂಘಟನೆಗಳು ಬೆಂಗಳೂರು ಬಂದ್‍ಗೆ ಕರೆ ನೀಡಲಾಗಿದೆ. ಇದರ ಮಧ್ಯೆಯೇ​ ಕಾವೇರಿ ವಿಚಾರದಲ್ಲಿ ಕನ್ನಡಿಗರಿಗೆ ಮತ್ತೊಂದು ಶಾಕ್ ಉಂಟಾಗಿದೆ. ತಮಿಳುನಾಡಿಗೆ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸುವಂತೆ 87ನೇ ಸಭೆಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸೋಮವಾರ ಶಿಫಾರಸು ಮಾಡಿದೆ.

87ನೇ CWRC ಸಭೆಯ ಪ್ರಮುಖ ಸಾರಾಂಶಗಳು

1) ಕರ್ನಾಟಕ CWRC ಮುಂದೆ ಈ ಕೆಳಗಿನ ಅಂಶಗಳನ್ನು CWMA ಸಮಿತಿಗೆ ಶಿಫಾರಸ್ಸು ಮಾಡಲು ವಿನಂತಿಸಿದೆ

2) ಸೆಪ್ಟೆಂಬರ್ 25ರವರೆಗೆ(25.09.2023) ಕರ್ನಾಟಕದ 4 ಜಲಾಶಯಗಳಿಗೆ ಶೇ.53.04ರಷ್ಟು ಒಳಹರಿವಿನ ಕೊರತೆಯಾಗಿದೆ

3) ಕರ್ನಾಟಕ ಸರ್ಕಾರವು ಸೆ.13ರ ಆದೇಶದಲ್ಲಿ ರಾಜ್ಯದ 161 ತಾಲೂಕುಗಳನ್ನು ತೀವ್ರ ಬರ ಪೀಡಿತ ಮತ್ತು 34 ತಾಲೂಕುಗಳನ್ನು ಮಧ್ಯಮ ಬರಪೀಡಿತ ಎಂದು ಘೋಷಿಸಿದೆ. ಇದರಲ್ಲಿ 32 ತೀವ್ರ ಬರಪೀಡಿತ ತಾಲೂಕುಗಳು ಮತ್ತು 15 ಮಧ್ಯಮ ಬರಪೀಡಿತ ತಾಲೂಕುಗಳು ಕಾವೇರಿ ಜಲಾನಯನ ಪ್ರದೇಶಗಳು ಒಳಗೊಂಡಿವೆ. ಈ ಅಂಶವು ಅತ್ಯಂತ ಮನ್ನಣೆಯ ಅಗತ್ಯವಿದೆ ಮತ್ತು ಸಮಿತಿಯಿಂದ ವಿಮರ್ಶಾತ್ಮಕ ಪರಿಗಣನೆಗೆ ಆಹ್ವಾನಿಸುತ್ತದೆ

4) ಕರ್ನಾಟಕವು ತನ್ನ ಜಲಾಶಯಗಳಿಂದ ಯಾವುದೇ ನೀರನ್ನು ಬಿಡುಗಡೆ ಮಾಡುವ ಸ್ಥಿತಿಯಲ್ಲಿಲ್ಲ.

ಇದನ್ನೂ ಓದಿ: ಕಾವೇರಿ ಕಿಚ್ಚು: ಇಂದು ಬೆಂಗಳೂರು ಬಂದ್- ಏನಿರುತ್ತೆ? ಏನಿರಲ್ಲ?

ತಮಿಳುನಾಡಿನ ವಾದದೇನು..?

1) ಕರ್ನಾಟಕವೂ ಸಹ ಸಂಕಷ್ಟದ ಅನುಪಾತದ ಆಧಾರದ ಮೇಲೆ ನೀರಾವರಿ ಪೂರೈಕೆಯನ್ನು ಕಡಿಮೆ ಮಾಡಿದೆ.

2) ಕರ್ನಾಟಕವು ತಕ್ಷಣವೇ ಬಾಕಿ ಉಳಿದಿರುವ ನೀರಿನ ಪ್ರಮಾಣವನ್ನು ಬಿಡುಗಡೆ ಮಾಡಬೇಕು. ಸಂಕಷ್ಟದ ಅನುಪಾತಕ್ಕೆ ಅನುಗುಣವಾಗಿ ಮತ್ತಷ್ಟು ಹರಿವುಗಳನ್ನು ಬಿಡುಗಡೆ ಮಾಡಬೇಕು

 3) ಅಂತಿಮವಾಗಿ CWRC ಈ ಸಭೆಯಲ್ಲಿ CWMAಗೆ ಈ ರೀತಿ ಶಿಫಾರಸು ಮಾಡಿದೆ. ಕರ್ನಾಟಕವು ಸೆ.28ರ ಬೆಳಗ್ಗೆ 8ರಿಂದ ಅ.15ರವರೆಗೆ 3000 ಕ್ಯೂಸೆಕ್ಸ್ ನೀರು ಬಿಡಲು ಅವಕಾಶವಿದೆ. ಹೀಗಾಗಿ ತಮಿಳುನಾಡಿಗೆ ಕರ್ನಾಟಕ ನೀರು ಬಿಡಲೇಬೇಕು ಎಂದು ಶಿಫಾರಸ್ಸು ಮಾಡಿದೆ.

ಇದನ್ನೂ ಓದಿ: ಕಾಂಗ್ರೆಸ್ ಸರಕಾರ ಕನ್ನಡಿಗರ ಸರಕಾರವೋ? ಸ್ಟಾಲಿನ್ ಅಧೀನದಲ್ಲಿರುವ ಬಾಡಿಗೆ ಸರಕಾರವೋ? 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News