ಮುಖ್ಯಮಂತ್ರಿ ಯಡಿಯೂರಪ್ಪಗೆ COVID-19 ನೆಗೆಟಿವ್, ನಾಳೆ ಡಿಸ್ಚಾರ್ಜ್

ಮುಖ್ಯಮಂತ್ರಿ ‌ಕಚೇರಿಯಲ್ಲಿ COVID-19 ಪಾಸಿಟಿವ್ ಕಂಡುಬಂದ ಹಿನ್ನಲೆಯಲ್ಲಿ ‌ಬಿ.ಎಸ್. ಯಡಿಯೂರಪ್ಪ ಆಗಸ್ಟ್ 1ರಂದು COVID-19 ಪರೀಕ್ಷೆ ಮಾಡಿಸಿಕೊಂಡಿದ್ದರು.‌ 

Last Updated : Aug 10, 2020, 11:10 AM IST
  • ಬಿ.ಎಸ್. ಯಡಿಯೂರಪ್ಪ ಅವರಿಗೆ ಮತ್ತೊಮ್ಮೆ COVID-19 ಟೆಸ್ಟ್ ಮಾಡಲಾಗಿದ್ದು ಆ ವರದಿ ನೆಗೆಟಿವ್ ಬಂದಿದೆ‌.
  • ಯಡಿಯೂರಪ್ಪ ಅವರಿಗೆ ಚಿಕಿತ್ಸೆ ನೀಡುತ್ತಿರುವ ಮಣಿಪಾಲ್ ಆಸ್ಪತ್ರೆಯ ವೈದ್ಯರು 10ನೇ ದಿನವೇ (ಆಗಸ್ಟ್ 11) ಡಿಸ್ಚಾರ್ಜ್ ಮಾಡಬಹುದು ಎಂದು ಹೇಳಿದ್ದಾರೆ.
 ಮುಖ್ಯಮಂತ್ರಿ ಯಡಿಯೂರಪ್ಪಗೆ COVID-19 ನೆಗೆಟಿವ್, ನಾಳೆ ಡಿಸ್ಚಾರ್ಜ್ title=

ಬೆಂಗಳೂರು: COVID-19 ಪಾಸಿಟಿವ್ ಬಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿರುವ ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ (B.S. Yadiyurappa)  ಅವರಿಗೆ ಮತ್ತೊಮ್ಮೆ COVID-19 ಟೆಸ್ಟ್ ಮಾಡಲಾಗಿದ್ದು ಆ ವರದಿ ನೆಗೆಟಿವ್ ಬಂದಿದೆ‌. ಈ‌ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ‌ಕಚೇರಿಯಲ್ಲಿ  ಕೊರೊನಾವೈರಸ್ (Coronavirus) COVID-19 ಪಾಸಿಟಿವ್ ಕಂಡುಬಂದ ಹಿನ್ನಲೆಯಲ್ಲಿ ‌ಬಿ.ಎಸ್. ಯಡಿಯೂರಪ್ಪ ಆಗಸ್ಟ್ 1ರಂದು COVID-19 ಪರೀಕ್ಷೆ ಮಾಡಿಸಿಕೊಂಡಿದ್ದರು.‌ ಆಗಸ್ಟ್ 2ರಂದು ಬಂದ ಆ ವರದಿ ಪಾಸಿಟಿವ್ ಇದ್ದುದರಿಂದ ಅಂದು ಮಧ್ಯಾರಾತ್ರಿ ಯಡಿಯೂರಪ್ಪ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿತ್ತು.‌

ಸದ್ಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯಡಿಯೂರಪ್ಪ ಅವರಿಗೆ ಮತ್ತೊಮ್ಮೆ ಕೋವಿಡ್ -19 (Covid 19)  ಪರೀಕ್ಷೆ ಮಾಡಲಾಗಿದ್ದು ಆ ವರದಿ ನೆಗೆಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ಚಿಕಿತ್ಸೆ ನೀಡುತ್ತಿರುವ ಮಣಿಪಾಲ್ ಆಸ್ಪತ್ರೆಯ ವೈದ್ಯರು 10ನೇ ದಿನವೇ (ಆಗಸ್ಟ್ 11) ಡಿಸ್ಚಾರ್ಜ್ ಮಾಡಬಹುದು ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಪ್ರವಾಹದ ವಿಷಯದಲ್ಲೂ ರಾಜ್ಯ ಬಿಜೆಪಿಯಲ್ಲಿ ಶೀತಲ ಸಮರ: ಸಿಎಂ ಆದೇಶಕ್ಕೆ ಡೋಂಟ್ ಕೇರ್ ಎಂದಿರುವ ಸಿ.ಟಿ. ರವಿ

COVID-19 ಪಾಸಿಟಿವ್ ಬಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಯಾವುದೇ ರೋಗ ಲಕ್ಷಣಗಳು ಇರಲಿಲ್ಲ. ಆಸ್ಪತ್ರೆಯಲ್ಲೂ ಯಡಿಯೂರಪ್ಪ ಸಕ್ರೀಯವಾಗಿಯೇ ಇದ್ದರು. ಅವರಿಗೆ ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧವನ್ನು ಮಾತ್ರ ನೀಡಲಾಗುತ್ತಿತ್ತು. ಜೊತೆಗೆ ಅವರು ಮೊದಲಿಂದಲೂ ತೆಗೆದುಕೊಳ್ಳುತ್ತಿದ್ದ ಡಯಾಬಿಟಿಸ್ ಮತ್ತು‌ ರಕ್ತದ ಒತ್ತಡದ ಮಾತ್ರೆಗಳನ್ನು ನೀಡಲಾಗುತ್ತಿತ್ತು. ಈಗ ವರದಿ ನೆಗೆಟಿವ್ ಬಂದಿರುವುದರಿಂದ ಮತ್ತು ಅವರು ಸಂಪೂರ್ಣವಾಗಿ ಗುಣಮುಖರಾಗಿರುವುದರಿಂದ ವೈದ್ಯರು ಡಿಸ್ಚಾರ್ಜ್ ಮಾಡಬಹುದೆಂದು ಹೇಳಿದ್ದಾರೆ.

ಇಂದು ಬೆಳಿಗ್ಗೆ ವರದಿ ಬಂದ ಬಳಿಕ ಯಡಿಯೂರಪ್ಪ ಅವರ ಜೊತೆಯಲ್ಲೇ COVID-19 ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಅವರ ಪುತ್ರಿ ಪದ್ಮಾ ಅವರಿಗೆ 'ತಂದೆಯ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ, ನಾಳೆ ಡಿಸ್ಚಾರ್ಜ್ ಮಾಡಿಸಿಕೊಳ್ಳಬಹುದು' ಎಂದು ತಿಳಿಸಿದ್ದಾರೆ. ಹಾಗಾಗಿ ನಾಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ‌. ನಂತರ ಒಂದು ವಾರ ಹೋಂ ಕ್ವಾರಂಟೈನ್ ನಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.
 

Trending News