ʼನಾನು ಎನ್ನುವ ಅಹಂನ್ನು ಬಿಟ್ಟು ದೇವರಿಗೆ ತಲೆ ಬಾಗಬೇಕುʼ

ಧಾರ್ಮಿಕ ಕಾರ್ಯಗಳನ್ನು ಬೇದ-ಭಾವವಿಲ್ಲದೇ, ಮೇಲು-ಕೀಳು ಎನ್ನದೇ, ಎಲ್ಲೂರು ಒಂದಾಗಿ ಮಾಡಬೇಕು ಎನ್ನುವ ಕಾರಣಕ್ಕೆ ನಮ್ಮ ಹಿರಿಯರು ದೇವಸ್ಥಾನಗಳನ್ನು ನಿರ್ಮಾಣ ಮಾಡಿದ್ದಾರೆ. ದೇವಸ್ಥಾನಕ್ಕೆ ಹೋಗಿ ನಾನು ಎನ್ನುವ ಅಹಂನ್ನು ಬಿಟ್ಡು ದೇವರಿಗೆ ತಲೆ ಬಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

Written by - Prashobh Devanahalli | Edited by - Krishna N K | Last Updated : Feb 1, 2023, 02:53 PM IST
  • ದೇವಸ್ಥಾನಕ್ಕೆ ಹೋಗಿ ನಾನು ಎನ್ನುವ ಅಹಂನ್ನು ಬಿಟ್ಡು ದೇವರಿಗೆ ತಲೆ ಬಾಗಬೇಕು.
  • ನಮ್ಮ ಹಿರಿಯರು ಸತ್ ಸಂಪ್ರದಾಯ ಹಾಕಿದ್ದಾರೆ. ಅದನ್ನು ಪರಿಪಾಲನೆ ಮಾಡಬೇಕು.
  • ಹಾವೇರಿ ಶಿಡೇನೂರು ಗ್ರಾಮದಲ್ಲಿ ಮುಕ್ತೇಶ್ವರ ದೇವಸ್ಥಾನ ಉದ್ಘಾಟನೆ ಮಾಡಿದ ಬಳಿಕ ಸಿಎಂ ಮಾತು.
 ʼನಾನು ಎನ್ನುವ ಅಹಂನ್ನು ಬಿಟ್ಟು ದೇವರಿಗೆ ತಲೆ ಬಾಗಬೇಕುʼ title=

ಹಾವೇರಿ : ಧಾರ್ಮಿಕ ಕಾರ್ಯಗಳನ್ನು ಬೇದ-ಭಾವವಿಲ್ಲದೇ, ಮೇಲು-ಕೀಳು ಎನ್ನದೇ, ಎಲ್ಲೂರು ಒಂದಾಗಿ ಮಾಡಬೇಕು ಎನ್ನುವ ಕಾರಣಕ್ಕೆ ನಮ್ಮ ಹಿರಿಯರು ದೇವಸ್ಥಾನಗಳನ್ನು ನಿರ್ಮಾಣ ಮಾಡಿದ್ದಾರೆ. ದೇವಸ್ಥಾನಕ್ಕೆ ಹೋಗಿ ನಾನು ಎನ್ನುವ ಅಹಂನ್ನು ಬಿಟ್ಡು ದೇವರಿಗೆ ತಲೆ ಬಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಇಂದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಶಿಡೇನೂರು ಗ್ರಾಮದಲ್ಲಿ ಮುಕ್ತೇಶ್ವರ ದೇವಸ್ಥಾನ ಉದ್ಘಾಟನೆ ಮಾಡಿದ ಬಳಿಕ ಅವರು ಮಾತನಾಡಿದರು. ನೆಹರೂ ಓಲೆಕಾರ್ ಅವರ ಹುಟ್ಟೂರು ಶಿಡೇನೂರು. ಅವರು ತಮ್ಮ ಹುಟ್ಟೂರನ್ನು ಮರೆತಿಲ್ಲ ಎನ್ನುವುದನ್ನು ಅವರು ಸಾಬೀತು ಮಾಡಿದ್ದಾರೆ. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಅವರು ಕೃಷಿಕರಾಗಿ, ಸಾರ್ವಜನಿಕ ಸಂಘ ಸಂಸ್ಥೆಗಳಲ್ಲಿ ಯಶಸ್ವಿಯಾಗಿ ಕೆಲಸ ಮಾಡಿದ ಬಳಿಕ ಶಾಸಕರಾಗಿ ಈ ಭಾಗದ ಸೇವೆ ಮಾಡುತ್ತಿದ್ದಾರೆ. ತಮ್ಮ ಹುಟ್ಟೂರಿನಲ್ಲಿ ಈ ಧಾರ್ಮಿಕ ಕಾರ್ಯಕ್ರಮ ಮಾಡುವ ಮೂಲಕ ಈ ಊರಿನ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿ ಯಶಸ್ವಿಯಾಗಿದ್ದಾರೆ ಎಂದರು.

ಇದನ್ನೂ ಓದಿ: ಧಾರವಾಡ ಕಸೂತಿ ಕಲೆಯಿರುವ ಸೀರೆಯುಟ್ಟು ಕೇಂದ್ರ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಮುಕ್ತೇಶ್ವರ ಈ ಭಾಗದ ಅತ್ಯಂತ ಪ್ರಮುಖವಾಗಿರುವ ಆರಾಧ್ಯ ದೈವ. ಈ ದೇವಸ್ಥಾನಕ್ಕೆ ತನ್ನದೇಯಾದ ಇತಿಹಾಸವಿದ್ದು, ಇದು ಮುಂದಿನ ದಿನಗಳಲ್ಲಿ ಪ್ರಸಿದ್ದಿ ಪಡೆಯಲಿದೆ. ನಮ್ಮ ಹಿರಿಯರು ಸತ್ ಸಂಪ್ರದಾಯ ಹಾಕಿದ್ದಾರೆ. ಒಂದೆಡೆ ಬಸವಣ್ಣನವರು ನಮ್ಮ ದೇಹವೇ ದೇಗುಲ ಅಂತ ಹೇಳಿದ್ದಾರೆ. ನಮ್ಮ ಆತ್ಮ ಪರಿಶುದ್ದತೆಯಿಂದ ಕೂಡಿರಬೇಕು. ಈ ದೇಹ ನಿರಂತರ ಪರಿಶುದ್ದವಾಗಿರಬೇಕು ಎಂದು ವಚನಗಳಲ್ಲಿ ಹೇಳಿದ್ದಾರೆ. ಅದನ್ನು ಪರಿಪಾಲನೆ ಮಾಡಬೇಕು ಎಂದು ಹೇಳಿದರು.

ಸಾಮೂಹಿಕವಾಗಿ ಎಲ್ಲರೂ ಶುದ್ದವಾಗಿ, ಪರಿಶುದ್ದವಾಗಿರಬೇಕು ಎನ್ನುವ ಕಾರಣಕ್ಕೆ ದೇವಸ್ಥಾನಗಳನ್ನು ನಿರ್ಮಾಣ ಮಾಡಲಾಗುತ್ತದೆ. ದೇವಸ್ಥಾನಕ್ಕೆ ಹೋದರೆ ಮನಸು ಶಾಂತವಾಗಿರುತ್ತದೆ. ಊರಲ್ಲಿ ಒಂದು ತೇರು ಇರುತ್ತದೆ. ತೇರನ್ನು ಯಾವದೇ ಬಡವ ಎಂಬ ಜಾತಿ, ಮತ, ಭೇದ-ಭಾವವಿಲ್ಲದೇ ತೇರು ಎಳೆಯಬೇಕು ಎನ್ನುವ ಕಾರಣಕ್ಕೆ ದೊಡ್ಡ ತೇರು ಮಾಡಿರುತ್ತಾರೆ.  ದೇವಸ್ಥಾನದ ದ್ವಾರ ಬಾಗಿಲು ದೊಡ್ಡದಾಗಿರುತ್ತದೆ. ಅದು ಎಲ್ಲರನ್ನು ಸ್ವಾಗತಿಸುತ್ತದೆ. ಆದರೆ ದೇವಸ್ಥಾನದ ಗರ್ಭಗುಡಿ ಚಿಕ್ಕದಿರುತ್ತದೆ. ಅಲ್ಲಿ ನಾನು ಎನ್ನುವ ಅಹಂನ್ನು ಬಿಟ್ಟು ದೇವರಿಗೆ ತಲೆ ಬಾಗಬೇಕು ಎನ್ನುವ ಕಾರಣಕ್ಕೆ ನಮ್ಮ ಹಿರಿಯರು ಈ ರೀತಿ ಮಾಡಿದ್ದಾರೆ ಎಂದರು.

ಇದನ್ನೂ ಓದಿ: ಸರ್ಕಾರದ ಹೆಸರಲ್ಲಿ ನಿರಪೇಕ್ಷಣಾ ಪತ್ರ ನೀಡಿ ಸಿಬಿಎಸ್‌ಸಿ ಪಠ್ಯಕ್ರಮ ಸಂಯೋಜನೆ

ಪ್ರತಿ ಕ್ಷಣವೂ ನಮ್ಮಲ್ಲಿ ನಾನು ಎನ್ನುವ ಭಾವನೆ ಇರುತ್ತದೆ. ನಾನು ಎನ್ನುವುದನ್ನು ಮರೆತರೆ, ಆ ಕ್ಷಣ ಭಕ್ತಿಭಾವದಿಂದ ಕೂಡುತ್ತದೆ. ಭಕ್ತಿ ಎಂದರೆ ಉತ್ಕೃಷ್ಟವಾದ ಪ್ರೀತಿ, ದೇವರ ಬಳಿ ಬಂಗಾರ ಬೇಡಿಕೊಳ್ಳುವುದು ವ್ಯವಹಾರವಾಗುತ್ತದೆ. ಭಕ್ತಿಯಿಂದ ದೇವರ ಬಳಿ ಬೇಡಿಕೊಂಡಾಗ ದೇವರು ವರ ನೀಡುತ್ತಾನೆ. ದೇವರು ಕೇಳಿದ್ದಲ್ಲವನ್ನು ಕೊಡುವುದಿಲ್ಲ. ಭಕ್ತಿಯ ಸಮರ್ಪಣೆಯಾದರೆ, ದೇವರು ಬೇಡಿಕೊಳ್ಳದಿದ್ದರೂ ನೀಡುತ್ತಾನೆ. ನೆಹರು ಓಲೆಕಾರ ಅವರು ಒಳ್ಳೆಯ ಕಾರ್ಯ ಮಾಡಿದ್ದಾರೆ. ಮುಕ್ತೇಶ್ವರ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News