20 ಸಾವಿರ ಕೋಟಿ ರೂಪಾಯಿಗಳ ಕಾಮಗಾರಿಗಳನ್ನ ತಡೆ ಹಿಡಿಯುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ 

ಕೆಲವು ಕಾಮಗಾರಿಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿರುತ್ತವೆ ಎಂಬ ದೂರುಗಳು ಸಹ ಇವೆ.ಇವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಾಗಿರುವುದರಿಂದ ಮುಂದಿನ ಆದೇಶದವರೆಗೆ ಪ್ರಾರಂಭ ಆಗದಿರುವ ಕಾಮಗಾರಿಗಳನ್ನು ಕೂಡಲೇ ಸ್ಥಗಿತಗೊಳಿಸುವುದು ಹಾಗೂ ಈಗಾಗಲೇ ಕರೆದಿರುವ ಟೆಂಡರ್ ಗಳನ್ನು ಸ್ಥಗಿತಗೊಳಿಸಲು ಸೂಚಿಸಿದೆ" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Written by - Manjunath N | Last Updated : May 25, 2023, 04:09 PM IST
  • ತರಾತುರಿಯಲ್ಲಿ ಟೆಂಡರ್ ನಿಯಮಗಳನ್ನು ಉಲ್ಲಂಘಿಸಿ ಕರೆದಿರುವ ಟೆಂಡರ್ ಗಳಿಗೆ ಸುಮಾರು ರೂ.20,000 ಕೋಟಿಗಳ ಅನುಮೋದನೆ ಅಗತ್ಯವಿದೆ.
  • ಈ ಕಾಮಗಾರಿಗಳು ಅವೈಜ್ಞಾನಿಕವಾಗಿರುತ್ತವೆಯೆಂದು ವ್ಯಾಪಕ ದೂರುಗಳಿವೆ
  • ಕೆಲವು ಕಾಮಗಾರಿಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿರುತ್ತವೆ ಎಂಬ ದೂರುಗಳು ಸಹ ಇವೆ.
 20 ಸಾವಿರ ಕೋಟಿ ರೂಪಾಯಿಗಳ ಕಾಮಗಾರಿಗಳನ್ನ ತಡೆ ಹಿಡಿಯುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ  title=
file photo

ಬೆಂಗಳೂರು: ಕೆಲವು ಕಾಮಗಾರಿಗಳಲ್ಲಿ ಅಕ್ರಮ ಇದೆ ಎಂದು ದೂರು ಬಂದಿರುವ ಹಿನ್ನೆಲೆಯಲ್ಲಿ ಈಗ ಸಿಎಂ ಸಿದ್ದರಾಮಯ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು 20 ಸಾವಿರ ಕೋಟಿ ರೂಪಾಯಿಗಳ ಕಾಮಗಾರಿಗಳನ್ನ ತಡೆ ಹಿಡಿಯುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ- Indira Canteens: ಶೀಘ್ರವೇ ಇಂದಿರಾ ಕ್ಯಾಂಟೀನ್ಗಳಲ್ಲಿ ಅತ್ಯುತ್ತಮ ಆಹಾರ- ಕಾಂಗ್ರೆಸ್

No description available.

ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಸಿಎಂ ಸಿದ್ದರಾಮಯ್ಯ "ರಾಜ್ಯದಲ್ಲಿ ಈ ಹಿಂದಿನ ಸರ್ಕಾರದ ಅನೇಕ ನೀರಾವರಿ ಕಾಮಗಾರಿಗಳು ಹಣಕಾಸಿನ ಸೂಕ್ತ ಅಮದಾನವಿಲ್ಲದೆ ಕಾಮಗಾರಿಗಳ ಟೆಂಡರುಗಳನ್ನು ಕರೆದಿದ್ದು,ನೀರಾವರಿ ಇಲಾಖೆ ನಿಗಮಗಳಾದ ಕೆ ಎ ಎನ್ ಎನ್ ಎಲ್, ಸಿ.ಎನ್ ಎನ್ ಎಲ್,  ಲೋಕೊಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯ ಜಲ ಜೀವನ್ ಮಿಶನ್ ಕರಾರು ಪತ್ರ ಕೂಡ ಆಗಿರುತ್ತದೆ.ಹಣಕಾಸಿನ ತೊಂದರೆಯಿಂದ ಹಾಗೂ ಭೂಸ್ವಾಧೀನ ತೊಂದರೆಯಿಂದ ಹೊಸದಾಗಿ ತರಾತುರಿಯಲ್ಲಿ ಟೆಂಡರ್ ನಿಯಮಗಳನ್ನು ಉಲ್ಲಂಘಿಸಿ ಕರೆದಿರುವ  ಟೆಂಡರ್ ಗಳಿಗೆ ಸುಮಾರು ರೂ.20,000 ಕೋಟಿಗಳ ಅನುಮೋದನೆ ಅಗತ್ಯವಿದೆ.ಈ ಕಾಮಗಾರಿಗಳು ಅವೈಜ್ಞಾನಿಕವಾಗಿರುತ್ತವೆಯೆಂದು ವ್ಯಾಪಕ ದೂರುಗಳಿವೆ, ಕೆಲವು ಕಾಮಗಾರಿಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿರುತ್ತವೆ ಎಂಬ ದೂರುಗಳು ಸಹ ಇವೆ.ಇವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಾಗಿರುವುದರಿಂದ ಮುಂದಿನ ಆದೇಶದವರೆಗೆ ಪ್ರಾರಂಭ ಆಗದಿರುವ ಕಾಮಗಾರಿಗಳನ್ನು ಕೂಡಲೇ ಸ್ಥಗಿತಗೊಳಿಸುವುದು ಹಾಗೂ ಈಗಾಗಲೇ ಕರೆದಿರುವ ಟೆಂಡರ್ ಗಳನ್ನು ಸ್ಥಗಿತಗೊಳಿಸಲು ಸೂಚಿಸಿದೆ" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ- ಕರ್ನಾಟಕದಲ್ಲಿ ಜಯಭೇರಿ ಬೆನ್ನಲ್ಲೇ 'ಪಂಚ ರಾಜ್ಯಗಳ' ಮೇಲೆ ಕಾಂಗ್ರೆಸ್ ಕಣ್ಣು!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

 

 

Trending News