ವೃದ್ದರೊಬ್ಬರಿಂದ ಚಪ್ಪಲಿ ಏಟು ತಿಂದ ಕಾಂಗ್ರೆಸ್ ಅಭ್ಯರ್ಥಿ! ವಿಡಿಯೋ ವೈರಲ್‌

Congress candidate: ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಬ್ಬರದ ಪ್ರಚಾರಕ್ಕಾಗಿ ಅಭ್ಯರ್ಥಿಗಳು ನಾನಾ ರೀತಿಯ ತಂತ್ರಗಳನ್ನು ಬಳಸುತ್ತಾರೆ.. ಹೀಗೆ ಮಧ್ಯಪ್ರದೇಶದ ರತ್ಲಾಮ್‌ನ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ವೃದ್ಧರೊಬ್ಬರಿಂದ ಚಪ್ಪಲಿ ಏಟು ತಿಂದಿರುವ ವೀಡಿಯೋ ಸದ್ಯ ಭಾರೀ ವೈರಲ್‌ ಆಗಿದೆ.. 

Written by - Savita M B | Last Updated : Nov 18, 2023, 08:25 PM IST
  • ರತ್ಲಾಮ್‌ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಪರವಾಗಿ ಸ್ಪರ್ಧಿಸಿದ್ದ ಪರಸ್ ಸಕ್ಲೇಚಾ
  • ತಮ್ಮ ಗೆಲುವಿಗಾಗಿ ಬಾಬಾ ಅವರಿಂದ ಕಪಾಳಮೋಕ್ಷ ಮಾಡಿಸಿಕೊಂಡಿದ್ದಾರೆ.
  • ಸದ್ಯ ಈ ವಿಡಿಯೋ ವೈರಲ್‌ ಆಗಿದೆ
ವೃದ್ದರೊಬ್ಬರಿಂದ ಚಪ್ಪಲಿ ಏಟು ತಿಂದ ಕಾಂಗ್ರೆಸ್ ಅಭ್ಯರ್ಥಿ! ವಿಡಿಯೋ ವೈರಲ್‌  title=

ಮಧ್ಯಪ್ರದೇಶ: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ರತ್ಲಾಮ್‌ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಪರವಾಗಿ ಸ್ಪರ್ಧಿಸಿದ್ದ ಪರಸ್ ಸಕ್ಲೇಚಾ ತಮ್ಮ ಗೆಲುವಿಗಾಗಿ ಬಾಬಾ ಅವರಿಂದ ಕಪಾಳಮೋಕ್ಷ ಮಾಡಿಸಿಕೊಂಡಿದ್ದಾರೆ. 

ಚುನಾವಣಾ ಅಭ್ಯರ್ಥಿ ಸ್ವಇಚ್ಛೆಯಿಂದ ಮತ್ತು ಸಂತೋಷದಿಂದ ಹೊಡೆಸಿಕೊಂಡಿದ್ದು.. ಚಪ್ಪಲಿ ಏಟು ನೀಡಿದ ವೃದ್ಧನನ್ನು ಸ್ಥಳೀಯರು ಪವಾಡಪುರುಷ ಎಂದು ನಂಬಿದ್ದಾರೆ. ಹೀಗಾಗಿ ಅವರಿಂದ ಕಪಾಳಮೋಕ್ಷ ಮಾಡಿಕೊಂಡರೆ ಚುನಾವಣೆಯಲ್ಲಿ ಯಶಸ್ಸು ಗಳಿಸಬಹುದು ಎಂಬ ಲೆಕ್ಕಾಚಾರದಿಂದ ಕಾಂಗ್ರೆಸ್ ಅಭ್ಯರ್ಥಿ ಚಪ್ಪಲಿಯಿಂದ ಹೊಡೆಸಿಕೊಂಡಿದ್ದಾರೆ. 

ಇದನ್ನೂ ಓದಿ-ಬಸ್ ನಲ್ಲಿ ಸಿಕ್ಕ ಬಂಗಾರವನ್ನು ಠಾಣೆಗೆ ಒಪ್ಪಿಸಿದ ಬಂಗಾರದ ಮನುಷ್ಯ

ಶುಕ್ರವಾರ ಮಧ್ಯಪ್ರದೇಶ ವಿಧಾನಸಭೆಗೆ ಮತದಾನ ನಡೆಯುತ್ತಿರುವ ಸಂದರ್ಭದಲ್ಲಿ.. ಶುಕ್ರವಾರ ಬೆಳಗ್ಗೆ ರಸ್ತೆಬದಿಯಲ್ಲಿದ್ದ ಫಕೀರ್ ಬಾಬಾ ಹತ್ತಿರ ಹೋಗಿ ಚಪ್ಪಲಿಯಿಂದ ಹೊಡೆಸಿಕೊಂಡು ಆಶೀರ್ವಾದ ಪಡೆದುಕೊಂಡಿದ್ದಾರೆ..  

ಬಾಬಾರನ್ನು ಭೇಟಿ ಮಾಡಿ ಆಶಿರ್ವಾದ ಪಡೆದ ನಂತರ, ಪಾರಸ್ ಸಕ್ಲೇಚಾ ಅವರು ಹೊಸ ಚಪ್ಪಲಿಗಳನ್ನು ಅವರಿಗೆ ಅರ್ಪಿಸಿದರು. ಬಳಿಕ ಫಕೀರ ಬಾಬಾ ಅವರನ್ನು ಕರೆದುಕೊಂಡು ಹೋಗಿ ಪಾರಸ್ ನೆತ್ತಿಗೆ ಬಡೆದರು... ಮುಂದೆ ತಮ್ಮ ಎರಡೂ ಕೆನ್ನೆಗಳನ್ನು ಚಪ್ಪಲಿಯಿಂದ ಮುಟ್ಟುವಂತೆ ಅಭ್ಯರ್ಥಿ ಕೇಳಿಕೊಂಡು ಹೊಡೆಸಿಕೊಂಡಿದ್ದಾರೆ.. ಸದ್ಯ ಬಾಬಾ ಅವರ ಹೊಡೆತಕ್ಕೆ ಮತಗಳು ಸಿಗುತ್ತವೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.. ಆದರೆ ಸದ್ಯ ಆ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ-ವಿಶ್ವಕಪ್ ಫೈನಲ್ ಪಂದ್ಯಾವಳಿ; ಎಲ್.ಇ.ಡಿ ಪರದೆಯಲ್ಲಿ ನೇರ ಪ್ರಸಾರ ವೀಕ್ಷಣೆಗೆ ಉಚಿತ ಪ್ರವೇಶ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News