ವಿಧಾನ‌ ಪರಿಷತ್‌ ಉಪಚುನಾವಣೆ: ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರು ಪ್ರಕಟ

Karnataka MLC Byelection : ವಿಧಾನ‌ ಪರಿಷತ್‌ ಉಪಚುನಾವಣೆಗೆ ಕಾಂಗ್ರೆಸ್ ತನ್ನ ಮೂವರು ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಲಕ್ಷ್ಮಣ ಸವದಿ, ಬಾಬುರಾವ್ ಚಿಂಚನಸೂರು, ಆರ್.ಶಂಕರ್‌ ಅವರ ರಾಜೀನಾಮಿಯಿಂದ ವಿಧಾನ‌ ಪರಿಷತ್‌ನಲ್ಲಿ ಮೂರು ಸ್ಥಾನಗಳು ತೆರವಾಗಿದ್ದವು. 

Written by - Chetana Devarmani | Last Updated : Jun 19, 2023, 06:06 PM IST
  • ವಿಧಾನ‌ ಪರಿಷತ್‌ ಉಪಚುನಾವಣೆ
  • ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರು ಪ್ರಕಟ
  • ಜಗದೀಶ್ ಶೆಟ್ಟರ್‌ಗೆ ಟಿಕೆಟ್‌ ಕೊಟ್ಟ ಕೈ ಹೈಕಮಾಂಡ್‌
ವಿಧಾನ‌ ಪರಿಷತ್‌ ಉಪಚುನಾವಣೆ: ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರು ಪ್ರಕಟ title=

ಬೆಂಗಳೂರು: ವಿಧಾಸಭೆ ಚುನಾವಣೆ ಬಳಿಕ ಇದೀಗ ವಿಧಾನಪರಿಷತ್ ಉಪಚುನಾವಣೆಯ ಸಿದ್ಧತೆ ನಡೆಯುತ್ತಿದೆ. ವಿಧಾನ‌ ಪರಿಷತ್‌ನ ಮೂರು ಸ್ಥಾನಗಳಿಗೆ ನಡೆಯುವ ಉಪಚುನಾವಣೆ ನಡೆಯಲಿದೆ. ಜೂನ್ 30 ರಂದು ವಿಧಾನ‌ ಪರಿಷತ್‌ ಉಪಚುನಾವಣೆ ನಡೆಯಲಿದೆ. ನಾಳೆ ನಾಮಪತ್ರ ಸಲ್ಲಿಸಲು ಕೊನೆಯ ದಿನ. ಇಂದು ಕಾಂಗ್ರೆಸ್ ತನ್ನ ಮೂವರು ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರಿಗೂ ವಿಧಾನ‌ ಪರಿಷತ್‌ ಉಪಚುನಾವಣೆಯ ಟಿಕೆಟ್‌ ನೀಡಲಾಗಿದೆ. 

ಇದನ್ನೂ ಓದಿ: ಯೋಗೀಶ್ ಗೌಡ ಕೊಲೆ ಪ್ರಕರಣ: ಧಾರವಾಡ ಪ್ರವೇಶಕ್ಕೆ ವಿನಯ ಕುಲಕರ್ಣಿಗಿಲ್ಲ ಅನುಮತಿ

ಕಾಂಗ್ರೆಸ್ ಹೈಕಮಾಂಡ್ ಇಂದು ವಿಧಾನ‌ ಪರಿಷತ್‌ ಉಪಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಜಗದೀಶ್ ಶೆಟ್ಟರ್, ಬೋಸರಾಜು ಮತ್ತು ತಿಪ್ಪಣ್ಣ ಕಮಕನೂರು ಮೂವರಿಗೆ ವಿಧಾನ‌ ಪರಿಷತ್‌ ಉಪಚುನಾವಣೆಗೆ ಟಿಕೆಟ್‌ ನೀಡಲಾಗಿದೆ. ಈ ಹಿಂದೆ ವಿಧಾನ‌ ಪರಿಷತ್‌ ಉಪಚುನಾವಣೆಯಲ್ಲಿ ಬಾಬುರಾವ್ ಚಿಂಚನಸೂರು ಅವರಿಗೆ ಕಾಂಗ್ರೆಸ್ ಟಿಕೆಟ್‌ ನೀಡುತ್ತೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಅವರಿಗೆ ಅನಾರೋಗ್ಯದ ಕಾರಣ ಟಿಕೆಟ್‌ ಕೈತಪ್ಪಿದೆ.  

ಲಕ್ಷ್ಮಣ ಸವದಿ, ಬಾಬುರಾವ್ ಚಿಂಚನಸೂರು, ಆರ್.ಶಂಕರ್‌ ಅವರ ರಾಜೀನಾಮಿಯಿಂದ ವಿಧಾನ‌ ಪರಿಷತ್‌ನಲ್ಲಿ ಮೂರು ಸ್ಥಾನಗಳು ತೆರವಾಗಿದ್ದವು. ಲಕ್ಷ್ಮಣ್ ಸವದಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಜಗದೀಶ್ ಶೆಟ್ಟರ್, ಆರ್. ಶಂಕರ್ ಅವರಿಂದ ತೆರವಾದ ಸ್ಥಾನಕ್ಕೆ ತಿಪ್ಪಣ್ಣ ಕಮಕನೂರು ಮತ್ತು ಬಾಬುರಾವ್ ಚಿಂಚನಸೂರ್‌ ಅವರಿಂದ ತೆರವಾದ ಸ್ಥಾನಕ್ಕೆ ಸಚಿವ ಬೋಸರಾಜು ಸ್ಪರ್ಧಿಸುತ್ತಿದ್ದಾರೆ. 

ಇದನ್ನೂ ಓದಿ: ಲೀಥಿಯಂ ಕೋಶ ಉತ್ಪಾದನೆ: ರಾಜ್ಯದಲ್ಲಿ 8 ಸಾವಿರ ಕೋಟಿ ರೂ. ಹೂಡಿಕೆಗೆ ಐಬಿಸಿ ಕಂಪನಿ ಒಲವು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News