ಪಿಎಸ್ಐ ಹಗರಣದ ಮೂಲ ಕೆಪಿಸಿಸಿ ಭ್ರಷ್ಟಾಧ್ಯಕ್ಷ & ಖರ್ಗೆ ಕುಟುಂಬದ ಸುತ್ತ ತಿರುಗುತ್ತಿದೆ: ಬಿಜೆಪಿ

ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಹಾಗೂ ವರ್ತನೆ ನೋಡಿದರೆ ಈ ಹಗರಣದ ಬಗ್ಗೆ ಅಪಾರ ಜ್ಞಾನ ಹಾಗೂ ಸಂಬಂಧ ಹೊಂದಿರುವಂತೆ ಕಾಣುತ್ತಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

Written by - Zee Kannada News Desk | Last Updated : May 2, 2022, 02:47 PM IST
  • ದಿವ್ಯಾ ಹಾಗರಗಿ ತನಿಖಾಧಿಕಾರಿಗಳಿಗೆ ನೀಡಿರುವ ಹೇಳಿಕೆ ಪ್ರಕಾರ ರುದ್ರೇಗೌಡ ಪಾಟೀಲ್ ಸಹೋದರರಿಂದ ಹಣ ಪಡೆಯಲಾಗಿದೆ
  • ಹಾಗಾದರೆ ಹಗರಣದ‌‌ ಹಿಂದಿರುವ ಶಕ್ತಿಗಳು ಕಾಂಗ್ರೆಸ್ ನಾಯಕರಲ್ಲವೇ? ಎಂದು ಪ್ರಶ್ನಿಸಿದ ಬಿಜೆಪಿ
  • ಕ್ವೀನ್ಸ್ ರಸ್ತೆಯಲ್ಲಿರುವ #ಭ್ರಷ್ಟಾಧ್ಯಕ್ಷರ ಅಕ್ರಮ ಹಣದ ಬ್ಯಾಂಕ್‌ಗೆ ಈ ಹಗರಣದ ಹಣ ತಲುಪಿರಬಹುದೇ?
ಪಿಎಸ್ಐ ಹಗರಣದ ಮೂಲ ಕೆಪಿಸಿಸಿ ಭ್ರಷ್ಟಾಧ್ಯಕ್ಷ & ಖರ್ಗೆ ಕುಟುಂಬದ ಸುತ್ತ ತಿರುಗುತ್ತಿದೆ: ಬಿಜೆಪಿ title=
ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಆಕ್ರೋಶ

ಬೆಂಗಳೂರು: 545 ಪಿಎಸ್‍ಐ ಹುದ್ದೆಗಳ ನೇಮಕಾತಿ ಹಗರಣದ ನಂಟು ಕಾಂಗ್ರೆಸ್ ಜೊತೆ ಅಕ್ಷಯವಾಗುತ್ತಿದೆ. ಹಗರಣದ ಮೂಲ ಕೆಪಿಸಿಸಿಯ #ಭ್ರಷ್ಟಾಧ್ಯಕ್ಷ & ಖರ್ಗೆ ಕುಟುಂಬದ ಸುತ್ತ ತಿರುಗುತ್ತಿದೆ ಎಂದು ಬಿಜೆಪಿ ಟೀಕಿಸಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ರಾಜಕೀಯ ಅಸ್ಥಿರತೆ ಮೂಡಿಸಲು ಟೂಲ್ ಕಿಟ್ ಮಾದರಿಯಲ್ಲಿ ತಂತ್ರ ಹೆಣೆದ ಕಾಂಗ್ರೆಸ್ಸಿಗರು ಈಗ ಅದರೊಳಗೆ ತಾವೇ ಬಿದ್ದು ಬೇಸಗೆಯಲ್ಲೂ ಗಡ ಗಡ ನಡುಗುತ್ತಿದ್ದಾರೆ’ ಎಂದು ಕುಟುಕಿದೆ.

‘ಆರೋಪಿ ದಿವ್ಯಾ ಹಾಗರಗಿ ತನಿಖಾಧಿಕಾರಿಗಳಿಗೆ ನೀಡಿರುವ ಹೇಳಿಕೆ ಪ್ರಕಾರ ರುದ್ರೇಗೌಡ ಪಾಟೀಲ್ ಸಹೋದರರಿಂದ ಹಣ ಪಡೆಯಲಾಗಿದೆ. ಹಾಗಾದರೆ ಹಗರಣದ‌‌ ಹಿಂದಿರುವ ಶಕ್ತಿಗಳು ಕಾಂಗ್ರೆಸ್ ನಾಯಕರಲ್ಲವೇ? ಕ್ವೀನ್ಸ್ ರಸ್ತೆಯಲ್ಲಿರುವ #ಭ್ರಷ್ಟಾಧ್ಯಕ್ಷ ರ ಅಕ್ರಮ ಹಣದ ಬ್ಯಾಂಕ್‌ಗೆ ಈ ಹಗರಣದ ಹಣ ತಲುಪಿರಬಹುದೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: "ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣದಲ್ಲಿ ಸರ್ಕಾರದ ಪಾತ್ರವಿದೆ"

‘ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಹಾಗೂ ವರ್ತನೆ ನೋಡಿದರೆ ಈ ಹಗರಣದ ಬಗ್ಗೆ ಅಪಾರ ಜ್ಞಾನ ಹಾಗೂ ಸಂಬಂಧ ಹೊಂದಿರುವಂತೆ ಕಾಣುತ್ತಿದೆ. ಪ್ರಿಯಾಂಕ್‌ ಅವರೇ ಸಿಐಡಿ ನೋಟಿಸ್‌ಗೆ ನೇರವಾಗಿ ಉತ್ತರಿಸಲು ಅಳುಕೇಕೆ? ಹಗರಣದಲ್ಲಿ ನಿಮ್ಮ ‘ಪಾಲು’ ಹಾಗೂ ಭಾಗ ಏನೆಂಬುದು ಬಯಲಾಗಬಹುದೆಂಬ ಭಯ ನಿಮ್ಮನ್ನು ಕಾಡುತ್ತಿದೆಯೇ?’ ಎಂದು ಟ್ವೀಟ್ ಮಾಡಿದೆ.

‘ದಿವ್ಯಾ ಹಾಗರಗಿ ಬಂಧನಕ್ಕೆ 18 ದಿನ ಏಕಾಯ್ತು ಎಂದು ಪ್ರಶ್ನಿಸುವ ಪ್ರಿಯಾಂಕ್ ಖರ್ಗೆ ಅವರಿಗೆ ತಮ್ಮದೇ ಪಕ್ಷದ ಮುಖಂಡರು ಅಕ್ರಮದಲ್ಲಿರುವುದು ಗೊತ್ತೇ ಆಗಿಲ್ಲವೇ? ಖರ್ಗೆಯವರೇ 2 ಬಾರಿ ನೋಟಿಸ್ ನೀಡಿದರೂ ತಪ್ಪಿಸಿಕೊಂಡು ಓಡಾಡುತ್ತಿರುವ ನಿಮ್ಮ ಬಗ್ಗೆಯೂ ಜನ ಅನುಮಾನ ಪಡುತ್ತಿದ್ದಾರೆ, ಇದಕ್ಕೆ ಏನು ಹೇಳುತ್ತೀರಿ?’ ಅಂತಾ ಪ್ರಶ್ನಿಸಿದೆ.

ಇದನ್ನೂ ಓದಿ: ಗಡಿ ವಿವಾದ: 'ಅಜಿತ್‌ ಪವಾರ್‌ ಮಿದುಳು ಹಿಮ್ಮುಖವಾಗಿ ಚಲಿಸುತ್ತಿರಬಹುದು'-ಹೆಚ್.ಡಿ.ಕುಮಾರಸ್ವಾಮಿ

‘ಪಿಎಸ್ಐ ನೇಮಕ ಹಗರಣದ ತನಿಖೆಯನ್ನು ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ. ತನಿಖೆಯ ವಿಚಾರದಲ್ಲಿ ಎಲ್ಲಿಯೂ ಎಡವಿಲ್ಲ. ವಿಳಂಬವೂ ಮಾಡಿಲ್ಲ. ಹಗರಣದ ಹಿನ್ನೆಲೆಯಲ್ಲಿ ನೇಮಕಾತಿ ರದ್ದು ಮಾಡಲಾಗಿದೆ, ಆರೋಪಿಗಳನ್ನು ಕಾನೂನು ವ್ಯಾಪ್ತಿಗೆ ಒಳಪಡಿಸಲಾಗುತ್ತಿದೆ. ಇಷ್ಟರ ಮೇಲೂ ಕಾಂಗ್ರೆಸ್ ಏಕೆ ಕಳವಳಗೊಳ್ಳುತ್ತಿದೆ?’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

‘ಪಿಎಸ್ಐ ನೇಮಕ ಹಗರಣದ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ವರ್ತನೆಯೇ ಅನುಮಾನ ಸೃಷ್ಟಿಸುತ್ತಿದೆ. ಸಿದ್ದರಾಮಯ್ಯ ಪರೀಕ್ಷೆ ರದ್ದುಪಡಿಸಿದ್ದು ಸರಿ ಎನ್ನುತ್ತಿದ್ದರೆ, ಭ್ರಷ್ಟಾಧ್ಯಕ್ಷ ಡಿಕೆಶಿ, ಪ್ರಿಯಾಂಕ್ ಖರ್ಗೆ ವಿರೋಧಿಸುತ್ತಿದ್ದಾರೆ. ಕಾಂಗ್ರೆಸ್‌ ನಾಯಕರೇ ನೀವೆಲ್ಲ ಒಂದೆಡೆ ಕೂತು ಮೊದಲು ಒಮ್ಮತದ ನಿರ್ಧಾರ ಕೈಗೊಳ್ಳಿ!’ ಎಂದು ಹೇಳಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News