ರಾಜಕೀಯವಾಗಿ ತಮ್ಮ ಅಸ್ತಿತ್ವ ಕಾಪಾಡಿಕೊಳ್ಳಲು ಸುತ್ತಲಿನವರನ್ನು ಬಳಸಿ ಬಿಸಾಡುವುದು ಸಿದ್ದರಾಮಯ್ಯನವರಿಗೆ ಹೊಸದೇನಲ್ಲ. ಆ ದೊಡ್ಡ ಸಾಲಿಗೆ ಈಗ ಕೆಂಪಣ್ಣನವರ ಹೆಸರು ಸೇರಿಕೊಂಡಿದೆ ಎಂದು ಬಿಜೆಪಿ ಟೀಕಿಸಿದೆ.
40% Commission Case: ಡಿ.ಕೆಂಪಣ್ಣ ವಿರುದ್ಧ ಸಚಿವ ಮುನಿರತ್ನ ಅವರು ಮಾನಹಾನಿ ಕೇಸ್ ಹಾಕಿದ್ದರು. ಕೋರ್ಟ್ಗೆ ಗೈರಾಗಿದ್ದ ಡಿ.ಕೆಂಪಣ್ಣ ವಿರುದ್ಧ ವಾರೆಂಟ್ ಜಾರಿಯಾಗಿತ್ತು. 8ನೇ ಎಸಿಎಂಎಂ ಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು.
ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿದೆ. ಚಿಕ್ಕೋಡಿ ಉಪವಿಭಾಗದ ಅಥಣಿಯಲ್ಲಿ 1 ವರ್ಷದಲ್ಲಿ 2 ಬಾರಿ ರಸ್ತೆ ನಿರ್ಮಾಣ ಮಾಡಲಾಗಿದೆ.. ಆದ್ರೆ ಎರಡು ಬಾರಿಯೂ ಕಳಪೆ ಕಾಮಗಾರಿ ನಡೆದಿದೆ. ರಸ್ತೆ ನಿರ್ಮಾಣದಲ್ಲಿ ಭಾರೀ ಗೋಲ್ಮಾಲ್ ಆರೋಪ ಕೇಳಿ ಬಂದಿದೆ.
ರಾಜ್ಯ ಸರ್ಕಾರಕ್ಕೂ 40% ಕಮಿಷನ್ ಆರೋಪಕ್ಕೂ ಬಿಡಲಾರದ ನಂಟು. ಇನ್ನೇನು ಎಲ್ಲವೂ ಮುಗೀತು ಅನ್ನುವಾಗ್ಲೇ ಮತ್ತೊಮ್ಮೆ ಮೈಕೊಡವಿ ಮೇಲೆದ್ದು ಬರ್ತಿದೆ. ಪದೇ ಪದೆ ಎದುರಾಗ್ತಿರೋ ಈ ಆರೋಪದಿಂದ ಹೊರಬರೋಕೆ ಸರ್ಕಾರ ವಿಲವಿಲ ಅಂತ ಒದ್ದಾಡ್ತಿದೆ.. ಆದ್ರೆ ಈ ಬಾರಿ ಸಚಿವರೊಬ್ಬರ ಮೇಲೆ ಗುತ್ತಿಗೆದಾರರ ಸಂಘ ನೇರ ಆರೋಪ ಮಾಡಿರೋದ್ರಿಂದ ಹೊರಬರಲಾರದ ಸ್ಥಿತಿ ನಿರ್ಮಾಣವಾಗಿದೆ.
ಅಧಿಕಾರಿಗಳು ಮುಖ್ಯಮಂತ್ರಿಗಳ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ರಾಜ್ಯದಲ್ಲಿ ಸಿಎಂ ಮಾತು ನಡೆಯುತ್ತಿಲ್ಲ. ಸಿಎಂ ಆದೇಶಗಳನ್ನು ಅಧಿಕಾರಿಗಳು ಕಸದ ಬುಟ್ಟಿಗೆಸೆಯುತ್ತಾರೆ ಅಂತಾ ಕಾಂಗ್ರೆಸ್ ಟೀಕಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.