ಬಿಜೆಪಿಗೆ ಕಾರ್ಯಕರ್ತರೆಂದರೆ ಬಳಸಿ ಬೀಸಾಡುವ #ಟೂಲ್‌ಕಿಟ್ ಅಷ್ಟೇ: ಕಾಂಗ್ರೆಸ್

'ಲಾಭವಿದ್ದರೆ ಅನಾಥ ಶವಕ್ಕೂ ಕೇಸರಿ ಶಾಲು ಹಾಕಿ ನಮ್ಮವನೆಂದು ಮೆರವಣಿಗೆ ಮಾಡುತ್ತಾರೆ, ನಷ್ಟವಾಗುವುದಿದ್ದರೆ ಕೇಸರಿ ಶಾಲು ಹೊದ್ದು ಸತ್ತರೂ ನಮ್ಮವನಲ್ಲ ಎನ್ನುತ್ತಾರೆ'

Written by - Zee Kannada News Desk | Last Updated : Apr 14, 2022, 09:28 PM IST
  • ಬಿಜೆಪಿಗೆ ಕಾರ್ಯಕರ್ತರೆಂದರೆ ಬಳಸಿ ಬೀಸಾಡುವ #ಟೂಲ್‌ಕಿಟ್ ಅಷ್ಟೇ
  • ಲಾಭವಿದ್ದರೆ ಅನಾಥ ಶವಕ್ಕೂ ಕೇಸರಿ ಶಾಲು ಹಾಕಿ ನಮ್ಮವನೆಂದು ಮೆರವಣಿಗೆ ಮಾಡುತ್ತಾರೆ
  • ನಷ್ಟವಾಗುವುದಿದ್ದರೆ ಕೇಸರಿ ಶಾಲು ಹೊದ್ದು ಸತ್ತರೂ ನಮ್ಮವನಲ್ಲ ಎನ್ನುತ್ತಾರೆ
ಬಿಜೆಪಿಗೆ ಕಾರ್ಯಕರ್ತರೆಂದರೆ ಬಳಸಿ ಬೀಸಾಡುವ #ಟೂಲ್‌ಕಿಟ್ ಅಷ್ಟೇ: ಕಾಂಗ್ರೆಸ್  title=
ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ

ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ 40% ಕಮಿಷನ್ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಪ್ರಕರಣ ಸಂಬಂಧ ಬಿಜೆಪಿ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.  

‘ಬಿಜೆಪಿಗೆ ಕಾರ್ಯಕರ್ತರೆಂದರೆ ಬಳಸಿ ಬೀಸಾಡುವ #ಟೂಲ್‌ಕಿಟ್ ಅಷ್ಟೇ, ಲಾಭವಿದ್ದರೆ ಅನಾಥ ಶವಕ್ಕೂ ಕೇಸರಿ ಶಾಲು ಹಾಕಿ ನಮ್ಮವನೆಂದು ಮೆರವಣಿಗೆ ಮಾಡುತ್ತಾರೆ, ನಷ್ಟವಾಗುವುದಿದ್ದರೆ ಕೇಸರಿ ಶಾಲು ಹೊದ್ದು ಸತ್ತರೂ ನಮ್ಮವನಲ್ಲ ಎನ್ನುತ್ತಾರೆ. ಉದಯ್ ಗಾಣಿಗಾ, ವಿನಾಯಕ ಬಾಳಿಗಾ ಸೇರಿದಂತೆ ಬಿಜೆಪಿಯ ಬಳಸಿ ಬೀಸಾಡುವ ಧೋರಣೆಗೆ ಹಲವು ಉದಾಹರಣೆಗಳಿವೆ’ ಎಂದು ಟೀಕಿಸಿದೆ.

ಇದನ್ನೂ ಓದಿ: ‘ಡಿಕೆಶಿ ಇಂಧನ ಸಚಿವರಾಗಿದ್ದಾಗ ಭ್ರಷ್ಟಾಚಾರದ #ಲಕ್ಷ್ಮಿಕಟಾಕ್ಷ ಎಷ್ಟಿತ್ತು?’

‘ಒಬ್ಬ ಹಿಂದೂ ಕಾರ್ಯಕರ್ತ, ಅಲ್ಲದೆ ಸ್ವತಃ ಬಿಜೆಪಿಯ ಕಾರ್ಯಕರ್ತನ ಸಾವಿಗೆ ನ್ಯಾಯ ಕೊಡಿಸುವ ಬದಲಾಗಿ ಯಕಶ್ಚಿತ ಒಬ್ಬ ಭ್ರಷ್ಟ ಸಚಿವನಿಗೊಸ್ಕರ ಸಾವನ್ನೇ ಅವಮಾನಿಸುತ್ತಿದೆ ಬಿಜೆಪಿ. ಬಿಜೆಪಿಯ ಕಾರ್ಯಕರ್ತರು ಇದನ್ನು ಅರ್ಥ ಮಾಡಿಕೊಂಡು ಎಚ್ಚರಾಗುವುದೊಳಿತು. ಹಣ, ಅಧಿಕಾರ ಇರುವವರ ಮುಂದೆ ನೀವು ಕೇವಲ ಟೈರ್ ಕೆಳಗಿಡುವ ಲಿಂಬೆಹಣ್ಣು ಅಷ್ಟೇ!’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

‘ಸಂತೋಷ್ ಪಾಟೀಲ್ ಯಾರೆಂದು ನನಗೆ ಗೊತ್ತೇ ಇಲ್ಲ, ಪರಿಚಯವೇ ಇಲ್ಲ, ಸಂಬಂಧವೇ ಇಲ್ಲ ಎನ್ನುತ್ತಿರುವ ಕೆ.ಎಸ್.ಈಶ್ವಪ್ಪನವರೇ, ಸಂತೋಷ್ ನಿಮ್ಮನ್ನು ಹಲವು ಬಾರಿ ಭೇಟಿಯಾಗಿದ್ದು ಏಕೆ? ನಿಮಗೆ ಹಾರ ತುರಾಯಿ ಹಾಕಿ ಸನ್ಮಾನಿಸಿದ್ದು ಏಕೆ? ನಿಮ್ಮ ಪಕ್ಷದ ಕಾರ್ಯಕರ್ತನಲ್ಲವೇ? ಇಷ್ಟೆಲ್ಲಾ ಇದ್ದೂ ಅದ್ಯಾವ ನಾಲಿಗೆಯಲ್ಲಿ ಸುಳ್ಳನ್ನು ಸಲೀಸಾಗಿ ಹೇಳುವಿರಿ?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: 'ತನಿಖೆಗೆ ಮೊದಲೇ ಈಶ್ವರಪ್ಪಗೆ ಕ್ಲೀನ್ ಚಿಟ್ ನೀಡಿರುವ ಸರ್ಕಾರದಿಂದ ನಿಷ್ಪಕ್ಷಪಾತ ತನಿಖೆ ಅಸಾಧ್ಯ'

‘ಮಗನನ್ನು ಕಳೆದುಕೊಂಡ ಸಂತೋಷ್ ಪಾಟೀಲ್ ತಾಯಿಯ ಕಣ್ಣೀರು ಬರಿದಾಗುತ್ತಿದೆ. ಆದರೆ ಲಂಚ ಕೇಳಿದ ಈಶ್ವರಪ್ಪನ ನಗು ಎಲ್ಲೆಮೀರಿದೆ. ಈ ಹೆತ್ತ ಕರುಳಿನ ಶಾಪ 40% ಕಮಿಷನ್ ಬಿಜೆಪಿ ಸರ್ಕಾರಕ್ಕೆ ತಟ್ಟದೇ ಇರುವುದಿಲ್ಲ’ ಅಂತಾ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News