ಬೆಂಗಳೂರು: ಇಂದು ಮಂಗಳೂರಿಗೆ ಭೇಟಿ ನೀಡಿದ ಪ್ರಧಾನಿ ಮೋದಿ 3,800 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾತನಾಡಿರುವ ಅವರು, ‘ಜನರ ಜೀವನಮಟ್ಟ ಸುಧಾರಿಸಲು ಹಾಗೂ ದೇಶದ ಆರ್ಥಿಕ ಪ್ರಗತಿ ಸಾಧಿಸಲು ಡಬಲ್ ಎಂಜಿನ್ ಸರ್ಕಾರ ನೆರವಾಗುತ್ತಿದೆ. ಹೊಸ ಯೋಜನೆಗಳಿಂದ ರಾಜ್ಯದಲ್ಲಿ ಹೊಸ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ’ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಮಂಗಳೂರು ಭೇಟಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದ್ದು, #ModiMosa ಹ್ಯಾಶ್ ಟ್ಯಾಗ್ ಬಳಸಿ ಶುಕ್ರವಾರ ಸರಣಿ ಟ್ವೀಟ್ ಮಾಡಿದೆ. ‘ಮತ್ತದೇ ಹಳೆ ಕ್ಯಾಸೆಟ್, ಮತ್ತದೇ ಸುಳ್ಳು ಅಂಕಿ ಅಂಶಗಳು, ಮತ್ತದೇ ಆತ್ಮವಂಚನೆಯ ಮಾತುಗಳು. ಮೋದಿಯವರೇ 40% ಕಮಿಷನ್ ಲೂಟಿಯ ಬಗ್ಗೆ ಮಾತಾಡದಿರುವುದು ಆತ್ಮವಂಚಕತನವಲ್ಲವೇ? ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿಯಾಗುತ್ತಿದೆ ಎಂದು ಹಳೆ ಸುಳ್ಳನ್ನು ಪುನರಾವರ್ತಿಸುವ ಮೂಲಕ ತಮ್ಮ ನಯವಂಚಕತನವನ್ನು ತೋರಿದ್ದಾರೆ’ ಎಂದು ಟೀಕಿಸಿದೆ.
ಮತ್ತದೇ ಹಳೆ ಕ್ಯಾಸೆಟ್,
ಮತ್ತದೇ ಸುಳ್ಳು ಅಂಕಿ ಅಂಶಗಳು,
ಮತ್ತದೇ ಆತ್ಮವಂಚನೆಯ ಮಾತುಗಳು.@narendramodi ಅವರೇ, 40% ಕಮಿಷನ್ ಲೂಟಿಯ ಬಗ್ಗೆ ಮಾತಾಡದಿರುವುದು ಆತ್ಮವಂಚಕತನವಲ್ಲವೇ?ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿಯಾಗುತ್ತಿದೆ ಎಂದು ಹಳೆ ಸುಳ್ಳನ್ನು ಪುನರಾವರ್ತಿಸುವ ಮೂಲಕ ತಮ್ಮ ನಯವಂಚಕತನವನ್ನು ತೋರಿದ್ದಾರೆ.#ModiMosa
— Karnataka Congress (@INCKarnataka) September 2, 2022
ಇದನ್ನೂ ಓದಿ: Muruga Mutt Seer case: ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಬೃಹತ್ ಪ್ರತಿಭಟನೆ
‘ಪ್ರಧಾನಿ ಮೋದಿಯವರೇ ಮೈಸೂರನ್ನು 'ಪ್ಯಾರಿಸ್' ಮಾಡುವ 'ಯೋಜನೆ' ಏನಾಯ್ತು? ಮೈಸೂರು ಪ್ಯಾರಿಸ್ ಆಗಲಿಲ್ಲ. ಕನಿಷ್ಠ ಪಕ್ಷ ಮೊನ್ನೆಯ ಮಳೆಗೆ ಮೈಸೂರಿಗೆ ತೆರಳುವ ನಿಮ್ಮ ಹೊಚ್ಚ ಹೊಸ ರಾಷ್ಟ್ರೀಯ ಹೆದ್ದಾರಿ 'ವೆನಿಸ್' ಆಗಿ ಬದಲಾಗಿತ್ತು. #ModiMosa ತಮ್ಮ ಗಮನಕ್ಕೆ ಬಂದಿದೆಯೇ? ಏಕೆ ಹೀಗಾಯಿತು #NimHatraIdyaUttara? ಪೆಟ್ರೋಲ್ ಬೆಲೆ ಕಡಿಮೆ ಆಗಿದೆಯೋ ಇಲ್ಲವೋ? ಡೀಸೆಲ್ ಬೆಲೆ ಕಡಿಮೆ ಆಗಿದೆಯೋ ಇಲ್ಲವೋ? ನಿಮ್ಮ ಜೇಬಿನಲ್ಲಿ ಹಣ ಉಳಿದಿದೆಯೋ ಇಲ್ಲವೋ? ಇಂದಿನ ಭಾಷಣದಲ್ಲಿ ಜನರಿಗೆ ಈ ಪ್ರಶ್ನೆಗಳನ್ನು ಕೇಳುವಿರಾ ಪ್ರಧಾನಿ ಮೋದಿಯವರೇ?!’ ಎಂದು ಕಾಂಗ್ರೆಸ್ ಕುಟುಕಿದೆ.
ಸನ್ಮಾನ್ಯ @narendramodi ಅವರೇ,
ಮೈಸೂರನ್ನು 'ಪ್ಯಾರಿಸ್' ಮಾಡುವ 'ಯೋಜನೆ' ಏನಾಯ್ತು?
ಮೈಸೂರು ಪ್ಯಾರಿಸ್ ಆಗಲಿಲ್ಲ.
ಕನಿಷ್ಠ ಪಕ್ಷ ಮೊನ್ನೆಯ ಮಳೆಗೆ ಮೈಸೂರಿಗೆ ತೆರಳುವ ನಿಮ್ಮ ಹೊಚ್ಚ ಹೊಸ ರಾಷ್ಟ್ರೀಯ ಹೆದ್ದಾರಿ 'ವೆನಿಸ್' ಆಗಿ ಬದಲಾಗಿತ್ತು.
#ModiMosa ತಮ್ಮ ಗಮನಕ್ಕೆ ಬಂದಿದೆಯೇ?
ಏಕೆ ಹೀಗಾಯಿತು #NimHatraIdyaUttara ? pic.twitter.com/eQO6jTB7eA
— Karnataka Congress (@INCKarnataka) September 2, 2022
‘"ಕೇವಲ ಆಶ್ವಾಸನೆಗಳಲ್ಲಿ ದೇಶ ಕಳೆದುಹೋಗಿದೆ. ಇದು ಮೋದಿ, ಮೋದಿಯವರಿಗಾಗಿಯೇ ಆಡಿದ ಮಾತುಗಳು! ಕರ್ನಾಟಕ #ModiMosaದ ಆಶ್ವಾಸನೆಗಳಲ್ಲಿ ಕಳೆದುಹೋಗಿದೆ! ರಾಜ್ಯದಲ್ಲಿ 40% ಕಮಿಷನ್ ಭ್ರಷ್ಟಾಚಾರ ತಾಂಡವವಾಡುತ್ತಿದೆ, ನೇಮಕಾತಿಗಳಲ್ಲಿ ಸಾಲು ಸಾಲು ಅಕ್ರಮ ನಡೆಯುತ್ತಿವೆ. ಮೋಸದ ಮಾತುಗಳಿಗೆ ಮೋದಿ ಉತ್ತರಿಸುವ ಸಮಯವಿದು. ಜನರನ್ನು ಕರೆತರಲು ಬಸ್ಸುಗಳು, ಬಲವಂತದ ಅದೇಶಗಳು, ನೋಡಲ್ ಅಧಿಕಾರಿಗಳು, ಮನೆ ಮನೆಯ ಆಹ್ವಾನಗಳು ಮತ್ತು ಹಗಲು ರಾತ್ರಿಯ ಶತಪ್ರಯತ್ನಗಳು. ಇಷ್ಟೆಲ್ಲಾ ಇದ್ದರೂ ಸೇರಿದ್ದು ಕೆಲವೇ ಸಾವಿರ ಜನ. ರಾಜ್ಯದ ಜನತೆಗೆ #ModiMosaದ ಅಸಲಿ ಬಂಡವಾಳ ತಿಳಿದುಹೋಗಿದೆ. ರಾಜ್ಯದ ಭ್ರಷ್ಟ ಸರ್ಕಾರದ ಮೇಲೆ ಆಕ್ರೋಶ ಇಮ್ಮಡಿಯಾಗಿದೆ’ ಎಂದು ಕಾಂಗ್ರೆಸ್ ಟೀಕಿಸಿದೆ.
ಇದನ್ನೂ ಓದಿ: ನ್ಯಾಯಾಲಯಕ್ಕೆ ಹಾಜರಾದ ಮುರುಘಾ ಶ್ರೀ : 3 ದಿನ ಖಾಕಿ ಕಸ್ಟಡಿಗೆ
ಮಾನ್ಯ @BSBommai ಅವರೇ,
ಪ್ರಧಾನಿ ಮೋದಿಯವರು ನಿಮ್ಮ ಪಕ್ಕದಲೇ ನಿಂತಿದ್ದರು, ನೀವೇ ಸ್ವಾಗತಿಸಿದಿರಿ, ಸಂತೋಷ.ನೆರೆ ಹಾನಿ ಪ್ರದೇಶಗಳ ಭೇಟಿಗೆ ಆಹ್ವಾನಿಸಲಿಲ್ಲವೇಕೆ❓
ಅತಿವೃಷ್ಟಿ ವರದಿ ನೀಡಿ, ಪರಿಹಾರಕ್ಕೆ ಬೇಡಿಕೆ ಇಡಲಿಲ್ಲವೇಕೆ❓
GST ಬಾಕಿ & ರಾಜ್ಯದ ಪಾಲಿನ ಅನುದಾನಗಳ ಬಿಡುಗಡೆಗೆ ಕೇಳಲಿಲ್ಲವೇಕೆ❓
ನಿಮಗೂ ತಿಳಿಯಿತೇ #ModiMosa ⁉️
— Karnataka Congress (@INCKarnataka) September 2, 2022
ಸಿಎಂ ಬಸವರಾಜ್ ಬೊಮ್ಮಾಯಿಯವರೇ ಪ್ರಧಾನಿ ಮೋದಿಯವರು ನಿಮ್ಮ ಪಕ್ಕದಲೇ ನಿಂತಿದ್ದರು, ನೀವೇ ಸ್ವಾಗತಿಸಿದಿರಿ, ಸಂತೋಷ. ನೆರೆ ಹಾನಿ ಪ್ರದೇಶಗಳ ಭೇಟಿಗೆ ಆಹ್ವಾನಿಸಲಿಲ್ಲವೇಕೆ? ಅತಿವೃಷ್ಟಿ ವರದಿ ನೀಡಿ, ಪರಿಹಾರಕ್ಕೆ ಬೇಡಿಕೆ ಇಡಲಿಲ್ಲವೇಕೆ? GST ಬಾಕಿ & ರಾಜ್ಯದ ಪಾಲಿನ ಅನುದಾನಗಳ ಬಿಡುಗಡೆಗೆ ಕೇಳಲಿಲ್ಲವೇಕೆ? ನಿಮಗೂ ತಿಳಿಯಿತೇ #ModiMosa ⁉’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.