ಗುತ್ತಿಗೆದಾರರ ಕಮಿಷನ್ ಆರೋಪ: ಕಾಂಗ್ರೆಸ್ ಸರ್ಕಾರಕ್ಕೆ ಮಾಜಿ ಸಚಿವ ಅಶೋಕ್ ರಿಂದ 10 ಪ್ರಶ್ನೆಗಳು

Contractors commission allegation: ರಾಜ್ಯದ ಜನತೆಗೆ ಪಂಚ ಗ್ಯಾರಂಟಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈ ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಪಡೆಯಲು 26 ಕಂಡಿಷನ್ ಗಳನ್ನು ಹಾಕಿದೆ. ಈ 26 ಕಂಡಿಷನ್ ಪೂರೈಸಬೇಕಾದರೆ ಕನಿಷ್ಠ 26 ವರ್ಷಗಳು ಬೇಕಾಗುತ್ತದೆ- ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಚಿವ ಆರ್. ಅಶೋಕ್ 

Written by - Yashaswini V | Last Updated : Aug 10, 2023, 02:38 PM IST
  • ನಮ್ಮ ಮೇಲೆ 40% ಅಂದ್ರಿ ಈಗ 15% ನಿಮ್ಮದು ಎಂಬ ಆರೋಪ ? ಇದಕ್ಕೆ ಉತ್ತರ ಏನು?
  • ಲೋಕಸಭಾ ಚುನಾವಣೆಗೆ ಫಂಡ್ ಕಲೇಕ್ಷನ್ ಗೆ ಗುದ್ದಿಲಿ ಪೂಜೆ ಮಾಡಿದ್ರಾ?
  • ಅಜ್ಜಯನ ಮೇಲೆ ಆಣೆ ಮಾಡಿ ಎಂದಿದ್ದಾರೆ, ಆಣೆ ಮಾಡುತ್ತೀರಾ?
ಗುತ್ತಿಗೆದಾರರ ಕಮಿಷನ್ ಆರೋಪ: ಕಾಂಗ್ರೆಸ್  ಸರ್ಕಾರಕ್ಕೆ ಮಾಜಿ ಸಚಿವ ಅಶೋಕ್ ರಿಂದ 10 ಪ್ರಶ್ನೆಗಳು  title=

Contractors commission allegation: ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾರೀ ಸದ್ದು ಮಾಡಿದ್ದ ಕಮಿಷನ್ ಆರೋಪ ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ಬಿಜೆಪಿ ಸರ್ಕಾರದ ವಿರುದ್ಧ ಗುತ್ತಿಗೆದಾರರು 40% ಕಮಿಷನ್ ಆರೋಪ ಮಾಡಿದ್ದರು. ಇದೀಗ ಕಾಂಗ್ರೆಸ್ ಸರ್ಕಾರದ ವಿರುದ್ಧ 15% ಕಮಿಷನ್ ಬಗ್ಗೆ ಆರೋಪ ಕೇಳಿಬರುತ್ತಿವೆ. ಈ ಬಗ್ಗೆ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಮಾಜಿ ಸಚಿವ ಆರ್. ಅಶೋಕ್, "ಬಿಜೆಪಿ‌ ಇದ್ದಾಗ ಪೇ ಸಿಎಂ ಅಂತ ಮಾಡಿದ್ರಿ, ಈಗ ಪೇ ಸಿಎಂ, ಡಿಸಿಎಂ ಆ!" ಎಂದು ವ್ಯಂಗ್ಯವಾಡಿದ್ದಾರೆ. 

ಈ ಕುರಿತಂತೆ ಕಾಂಗ್ರೆಸ್ ಸರ್ಕಾರಕ್ಕೆ 10 ಪ್ರಶ್ನೆಗಳನ್ನು ಕೇಳಿರುವ ಮಾಜಿ ಸಚಿವ ಆರ್. ಅಶೋಕ್, ಪಾರ್ಕ್ ಕ್ಲೀನಿಂಗ್, ಕಸ ಎತ್ತುವುದು ಸೇರಿದಂತೆ ಯಾವುದೇ ಕೆಲಸ ನಿಲ್ಲಬಾರದು ಎಂಬುದು ನಮ್ಮ ಉದ್ದೇಶ. ಕಾಂಗ್ರೆಸ್ ಪಕ್ಷದವರು ಅಧಿಕಾರಕ್ಕೆ ಬರುವಾಗ ಯಾವುದಕ್ಕೂ ಒಂದು ರೂಪಾಯಿ ಹಣ ತೆಗೆದುಕೊಳ್ಳುವುದಿಲ್ಲ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದರು. ಆದರೆ, ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳಾದರೂ ಯಾವುದೇ ಯೋಜನೆಗಳು ಮಂಜೂರಾಗಿಲ್ಲ ಎಂದು ತೀವ್ರ ವಾಗ್ಧಾಳಿ ನಡೆಸಿದರು. 

ಇದನ್ನೂ ಓದಿ- ಗುತ್ತಿಗೆದಾರರ 40% ಆರೋಪ ಸತ್ಯ, 15% ಆರೋಪ ಸುಳ್ಳು : ಸಚಿವ ರಾಮಲಿಂಗಾ ರೆಡ್ಡಿ

ರಾಜ್ಯದ ಜನತೆಗೆ ಪಂಚ ಗ್ಯಾರಂಟಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈ ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಪಡೆಯಲು 26 ಕಂಡಿಷನ್ ಗಳನ್ನು ಹಾಕಿದೆ. ಈ 26 ಕಂಡಿಷನ್ ಪೂರೈಸಬೇಕಾದರೆ ಕನಿಷ್ಠ 26 ವರ್ಷಗಳು ಬೇಕಾಗುತ್ತದೆ. 3 ವರ್ಷದ ಹಿಂದೆ ಕಳೆ ಕಿತ್ತೊರದನ್ನ ಚೆಕ್ ಮಾಡಬೇಕು ಅಂತಾರೆ. ಆದ್ರೆ ಅಲ್ಲಿಂದ ಇಲ್ಲಿಯವರೆಗೆ 30 ಸಲ ಕಳೆ ಬಂದಿರುತ್ತದೆ. 30 ಬಾರಿ ಕಳೆ ಕಿತ್ತಿರುತ್ತಾರೆ. ಅರ್ಥಾತ್, ಯಾವುದಕ್ಕೂ ದಾಖಲೆ ಸಿಗಬಾರದು. ದಾಖಲೆ ಇಲ್ಲ ಅಂತ ಸರ್ಕಾರ ಗ್ಯಾರಂಟಿ ಪ್ರಯೋಜನವನ್ನೂ ನೀಡುವುದಿಲ್ಲ ಎಂದು ಗ್ಯಾರಂಟಿ ಯೋಜನೆಗಳು ಫಲಾನುಭವಿಗಳನ್ನು ತಲುಪುವಲ್ಲಿ ಇರುವ ಅಡೆತಡೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ಫಂಡ್ ಕಲೆಕ್ಟ್ ಮಾಡಲು ಹೊರಟಿದೆ ಎಂದು ತೀವ್ರ ವಾಗ್ಧಾಳಿ ನಡೆಸಿದ ಆರ್. ಅಶೋಕ್, ಕಾಂಗ್ರೆಸ್ ಸರ್ಕಾರಕ್ಕೆ 10 ಪ್ರಶ್ನೆಗಳನ್ನು ಕೇಳಿದ್ದಾರೆ. ಆ ಪ್ರಶ್ನೆಗಳು ಕೆಳಕಂಡಂತಿವೆ... 
1. ನಮ್ಮ ಮೇಲೆ 40% ಅಂದ್ರಿ ಈಗ 15% ನಿಮ್ಮದು ಎಂಬ ಆರೋಪ ? ಇದಕ್ಕೆ ಉತ್ತರ ಏನು?
2. ಲೋಕಸಭಾ ಚುನಾವಣೆಗೆ ಫಂಡ್ ಕಲೇಕ್ಷನ್ ಗೆ ಗುದ್ದಿಲಿ ಪೂಜೆ ಮಾಡಿದ್ರಾ?
3. ಅಜ್ಜಯನ ಮೇಲೆ ಆಣೆ ಮಾಡಿ ಎಂದಿದ್ದಾರೆ, ಆಣೆ ಮಾಡುತ್ತೀರಾ?
4. ಎಲ್ಲಿದ್ದೀಯಪ್ಪಾ ಕೆಂಪಣ್ಣನವರೇ?
5, ಗುತ್ತಿಗೆದಾರರು ಎಲ್ಲಾ ಕಳ್ಳರಾದರೆ, 50 ವರ್ಷ ಆಳಿದ ಕಾಂಗ್ರೆಸ್ ನ ಬಳುವಳಿಯಾ ಇವರು?
6.  ದಯಾಮರಣಕ್ಕೆ ಒಪ್ಪಿಗೆ ಕೊಡ್ತೀರಾ?
7. ಡಿಕೆಶಿಯವೇ ನಿಮ್ಮದು ಬ್ರಾಂಡ್ ಬೆಂಗಳೂರಾ? ಅಥವಾ ಬ್ಯಾಗ್ ಬೆಂಗಳೂರಾ?
8. ಹಣ ಬಿಡುಗಡೆ ಮಾಡಲು ಸಿದ್ದರಾಮಯ್ಯಗೆ ವೇಣುಗೋಪಾಲ ಸೂಚನೆ ನೀಡಿದರೆ, ಹಣ ಸ್ಟಾಪ್ ಮಾಡಿಸಿದ್ದು ಸುರ್ಜೆವಾಲಾನಾ?
9. ಮೊನ್ನೆ ದೆಹಲಿಯಲ್ಲಿ ಸಭೆ ಮಾಡಿದ್ದು ಲೋಕಸಭಾ ಸೀಟ್ ಗೆಲ್ಲಿಸೋಕೊ ಅಥವಾ ಸೂಟ್ ಕೇಸ್ ತುಂಬಿಸೋಕೊ?
10. ಬಿಜೆಪಿ‌ ಇದ್ದಾಗ ಪೇ ಸಿಎಂ ಅಂತ ಮಾಡಿದ್ರಿ, ಈಗ ಪೇ ಸಿಎಂ, ಡಿಸಿಎಂ ಆ! ಎಂದು ಆರ್ ಅಶೋಕ್‌ ಕಾಂಗ್ರೆಸ್ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. 

ಇದನ್ನೂ ಓದಿ- ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ ಸಾವು ಪ್ರಕರಣ

ತನಿಖೆ ಮಾಡಿ ಆದರೆ ಕಾಮಗಾರಿ ನಿಲ್ಲಬಾರದು:
ಗುತ್ತಿಗೆದಾರರ ಬಗ್ಗೆ ತನಿಖೆ ಮಾಡಿ ಆದರೆ ಕಾಮಗಾರಿ ನಿಲ್ಲಬಾರದು ಎಂದು ಆಗ್ರಹಿಸಿದ ಆರ್. ಅಶೋಕ್, ನಾವು ಅಧಿಕಾರದಲ್ಲಿದ್ದಾಗ 40% ಕಮಿಷನ್ ಬಗ್ಗೆ ಆರೋಪ ಮಾಡುತ್ತಿದ್ದರು. ಈಗ ಕಮಿಷನ್ ದಂಧೆ 40+15 ಆಗಿದೆ ಅಂತ ಎಲ್ಲಾ ಹೇಳ್ತಿದ್ದಾರೆ. ಮಾತಿನಲ್ಲಿ ಹೇಳಿದರೆ ರೆಕಾರ್ಡ್ ಮಾಡ್ತಾರೆ ಎಂದು ಹೆದರಿ ಕೈ ಸನ್ನೆ ಮಾಡುತ್ತಾರೆ ಎಂದು ಹೇಳಿದರು. 

ಇದೇನು ಬಿನ್ ಲಾಡೆನ್ ಸರ್ಕಾರನಾ..!?
ಇದೇ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧವೂ ತೀವ್ರ ವಾಗ್ಧಾಳಿ ನಡೆಸಿದ ಆರ್. ಅಶೋಕ್, ಭಯ ಅನ್ನೋದು ನನ್ನ‌ಡಿಕ್ಷನರಿ ಅಲ್ಲೇ ಇಲ್ಲಾ ಅಂತಾರೆ. ಇದೇನು ಬಿನ್ ಲಾಡೆನ್ ಸರ್ಕಾರನಾ..!? ನ್ಯಾಯಾಲಯಕ್ಕೂ ಹೆದರಲ್ಲ ಅಂದ್ರೆ ಏನ್ ಹೇಳೋದು? ನಿಮ್ಮ ನಾಯಕರು ಎರಡು ವರ್ಷ ಶಿಕ್ಷೆಯಾಗಿ‌ ಬೇಲ್ ನಲ್ಲಿದ್ದಾರೆ? ನೀವೆ ಅಪರಾಧಿಗಳು.. ನೀವು ಕಂಟ್ರಾಕ್ಟರ್ ಅವರನ್ನ ಕಳ್ಳರು ಅಂದ್ರೆ ಹೇಗೆ? ಎಂದು ಪ್ರಶ್ನಿಸಿದರು. 

ಇದೇ ಸಂದರ್ಭದಲ್ಲಿ ಗುತ್ತಿಗೆದಾರರ ನೆರವಿಗೆ ಬೆನ್ನಾಗಿ ನಿಲ್ಲುವುದಾಗಿ ತಿಳಿಸಿದ ಆರ್. ಅಶೋಕ್, ಗುತ್ತಿಗೆದಾರರ ಸಮಸ್ಯೆ ಬಗ್ಗೆ  ಶಾಸಕರ ವತಿಯಿಂದ ಪತ್ರ ಬರೆಯುತ್ತೇವೆ. ಗುತ್ತಿಗೆದಾರರ ಸಮಸ್ಯೆ ಬಗ್ಗೆ ಪಾರ್ಟಿಯಿಂದ ಸಭೆ ಕರೆಯಲಾಗುತ್ತದೆ ಎಂದು ತಿಳಿಸಿದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News