ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಸಿಂಗಾಪುರದಲ್ಲಿ ಷಡ್ಯಂತ್ರ ನಡೆಸಲಾಗುತ್ತಿದೆ ಎಂಬ ಆರೋಪ ಮಾಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಗೆ ಬಿಜೆಪಿ ತಿರುಗೇಟು ನೀಡಿದೆ. ಈ ಬಗ್ಗೆ ಶುಕ್ರವಾರ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಪಕ್ಷದಲ್ಲಿ ನಡೆಯತ್ತಿರುವ ಬಣ ರಾಜಕೀಯದ ಬಗ್ಗೆ ವ್ಯಂಗ್ಯವಾಡಿದೆ.
‘ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಮೂಲ V/s ವಲಸೆ ಫೈಟ್ ಶುರುವಾಗಿದೆ. ಸಿಎಂ ಮತ್ತು ಡಿಸಿಎಂ ನಡುವಿನ ಕಿತ್ತಾಟದಿಂದ ಬಣ ಬಡಿದಾಟ ಜೋರಾಗಿದೆ. ಡಿಸಿಎಂ ಹೋಗುವ ಕಾರ್ಯಕ್ರಮಕ್ಕಿಲ್ಲ ಸಿಎಂಗೆ ಎಂಟ್ರಿ, ಸಿಎಂ ಹೋಗುವ ಕಾರ್ಯಕ್ರಮಕ್ಕೆ ಹೋಗಲ್ಲ ಡಿಸಿಎಂ! ಸಿದ್ದರಾಮಯ್ಯ ಬಣ ಹೋಗುವ ಮುನ್ನವೇ ಡಿಕೆ ಶಿವಕುಮಾರ್ ಬಣ ದಿಲ್ಲಿಗೆ ಶಿಫ್ಟ್, ನಿಗಮ ಮಂಡಳಿ ಸ್ಥಾನಗಳಿಗಾಗಿ ನಡೆಯುತ್ತಿದೆ ಸಿಎಂ- ಡಿಸಿಎಂ ಫೈಟ್, ಡಿಸಿಎಂಗೆ ದೆಹಲಿಯಲ್ಲಿ ಹಿನ್ನಡೆಯಾದ ಬೆನ್ನಲ್ಲೇ ಕರ್ನಾಟಕದಲ್ಲಿ ಬಣ ಉಲ್ಬಣ, ಸಿಂಗಾಪೂರ್ ಎಂದ ಡಿ.ಕೆ.ಶಿವಕುಮಾರ್ ಅವರಿಂದ ಕರ್ನಾಟಕದಲ್ಲೇ ಚೆಸ್ ಆಟ, ಡಿಕೆಶಿಯವರ 'ಕುರ್ಚಿಗಾಗಿ ಹೋರಾಟ' ಅಭಿಯಾನ ಸಿಂಗಾಪುರ್ ಬದಲು ಕರ್ನಾಟಕದಲ್ಲಿ ಇದೀಗ ಶುರುವಾಗಿದೆ’ ಎಂದು ಬಿಜೆಪಿ ಟೀಕಿಸಿದೆ.
ರಾಜ್ಯ @INCKarnataka ದಲ್ಲಿ ಶುರುವಾಯ್ತು ಮೂಲ V/s ವಲಸೆ ಫೈಟ್..!
👊 ಸಿಎಂ, ಡಿಸಿಎಂ ನಡುವಿನ ಕಿತ್ತಾಟದಿಂದ ಜೋರಾಯ್ತು ಬಣ ಬಡಿದಾಟ..!
👊 ಡಿಸಿಎಂ ಹೋಗುವ ಕಾರ್ಯಕ್ರಮಕ್ಕಿಲ್ಲ ಸಿಎಂಗೆ ಎಂಟ್ರಿ..!
👊 ಸಿಎಂ ಹೋಗುವ ಕಾರ್ಯಕ್ರಮಕ್ಕೆ ಹೋಗಲ್ಲ ಡಿಸಿಎಂ..!
👊 ಸಿದ್ದರಾಮಯ್ಯ ಬಣ ಹೋಗುವ ಮುನ್ನವೇ ಡಿಕೆ ಶಿವಕುಮಾರ್ ಬಣ ದಿಲ್ಲಿಗೆ…
— BJP Karnataka (@BJP4Karnataka) August 4, 2023
ಇದನ್ನೂ ಓದಿ: ಈಗ ನಾವು 60 ಪರ್ಸೆಂಟ್ ಸಿಎಂ ಅಂತ ಹೇಳಬೇಕಾಗುತ್ತೆ
ವರ್ಗಾವಣೆ ದಂಧೆ ವಿರುದ್ಧ ಬಿಜೆಪಿ ಆಕ್ರೋಶ!
‘ಮಳೆ ನಿಂತರೂ ಮಳೆಯ ಹನಿ ನಿಲ್ಲಲ್ಲ’ ಎನ್ನುವ ಹಾಗೆ #ATMSarkara ಆರಂಭಿಸಿರುವ ವರ್ಗಾವಣೆ ದಂಧೆ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಸಚಿವರು ಮತ್ತು ಶಾಸಕರುಗಳು ವರ್ಗಾವಣೆಯೊಂದೇ ಸರ್ಕಾರದ ಕೆಲಸ ಎಂದು ಭಾವಿಸಿದ್ದಾರೆ. ಸಿಎಂ, ಸಚಿವರು & ಶಾಸಕರುಗಳು ತಮಗೆ ಬೇಕಾದ ಅಧಿಕಾರಿಗಳನ್ನು ವರ್ಗಾಯಿಸಿಕೊಳ್ಳಲು ತೋರುತ್ತಿರುವ ಮುತುವರ್ಜಿಯನ್ನು, ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ತೋರದಿರುವುದು ಈ ರಾಜ್ಯಕ್ಕೆ ಹಾಗೂ ಮತದಾರರಿಗೆ ಮಾಡುತ್ತಿರುವ ದ್ರೋಹ’ವೆಂದು ಬಿಜೆಪಿ ಕುಟುಕಿದೆ.
ಅವಾಸ್ತವಿಕ ಗ್ಯಾರಂಟಿಗಳ ಅನುಷ್ಠಾನದಲ್ಲಿಯೂ ಅಪ್ರಬುದ್ಧತೆ ತೋರಿರುವ ರಾಜ್ಯದ #ATMSarkara, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿರುವ ನಿಧಿಯನ್ನು ದುರ್ಬಳಕೆ ಮಾಡಿಕೊಂಡಿದೆ.
ಈ ಮೂಲಕ ತಾನೊಂದು ದಲಿತ ವಿರೋಧಿ ಸರ್ಕಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. pic.twitter.com/fpNFk0FavY
— BJP Karnataka (@BJP4Karnataka) August 4, 2023
‘ಅವಾಸ್ತವಿಕ ಗ್ಯಾರಂಟಿಗಳ ಅನುಷ್ಠಾನದಲ್ಲಿಯೂ ಅಪ್ರಬುದ್ಧತೆ ತೋರಿರುವ ರಾಜ್ಯದ #ATMSarkara, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿರುವ ನಿಧಿಯನ್ನು ದುರ್ಬಳಕೆ ಮಾಡಿಕೊಂಡಿದೆ. ಈ ಮೂಲಕ ತಾನೊಂದು ದಲಿತ ವಿರೋಧಿ ಸರ್ಕಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ’ ಎಂದು ಬಿಜೆಪಿ ಕಿಡಿಕಾರಿದೆ.
ಇದನ್ನೂ ಓದಿ: ಶಿವನಸಮುದ್ರದ ನೀರಿನಲ್ಲಿ ಮುಳುಗುತ್ತಿದ್ದ 6 ಮಂದಿ ರಕ್ಷಣೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.