ಸಾರಿಗೆ ನೌಕರರಿಗೂ ಸಹ ATMSarkara ಕಿವಿ ಮೇಲೆ ಹೂವಿಟ್ಟು ‘ಕೈ’ ಕೊಟ್ಟಿದೆ!: ಬಿಜೆಪಿ

ಕಾಂಗ್ರೆಸ್ ಸರ್ಕಾರವು ಶಕ್ತಿ ಯೋಜನೆಯನ್ನು ಅಸಮರ್ಪಕವಾಗಿ ಜಾರಿ ಮಾಡಿ ತಪ್ಪನ್ನು ನೌಕರರ ತಲೆಗೆ ಕಟ್ಟಲು ಮುಂದಾಗಿದೆ. ಮಹಿಳಾ ಪ್ರಯಾಣಿಕರ ಸಂಚಾರದ ಬಗ್ಗೆ ಸಾರಿಗೆ ಸಿಬ್ಬಂದಿಗಳು ಅಕ್ರಮವೆಸಗುತ್ತಿದ್ದಾರೆಂದು ಅವರಿಗೆ ಎಚ್ಚರಿಕೆಯ ನೋಟಿಸ್ ನೀಡಿದೆ ಎಂದು ಬಿಜೆಪಿ ಟೀಕಿಸಿದೆ.

Written by - Puttaraj K Alur | Last Updated : Aug 4, 2023, 12:02 PM IST
  • ಮನೆ ಹತ್ತಿ ಉರಿಯುತ್ತಿದ್ದರೆ ಅದೇ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುವುದು ಕಾಂಗ್ರೆಸ್ ಪಕ್ಷದ ದುರ್ಬುದ್ಧಿ
  • ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ನೌಕರರ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತೇವೆಂದು ಆಶ್ವಾಸನೆ ನೀಡಿದ್ದರು
  • ಆದರೆ ಈಗ ಸಾರಿಗೆ ನೌಕರರಿಗೆ ಸರಿಯಾಗಿ ತಿಂಗಳ ಸಂಬಳವನ್ನೂ ನೀಡುತ್ತಿಲ್ಲವೆಂದು ಬಿಜೆಪಿ ಟೀಕಿಸಿದೆ
ಸಾರಿಗೆ ನೌಕರರಿಗೂ ಸಹ ATMSarkara ಕಿವಿ ಮೇಲೆ ಹೂವಿಟ್ಟು ‘ಕೈ’ ಕೊಟ್ಟಿದೆ!: ಬಿಜೆಪಿ title=
ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟೀಕೆ!

ಬೆಂಗಳೂರು: ಮನೆ ಹತ್ತಿ ಉರಿಯುತ್ತಿದ್ದರೆ, ಆ ಮನೆಯ ಬೆಂಕಿ ನಂದಿಸುವ ಬದಲು, ಅದೇ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುವ ದುರ್ಬುದ್ಧಿ ಕಾಂಗ್ರೆಸ್ ಪಕ್ಷಕ್ಕೆ ಚೆನ್ನಾಗಿ ಸಿದ್ಧಿಸಿದೆ ಎಂದು ಬಿಜೆಪಿ ಟೀಕಿಸಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಸಾರಿಗೆ ನೌಕರರ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

‘2021ರಲ್ಲಿ ರಾಜ್ಯ ಸಾರಿಗೆ ಸಂಸ್ಥೆ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆ ಬಗ್ಗೆ ಮುಷ್ಕರ ನಡೆಸುತ್ತಿದ್ದ ಸ್ಥಳಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯನವರು ಭೇಟಿ ನೀಡಿ, ನೌಕರರ ಮುಷ್ಕರಕ್ಕೆ ಬೆಂಬಲ ನೀಡಿ, ಮೊಸಳೆ ಕಣ್ಣೀರು ಸುರಿಸಿ, ಬೊಗಳೆ ಭಾಷಣ ಮಾಡಿದ್ದರು. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ನೌಕರರ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತೇವೆಂದು ಆಶ್ವಾಸನೆ ಸಹ ನೀಡಿದ್ದರು. ಆದರೆ ಈಗ ಸಾರಿಗೆ ನೌಕರರಿಗೆ ಸರಿಯಾಗಿ ತಿಂಗಳ ಸಂಬಳವನ್ನೂ ನೀಡುತ್ತಿಲ್ಲ’ವೆಂದು ಟೀಕಿಸಿದೆ.

ಇದನ್ನೂ ಓದಿ: ಈಗ ನಾವು 60 ಪರ್ಸೆಂಟ್ ಸಿಎಂ ಅಂತ ಹೇಳಬೇಕಾಗುತ್ತೆ

ಈ ಸಾಲಿನ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯವರು ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಬಿಡಿಗಾಸೂ ಒದಗಿಸಿಲ್ಲ. ಅವರನ್ನು ಸಹ ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು ಎಂಬ ನೌಕರರ ಬಹುಮುಖ್ಯ ಬೇಡಿಕೆಗೆ ಈಗ ಕಿಮ್ಮತ್ತು ಕೊಡುತ್ತಿಲ್ಲ. ಆ ತರಹದ ಯಾವುದೇ ಪ್ರಸ್ತಾವನೆಗಳು ಸರ್ಕಾರದ ಮುಂದೆ ಇಲ್ಲವೆಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಸದನದಲ್ಲೇ ಸ್ಪಷ್ಟಪಡಿಸಿದ್ದಾರೆ.  ಈ ಮೂಲಕ ಸಾರಿಗೆ ನೌಕರರಿಗೂ ಸಹ #ATMSarkara ಕಿವಿ ಮೇಲೆ ಹೂವಿಟ್ಟು "ಕೈ" ಕೊಟ್ಟಿದೆ’ ಎಂದು ಬಿಜೆಪಿ ಕುಟುಕಿದೆ.

‘ಇವಿಷ್ಟೂ ಸಾಲದೆಂಬಂತೆ ಈಗ ಶಕ್ತಿ ಯೋಜನೆಯನ್ನು ಅಸಮರ್ಪಕವಾಗಿ ಜಾರಿ ಮಾಡಿದ ಕಾಂಗ್ರೆಸ್ ಸರ್ಕಾರದ ತಪ್ಪನ್ನು ನೌಕರರ ತಲೆಗೆ ಕಟ್ಟಲು ಮುಂದಾಗಿದೆ. ಮಹಿಳಾ ಪ್ರಯಾಣಿಕರ ಸಂಚಾರದ ಬಗ್ಗೆ ಸಾರಿಗೆ ಸಿಬ್ಬಂದಿಗಳು ಅಕ್ರಮವೆಸಗುತ್ತಿದ್ದಾರೆಂದು ಅವರಿಗೆ ಎಚ್ಚರಿಕೆಯ ನೋಟಿಸ್ ನೀಡಿದೆ. ಅಂದು ಭರವಸೆಗಳನ್ನು ತೋರಿಸಿದ ಸಿದ್ದರಾಮಯ್ಯನವರು ಕೊಟ್ಟ ಮಾತುಗಳನ್ನೇ ಮರೆತು ನೌಕರರಿಗೆ ಆಕಾಶ ತೋರಿಸುತ್ತಿದ್ದಾರೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಶಿವನಸಮುದ್ರದ ನೀರಿನಲ್ಲಿ ಮುಳುಗುತ್ತಿದ್ದ 6 ಮಂದಿ ರಕ್ಷಣೆ

‘ನಂಬಿಸಿ ವಂಚಿಸುವುದು ಕಾಂಗ್ರೆಸ್ ಪಕ್ಷದ ಪರಂಪರಾಗತ ಗುಣ. ಆದರೆ ಈ ನಯವಂಚನೆಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಬಲಿಯಾಗುತ್ತಿರುವುದು ಖೇದಕರ. ದೇಶದಲ್ಲೇ ಮಾದರಿ ಸಾರಿಗೆ ಸೇವೆಗೆ ಹೆಸರಾಗಿದ್ದ ಕರ್ನಾಟಕ ಸಾರಿಗೆಯನ್ನು ಗುಜರಿ ಸಾರಿಗೆ ಮಾಡುವ ಎಲ್ಲಾ ಕಾಯಕಕ್ಕೂ ಸಿದ್ದರಾಮಯ್ಯನವರ ಸರ್ಕಾರ ಮುಂದಾಗಿದೆ. ಹೊಸ ಬಸ್‌ ಕೊಳ್ಳಬೇಕಾದಲ್ಲಿ ಹಳೇ ಬಸ್ಸನ್ನೇ ಹೊಸದು ಮಾಡುವ ಒಂದು ಯೋಜನೆಯನ್ನೇ ಹಾಕಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ನಷ್ಟದ ಬಾವಿ ಇನ್ನಷ್ಟು ಆಳವಾಗಿ ರಾಜ್ಯದ ಜನಸಾಮಾನ್ಯರ ಜೇಬಿನ ಮೇಲೆ ಬರೆ ಬೀಳುವುದು ನಿಶ್ಚಿತ, ಸಾರಿಗೆ ನೌಕರರಿಗೆ ನಿರುದ್ಯೋಗ ಉಚಿತ’ವೆಂದು ಬಿಜೆಪಿ ಕಿಡಿಕಾರಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News