ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಜನವರಿಯಿಂದ ಫೆಬ್ರವರಿ 2021ರ ತಿಂಗಳಿನಲ್ಲಿ ಆರಂಭಗೊಳ್ಳಲಿದ್ದು, ಎಚ್ಚರಿಕೆಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಟೆಕ್ನಿಕಲ್ ಅಡ್ವೈಸರಿ ಕಮಿಟಿಯು ವರದಿಯಲ್ಲಿ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆಯ ಅಬ್ಬರ ಆರಂಭವಾಗಲಿದೆ ಎಂಬುದಾಗಿ ತಿಳಿಸಿದೆ.
ಈ ಕುರಿತಂತೆ ರಾಜ್ಯ ಸರ್ಕಾರಕ್ಕೆ ಟೆಕ್ನಿಕಲ್ ಅಡ್ವೈಸರಿ ಕಮಿಟಿ(TAC) ವರದಿಯನ್ನು ಸಲ್ಲಿಸಿದ್ದು, ರಾಜ್ಯದಲ್ಲಿ ಎರಡನೇ ಕೊರೋನಾ ಅಬ್ಬರ ಆರಂಭವಾಗಲಿದೆ. 7 ದಿನಗಳ ಕಾಲ ಜಿಲ್ಲಾ, ರಾಜ್ಯ ಮಟ್ಟದಲ್ಲಿ ಮಾನಿಟರಿಂಗ್ ಮಾಡುವ ತುರ್ತು ಅಗತ್ಯವಿದೆ ಎಂಬುದಾಗಿ ತಿಳಿಸಿದೆ.
'ಕುರುಬರು ಭಾರತದ ಮೂಲ ನಿವಾಸಿಗಳು- ನಮಗೂಬೇಕು ಅಭಿವೃದ್ಧಿ ನಿಗಮ'
ಇನ್ನೂ ಜನವರಿಯಿಂದ ಫೆಬ್ರವರಿ 2021ರ ವೇಳೆಯಲ್ಲಿ ಕೊರೋನಾ ಎರಡನೇ ಅಲೆಯ ಅಬ್ಬರ ರಾಜ್ಯದಲ್ಲಿ ಶುರುವಾಗಲಿದೆ. ಹೀಗಾಗಿ ಫೆಬ್ರವರಿ 2021ರ ಕೊನೆಯ ವರೆಗೆ ಕನಿಷ್ಠ 1.25 ಲಕ್ಷ ಪರೀಕ್ಷೆಯನ್ನು ಪ್ರತಿ ದಿನ ನಡೆಸುವಂತೆ ಸೂಚನೆ ನೀಡಿದೆ. ಅದರಲ್ಲೂ 1 ಲಕ್ಷ ಆರ್ ಟಿ- ಪಿಸಿಆರ್ ಪರೀಕ್ಷೆ ನಡೆಸುವಂತೆಯೂ ಸಲಹೆ ಮಾಡಿದೆ.
ಕುರುಬರ ಎಸ್ಟಿ ಹೋರಾಟದ ಹಿಂದೆ ಬಿಜೆಪಿ, ಆರ್‌ಎಸ್ಎಸ್‌ನ ಕೈವಾಡವಿದೆ-ಸಿದ್ಧರಾಮಯ್ಯ
ಇದಷ್ಟೇ ಅಲ್ಲದೇ ಕಳೆದ ಅಕ್ಟೋಬರ್ 2020ರಂದು ರಾಜ್ಯದಲ್ಲಿ ಕೊರೋನಾ ಮುಂಜಾಗ್ರತಾ ಕ್ರಮ ಕೈಗೊಂಡಂತೆಯೇ ಜನವರಿ ಮೊದಲ ವಾರದಲ್ಲಿಯೇ ಬೆಡ್ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಸೂಕ್ತ. ಐಸಿಯು, ವೆಂಟಿಲೇಟರ್ ಗಳನ್ನು ಕಾಯ್ದಿರುವಂತೆ ಸೂಚನೆ ನೀಡಿದೆ.
ಅಸಮಾಧಾನ ಸ್ಫೋಟ: ಸಿಎಂ ಬಿಎಸ್ ವೈ ವಿರುದ್ಧ ಕಿಡಿ ಕಾರಿದ ಹೆಚ್.ವಿಶ್ವನಾಥ್!
ಇನ್ನೂ ಹೊಸ ವರ್ಷದ ಸಂಭ್ರಮಾಚಣೆಯಲ್ಲಿ ತೊಡಗುವ ಯೋಜನೆಯಲ್ಲಿದ್ದವರಿಗೂ ಶಾಕ್ ನೀಡಿರುವ ಟಿಎಸಿ ವರದಿಯು, ಡಿಸೆಂಬರ್ 26ರಿಂದ ಜನವರಿ 1ರವರೆಗೆ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಹೊಸ ವರ್ಷದ ಸಂಭ್ರಮಾಚರಣೆ ಮಾಡದಂತೆ ನಿರ್ಬಂಧ ವಿಧಿಸುವಂತೆಯೂ ಸಲಹೆ ಮಾಡಿದೆ.
ಕೊರೊನಾ 'ಹೊಸ ಮಾರ್ಗಸೂಚಿ' ಪ್ರಕಟಿಸಿದ ರಾಜ್ಯ ಸರ್ಕಾರ!