ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸುವಂತೆ ಅಧಿಕಾರಿಗಳಿಗೆ ಡಿಸಿಎಂ ಸೂಚನೆ

ಕೊಡಗು‌ನೆರೆ ಸ್ಥಿತಿಯಿಂದ ಒಟ್ಟು 4 ಸಾವಿರ ಕೋಟಿ‌ ರೂ. ನಷ್ಟ ಉಂಟಾಗಿದೆ. ಇದರಲ್ಲಿ 546 ಕೋಟಿ ರೂ. ಮಾತ್ರ ಕೇಂದ್ರ ನೀಡಿದೆ.

Last Updated : Nov 27, 2018, 12:08 PM IST
ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸುವಂತೆ ಅಧಿಕಾರಿಗಳಿಗೆ ಡಿಸಿಎಂ ಸೂಚನೆ title=

ಬೆಂಗಳೂರು: ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದ್ದು ಅಧಿಕಾರಿಗಳು ಸಮರ್ಪಕವಾಗಿ ನಿಭಾಯಿಸುವಂತೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದರು.

ವಿಧಾನಸೌಧದ ಸಮ್ಮೇಳನ ಸಭಾಂಣದಲ್ಲಿ ಕರೆದಿದ್ದ ಡಿಸಿ ಹಾಗೂ ಸಿಇಒಗಳ ಸಭೆಯಲ್ಲಿ ಮಾತನಾಡಿದ ಅವರು, ಕೊಡಗು‌ನೆರೆ ಸ್ಥಿತಿಯಿಂದ ಒಟ್ಟು 4 ಸಾವಿರ ಕೋಟಿ‌ ರೂ. ನಷ್ಟ ಉಂಟಾಗಿದೆ. ಇದರಲ್ಲಿ 546 ಕೋಟಿ ರೂ. ಮಾತ್ರ ಕೇಂದ್ರ ನೀಡಿದೆ. ಪ್ರಸ್ತುತ ರಾಜ್ಯದಲ್ಲಿ 100 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇನ್ನು ಕೆಲ ತಾಲೂಕು ಬರಗಾಲಕ್ಕೆ ಸೇರಲಿದೆ. ಹೀಗಾಗಿ ಡಿಸಿಗಳು ಸಮರ್ಪಕವಾಗಿ ನಿಭಾಯಿಸಿ ಎಂದು ಸಲಹೆ ನೀಡಿದರು.

ಜನಸಾಮಾನ್ಯರು ವಿಧಾನಸೌಧಕ್ಕೇ ಬರುವುದನ್ನು ತಪ್ಪಿಸಿ ಡಿಸಿ ಗಳೇ ಅವರ ಸಮಸ್ಯೆ ಆಲಿಸುವಂತೆ ಸೂಚಿಸಿದ್ದೆವು. ಜೊತೆಗೆ ಪ್ರತಿ ತಿಂಗಳು ಗ್ರಾಮ ವಾಸ್ತವ್ಯ ಹೂಡುವಂತೆಯೂ ಹೇಳಲಾಗಿತ್ತು.‌ಈ ಎಲ್ಲವೂ ಸಭೆಯಲ್ಲಿ ಮಾಹಿತಿ ಪಡೆಯಲಾಗುವುದು ಎಂದರು.

Trending News