ಚುನಾವಣೆಯ ಕಾವಿನ ನಡುವೆಯೇ ಎಣ್ಣೆಗೆ ಸಕತ್ ಡಿಮ್ಯಾಂಡ್

ರಾಜ್ಯದ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶ ಈಗ 45 ಡಿಗ್ರಿ ಸೆಲ್ಸಿಯಸ್ ದಾಟಿದೆ.ಸುಡು ಬಿಸಿಲಿನಲ್ಲಿ ಚಿಲ್ಡ್ ಬಿಯರ್ ಕುಡಿಯಲು ಜನರು ಇಷ್ಟಪಡುತ್ತಿದ್ದಾರೆ.

Written by - Zee Kannada News Desk | Last Updated : Apr 23, 2023, 11:51 AM IST
  • ರಾಜ್ಯದ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶ ಈಗ 45 ಡಿಗ್ರಿ ಸೆಲ್ಸಿಯಸ್ ದಾಟಿದೆ
  • ಸುಡು ಬಿಸಿಲಿನಲ್ಲಿ ಚಿಲ್ಡ್ ಬಿಯರ್ ಕುಡಿಯಲು ಜನರು ಇಷ್ಟಪಡುತ್ತಿದ್ದಾರೆ
ಚುನಾವಣೆಯ ಕಾವಿನ ನಡುವೆಯೇ ಎಣ್ಣೆಗೆ ಸಕತ್ ಡಿಮ್ಯಾಂಡ್ title=

ಬೆಂಗಳೂರು: ಚುನಾವಣಾ ಕಾವು..ಮತ್ತೊಂದು ಕಡೆ ಬಿಸಲಿನ ತಾಪಮಾನ.ಇದರ ನಡುವೆ ಎಣ್ಣೆಗೆ ಸಕ್ಕತ್ ಡಿಮ್ಯಾಂಡ್ ಬಂದಿದೆ. ಕಳೆದ 20 ದಿನದಲ್ಲಿ ಶೇಕಡಾ 30 ರಷ್ಟು ಬೇಡಿಕೆ ಹೆಚ್ಚಳವಾಗಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶ ಈಗ 45 ಡಿಗ್ರಿ ಸೆಲ್ಸಿಯಸ್ ದಾಟಿದೆ.ಸುಡು ಬಿಸಿಲಿನಲ್ಲಿ ಚಿಲ್ಡ್ ಬಿಯರ್ ಕುಡಿಯಲು ಜನರು ಇಷ್ಟಪಡುತ್ತಿದ್ದಾರೆ.ಇದರ ನಡುವೆ ಚುನಾವಣಾ ಕಣ ರಂಗೇಗಿದ್ದು, ಸುಡುವ ಬಿಸಿಲಿನಲ್ಲಿ ಅಭ್ಯರ್ಥಿಗಳು ತಮ್ಮ ಬೆಂಬಲಿಗರ ಜೊತೆ ಪ್ರಚಾರ ಕೂಡ ಜೋರಾಗೆ ನಡೆಸ್ತಿದ್ದಾರೆ. ಇದರ ನಡುವೇ ರಾಜ್ಯದಲ್ಲಿ ಬಿಯರ್ ಕುಡಿಯೋರ ಸಂಖ್ಯೆ ಹೆಚ್ಚಾಗಿದೆ.

ಇದನ್ನೂ ಓದಿ: Photo Gallery: ಮೋದಿ ಏನು ದೇವರಾ? ಮಠಾಧೀಶರಾ? ಅಥವಾ ಛೂಮಂತರ್ ಬಾಬಾನಾ?-ಕಾಂಗ್ರೆಸ್ ಪ್ರಶ್ನೆ

ರಾಜ್ಯದಲ್ಲಿ ಬಿಯರ್ ಉತ್ವಾದನೆ ಶೇ. 45ರಷ್ಟು ಹೆಚ್ಚಳ ಇದರ ನಡುವೆ ಎಣ್ಣೆಗೆ ಬೆಂಗಳೂರಿನಲ್ಲಿ ಹೆಚ್ಚಿನ ಬೇಡಿಕೆ ಕಳೆದ 15 ದಿನದಲ್ಲಿ ಬಿಯರ್ ಗೆ ಶೇಕಡಾ 30 ರಷ್ಟು ಹಾಗೂ ಎಂಎಸ್ಸಿಎಲ್ ಗೆ  ಬೇಡಿಕೆ ಹೆಚ್ಚಳ ಬೇಡಿಕೆಗೆ ತಕ್ಕಷ್ಟು ಸಿಗದೆ ಬಿಯರ್ ಬೆಲೆ 10 ರಿಂದ 20 ರೂಪಾಯಿ ಹೆಚ್ಚಳ ರಾಜ್ಯದಲ್ಲಿ ಉತ್ಪಾದನೆಯಾಗುವ ಬಿಯರ್ ಪ್ರಮಾಣ ಕಮ್ಮಿಯಾಗಿದೆ. ಜೊತೆಗೆ‌ ರಾಜ್ಯದಲ್ಲಿ ಎಣ್ಣೆಗೆ ಬಾರಿ ಬೇಡಿಕೆ ಬಂದಿದೆ. 15 ದಿನದಲ್ಲಿ 30% ರಷ್ಟು ಬೇಡಿಕೆ ಹೆಚ್ಚಳವಾಗಿದೆ. ಆದ್ರೆ ಬೇಡಿಕೆಗೆ ತಕ್ಕಷ್ಟು ಲಿಕ್ಕರ್ ಸಿಗದ ಪರಿಣಾಮ ಬಿಯರ್ ಬೆಲೆ 10 ರಿಂದ 20 ರೂಪಾಯಿ ಏರಿಕೆ ಮಾಡಲಾಗಿದೆ.

ಇದನ್ನೂ ಓದಿ: Photo Gallery: ಕುಡಿಯುವ ನೀರಿನ ಪೈಪ್ ಒಡೆದು ರಸ್ತೆಗೆ ಕಾರಂಜಿ ರೀತಿ ಚಿಮ್ಮಿದ ನೀರು....!

ಇನ್ನೂ ಯಾವ ಬಿಯರ್ ಗೆ ಎಷ್ಟು ಏರಿಕೆ ಆಗಿದೆ ಅಂತ ನೋಡೋದಾದ್ರೆ.
ಬ್ರಾಂಡ್                      ಹಿಂದಿನ ದರ   ಇಂದಿನ ದರ
ಹಂಟರ್ 650ML          ₹160          ₹170
ಹಂಟರ್ 500ML.          ₹130          ₹140
ಬ್ಲಾಕ್ ಫೋರ್ಟ್ 650ML ₹130.         ₹135
ಪವರ್ ಕೂಲ್ 650ML.    ₹100         ₹120
ಪವರ್ ಕೂಲ್ 500ML.    ₹80           ₹85

650ML ಹಂಟರ್ ಬಿಯರ್ ಗೆ ಹಿಂದೆ ₹160 ಇತ್ತು. 10 ರೂಪಾಯಿ ಏರಿಕೆಯಾಗಿದ್ದು ಈಗ 170 ಆಗಿದೆ. ಹಾಗೆಯೇ 500 ಎಂಎಲ್ ಹಂಟರ್ ಬಿಯರ್ ಗೆ ಹಿಂದೆ      ₹130 ಇತ್ತು, 10 ರೂಪಾಯಿ ಏರಿಕೆಯಾಗಿ ಈಗ ₹140‌ ಆಗಿದೆ. 650ML ಬ್ಲಾಕ್ ಫೋರ್ಟ್ ಬಿಯರ್ ಗೆ  ₹130 ಇತ್ತು, ಈಗ 5 ರೂಪಾಯಿ ಹೆಚ್ಚಳವಾಗಿ ₹135 ಆಗಿದೆ. ಹಾಗೆಯೇ 650ML ಪವರ್ ಕೂಲ್ ಬಿಯರ್ ಬೆಲೆ  ₹100 ಇತ್ತು ಈಗ ₹120 ಆಗಿದೆ. 500ML ಪವರ್ ಕೂಲ್ 80ರಿಂದ 90 ಆಗಿದ ಇನ್ನು ಚುನಾವಣಾ ನೀತಿ ಸಂಹಿತೆ ಜಾರಿ ನಂತರ ಟೈಟ್ ನಿಯಮವಳಿಗಳನ್ನ ಹೇರಿಕೆ ಮಾಡಿದ್ದು, ಬಾರ್ ಹಾಗೂ ರೆಸ್ಟೋರೆಂಟ್ ಗಳಿಗೆ ಬೇಕಾದ ಮಧ್ಯವೂ ಸಿಕ್ತಿಲ್ಲಂತೆ. ಅಲ್ಲದೆ ಚುನಾವಣೆ ಸಮಯ ಅಂತ ಕೆಎಸ್ ಬಿಸಿಎಲ್ ಪೂರೈಕೆ‌ ಕಮ್ಮಿ ಮಾಡಿದೆ. ಜೊತೆಗೆ ರಾಜ್ಯದಲ್ಲಿ ಮದ್ಯದ ಉತ್ವಾದನೆ ಕೂಡ ಕಡಿಮೆ‌ ಮಾಡಲಾಗಿದೆ. ಹೀಗಾಗಿ ಅನಿರ್ವಾಯವಾಗಿ ದರ ಹೆಚ್ವಳ ಮಾಡಲಾಗಿದೆ ಅಂತಾರೆ ಬಾರ್ ಅಂಡ್ ರೆಸ್ಟೋರೆಂಟ್ ಅಸೋಸಿಯೇಷನ್ ಅಧ್ಯಕ್ಷ ಕರುಣಾಕರ್‌ಹೆಗ್ಡೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News