ಚಾಮರಾಜನಗರ: ಜಾತ್ರೆ ಮುಗಿದಿದ್ದರೂ ಪ್ರಸಿದ್ಧ ಯಾತ್ರಾಸ್ಥಳವಾದ ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬಂದಿದ್ದು ಕೇವಲ ಎರಡು ದಿನಗಳಿಗೆ ಸೇವೆಗಳಿಂದಲೇ 20 ಲಕ್ಷ ರೂ. ಆದಾಯ ಬಂದಿದೆ.
ಇದನ್ನೂ ಓದಿ: ವೈದ್ಯಕೀಯ ಉಪಕರಣಗಳ ಖರೀದಿ ಹಗರಣ: ಡಿಸಿಎಂ ಅಶ್ವತ್ ನಾರಾಯಣ್ ರಾಜಿನಾಮೆಗೆ AAP ಆಗ್ರಹ
ಹೌದು.., ಸೋಮವಾರ ಒಂದೇ ದಿನ 17,94,289 ರೂ. ಆದಾಯ ಬಂದಿದ್ದು, ಇಂದು 2,26,536 ಸೇರಿ ಎರಡು ದಿನಗಳಿಗೆ ಚಿನ್ನದ ರಥ, ಬಸವ ವಾಹನ, ಹುಲಿ ವಾಹನ, ರುದ್ರಾಕ್ಷಿ ವಾಹನ ಸೇವೆಗಳಿಂದ ಲಕ್ಷಾಂತರ ರೂ.ಆದಾಯ ಬಂದಿದ್ದು ಕೊರೊನಾ ನಂತರದ ದಿನಗಳಲ್ಲಿ ಭಕ್ತರು ಬೆಟ್ಟಕ್ಕೆ ದಾಂಗುಡಿ ಇಡುತ್ತಿದ್ದಾರೆ.
ಇದನ್ನೂ ಓದಿ: ಕೋಲಾರದ ಬೆಮೆಲ್ ಕಾರ್ಖಾನೆ ಖಾಸಗಿಯವರಿಗೆ ಹಸ್ತಾಂತರ ಇಲ್ಲ: ಸಚಿವ ಮುರುಗೇಶ್ ನಿರಾಣಿ
ಸೋಮವಾರದಂದು ಚಿನ್ನದ ರಥ ಸೇವೆ ಒಂದರಿಂದಲೇ 13 ಲಕ್ಷ ಆದಾಯ ಬಂದಿದೆ. ಕಳೆದ ಎರಡು ದಿನಗಳಿಂದ 450 ಕ್ಕೂ ಹೆಚ್ಚು ಮಂದಿ ಚಿನ್ನದ ರಥ ಸೇವೆ ನೆರವೇರಿಸಿದ್ದು ಹುಲಿ ವಾಹನ ಸೇವೆಯನ್ನು ಒಂದೂವರೆ ಸಾವಿರ ಮಂದಿ ನೆರವೇರಿಸಿದ್ದಾರೆ.
ಇನ್ನು, ಜಾತ್ರೆಗೆ ಕಾಲ್ನಡಿಗೆ ಮೂಲಕ ಬೆಟ್ಟಕ್ಕೆ ಬಂದಿದ್ದ ಪಾದಾಯಾತ್ರಿಗಳು ತಮ್ಮ-ತಮ್ಮ ಊರುಗಳಿಗೆ ಹಿಂತಿರುಗುತ್ತಿದ್ದಾರೆ.ಕೆಲ ಭಕ್ತಾದಿಗಳು ಅಗಲಿದ ನಟ ಪುನೀತ್ ರಾಜ್‍ಕುಮಾರ್ (Puneeth Rajkumar) ಫೋಟೋ ಹಿಡಿದೇ ಪಾದಯಾತ್ರೆ ಮುಗಿಸಿ ಹಿಂತಿರುಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.